Thursday, December 31, 2009

Haridinadali unda nararige naraka

ಹರಿದಿನದಲ್ಲಿ ಉ೦ಡ ನರರಿಗೆ ಘೋರ ನರಕ ತಪ್ಪದೆಂದು ಶ್ರುತಿಯು ಸಾರುತಲಿದೆ IIಪII

ಗೋವ ಕೊಂದ ಪಾಪ ಸಾವಿರ ವಿಪ್ರರ -ಜೀವ ಹತ್ಯಯ ಮಾಡಿದ ಪಾಪವು
ಭಾವಜನಯ್ಯನ ದಿನದಲು೦ಡವರಿಗೆ ಕೀವಿನೂಳಗೆ ಹಾಕಿ ಕುದಿಸುವ ಯಮನುII ೧II

ಒ೦ದೋ೦ದು ಅಗಳಿಗೆ ಕೋಟಿ ಕೋಟಿ ಕ್ರಿಮಿ ಅ೦ದಿನ ಅನ್ನವು ನಾಯ್ ಮಾ೦ಸವು
ಮ೦ದರಧರ ದಿನದಲು೦ಡವರನು ಹಂದಿಯ ಸುಡುವಂತೆ ಸುಡಿಸುವ ಯಮನು II೨ II

ಅಣ್ಣ ಉದಕ ತಾ೦ಬುಲ ದಪ೯ಣಗಳು - ಚೆನ್ನ ವಸ್ತ್ರಗಳೆಲ್ಲ ವಜಿ೯ತವು
ತನ್ನ ಸತಿಯ ಸಂಗ ಮಾಡುವ ಮನುಜನ ಬೆನ್ನಲಿ ತೆಗೆಸುವ ಯಮನು II೩ II

ಜಾವದ ಜಾಗ್ರರ ಕ್ರತು ನಾಲ್ಕು ಸಾವಿರ ಜಾವ ನಾಲ್ಕರ ಫಲಕೆ ಮಿತಿಯಿಲ್ಲವು
ದೇವದೆವನ ದಿನದಿ ನಿದ್ರೆಗೈದರೆ ಹುರಿಗಾವಲಿನೂಳು ಹಾಕಿ ಹರಿಸುವ ಯಮನು II೪II

ಇಂತು ಏಕಾದಶಿ ಉಪವಾಸ ಜಾಗರ ಸ೦ತತ ಕ್ಷಿರಾಬ್ದಿಶಯಣನ ಪೂಜೆ
ಸ೦ತೋಷದಿಂದಲಿ ಮಾಡಿದ ಜನರಿಗನ೦ತ ಫಲವನೀವ ಪುರಂದರವಿಠಲ II೫ II

Wednesday, December 30, 2009

Chandrachooda shivashankara

ಚಂದ್ರಚೂಡ ಶಿವಶಂಕರ ಪಾವ೯ತಿರಮಣನೆ ನಿನಗೆ ನಮೋ ನಮೋ

ಸು೦ದರ ಮೃಗಧರ ಪಿನಾಕಧನುಕರ ಗ೦ಗಾಶಿರ ಗಜಚಮಾ೯೦ಬರಧರ IIಅಪII



ನ೦ದಿವಾಹನಾನ೦ದದಿ೦ದ ಮೂಜ೯ಗದಿ ಮೆರೆವನು ನೀನೆ
ಅ೦ದು ಅಮೃತಘಟದಿ೦ದುದಿಸಿದ ವಿಷತ೦ದುಭುಜಿಸಿದವ ನೀನೆ
ಕ೦ದಪ೯ನ ಕ್ರೊಧದಿ೦ದ ಕಣ್ತೆರೆದು ಕೋ೦ದ ಉಗ್ರನು ನೀನೆ
ಇಂದಿರೇಶ ಶ್ರೀರಾಮನ ನಾಮವ ಚಂದದಿ ಪೂಗಳುವ ನೀನೆ II೧ II



ಬಾಲಮೃಕ೦ಡಜನ ಕಾಲನು ಎಳೆವಾಗ ಪಾಲಿಸಿದವನು ನೀನೆ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋದಿಗ೦ಬರ ನೀನೆ
ಕಾಲ ಕೂಟವನುಪಾನಮಾಡಿದ ನೀಲ ಕ೦ಠನು ನೀನೆ
ಜಾಲಮಾಡಿದ ಗೋಪಾಲನೆ೦ಬ ಪೆನ್ಗೆ ಮರುಲಾದವ ನೀನೆ II೨ II


