Friday, December 31, 2010

Shambho swayambho sambhava


ವಾಮದೇವ ವಿರಿಂಚಿ ತನಯ ಉ
ಮಾಮನೋಹರ ಉಗ್ರ ಧೂರ್ಜಟಿ
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ
ಕಾಮಹರ ಕೈಲಾಸ ಮಂದಿರ
ಸೋಮಸೂರ್ಯಾನಳವಿಲೋಚನ
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ I




( from Harikathamruthasaara )


ಶ೦ಭೋ ಸ್ವಯ೦ಭುಸ೦ಭವ ನಂಬಿದೆ ಕಾಯೋ
ಜ೦ಭಾರಿನುತ ಅಭ IIಪII




ಅ೦ಬರಪುರಹರ ಸಾ೦ಬ ತ್ರಿಯ೦ಬಕ
ಶ೦ಬರಾರಿರಿಪು ಗ೦ಭೀರ ಕರುಣೇ IIಅಪII





ಭಸಿತಭೂಷಿತ ಶರೀರ ಭಕ್ತರಾಧಾರ
ವಿಷಕಂಠ ದುರಿತಹರ
ಪಶುಪತಿ ಫಣಿಪಹಾರ ಪಾವನ್ನಕರ
ತ್ರಿಶೂಲಡಮರುಗಧರ
ನೋಸಲನಯನ ವಿಕಸಿತ ಅ೦ಬುಜಮುಖ
ಶಶಿಧರ ಮೂಕ ರಕ್ಕಸಮದಮದ೯ನ
ಘಸಣೆಗೋಳಿಸುವ ತಾಮಸವ ಕಳೆದು ಮಾ-
ನಸದಲಿ ರಂಗನ ಬಿಸಜಪಾದವ ತೋರೋII ೧II

ರಜತಪವ೯ತನಿವಾಸ ನಿಮ೯ಲಭಾಸ
ಗಜದೈತ್ಯ ನಾಶ ಗಿರೀಶ
ಸುಜನರ ಮನೂವಿಲಾಸ ವ್ಯೋಮಕೇಶ
ತ್ರಿಜಗದಲ್ಲಣ ಗೌರೀಶ
ಅಜಸುತನಧ್ವರ ಭಜನೆಯ ಗೈಸಿದ
ಅಜಗರಮಂದಿರ ಗಜಮುಖ ಜನಕನೆ
ಗಜಗಮನನ ತನುಜನನ್ನು ಕಾಯ್ದವನೆ
ವಜ್ರಮುನಿ ವಂದಿತ ಭಾಜಿಸುವೆ ನಿನ್ನ II೨II

ಮಧುರಾಪುರಿ ನಿಲಯ ಮೃತ್ಯು೦ಜಯ
ಸದಮಲ ಸುಮನಸಗೆಯ
ಸದಾ ನಮಿಪರ ಹೃದಯಸ್ತ ಚಕ್ಕನಾಥ
ಸದೆ ಪಾಪ ಕೊಡು ಅಭಯ
ಸದಾಶಿವ ಜಾನ್ಹವಿಧರ ಕೃತಮಾಲಾ
ನದಿತೀರದಿ ವಾಸವಾಗಿಪ ಸೌಂದರ್ಯ
ಮಧುರಿಪು ವಿಜಯವಿಠಲ ಪದಾಬ್ಜಕೆ
ಮಧುಪನೆನಿಪ ಪಂಚವದನ ಕೈಲಾಸ II೩II




Audio/video link:

http://www.youtube.com/watch?v=EH_lZNjg26M

Parama mangala

(image source : google search)
ಪರಮ ಮಂಗಳ ಮೂರುತಿ ದಿವ್ಯಕಿರುತಿ
ಧರೆಯೋಳಗಿದೆ ವಾರುತಿ IIಪ II


