Sunday, August 2, 2009

ಈಶ ನಿನ್ನ ಚರಣ ಭಜನೆ /Eeesha ninna charana Bhajane

ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು
ದೋಷರಾಶಿ ನಾಶ ಮಾಡೋ ಶ್ರೀಶ ಕೇಶವ IIಪII

ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ II1 II

ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾನವೆನಗೆ
ಬಾಧಿಸುವ ಯಮನ ಬಾಧೆ ಬಿಡಿಸು ಮಾಧವII ೨II


ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನು
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ II೩II


ಭ್ರಷ್ಟನೆನಿಸ ಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ II೪ II


ಮೊದಲು ನಿನ್ನ ಪಾದ ಪೂಜೆ ಮುದದಿ ಮಾಡುವೆನೈ ನಾನು
ಹೃದಯದೊಳಗೆ ಹುದುಗಿಸಯ್ಯ ಮಧುಸೂಧನII ೫II

ಕವಿದುಕೊಂಡು ಇರುವ ಪಾಪ ಸವೆದು ಪೋಗುವಂತೆಮಾಡು
ಜವನ ಬಾಧೆಯನು ಬಿಡಿಸೋ ತ್ರಿವಿಕ್ರಮ II೬ II


ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥೆ
ನೆಮವೇನಗೆ ಪಾಲಿಸಯ್ಯ ಸ್ವಾಮಿ ವಾಮನ II೭II


ಮದನನಯ್ಯ ನಿನ್ನ ಮಹಿಮೆ ವದನದಲ್ಲಿ ಒದಗುವಂತೆ
ಹೃದಯದಲ್ಲಿ ಸದನ ಮಾಡೋ ಮುದದಿ ಶ್ರೀಧರ II೮II



ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದು

ಹುಸಿಗೆ ನೀನು ಹಾಕದಿರೋ ಹೃಷಿಕೇಶನೆ II೯ II



ಆಬ್ದೀಯೊಳಗೆ ಬಿದ್ದು ನಾನು ಒದ್ದು ಕೊಂಬೆನಯ್ಯ ಭವದಿ

ಗೆದ್ದು ಪೋಪ ಬುದ್ಧಿ ತೋರೋ ಪದ್ಮನಭಾನೆII ೧೦II



ಕಾಮ ಕ್ರೋಧ ಬಿಡಿಸಿ ನಿನ್ನ ನಾಮ ಜಿವ್ಹೆಯೊಳಗೆ ನುಡಿಸಿ

ಶ್ರೀ ಮಹಾನುಭಾವನಾದ ದಾಮೋದರ II೧೧ II



ಪಂಕಜಕ್ಷಾ ನೀನೆ ಎನ್ನ ಮಂಕು ಬುದ್ಧಿಯನ್ನು ಬಿಡಿಸಿ ನಿನ್ನ

ಕಿಂಕರನ ಮಾಡಿಕೊಳ್ಳೋ ಸಂಕರುಷಣ II೧೨II



ಏಸುಜನ್ಮ ಬಂದರೇನು ದಾಸನಗಲಿಲ್ಲ ನಾನು

ಗಾಸಿಮಾದದಿರೋ ಇನ್ನು ವಾಸುದೇವನೆ II೧೩II



ಬುದ್ಧಿಶೂನ್ಯನಾಗಿ ನಾನು ಕದ್ದುಕಳ್ಳನಾದೆ ಎನ್ನ

ತಿದ್ದಿ ಹೃದಯ ಶುದ್ಧಮಾಡೋ ಪ್ರದ್ಯುಮನಾನೆ II೧೪ II



ಜನನಿ ಜನಕ ನಿನ್ನೆಯೆಂದು ಎನುವೆನಯ್ಯ ದಿನಬಂದು

ಎನಗೆ ಮುಕ್ತಿ ಪಾಲಿಸಿಂದು ಅನಿರುದ್ದನೆ II೧೫II



ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡೋ ಪ್ರೇಮ

ಇರಿಸು ನಿನ್ನ ಚರಣದಲ್ಲಿ ಪುರುಷೋತ್ತಮ II೧೬II



ಸಾಧುಸಂಗ ಕೊಟ್ಟು ನಿನ್ನ ಪಾದ ಭಜಕನೆನಿಸು ಎನ್ನ

ಭೇದ ಮಾಡಿ ನೋಡದಿರೋ ಅಧೋಕ್ಷದ II೧೭ II



ಚಾರುಚರಣ ತೋರಿ ಎನಗೆ ಪಾರಗಾಣಿಸಯ್ಯ ಕೊನೆಗೆ

ಭಾರ ಹಾಕಿರುವೆ ನಿನಗೆ ನಾರಸಿಂಹನೆ II೧೮ II



ಸಂಚಿತಾರ್ಥ ಪಾಪಗಳನು ಕಿಂಚಿತಾದರಿಲ್ಲದಂತೆ

ಮುಂಚಿತಾಗಿ ಕಳೆಯಬೇಕು ಸ್ವಾಮಿ ಅಚ್ಯುತ್II ೧೯II



ಜ್ಞಾನ ಭಕುತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನ

ಹೀನ ಬುದ್ಧಿ ಬಿಡಿಸೋ ಮುನ್ನ ಜನಾರ್ಧನ II೨೦ II



ಜಪತಪಾನುಷಾಠ ನೀನು ವಪ್ಪುವಂತೆ ಮಾಡಲಿಲ್ಲ

ತಪ್ಪು ಕೋಟಿ ಕ್ಷಮಿಸಬೇಕು ಉಪೇಂದ್ರನೆ II೨೧II



ಮೋರೆಯ ಇಡುವೆನಯ್ಯ ನಿನಗೆ ಸೆರೆಯ ಬಿಡಿಸು ಭಾವದ ಎನಗೆ

ಇರಿಸು ಭಕ್ತರೊಳಗೆ ಪರಮ ಪುರುಷ ಶ್ರೀಹರಿII ೨೨II



ಪುಟ್ಟಿಸಬೇಡವೆನು ಪುಟ್ಟಿಸಿದಕೆ ಪಾಲಿಸೇನು

ಇಷ್ಟು ಬೇಡಿಕೊಂಬೆ ನಾನು ಶ್ರೀಕೃಷ್ಣ II೨೩II



ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವನ

ಅಥಿ೯ಯಿಂದ ಸಲಹುವನು ಕೃತ೯ ಕೇಶವ II೨೪II



ಮರೆತುಬಿಡದೆ ಹರಿಯನಾಮ ಬರೆದು ಓದಿ ಕೇಳಿದವರಿಗೆ

ಕರೆದು ಮುಕ್ತಿ ಕೊಡುವ ಬಾಡದಾದಿಕೇಶವ II೨೫ II