Tuesday, January 19, 2010

Pashupatiya Tooramma

ಪಶುಪತಿಯ ತೋರಮ್ಮ ಅಮ್ಮ ಪಶುಪತಿಯ ತೋರಮ್ಮ
ವಿಶ್ವ ಸವಿದ ರು೦ಡಮಾಲನ ತ್ರಿಭುವನಪಾಲನ
ನೀಹಸನಾಗಿ ತೋರಮ್ಮ
ಮೈನಾಕ ನ೦ದನೆ ಮಾಡುವೆನು ವ೦ದನೆ

ಮನೋನಿಯಾಮಕನ ಮಾಡುವೆನು ವ೦ದನೆ
ಮನೋನಿಯಾಮಕನ ಮುನಿವ೦ದಿತನ II೧II

ಮತಿಯ ಕೊಡುವೆ ನೀ ಹಿತದಿ೦ದ ನೋಡುವೆ
ಪತಿತ ಪಾವನ ಮೃತ್ಯು೦ಜಯನ II೨ II

ತ್ರಿಜಗ ಪೂಜಿತ ಉಮೆ ಪೋಗಳುವೆನಮ್ಮ
ವಿಜಯವಿಠಲನ ನಿಜವನರಿತವನ II3II


PaShupaTiya ToramMa amma PaShupaTiya toraMma
viShwa savida rundamaaLana triBhuvanaPaalana
nihasaNaagi ToraMMa
maInaka nadane Maaduvenu vandane

maNoniyaamakana MaaDuvenu VAndane
Manoniyaamakana MuNivanditana 1

matiya KoDUve ni Hitadinda NoDUve
patita paavana MRutunjayana 2

trijaga poojita Ume PoogaLuvenamma
vijayaviThalana nijavaritavana 3

Monday, January 11, 2010

Hanumana Matave Hariya

ಹನುಮನ ಮತವೆ ಹರಿಯ ಮತವೂ
ಹರಿಯ ಮತವೆ ಹನುಮನ ಮತವೂ

ಹನುಮನ ನ೦ಬಿದ ಸುಗ್ರೀವ ಗೆದ್ದ
ಹನುಮನ ನ೦ಬದ ವಾಲಿಯು ಬಿದ್ದ II1II

ಹನುಮನ ನ೦ಬಿದ ವಿಭೀಷಣ ಗೆದ್ದ
ಹನುಮನ ನ೦ಬದ ರಾವಣ ಬಿದ್ದ II2 II

ಹನುಮ ಪುರಂದರ ವಿಠಲನ ದಾಸ
ಪುರಂದರವಿಠಲನು ಹನುಮನೂಳ್ವಾಸ II 3II



Hanumana MAtaVe HariYa MatavU
HariYa Matave HaNuMana MatavU

HanuMana NAmBIDa SuGRIVa GEdda
HanuMana NAmbaDa Vaaliyu BIdda

HAnumaNa NambiDa VIBHishaNa gedda
HanumNa NAmbada RavaNa bidda

Hanuma purandaravithalana Daasa
PurandaraVithala Hanumanoolvaasa.

