Friday, December 4, 2009

Vyartha vallave januma

ವ್ಯರ್ಥ ವಲ್ಲವೇ ಜನುಮ ವ್ಯರ್ಥ ವಲ್ಲವೇ
ಅಥಿ೯ಯಿಂದ ಹರಿಯ ನಾಮ ನಿತ್ಯ ಸ್ಮರಿಸದವರ ಜನ್ಮ

ಹರಿಯ ಸೇವೆ ಮಾಡದವನ ಹರಿಯ ಗುಣಗಳ ಎಣಿಸದವನ
ಹರಿಯ ಕೋ೦ಡಾಡದವನ ಹರಿಯ ತಿಳಿಯದವನ ಜನ್ಮ

ದಾಸರೊಡನೆ ಆಡದವನ ದಾಸರ ಪಾಡದವನ
ದಾಸರ ಕೊಂದಾಡದೆ ಹರಿಯ ದಾಸನಾಗದವನ ಜನ್ಮ

ಒಂದು ಶಂಖ ಉದಕ ತಂದು ಚಂದದಿ ಹರಿಗಪಿ೯ಸಿ
ತಂದೆ ಪುರಂದರ ವಿಠಲನ ಪೊಂದಿ ನೆನೆಯದವನ ಜನ್ಮ

Elli Harikathaprasangavoo

ಎಲ್ಲಿ ಹರಿಕಥಾ ಪ್ರಸಂಗವೂ ಅಲ್ಲಿ ಗಂಗಾ ಯಮುನಾ ಗೋದಾ ಸಿಂಧು ಸರಸ್ವತಿ
ಎಲ್ಲಾ ತೀರ್ಥಗಳು ಬಂದು ಎಣೆಯಾಗಿ ನಿಲ್ಲುವವು
ವಲ್ಲಭ ಶ್ರೀ ಪುರಂದರವಿಠಲನು ( ಶ್ರೀಹರಿಯು ) ಮೆಚ್ಚುವನು
ಜಯ ಹರಿ ಎಂಬುವುದೇ ಸುದಿನವು
ಜಯ ಹರಿ ತಾರ ಬಲವೂ
ಜಯ ಹರಿ ಚಂದ್ರ ಬಲವೂ
ಜಯ ಹರಿ ವಿದ್ಯಾ ಬಲವೂ
ಜಯ ಹರಿ ದೈವ ಬಲವೂ
ಜಯ ಹರಿ ನಮ್ಮ ಪುರಂದರ ವಿಠಲನ ಬಲ್ಲವಯ್ಯ ಸಕಲ ಸಜ್ಜನರಿಗೆ