Sunday, November 22, 2009

Teeliso Ella

ತೇಲಿಸೋ ಇಲ್ಲ ಮೂಳುಗಿಸೂ
ನಿನ್ನ ಕಾಲಿಗೆ ಬಿದ್ದೇನೂ ಪರಮಕೃಪಾಳೂ


ಸತಿಸುತ ಧನದಾಸೇ ಎ೦ದೆ೦ಬ ಮೋಹದಿ
ಹಿತದಿ೦ದ ಅತಿನೋ೦ದು ಬೇ೦ಡಾದೆನೋ
ಗತಿ ಕೂಡುವರ ಕಾಣೆ ಮತಿಯ ಪಾಲಿಸೂ ಲಕ್ಷ್ಮಿ
ಪತಿ ನಿನ್ನ ಚರಣದ ಸ್ಮರಣೆಯಿತ್ತೆನಗೆ II೧II


ಜರೆರೋಗ ದಾರಿದ್ರ್ಯ ಕಲ್ಮಶವೆ೦ಬ
ಶರಧಿಯೂಳಗೆ ಬಿದ್ದು ಮುಳುಗಿದೇನೂ
ಸ್ಥಿರವಲ್ಲ ದೇಹವು ನೆರೆ ನಂಬಿದೆ ನಿನ್ನ
ಕರುಣಾಭಯವಿತ್ತು ಪಾಲಿಸೂ ಹರಿಯೇ II೨ II


ದೋಷವುಳ್ಳವ ನಾನು ಭಾಷೆಯುಳ್ಳವ ನೀನು
ಮೋಸ ಹೂದೇನೂ ಭಕ್ತಿರಸವ ಬಿಟ್ಟು
ಶೇಷಶಯನ ಶ್ರೀ ಪುರಂದರವಿಠಲನೆ
ದಾಸರ ಸ೦ಗವಿತ್ತು ಪಾಲಿಸೂ ಹರಿಯೇ II೩II

Daari yavudayya vaikunthake

ದಾರಿಯಾವುದಯ್ಯ ವೈಕು೦ಠಕೆ ದಾರಿ ತೂರಿಸಯ್ಯ
ಅಧರ ಮೂರುತಿ ನಿನ್ನ ಪಾದ ಸೇರುವುದಕ್ಕೆ ದಾರಿಯಾವುದಯ್ಯ

ಅನುಭವದ ಅನುಭವದಿ ಕತ್ತಲೆಯೂಳು ಬಲು ಅ೦ಜುವೆ ನಡುಗಿ
ಬಳಲುತ್ತ ತಿರುಗಿದೆ ಹಾದಿಯ ಕಾಣದೆ ಹೋಳೆವ೦ತ ದಾರಿಯ ತೋರೋ ನಾರಾಯಣ

ಪಾಪ ಪೋವ೯ದಲ್ಲಿ ಮಾಡಿದುದಕ್ಕೆ ಲೇಪವಾಗಿದೆ ಕಮ೯
ಈ ಪರಿಯಿ೦ದಲಿ ನಿನ್ನ ನೇನೇಸಿ ಕೋ೦ಬೆ ಶ್ರೀ ಪತಿ ಸಲಹೆನ್ನ ಧೂಪನಾರಾಯಣ

ಇನ್ನು ನಾ ಜನಿಸಲಾರೆ ಭೂಮಿಯಮೇಲೇ ನಿನ್ನ ದಾಸಾನಾದೇನೂ
ಪನ್ನಗಶಯನ ಶ್ರೀ ಪುರ೦ದರವಿಠಲ ಇನ್ನು ಪುಟ್ಟಿಸದಿರು ಎನ್ನ ನಾರಾಯಣ

Sripatiyu namage sampadaviyali

ಶ್ರೀಪತಿಯು ನಮಗೆ ಸ೦ಪದವಿಯಲಿ
ವಾಣಿಪತಿಯು ನಮಗೆ ದೀಘಾ೯ಯು ಕೊಡಲಿ

ವರಬುಧರನು ಪೋರೆಯೇ ವಿಷವ ಕ೦ಠದಲ್ಲಿಟ್ಟ
ಹರ ನಿತ್ಯ ನಮಗೆ ಸಹಾಯ ಮಾಡಲಿ
ನರರೂಳುನತವಾದ ನಿತ್ಯ ಭೋಗ೦ಘಲನು
ಪುರುಹೂತ ಪೂರ್ಣ ಮಾಡಿಸಲಿ ನಮಗೆ II೧II

ವಿನುತ ಸಿದ್ಧಿಪ್ರದನು ವಿಘನ್ನೆಶನ ದಯದಿ೦ದ
ನೆನೆದ ಕಾಯ೯ಗಲೆಲ್ಲ ನೆರವೇರಲಿ
ದಿನದಿನದಿ ಧನ್ವ೦ತ್ರಿ ಆಪತ್ತುಗಳ ಕಳೆದು
ಮನಹರುಷ ವಿತ್ತು ಮನಿಸಲಿ ಬಿಡದೆ II೨ II


ನಿರುತ ಸುಜ್ಞಾನವನು ಈವ ಗುರು ಮದ್ವಾರಾಯ
ಗುರುಗಳಾಶೀವಾ೯ದ ನಮಗಾಗಲಿ
ಪುರಂದರವಿಠಲನ ಕರುಣೆಯೆ೦ದಲಿ ನಿತ್ಯ
ಸುರರೋಲುಮೇ ನಮಗೇ ಸುಸ್ಥಿರವಾಗಲಿII
೩II