ಕರುಣಾಪಯೋನಿಧಿಯೆ ಕರವಪಿಡಿದು ಎನ್ನ
ಕರುಣಶುದ್ಧನ ಮಾಡೊ ಕರೆವೆ ಮಸ್ತಕ ಬಾಗಿ II೧ II

shreerayarublogspot.com

ರಾಘವೇಂದ್ರರಪಾದ ಲಾಘವಮತಿಯಲ್ಲಿ
ಶ್ಲಾಘನ ಮಾಡಿದ ಮಾಗಧಾರಿಯಪ್ರೀಯ II೨ II


ನಿರುತ ಮಂತ್ರಾಲಯ ಪುರವಾಸ ಅಘನಾಶ
ಸಿರಿ ವಿಜಯವಿಠಲನ್ನಚರಣ ಭಜಿಪಗುಗುವೆ II೩II

Ninna Olumeinda nikhila janaru

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು I
ಮನ್ನಿಸುವರೊ ಮಹಾರಾಯ IIಪII

ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ I

ನಿನ್ನದೇ ಸಕಲ ಸಂಪತ್ತು II ಅಪ II
shreerayarublogspot.com
ಜೀರ್ಣಮಲಿನ ವಸ್ತ್ರ ಕಾಣದ ಮನುಜಗೆ Iಊರ್ಣ ವಿಚಿತ್ರ

ವಸನಾ II ವರ್ಣವರ್ಣದಿಂದ ಬಾಹೋದೇನೊ ಸಂ -Iಪೂರ್ಣ
ಗುಣಾರ್ಣವ ದೇವಾ II1II

ಸಂಜೀತನಕ ಇದ್ದು ಸಣ್ಣ ಸವಟು ತುಂಬ I ಗಂಜಿ ಕಾಣದೆ I
ಬಳಲಿ -ದೆನೊ II ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ
ಭುಂಜಿಸುವದು ಮತ್ತೇನೋ II2II

ಒಬ್ಬ ಹೆಂಗಸಿಗೆ ಅನ್ನ ಹಾಕುವದಕ್ಕೆ I ತಬ್ಬಿಬ್ಬುಗೊಂಡೆ ನಾ ಹಿಂದೆ I
ನಿಬ್ಬರದಲಿ ಸರ್ವರ ಕೂಡಿನ್ನು Iಹಬ್ಬವನುಂಡೆನೊ ಹರಿಯೇ II3II

ಮನೆಮನೆ ತಿರುಗಿದೆ ಕಾಸುಪುಟ್ಟದೆ I ಸುಮ್ಮನೆ ಚಾಲವರಿದು
ಬಾಹೆನೊ II ಹಣ ಹೊನ್ನು ದ್ರವ್ಯ ಒಮ್ಮಿಂದೊಮ್ಮೆ ಈಗ Iಎನಗೆ ಪ್ರಾಪುತಿ
ನೋಡೋ ಜೀಯಾ II4II

ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ Iಮೆದ್ದೆನೆಂದರೆ
ಈಯದಾದೆ II ಈ ಧರೆಯೊಳು ಸತ್ಪಾತ್ರರಿಗುಣಿಸುವ I ಪದ್ಧತಿ ನೋಡೊ
ಧರ್ಮಾತ್ಮಾ II5II

ನೀಚೋಚ್ಛ ತಿಳಿಯದೆ ಸರ್ವರ ಚರಣಕ್ಕೆ I ಚಾಚಿದೆ ನೊಸಲು
ಹಸ್ತಗಳ II ಯೋಚಿಸಿ ನೋಡಲು ಸೋಜಿಗವಾಗಿದೆ I ವಾಚಕೆ ನಿಲುಕದೊ
ಹರಿಯೇ II6II

ವೈದಿಕ ಪದವಿಯ ಕೊಡುವನಿಗೆ ಲೌಕಿಕ Iನೈದಿಸುವುದು
ಮಹಾಖ್ಯಾತಿ II ಮೈದುನಗೊಲಿದ ಶ್ರೀ ವಿಜಯವಿಠಲ ನಿನ್ನ I ಪಾದ
ಸಾಕ್ಷಿ ಅನುಭವವೊ
II7II


Audio link:
http://www.kannadaaudio.com/Songs/Devotional/home/NinnaOlumeinda-RaichurSheshgiridas.php

