Wednesday, June 3, 2009

ಕೈಲಾಸ ವಾಸ ಗೌರೀಶ ಈಶ

ಕೈಲಾಸ ವಾಸ ಗೌರೀಶ ಈಶ
ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ

ಅಹೋರಾತ್ರಿಯಲ್ಲಿ ನಾನು ಅನುಜರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೋ ಮಹದೇವನೇ
ಅಹಿಭೂಶಣನೆ ಎನ್ನ ಅವಗುಣಗಳೆಣಿಸದಲೇ
ವಿಹಿತಧರ್ಮದಲಿಡು ವಿಷ್ಣು ಭಕುತಿಯನು ಕೊಡು ಶಂಭೋ II1II

ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ
ಧನುಜಗತ ಮದಹಾರಿ ದಂಡ ಪ್ರಣಾಮವ ಮಾಡ್ಪೆ
ಮಣಿಸು ಈ ಶಿರವ ಸಜ್ಜನ ಚರಣ ಕಮಲದಲ್ಲಿ ಶಂಭೋ II2 II

ಭಾಗೀರಥಿಧರನೆ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೊ ಸಂತತ ಸರ್ವದೇವ
ಭಾಗವತಗಳ ಪ್ರಿಯ ವಿಜಯ ವಿಠಲನಂಘ್ರಿ
ಜಾಡು ಮಾಡದೆ ಭಜಿಪ ಭಾಗ್ಯವನು ಕೊಡು ಶಂಭೋ II3 II






In English:
Kailasavaasa gowrisha eesha
Tailadhariyante manasu koodu hariyalli shambhoo

Ahooratriyali naanu anujaraagraniyaagi
Mahiyolage charisideenoo mahadevanee
Ahibhushanane enna avagunagalenisadee
Vihitadharmadalidu Vishnu bhakutiyanu koodu shambhoo

Manasu kaaranavalla paapapunyakkella
Anlaaksha ninna preraneyillade
Dhanujagata madahaari danda pranaamava maadve
Manisu ee shirava sajjana charana kamaladalli shambhoo

Bhagirathidharanee bhayava pariharisayya
Leesaagi nii salahoo santata sarvadeva
Bhaagavata priya vijayavitthalanghri
Jaadu maadade bhajipa bhgyavanu koodo shambhoo