ಧರೆಗೆ ದ ಕ್ಷಿ ಕಾವೆರೀತೀರ ಕು೦ಭಪುರದಿವಾಸಿಪನು ನೀನೆ
ಕೊರಳೂಳು ರುದ್ರಾಕ್ಷಿ ಭಸ್ಮವ ಧರಿಸಿದ ಪರಮವೈಷ್ಣವ ನೀನೆ
ಕರದಲಿ ವೀಣೆಯನುಡಿಸುವ ನಮ್ಮ ಉರಗಭುಷಣನು ನೀನೆ
ಗರುಡಗಮನ ಶ್ರೀ ಪುರಂದರ ವಿಠಲನ ಪ್ರಾಣಪ್ರಿಯನು ನೀನೆ II೩II




Baare nammanitanaka

ಬಾರೆ ನಮ್ಮನಿತನಕ ಭಾಗ್ಯದ ದೇವಿ
ಬಾರೆ ನಮ್ಮನಿತನಕ
ಬಾರೆ ನಮ್ಮನಿತನಕ ಬಹಳ ಕರುಣದಿಂದ ಜೋಡಿಸಿ
ಕರಗಳ ಎರಗುವೆ ಚರಣಕ್ಕೆ

ಜರದ ಪಿತಾ೦ಬರ ನಿರಿಗೆಗಳಲೆಯುತ
ಸರ್ಗಿ ಸರಪು ಚಂದ್ರಹಾರಗಹೊಳೆಯುತ II೧II

ಹರಡಿ ಕ೦ಕಣ ದು೦ಡು ಕರದಲ್ಲಿ ಹೊಳೆಯುತ
ತರಳನ ಮ್ಯಾಲೆ ತಾಯಿ ಕರುನವಿತ್ತು ಬೇಗನೆ II೨ II

ಮ೦ದಗಮನೆ ನಿನಗೆ ವಂದಿಸಿ ಬೇಡುವೆ
ಇಂದಿರೆಶನ ಕೂಡ ಇಂದು ನಮ್ಮನಿತನಕ II೩ II

Raghavendra paraaku

ರಾಘವೇಂದ್ರ ಪರಾಕು IIಅII

ಪರಿಮಳ ವಿರಚಿಸಿದವನೇ ಪರಾಕು IIಅಪII

ಧರೆಯೂಳು ಮಂತ್ರನಿಲಯನೇ ಪರಾಕು
ಗುರುಸುಧಿ೦ದ್ರರ ಕುವರ ಪರಾಕು II೧II

ಆ ಸೇತು ಹೇಮಾದ್ರಿ ಮೆರೆವ ಪರಾಕು
ದೀಶಿಕ ಶೇಷ್ಠ ನಿದು೯ಷ್ಠ ಪರಾಕು II೨ II

ಶ್ರೀಶ ಪ್ರಾಣೇಶವಿಠಲನೆ ಪರಾಕೆಂದು
ಆಸೆಯಿಂದ ನೀ ಭಜಿಪೆ ಪರಾಕು II೩ II

Kaayo GuruRaghavendra


ಕಾಯೋ ಗುರುರಾಘವೇಂದ್ರ ನಮ್ಮನ್ನ

ರಾಘವೇಂದ್ರ ಗುರುವೇ ಗತಿಯೂ ಭವ
ರೋಗ ಬ್ಯಾಗ ಕಳೆದಿಗ ಯೋಗಿವರ II೧II

ನಿನದಾಸ ನಾ ಅನ್ಯನಲ್ಲವೂ
ಘನ್ನ ಬನ್ನ ಬಿಡಿಸೇನ್ನನು ಮನ್ನಿಸಿ II೨II

ಅಭಿನವ ಜನಾದ೯ನ ವಿಠಲನ ಪ್ರಿಯ
ಶುಭಕರ ಪ್ರಭು ನೀ ಪ್ರಬಲ ಅಬಲ ನಾII ೩II



http://shreerayaru.blogspot.com/

Ondu Baari smarane saalade

ಒಂದು ಬಾರಿ ಸ್ಮರಣೆ ಸಾಲದೆ IIಪII
ಆನ೦ದತೀಥ೯ರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರ IIಅಪII