Monday, November 29, 2010

Munjane yeddu Govindanenni

( image source: google search)
ಮುಂಜಾನೆ ಎದ್ದು ಗೋವಿಂದನೆನ್ನಿ IIಪII

ನಮ್ಮ ನ೦ಜಿಪ ದುರಿತವು ದೂರವೆನ್ನಿ IIಅಪII

ಅಸುರ ಸ೦ಹಾರಿಯನ್ನಿ ದಶಶಿರ ವೈರಿಯೇನ್ನಿ I ಶಿಶುವು
ಮೊರೆಯಿಡಲು ರಕ್ಷಿಸಿದನೆನ್ನಿ II ಅಸುರನರಣ್ಯ ದೂಳ್ ಭಸ್ಮವಮಾಡಲು I
ವಸುಧೆ ಯೋಳ್ ನಾಟ್ಯವ ನಾಡಿದನೆನ್ನಿ II1II

shreerayarublogspot.com

ಬಲಿಯ ಬೇಡಿದನೆನ್ನಿ ಚೆಲುವ ವಾಮನ ನೆನ್ನಿ Iಲಲನೆಯ
ಅಭಿಮಾನಿ ಕಾಯ್ದನೆನ್ನಿ II ಕಲಿಯುಗದಲಿ ಬಂದ ಕೃಷ್ಣಾವತಾರನೆನ್ನಿ I
ಸತಿಪಾ೦ಡು ಸುತರನ್ನು ಪಾಲಿಸಿದನೆನ್ನಿ II2II

ಕರುಣಾಕರನೆನ್ನಿ ಕಪಟನಾಟಕನೆನ್ನಿ I ಕರಿರಾಜನನು ಕಾಯ್ದ
ಕೃಷ್ಣನೆನ್ನಿ II ಪರಿಪರಿಯಿಂದಲಿ ಭಕ್ತರ ಸಲಹುವ I ವರದ
ಪುರಂದರವಿಠಲನೆನ್ನಿ II3II


Wednesday, November 3, 2010

Karunadi kannu

ಕರುಣದಿ ಕಣ್ಣು ತೆರೆಯೆ ಬಾರಮ್ಮ ಸಿರಿಯೆ IIಪII

ಕೊಲ್ಹಾಪುರ ಸಿ೦ಹಾಸನದಿ ಮೆರೆಯುವ ಸಿರೆಯೆ IIಅಪII


ವಿಧಿಭವಾದಿಗಳ ಸದನಗಳಿಗೆ
ಅಭ್ಯು ದಯ ಕಟಾಕ್ಷದಿ ಸುದಯವಸುರಿಸೆ II೧II
shreerayarublogspot.com
ಕಡು ಬೆಡಗಿನ ನಿನ್ನಡಿದಾವರೆಗಳ
ಬಿಡದೆ ಭಜಿಪವರ ಕೋಡು ಸು೦ದರಿಯೆ II೨II


ಸುಂದರಾನ ಅರವಿಂದಮಲ್ಲಿಗೆ
ಮಂದಹಾಸ ಮಕರ೦ದವ ಸುರಿಯೆ II೩II


ಬಡವರಾಭಿ ಷ್ಟೆಯ ಕೋಡುವಳೆ೦ದು
ಬಡಬಡಿಸಿ ಬಂದೆ ನಿನ್ನೊ ಡಲಿನ ಮರಿಯೆ II೪II


ಕೊಟ್ಟರೆ ಕಮಲೇಶವಿಠಲರಾಯನ
ಪಟ್ಟದರಸಿ ಯೋ೦ಬೊ ಕಟ್ಟಲೆ ಕರೆಯೆ II೫II

Kaartika Maasagalalli

ದೀಪಾವಳಿಯ ನರಕ ಚತುದ೯ಶಿ ಶುಭದಿನದಂದು ಬ್ರಾಹ್ಮೀಮು ಹೂತ೯ದಲ್ಲೆದ್ದು ಕಾಮನ ಪಿತನನ್ನು ಸ್ಮರಿಸುತ್ತ ತೈಲಶಾಸ್ತ್ರ ಮಾಡುವುದು .