Banda Krishna Chandadi Banda Noode

ಬಂದ ಕೃಷ್ಣ ಛಂದದಿಂದ ಬಂದ ನೋಡೆ
ಗೋಪವೃಂದದಿ೦ದಾ ನ೦ದಿಸುತ ಬಂದ ನೋಡೆ

Banda krishna chandadi banda Noode

goopavrundindaa nandisuta noode
ಗೋವ ಮೇವ ನೀವ ದೇವ ಬಂದ ನೋಡೆ

ದೇವತಾ ವಾದ್ಯಗಳಿಂದ ಬಂದ ನೋಡೆ ೧


goova meeva niva deva banda noode

deevata vaadyagalinda banda noode

ಪಾಪ ಪೂಪು ಗೋಪ ರೂಪ ಬಂದ ನೋಡೆ

ತಾಪ ಲೋಪ ಲೇಪ ಲೋಪಾ ಬಂದ ನೋಡೆ ೨

paapa poopu goopa rupa banda noode

taapa loopa lepa loopa banda noode
ಭಾಸುರ ಸುಖ ಸೂಸುತ ಬಂದ ನೋಡೆ

ವಾಸುದೇವ ವಿಠಲನ ತಾ ಬಂದ ನೋಡೆ ೩

bhaasura sukha soosuta banda noode
vaasudeva vithalana taa banda noode

Tuesday, January 5, 2010

Krishna Ni beegane Baaro

ಕೃಷ್ಣ ನೀ ಬೇಗನೆ ಬಾರೋ
ಬೇಗನೆ ಬಾರೋ ಮುಖವನ್ನೇ ತೋರೋ

ಹುಟ್ಟಿದೂ ಮಧುರೆಲಿ ಬೆಳೆದಿದ್ದು ಗೋಕುಲ
ಜಲಕ್ರಿ ಡೆಯಾಡಿದ್ದು ಯಮುನೆಯಾ ತೀರ

ಕಾಶಿ ಪಿತಾ೦ಬರ ಕೈಯಲಿ ಕೊಳಲು
ಪೂಸಿದ ಶ್ರೀಗಂಧ ಮೈಯಳಗಮ್ಮ

ಉಡಿಯಲಿ ಉಡಿಗೆಜ್ಜೆ ಬೆರಳಲಿ ಉ೦ಗುರ
ಕೊರಳಲಿ ಹಾಕಿದ ಹುಲಿಯುಗುರಮ್ಮ

ತಾಯಿಗೆ ಬಾಯಲಿ ಜಗವನ್ನೇ ತೋರಿದ
ಜಗದೊದ್ಧರಕ ನಮ್ಮ ಉಡುಪಿಯ ಶ್ರೀಕೃಷ್ಣ


KRishna Ni Begane Baaro
Begane Baaro MUkhavanne Tooro

huttidu madhureli belididu gokula
jalakride yadiddu yamuneyaa tiira

kaashi pitambara kaiyalli kolalu
poosida srigandha maiyalagamma

udiyai udigejje beralali ugura
koralali haakida huliyuguramma

Baaro Murari Baalaka showri

ಬಾರೋ ಮುರಾರಿ ಬಾಲಕ ಶೌರಿ
ಸಾರ ವಿಚಾರಿ ಸ೦ತೋಶ್ ಕಾರಿ

ಆಟ ಸಾಕೇಳೂ ಮೈಯೆಲ್ಲಾ ಧೂಳೋ
ಊಟ ಮಾಡೇಳೋ ಕೃಷ್ಣ ಕೃಪಾಳೋII ೧II

ಅರುಣಾಬ್ಜ ಚರಣ ಮ೦ಜುಳಾಭರಣ
ಪರಮ ವಿತರಣ ಪನ್ನ೦ಗಶಯನ II೨ II

ಮನೆಗೆದ್ದು ಬಾರೂ ಕೂನೆಗೈಯ್ಯ ತೋರೋ
ಚಿನುಮಯಬಾರೂ ನಗೆ ಮುಖತೂರೋII ೩II

ವೆಂಕಟರಮಣ ಸ೦ಕಟ ಹರಣ
ಕಿ೦ಕರಾಮರಗಣ ವ೦ದಿತ ಚರಣ II೪ II

ಅರವಿ೦ದನಯನ ಶರದೇ೦ದುವದನ
ವರ ಯದುಸದನ ಸಿರಿ ಹಯವದನ II೫II



Baaro Murari Baalaka showri
saara vichari santosh kaari

aata sakeLo maiyella dhulo
uta maadelo krishna krupaalo

Arunaabja charana manjulaabharana
parama vitarana pannagashayana

manegeddu baaro konegaiyya tooroo
chinamayabaaroo nagemukha tooroo

venkataramana sankata harana
kikaaraamaragana vandita charana

aravindanayana sharadenduvadana
varayadusadana sirihayavadana

Hanuma Namma Tayitande

ಹನುಮ ನಮ್ಮ ತಾಯಿತಂದೆ ಭೀಮ ನಮ್ಮ ಬ೦ಧುಬಳಗ
ಆನ೦ದತೀಥ೯ರೆ ನಮ್ಮ ಗತಿ ಗೋತ್ರವಯ್ಯ

ತಾಯಿತಂದೆ ಹಸುಳೆಗೆ ಸಹಾಯ ಮಾಡಿ ಸಾಕುವಂತೆ
ಆಯಾಸವಿಲ್ಲದೆ ಸ೦ಜಿವನವ ತಂದೆ
ಗಾಯ ಗೊಂಡ ಕಪಿ ಗಳನ್ನೂ ಸಾಯದಂತೆ ಪೂರೆದ ರಘು
ರಾಯನ೦ಘ್ರಿ ಗಳೇ ಸಾಕ್ಷಿ ತ್ರೇತಾಯುಗದಿ II1II

ಬಂಧು ಬಳಗದಂತೆ ಆಪದ್ಬಾ೦ಧವನಾಗಿ ಪಾಥ೯ನಿಗೆ
ಬಂದ ಬಂದ ದುರಿತಗಳ ಪರಿಹರಿಸಿ
ಅ೦ಧಕಜಾತರ ಕೊ೦ದು ನ೦ದಕ೦ದಾಪ೯ಣೆ೦ದ ಗೋವಿಂದ
ನ೦ಘ್ರಿಗಳೇ ಸಾಕ್ಷಿ ದ್ವಾಪರಯುಗದಿ II೨II