ಹಿ೦ದನೆಕ ಜನ್ಮಗಳಲಿ ನೊ೦ದು ಯೋನಿಗಳಲಿ ಬಂದು
ಇಂದಿರೆಶನ ಹರಿಯ ಪಾದವ ಹೊ೦ದಬೆಕೆ೦ಬುವರಿಗೆ II II

ಪ್ರಕೃತಿ ಬ೦ಧನದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊ೦ದು
ಅಕ೦ಕಚರಿತ ಹರಿಯ ಪಾದಭಾಕುತಿ ಬೇಕೆ೦ಬುವರಿಗೆ II೨ II

ಆರುಮಂದಿ ವೈರಿಗಳನು ಸೆರಿಸಲಿಸದ೦ತೆ ಜರಿದು
ಧೀರನಾಗಿ ಹರಿಯ ಪಾದವ ಸೇರಬೇಕೆ೦ಬುವರಿಗೆ II II

ಘೋರ ಸ೦ಸಾರಾ೦ಬುಧಿಗೆ ಪರಮಜ್ಞಾನ ವೆ೦ಬ ವಾಡೆ
ಏರಿ ಮೆಲ್ಲನೆ ಹರಿಯ ಪಾದ ಸೇರಬೇಕೆ೦ಬುವರಿಗೆ II೪ II

ಹಿನಬುದ್ಧಿಯಿಂದ ಶ್ರೀಹಯವದನನ್ನ ಜರಿದು
ತಾನು ಬದುಕಳರಿಯದಿರಲು ತೋರಿ ಕೊಟ್ಟ ಮಧ್ವಮುನಿಯು II೫II

Tuesday, December 29, 2009

Prananaathana Noodalu Banni Haridaasarella

ಪ್ರಾಣನಾಥನ ನೋಡಲು ಬನ್ನಿ ಹರಿದಾಸರೆಲ್ಲ

ಬೇಡಿದ ಮುಕ್ತಿಯ ನಿಡುವ ನಾಡೂಳು

ನೋಡುವ ಜನರ ಕಾಡುವ ನಮ್ಮ ದೋರೆ II೧II



ಇಂದಿರೆ ಅರಸನ ಚರಣ ದ್ವ೦ದ್ವವ ಹೊಂದಿ

ಮ೦ದರಧರ ಮಧುಸೂದನ ಭಕ್ತನ II೨ II



ಹರಿಹರ ಕರಿವರದ ಪರತ್ಪರಾ

ಪುರುಷನ ಭಕ್ತನ ಪರಿಪಾಲನಮ್ಮ II೩ II



ಶ್ರೀದ ಹನುಮ ಭೀಮ ಮದ್ವಾ೦ತಗ೯ತ

ರಾಮಕೃಷ್ಣ ವೆದವ್ಯಾಸಾಪಿ೯ತ ವೆ೦ದು II೪II



ಶೃಷ್ಟಿ ಯೂಳಗೆ ಬಂದು ಮುಕ್ತ ಪುರಾನಿಂದು

ದುಷ್ಟ ದೈತ್ಯರ ಕೊಂದು ವೆಂಕಟವಿಠಲನ ದಾಸನೆಂದು II೫II

Saari Bandane Pranesha bandane

ಸಾರಿ ಬ೦ದನೆ ಪ್ರಾಣೇಶ ಬ೦ದನೆ
ಸಾರಿ ಬ೦ದು ಲ೦ಕಾಪುರವ ಮೀರಿದ ರಾವಣನ
ಕ೦ಡು ಧೀರ ಒಯ್ಯಾರದಿ೦ದ

ವಾಯುಪುತ್ರನೆ ಶ್ರೀರಾಮದೂತನೆ
ಪ್ರೀತಿಯಿಂದ ಸೀತಾ೦ಗನೆಗೆ ಮುದ್ರಿಕೆಯ ತ೦ದಿತ್ತವನೆ II೧II

ಭೀಮ ಸೆನನೆ ಕುಂತಿ ತನಯನೆ
ವಿರಾಟನ ಮನೆಯಲಿ ನಿಂತು ಕಿಚಕನ ಸ೦ಹರಿಸಿದವನೆ II೨II

ಮದ್ವಾರಾಯನೆ ಸರ್ವಘನ ಶ್ರೇಸ್ಥ ನೆ
ಅದ್ವೈತವ ಗೆದ್ದು ಪುರಂದರ ವಿಠಲನ ಮುಂದೆ ನಿಂತನೆ II೩II

Ramaasamudra Kumari

ರಮಾಸಮುದ್ರನ ಕುಮಾರಿ ನಿನ್ನ ಸರಿ
ಸಮಾನಯಾ೯ರಮ್ಮ ಪ
ಉಮೇಶ ಮೊದಲಾದ ಅಮರನಿಕರವು
ಭ್ರಮಿಸಿ ನಿನ್ನ ಪಾದಕಮಲ ಪೂಜಿಪರಮ್ಮ IIಅಪII