ಕಾತಿ೯ಕ ಮಾಸಗಳಲ್ಲಿ ಕಾಮನಪಿತನ ಪೂಜಿಸೆ IIಪII


ಕಾತಿ೯ಕ ಮಾಸಗಳಲ್ಲಿ ಕಾಮನ ಪಿತನ ಪೂಜಿಸಲುI
ಮಾಸಾಭಿಮಾನಿ ದಾಮೋದರನ ಭಜಿಸಿI
ಲೇಸು ಸ೦ಪಿಗೆ ಗ೦ಧೆಣ್ಣೆ ಸಮಪಿ೯ಸಿI
ಆ ಪುಣ್ಯ ಪುರುಷೋತ್ತಮನ ಕೊ೦ಡಾದುತI
ತೈಲ ಶಾಸ್ತ್ರವ ರಚಿಸಿ II೧II

ಪುಣ್ಯ ಸಾಧನದ ಜನರೆಲ್ಲ I ಬ್ರಾಹ್ಮೀಮೂಹೂತ೯ದ ಲೆದ್ದುII
ಚೆನ್ನಾಗಿ ಗೋವುಗಳ ತುಳಸಿ ಪೂಜೆಯಮಾಡಿ I
ಕಮ್ಮೆಣ್ಣೆ ಕಸ್ತೂರಿ ಕಪೂ೯ರ ವಿಳ್ಯವನಿತ್ತು I
ಪನ್ನ೦ಗಶಯನನ ಪಾದಕೆ ಸಮಪಿ೯ಸಿ I
ಗೋಪಿ - ಚಿನ್ನದಾರುತಿಯಬೆಳಗಿರೆ II೨II

ಸೃಷ್ಟಿಗೆ ಕತೃ೯ ಶ್ರೀಹರಿಯI
ಸೃಷ್ಟಿಸಿದನು ದೀಪಾವಳಿಯುI
ಉತ್ತಮ ಚತುದು೯ಶಿ ದಿನದಲಿ ಬಂದುI
ಮತ್ತೆ ನರಕಾಸುರನ ವಧಮಾಡಿ ಬಂದುI
ಉತ್ತಮ ಧರೆಗಿಳಿದ ಕೃಷ್ಣಹಯವದನಗೆ
ಮುತ್ತಿನಾರುತಿಯ ಬೇಳಗಿರೆ II೩II

Wednesday, October 27, 2010

Baaro Baaro Panduranga ninegati

( image source: google search)
ಬಾರೋ ಬಾರೋ ಪಾಂಡುರಂಗ ನೀನೇ ಗತಿ IIಪII


ತೋರೋ ತೋರೋ ನಿನ್ನ ಮುಖವ ರುಕ್ಮಿಣಿ ಪತಿ IIಅಪII


ಚಂದ್ರ ಭಾಗಾತೀರದಲ್ಲಿ Iವಾಸವಾಗಿರುವಿ II ಮಂದರಗಿರಿಧರ
ಸಿಂಧು ಶಯನ ಅಂದವಾಗಿರುವಿ II೧II

shreerayarublogspot.com
ಶಂಖ ಚಕ್ರವನ್ನು ನೀನು Iಎಲ್ಲಿ ಇಟ್ಟಿರುವಿ II
ಟೋ೦ಕದ ಮೇಲೆ ಕೈಯನಿಟ್ಟು I ಏಕೆ ನಿ೦ತಿರುವಿ II೨II


ಭಕ್ತರನೆಲ್ಲ ಉದ್ಧರಿಸುವ I ನೀನೇದೋರೆ II
ಭಕ್ತವತ್ಸಲ ನಾರಸಿಂಹವಿಠಲ ಹರೇ II೩II

Monday, October 25, 2010

Giriraaya Giriraaya

ಗಿರಿರಾಯಾ ಗಿರಿರಾಯ IIಪII

ಶರಣಾಗತರಿಗೆ ಕರುಣಾಕರ ವೆಂಕಟ IIಅಪII

ಸ್ಮರಿಸುವೆ ನಿನ್ನನು ಸರಸಿಜಭವನುತ
ಸ್ಮರತಾಮರತರು ದುರಿತವಿದೂರಾ II೧II
shreerayarublogspot.com