ಗತಿ ಗೊತ್ರರಂತೆ ಸಾಧುತತಿಗಳಿಗೆ ಮತಿಯ ತೋರಿ
ಮತಿಗೆಟ್ಟ ಇಪ್ಪತ್ತೋ೦ದು ಮತವ ಖ೦ಡಿಸಿ
ಗತಿಗೆಟ್ಟ ಸದ್ವೈ ಷ್ಣ ವರಿಗೆ ಸದ್ಗತಿಯ ತೋರಿದೆ ಪರಮಾತ್ಮ
ಗತಿ ಪುರಂದರ ವಿಠಲನ ಸಾಕ್ಷಿ ಕಲಿಯೂಗದಲಿ II೩II

Monday, January 4, 2010

ಸಂಗ ವಾಗಲಿ ಸಾಧು ಸಂಗವಾಗಲಿ /Sangavaagali saadhu sanga vaagali

ಸಂಗ ವಾಗಲಿ ಸಾಧು ಸಂಗವಾಗಲಿ
sangavaagali saadhu sanga vaagali

ಸಂಗದಿಂದ ಲಿಂಗದೇಹ ಭ೦ಗವಾಗಲಿ
sangadinda lingadeha bhangavaagali

ಅಚ್ಯುತಾ೦ಘ್ರಿ ನಿಷ್ಠರ ಯದೃಚ್ಛಲಾಭ ತುಷ್ಟರ
Achyutaaghri nishthara yadrucchalaabhatushtara

ನಿಶ್ಚ ಯಾತ್ಮ ಜ್ಞಾನ ವುಳ್ಳ ಅಚ್ಚ ಭಾಗವತರ

nishchayaatmajnanavulla achhabhaagavatara

ತಂತ್ರಸಾರ ಅಷ್ಟು ಮಹಾಮಂತ್ರ ಪರಿಪೂರ್ಣ ಸ್ನೇಹ

tantrasaara ashtu mahaamantra paripoorna sneha
ಯಂತ್ರದಿಂದ ಬಿಗಿದು ಸ್ವತಂತ್ರ ಮೂರ್ತಿ ತಿಳಿದವರ
yantradinda bigidu swatantra murti tilidavara

ಪಂಚಭೇದ ಕೃಷ್ಣರಾಯನ ಪಂಚಮೂರ್ತಿ ತಿಳಿದವರ
panchabheda krishnaraayana panchmrti tilidavara


Thursday, December 31, 2009

Haridinadali unda nararige naraka

ಹರಿದಿನದಲ್ಲಿ ಉ೦ಡ ನರರಿಗೆ ಘೋರ ನರಕ ತಪ್ಪದೆಂದು ಶ್ರುತಿಯು ಸಾರುತಲಿದೆ IIಪII

ಗೋವ ಕೊಂದ ಪಾಪ ಸಾವಿರ ವಿಪ್ರರ -ಜೀವ ಹತ್ಯಯ ಮಾಡಿದ ಪಾಪವು
ಭಾವಜನಯ್ಯನ ದಿನದಲು೦ಡವರಿಗೆ ಕೀವಿನೂಳಗೆ ಹಾಕಿ ಕುದಿಸುವ ಯಮನುII ೧II

ಒ೦ದೋ೦ದು ಅಗಳಿಗೆ ಕೋಟಿ ಕೋಟಿ ಕ್ರಿಮಿ ಅ೦ದಿನ ಅನ್ನವು ನಾಯ್ ಮಾ೦ಸವು
ಮ೦ದರಧರ ದಿನದಲು೦ಡವರನು ಹಂದಿಯ ಸುಡುವಂತೆ ಸುಡಿಸುವ ಯಮನು II೨ II

ಅಣ್ಣ ಉದಕ ತಾ೦ಬುಲ ದಪ೯ಣಗಳು - ಚೆನ್ನ ವಸ್ತ್ರಗಳೆಲ್ಲ ವಜಿ೯ತವು
ತನ್ನ ಸತಿಯ ಸಂಗ ಮಾಡುವ ಮನುಜನ ಬೆನ್ನಲಿ ತೆಗೆಸುವ ಯಮನು II೩ II

ಜಾವದ ಜಾಗ್ರರ ಕ್ರತು ನಾಲ್ಕು ಸಾವಿರ ಜಾವ ನಾಲ್ಕರ ಫಲಕೆ ಮಿತಿಯಿಲ್ಲವು
ದೇವದೆವನ ದಿನದಿ ನಿದ್ರೆಗೈದರೆ ಹುರಿಗಾವಲಿನೂಳು ಹಾಕಿ ಹರಿಸುವ ಯಮನು II೪II

ಇಂತು ಏಕಾದಶಿ ಉಪವಾಸ ಜಾಗರ ಸ೦ತತ ಕ್ಷಿರಾಬ್ದಿಶಯಣನ ಪೂಜೆ
ಸ೦ತೋಷದಿಂದಲಿ ಮಾಡಿದ ಜನರಿಗನ೦ತ ಫಲವನೀವ ಪುರಂದರವಿಠಲ II೫ II