ಅಪಾರ ಮಹಿಮನ ವ್ಯಾಪಾರ೦ಗಳ
ತಿಳಿದು ಕಾಪಾಡುವೆ ಜಗವ
ಕೋಪಾರಹಿತಲಾಗಿ ಶ್ರೀಪತಿಯೂಳು ಎಮ್ಮ
ತಾಪತ್ರಯವ ಪೇಳಿ ಪೂಶಿಸಬೇಕಮ್ಮ II೧ II

ಕರುಣಾ ವಾರಿಧಿಯೆಂದು ಶರಣಾಜನರು
ನಿನ್ನ ಸ್ಮರಣೆಯ ಮಾಡುವರೆ
ಹರಿಣಾಕ್ಷಿ ಕೆಳೆಲೇ ಹರುಷದಿಂದಲಿ ಹರಿ
ಚರಣಾವ ತೋರಿ ಅಘ ಹರಣಾವ ಮಾಡಿಸಮ್ಮ II೨II

ವಾಸಾವನುತ ಸಿರಿ ಶೇಷವಿಠಲನೋಳು
ವಾಸಾವ ಮಾದುವಳೇ
ಘಾಸಿಗೂಲಿಸದೆಲೆ ಈ ಸಮಯದಲಿ
ವಾಸುದೀವಗೆ ಪೇಳಿ ಪೂಶಿಸಬೇಕಮ್ಮ II೩II

Eke Brindavanadi

ಏಕೆ ಬೃ೦ದಾವನದಿ ನೆಲೆಸಿರುವೆ ಗುರುವೇ
ಶ್ರೀಕಾಂತ ನೂಲಿಸಿದುದು ಸಾಕಾಗಲಿಲ್ಲೆ೦ದು
ಏಕಾಂತ ಬಯಸಿದೆಯಾ ಶ್ರೀ ರಾಘವೇಂದ್ರಾ
ಹಿಂದೆ ನಿನಗಾಗಿ ನರಹರಿಯು ಕಂಬದಿ ಬಂದ
ಮುಂದೆ ನ೦ದನ ಕಂದ ನಿನ್ನೆದುರು ಕುಣಿದ
ಒಂದು ಕ್ಷಣ ಬಿಟ್ಟಿರದೆ ಹರಿಯು ನಲಿಯುತಿರೆ
ಇನ್ಯಾರ ಒಲಿಸಲೆಂದು ತಪಗೈಯುತಿರುವೆ II1II
ಇಷ್ಟ ವಿಲ್ಲದ ರಾಜ್ಯವಾಳಿ ಬಹು ವಷ೯ಗಳು
ಶೇಷ್ಟ ನೀ ಬಹು ಆಯಾಸ ಗೋ೦ಡೆಯಾ
ದುಷ್ಟವಾದಿಗಳ ವಾಗ್ಯುದ್ಧದಲಿ ಜಯಿಸುತಲಿ
ಶ್ರೇಷ್ಠ ಗ್ರಂಥವ ಬರೆದು ಬರೆದು ಸಾಕಾಯ್ತೆ II೨ II
ಪರಿ ಪರಿ ಅಭಿಷ್ಟಗಳ ನೀಡೆ೦ದು ಜನಕಾಡೆ
ವರವಿತ್ತು ಸಾಕಾತ್ತೆ ಕಮಲೇಶ ದಾಸ
ಧರೆಗೆ ಮರೆಯಾಗಿ ಬೃಂದಾವನ ಸೇರಿದೂಡೆ
ಚರಣ ದಾಸರು ನಿನ್ನ ಬಿಡುವರೆನಯ್ಯಾ II೩
II


In English:


Eke BrindavaNadi NelEsiruVe GuRuveE
Srikantha NooLisidudu SaakaagaliLeendu
Ekanta baYasideyaa Sri RaGhavendraa
Hinde NinagAagi Narahariyu Kambadi Banda
Munde NanDana Kanda NInneduru KUNida
Ondu kshna BiTIIrade Hariyu Naliyutire
Inyara oliSalendu taPagaiyutiruve
IshTavillada RajYavaaLi Bahu VarshagaLu
shresta nii Bahu BaliLi AAyaasaGondeyaa
dushtavaadigala vaagyuddhdali jayisutali
shreshta granthava bareDu Baredu SaaKaaytee
paRi Pari Abhishtagala Nidendu JaNaKaade
VaraviTTu Saakayte Kamalesha daaSAa
Dharege mareyaagi BrinDavanava SeriDooDe
chaRana DAAsaru Ninna BiduvarenaYaa

Sunday, December 27, 2009

Baare Bhgyada nidhiye

ಬಾರೆ ಭಾಗ್ಯದ ನಿಧಿಯೇ
ಕರವೀರ ನಿವಾಸಿನಿ ಸಿರಿಯೇ
ಬಾರೆ ಬಾರೆ ಕರವೀರ ನಿವಾಸಿನಿ
ಬಾರೆ ಬಾರೆಗು ಶುಭ ತೋರೆ ನಮ್ಮನಿಗೆ
ನಿಗಮವೆದ್ಯಳೆ ನೀನು ನಿನ್ನ
ಪೋಗಳಲಾಪೇನೆ ನಾನು
ಮಗನಪರಾಧವ ತೆಗೆದೇಣಿಸದಲೇ
ನ್ನಗವೆಣಿಯೆ ಲಗಬಗೆಯಿ೦ದಲಿ
ಲೋಕಮಾತೆಯೇ ನೀನು ನಿನ್ನ
ತೋಕನಲ್ಲವೇ ನಾನು
ಆಕಳು ಕರುವಿನ ಸ್ವೀಕರಿಸುವ ಪರಿ
ನೀ ಕರುಣದಿ ಕಾಲ್ಹಾಕು ನಮ್ಮನಿಗೆ
ಕಡೆಗೆ ನಮ್ಮನಿವಾಸ ಒಡೆಯನ೦ತಾದ್ರಿಶ
ಒಡೆಯನಿದ್ದಲ್ಲಿಗೆ ಮಡದಿ ಬಾಹುವುದು
ರೂಡಿಗುಚಿತವಿದು ನಡಿ ನಮ್ಮನಿಗೆ


Audio Link:



Haridina paatakaparihaara divijara

ಹರಿದಿನ ಪಾತಕಪರಿಹಾರ ದಿವಿಜರ
ಕರುಣಕ್ಕೆ ಕಾರಣ ನ೦ಬೆಲೊ ಮನುಜ IIಪII

ಗಂಗೆ ಮೊದಲಾದ ತೀರ್ಥ೦ಗಳೇಣೆಯೇ ಶ್ರೀರಂಗ ಮೋದಲಾದ ಕ್ಷೇತ್ರವು ಸರಿಯೇ
ಉತ್ತು೦ಗ ಜಪತಪ ಹೋಮಗಳೆದುರೆ ಶ್ರೀರಂಗನಾಥನ ದಿನಕೋ೦ದುಪವಾಸಕೆ II೧II

ಹಿಂದೆ ಮಾಡಿದ ಪಾಪ ಪರಿಹಾರವು , ನೀನಿಂದು ಮಾಡುವ ಸುಕೃತ ಬೆಳೆಸು
ಮು೦ದಣ ಮುಕುತಿಗೆ ಕಲ್ಪಲತಾ೦ಕುರ ಇಂದಿರೇಶನ ದಿನಕೋ೦ದುಪವಾಸಕೆ II೨II

ರುಕುಮಾ೦ಗದ ಮೊದಲಾದ ಭಕುತರೆ ಸಕಲವ ಬಿಟ್ಟು ಏಕಾದಶಿವ್ರತವ
ಭಕುತಿಯಿ೦ ಕೂಡಿ ಶ್ರೀ ಕೃಷ್ಣ ನ ಮೆಚ್ಚಿಸಿ - ಮುಕುತಿ ಸೂರೆಗೂ೦ದರೆ೦ಬುದನರಿಯೇ II೩II

Saturday, December 5, 2009

kallu sakkare Kolliroo





ಕಲ್ಲು ಸಕ್ಕರೆ ಕೊಳ್ಳಿರೂ ನೀವೆಲ್ಲರೂ
ಕಲ್ಲು ಸಕ್ಕರೆ ಕೊಳ್ಳಿರೂ
ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು
ಪುಲ್ಲ ಲೋಚನ ಶ್ರೀಕೃಷ್ಣನಾಮವೆಂಬ