ಶ್ರೀಕರ ಭವಭಯನೂಕಿಸಿ ಎನನ್ನು
ಸಾಕೆಲೂ ಭೂಧರಸೂಕರರೂಪ II೨II

ಅಪದ್ಭಾ೦ ಧವ ಶ್ರೀಪತಿ ಎನನ್ನು
ಕಾಪೆಡೆಲೊ ಸಕಲಾಪದ್ಧರ ವೆಂಕಟ II೩II

ಕಾಮಿತ ಫಲಪ್ರದ ಈ ಮಹಿತಳದೊಳು
ಸಾಮಾಜ ವರದ ಸುಧಾಮನ ಸಖಪೂರೆ II೪II

ದಾತ ಗುರುಜಗನ್ನಾಥವಿಠಲನ
ಪ್ರೀತನಾಗೋ ನಿನ್ನದೂತನುನಾನೈ II೫II

Tuesday, October 12, 2010

Satata paalisoo enna

ಸತತ ಪಾಲಿಸೋ ಎನ್ನ ಯತಿ ರಾಘವೇಂದ್ರ IIಪII
ಪತಿತ ಪಾವನ ಪವನ ಸುತಮತಾ೦ಬುಧಿ ಚಂದ್ರಾ IIಅಪII



ಕ್ಷೋಣಿಯೋಳಗೆ ಕು೦ಭ ಕೋಣ ಕ್ಷೇತ್ರದಿ ಮೆರೆದೆ I ವೀಣಾವೆಂಕಟ
ಅಭಿದಾನದಿಂದಾII ಸಾನುರಾಗದಿ ದ್ವಿಜನ ಪ್ರಾಣವುಳುಹಿದ ಮಹಿಮೆI
ಏನೆ೦ದು ಬಣ್ಣಿಸಲಿ ಜ್ಞಾನಿಗಳ ಕುಲತಿಲಕ II೧II



ನಂಬಿದೆನೂ ನಿನ್ನ ಚರಣಾ೦ಬುಜವ Iಮನ್ಮನದ ಹಂಬಲ
ಪೂರೈಸೂ ಬೆ೦ಬಿಡದಲೆ II ಕು೦ಭಿಣಿ ಸುರನಿಕುರು೦ಬವಂದಿತ ಜಿತ I
ಶ೦ಭರಾ೦ತಕ ಶಾತ ಕು೦ಭಕಶ್ಯಪ ತನಯ II೨II



ಮ೦ದಮತಿಗಳ ಸಂಗದಿಂದ ನಿನ್ನಯ ಪಾದ Iಇಂದಿನ ತನಕ ನಾ
ಪೋ೦ದಲಿಲ್ಲಾ Iಕುಂದು ಎಣಿಸದೆಕಾಯೊ ಕಂದಪ೯ಪಿತ
ಶ್ಯಾಮಸುಂದರದಾಸ ಕಮ೯೦ದಿಗಳ ಕುಲವಯ೯ II೩II
`

Sunday, October 10, 2010

Baaro Raghavendra Baaro Kaarunyavaaridhiye Baaro

(image source: google search)
ಬಾರೋ ರಾಘವೇಂದ್ರ ಬಾರೋ ಕಾರುಣ್ಯವಾರಿಧಿಯೇ ಬಾರೋ IIಪII
ಆರಾಧಿಪ ಭಕ್ತರಭಿಷ್ಟ ಪೂರೈಸುವ ಪ್ರಭುವೇ ಬಾರೋ IIಅಪII

ರಾಜವ೦ಶೋದ್ಭವನ ಪಾದ ರಾಜೀವ ಬೃ೦ಗನೆ ಬಾರೋ
ರಾಜಾಧಿ ರಾಜರೋಳು ವಿರಾಜಿಸುವ ಚಲುವಾ ಬಾರೋ II೧II

ವ್ಯಾಸರಾಯ ನೆನಿಸಿ ನೃಪನ ಕ್ಲೇಶ ಕಳೆದವನೆ ಬಾರೋ
ಶ್ರೀಸುಧೀ೦ದ್ರ ಕರಸ೦ಜಾತ ವಾಸುದೇವಾಚ೯ಕನೆ ಬಾರೋ II೨II

