Thursday, September 10, 2009

NInna olumige naanu

ನಿನ್ನ ಒಲುಮೆಗೆ ನಾನು ಈಡೆನೊ ರಂಗ IIಪII
ಸಣ್ಣವನು ನಾನಯ್ಯ ಪನ್ನಗಾಚಲವಾಸ IIಅಪII

ಅಜಿತನಾಮಕ ನೀನು ಅಲ್ಪಶಕ್ತನು ನಾನು
ಕುಜನದೂಷಕ ನೀನು ಅವರ ಮಿತ್ರನು ನಾನು
ವ್ರಜದ ಸ್ತ್ರೀಯರ ಮನವ ಸೂರೆಗೊಂಡ ಸ್ವಾಮಿ
ಅಜನ ಪೆತ್ತ ನಿನಗೆ ಸರಿ ಯಾರು ಪೇಳಯ್ಯ II೧II

ಅನೇಕ ಅದ್ಬುತ ಚರಿತ್ರ ಪಿಡಿದೆ ಹೇಸಿಗೆ ಮಾರ್ಗ
ಅನೇಕ ಭಕ್ತರ ಪೋಷ ನಾನವರ ದೂಷಕ
ಅನೇಕ ಬಾಹುಗಳು ಮತ್ತನೇಕ ಪಾದಗಳಯ್ಯ
ಅನೇಕ ದಿವ್ಯಾಭರಣ ವಿಶ್ವರೂಪ ನಿನಗೆ II೨II

ಪರಮಪಾವನ ನೀನು ದುಷ್ಟ ತರಳನು ನಾನು
ಕರುಣಾಬ್ದಿಯು ನೀನು ಕಠಿನಚಿತ್ತ ನಾನು
ಶರಣೆಂಬೆ ಗಿರಿರಾಯ ನಿನ್ನ ಪೋಲುವರುಂಟಿ
ಮರಳಿ ಪುಟ್ಟದೆ ಮಾಡು ತಂದೆ ಪುರಂದರವಿಠಲ II೩II

Poopu hogona baaro ranga

ಪೋಪು ಹೋಗೋಣ ಬಾರೊ ರಂಗ
ಪೋಪು ಹೋಗೋಣ ಬಾರೊ IIಪII

ಜಾಹ್ನವಿಯ ತೀರವಂತೆ ಜನಕರಾಯನ ಕುವರಿಯಂತೆ
ಜಾನಕಿಯ ವಿವಾಹವಂತೆ ಜಾಣ ನೀ ಬರಬೇಕಂತೆ II೧II

ಕುಂಡಿನಿಯ ನಗರವಂತೆ ಭೀಷ್ಮಕನ ಕುವರಿಯಂತೆ
ಶಿಶುಪಾಲನ ಒಲ್ಲಳಂತೆ ನಿನಗೆ ಓಲೆ ಬರೆದಳಂತೆ II೨II

ಪಂಡವರು ಕೌರವರಿಗೆ ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಡಬೇಕಂತೆ ರಂಗವಿಠಲ ಬರಬೇಕಂತೆII ೩II

Audio Link:
http://www.kannadaaudio.com/Songs/Devotional/PopuHogonaBaaroRanga-SriVidyabushana/Popu.ram





Poopu Hoogona Baaro Ranga
PooPu HOgoNa bAaro

Jhanavi Tiravante janakaraayana KuVariyante
Jaanakiya VIvaahavante Nii BaRaBekantee

KUnDaniya NagaraVante Bhishmana KuvariyAnte
ShiShupaalana Vallalante Olle baREDalante

Paandavaru Kowravarige LEttaVaaDi SOOtaRante
Rajyavannu BIDabekate Rangavitthala BaraBekante