ಎತ್ತು ಹೇರುಗಳಿಂದ ಹೊತ್ತು ಮಾರುವದಲ್ಲ
ಒತ್ಯೋತ್ತಿ ಗೋಣಿ ಯೋಳ್ತುತು೦ಬುವದಲ್ಲ
ಎತ್ತ ಹೋದರು ಬಾಡಿಗೆ ಸು೦ಕವಿದಕೀಲ್ಲ
ಉತ್ತಮ ಸರಕಿದು ಅತಿ ಲಾಭ ಬರುವಂಥ II೧II

ನಷ್ಟ ಬಿಳುವದಲ್ಲ ನಾತ ಹುಟ್ಟುವದಲ್ಲ
ಎಷ್ಟು ಒಯ್ದರು ಬೆಲೆ ರೋಕ್ಕವಿದಕೀಲ್ಲ
ಕಟ್ಟಿರುವೆಯು ತಿಂದು ಕಡಿಮೆಯಾಗುವದಲ್ಲ
ಪಟ್ಟಣದೊಳಗೆ ಪ್ರಸಿದ್ಧ ವಾಗಿರುವಂಥ II೨II


ಸಂತೆ ಸಂತೆಗೆ ಹೋಗಿ ಶ್ರಮಪಡಿಸುವದಲ್ಲ
ಸಂತೆಯೊಳಗೆ ಇಟ್ಟು ಮಾರುವದಲ್ಲ
ಸಂತತ ಸಂತರ ನಾಲಿಗೆ ಸವಿ ಗೋ೦ಮಬ
ಕಾಂತ ಪುರಂದರ ವಿಠಲನ ನಾಮವೆಂಬ II3II

Friday, December 4, 2009

Vyartha vallave januma

ವ್ಯರ್ಥ ವಲ್ಲವೇ ಜನುಮ ವ್ಯರ್ಥ ವಲ್ಲವೇ
ಅಥಿ೯ಯಿಂದ ಹರಿಯ ನಾಮ ನಿತ್ಯ ಸ್ಮರಿಸದವರ ಜನ್ಮ

ಹರಿಯ ಸೇವೆ ಮಾಡದವನ ಹರಿಯ ಗುಣಗಳ ಎಣಿಸದವನ
ಹರಿಯ ಕೋ೦ಡಾಡದವನ ಹರಿಯ ತಿಳಿಯದವನ ಜನ್ಮ

ದಾಸರೊಡನೆ ಆಡದವನ ದಾಸರ ಪಾಡದವನ
ದಾಸರ ಕೊಂದಾಡದೆ ಹರಿಯ ದಾಸನಾಗದವನ ಜನ್ಮ

ಒಂದು ಶಂಖ ಉದಕ ತಂದು ಚಂದದಿ ಹರಿಗಪಿ೯ಸಿ
ತಂದೆ ಪುರಂದರ ವಿಠಲನ ಪೊಂದಿ ನೆನೆಯದವನ ಜನ್ಮ

Elli Harikathaprasangavoo

ಎಲ್ಲಿ ಹರಿಕಥಾ ಪ್ರಸಂಗವೂ ಅಲ್ಲಿ ಗಂಗಾ ಯಮುನಾ ಗೋದಾ ಸಿಂಧು ಸರಸ್ವತಿ
ಎಲ್ಲಾ ತೀರ್ಥಗಳು ಬಂದು ಎಣೆಯಾಗಿ ನಿಲ್ಲುವವು
ವಲ್ಲಭ ಶ್ರೀ ಪುರಂದರವಿಠಲನು ( ಶ್ರೀಹರಿಯು ) ಮೆಚ್ಚುವನು
ಜಯ ಹರಿ ಎಂಬುವುದೇ ಸುದಿನವು
ಜಯ ಹರಿ ತಾರ ಬಲವೂ
ಜಯ ಹರಿ ಚಂದ್ರ ಬಲವೂ
ಜಯ ಹರಿ ವಿದ್ಯಾ ಬಲವೂ
ಜಯ ಹರಿ ದೈವ ಬಲವೂ
ಜಯ ಹರಿ ನಮ್ಮ ಪುರಂದರ ವಿಠಲನ ಬಲ್ಲವಯ್ಯ ಸಕಲ ಸಜ್ಜನರಿಗೆ