ಸನ್ಯಾಸ ಕುಲದೀಪ ಬಾರೋ ಸನ್ನುತ ಮಹಿಮನೆ ಬಾರೋ
ಮಾನ್ಯ ಜಗನ್ನಾಥವಿಠಲ ಪ್ರಪನ್ನ ಜನರ ಪ್ರಿಯನೇ ಬಾರೋ II೩II

Wednesday, September 22, 2010

Jayaraaya Jayaraaya

( image source: google search)
This Beautiful song is written by Vadirajyatigalu On sriJayathirtha also know as teekacharya whose brindava is in Malkhed ( Gulbarga district,karnataka state, India.)To know more about teekacharya follow the link below:
http://en.wikipedia.org/wiki/Jayatirtha


ಜಯರಾಯ ಜಯರಾಯ IIಪII

ಜಯರಾಯ ನಿನ್ನ ದಯವುಳ್ಳ ಜನರಿಗೆ
ಜಯವಿತ್ತು ಜಗದೊಳು ಭಯಪರಿಹರಿಸುವ IIಅಪII

ಖುಲ್ಲರಾದ ಮಾಯ್ಗಾ ಳ ಹಲ್ಲು ಮುರಿದು
ವಲ್ಲಭ ಜಗಕೆ ಶ್ರೀನಲ್ಲನೆ೦ದರುಹಿದಿ II೧II

ಮಧ್ವರಾಯರ ಮತ ಶುದ್ಧಶರಧಿಯೊಳು
ಉದ್ಭವಿಸಿದ ಗುರು ಸಿದ್ದಾ೦ತಸ್ಥಾಪಕ II೨II

ಸಿರಿಹಯವದನನ ಚರಣಕಮಲವನು
ಭರದಿ ಭಜಸುವರ ದುರಿತಗಳ ಹರಿಸುವ II೩II

Tuesday, September 21, 2010

vijayarayara kavacha ( smarisi badukiro)

ಸ್ಮರಿಸಿ ಬದುಕಿರೋ ದಿವ್ಯ ಚರಣ ಕೆರಗಿರೋ
ದುರಿತ ತರಿದು ಪೂರೆವ ವಿಜಯಗುರುಳೆ೦ಬರ IIಪII


ದಾಸರಾಯನಾ ದಯವ ಸೂಸಿ ಪಡೆದನಾ
ದೋಷ ರಹಿತನಾ ಸಂತೋಷ ಭರಿತನಾ II೧II

ಜ್ಞಾನವ೦ತನಾ ಬಲು ನಿಧಾನಿಶಾ೦ತನಾ
ಮಾನ್ಯವ೦ತನಾ ಬಹುವ ದಾನ್ಯದಾ೦ತನಾ II೨II

ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷ ಸುರುಸುವ II೩II

ಮೋದ ಭರಿತನಾ ಪಂಚ ಭೇದವರಿತನಾ
ಸಾಧು ಚರಿತನಾ ಮನವಿಷಾದ ಮರೆತನಾ II೪II

ಇವರ ನಂಬಿದ ಜನಕೆ ಭವವಿದೆ೦ಬುದು
ಹವಣವಾಗದೋ ನಮ್ಮವರ ಮತವಿದು II೫II

ಪಾಪಕೋಟಿಯಾ ರಾಶಿ ಲೇಪವಾಗದೋ
ತಾಪಕಳೆವನೋ ಬಲು ದಯಾಪಯೋನಿಧಿ II೬II

ಕವನ ರೂಪದಿ ಹರಿಯಸ್ತವನ ಮಾಡಿದಾ
ಭುವನ ಬೇಡಿದ ಮಾಧವನ ನೋಡಿದಾ II೭II

ರಂಗನೆ೦ದರೆ ಭವವು ಹಿಂಗಿತೆ೦ದನ
ಮಂಗಳಾ೦ಗನಾ ಅಂತರಂಗವರಿತನ II೮II

ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ
ಸೂಸಿಪಡೆದನಾ ಉಲ್ಲಾಸತನದಲೀ II೯II

ಚಿಂತೆ ಬ್ಯಾಡಿರೋ ನಿಶ್ಚಿ೦ತರಾಗಿರೋ
ಶಾಂತ ಗುರುಗಳಾ ಪಾದವಾ೦ತು ನಂಬಿರೋ II೧೦II

ಖೇದವಾಗದೋ ನಿಮಗೆ ಮೋದ ವಾಹುದೋ
ಆದಿದೇವನಾ ಸುಪ್ರಸಾದ ವಾಹುದೋ II೧೧II

ತಾಪ ತಡೆವನೂ ಬಂದ ಪಾಪ ಕಡಿವನೂ
ಶ್ರೀಪತಿಯ ಪಾದ ಸಮೀಪವಿಡುವನೂ II೧೨II

ಗಂಗೆ ಮಿಂದರೆ ಮಲವು ಹಿ೦ಗಿತಲ್ಲದೆ
ರಂಗ ನೋಲಿಯನೂ ಭಕುತರ ಸಂಗದೊರೆಯದೆ II೧೩II

ವೇದ ಓದಲೂ ಬರಿದೆ ವಾದಮಾಡಲೂ
ಹಾದಿಯಾಗದೂ ಬುಧರಪಾದ ನಂಬದೆ II೧೪II

ಲೆಕ್ಕವಿಲ್ಲದಾ ದೇಶ ತುಕ್ಕಿ ಬಂದರೂ
ದುಃಖವಲ್ಲದೆ ಲೇಶ ಭಕುತಿ ದೂರಕದೂ II೧೫II

ದಾನ ಮಾಡಲೂ ದಿವ್ಯಗಾನ ಪಾಡಲೂ
ಜ್ಞಾನ ದೊರೆಯದೋ ಇವರಾಧಿನವಾಗದೇ II೧೬II

ಇಷ್ಟಿ ( ಯಜ್ಞ ) ಯಾತಕೆ ಕಂಡ ಕಷ್ಟ ವ್ಯಾತಕೆ
ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ II೧೭II

ಪೂಜೆ ಮಾಡಲೋ ಕಂಡ ಗೋಜು ಬಿಳಲು
ಬೀಜ ಮಾತಿನ ಫಲ ಸಹಜದೂರಕದೋ II೧೮II

ಸುರರು ಎಲ್ಲರೊ ಇವರ ಕರವ ಪಿಡಿವರೂ
ತರಳ ರ೦ದದಿ ಹಿಂದೆ ತಿರುಗುತಿಪ್ಪರು II೧೯II

ಗ್ರಹಗಳೆಲ್ಲವೂ ಇವಗೆ೯ ಸಹಾಯ ಮಾಡುತಾ
ಆಹೋ ರಾತ್ರಿಲಿ ಸುಖದ ನಿವಹ ಕೂಡುವವೂ II೨೦II

ವ್ಯಾಧಿಬಾರದೋ ದೇಹ ಬಾಧೆ ತಟ್ಟದೋ
ಆದಿದೇವನಾ ಸುಪ್ರಸಾದ ವಾಹುದೋ II೨೧II

ಪತಿತಪಾಮರಾ ಮಂದಮತಿಯೂ ನಾ ಬಲೂ
ತುತಿಸಲಾಪೇನೆ ಇವರ ಅತಿಶಯ೦ಗಳಾ II೨೨II

ಕರುಣದಿ೦ದಲಿ ಎಮ್ಮ ಪೋರೆವನಲ್ಲದೆ
ದುರಿತ ಕೋಟಿಯಾ ಭಾಗ್ಯ ತರಿವದಯದಲೀ II೨೩II

ಮಂದ ಮತಿಗಳು ಇವರ ಚಂದವರಿಯದೇ
ನಿಂದಿಸುವರು ಭವದ ತಪ್ಪದೋ II೨೪II

ಇಂದಿರಾಪತಿ ಇವರ ಮು೦ದೆ ಕುಣಿವನೂ
ಅಂದವಚನವಾ ನಿಜಕೆ ತಂದು ತೋಪ೯ನು II೨೫II

ಉದಯಕಾಲದಿ ಈ ಪದವ ಪಠಿಸಲೂ
ಮದಡನಾದರೂ ಜ್ಞಾನ ಉದಯವಾಹುದೋ II೨೬II

ಸಟೆ ಯಿದಲ್ಲವೂ ವ್ಯಾಸ ವಿಠಲ ಬಲ್ಲನು
ಪಠಿಸಬಹುದಿದೂ ಕೇಳಿ ಕುಟಿಲ ರಹಿತರು II೨೭II

Audio link:
http://www.kannadaaudio.com/Songs/Devotional/Daasanaagu/VijayaraayaraKavacha.ram


V

Saturday, September 11, 2010

Chandradarshana apavada parihaara mantra

ಚಂದ್ರದಶ೯ನ ಅಪವಾದ ಪರಿಹಾರ ಮಂತ್ರ :

ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾ೦ಬವತಾ ಹತಃ
ಸುಕುಮಾರಕ ಮಾರೂಧೀ: ತವಹ್ಯೇಷ ಸ್ಯ೦ಮ೦ತಕ:



Chandradarshana apavaada parihaara mantra:

Simha prasenamavadhit simhoo jambavataa hataha
sukumaaraka maaroodhihi tavaheshya syamantakaha


It is extremly harmful to look at the moon on Ganesh chaturthi day becoz one will be falsely accused .if anyone by chance see the moon on Ganesh chaturthi day than please recite the chandradarshana apavaada parihaara mantra.

MAY LORD GANESH FULFILL ALL YOUR WISHES.

Friday, September 10, 2010

Ganesh ashtotara - 108 Names of Lord Ganesh

( image source: google images)
ಓಂ ವಿನಾಯಕಾಯ ನಮಃ
ಓಂ ವಿಘ್ನರಾಜಾಯ ನಮಃ
ಓಂ ಗೌರಿಪುತ್ರಾಯ ನಮಃ
ಓಂ ಗಣೇಶ್ವರಾಯ ನಮಃ
ಓಂ ಸ್ಕ೦ದಾಗ್ರಜಾಯ ನಮಃ
ಓಂ ಅವ್ಯಯಾಯ ನಮಃ
ಓಂ ಪೂತಾಯ ನಮಃ
ಓಂ ದಕ್ಷಾಧ್ಯಕ್ಷಯಾ ನಮಃ
ಓಂ ದ್ವಿಜಪ್ರಿಯಾಯ ನಮಃ
ಓಂ ಅಗ್ನಿಗವ೯ಚ್ಚಿದೇ ನಮಃ 10

ಓಂ ಇಂದ್ರಶ್ರೀಪ್ರದಾಯ ನಮಃ
ಓಂ ವಾಣೀಬಳಪ್ರದಾಯ ನಮಃ
ಓಂ ಸರ್ವಸಿದ್ಧಿಪ್ರದಾಯಕಾಯ ನಮಃ
ಓಂ ಶವ೯ತನಯಾಯ ನಮಃ
ಓಂ ಶವ೯ಪ್ರಿಯಾಯ ನಮಃ
ಓಂ ಸವಾ೯ತ್ಮಕಾಯ ನಮಃ
ಓಂ ಸೃಷ್ಟಿಕತ್ರೆ೯ ನಮಃ
ಓಂ ದೇವಾನೀಕಾಚಿ೯ತಾಯ ನಮಃ
ಓಂ ಶಿವಾಯ ನಮಃ
ಓಂ ಶುದ್ಧಾಯ ನಮಃ ೨0



ಓಂ ಬುದ್ಧಿಪ್ರಿಯಾಯ ನಮಃ
ಓಂ ಶಾ೦ತಾಯ ನಮಃ
ಓಂ ಬ್ರಹ್ಮಚಾರಿಣೇ ನಮಃ
ಓಂ ಗಜಾನನಾಯ ನಮಃ
ಓಂ ದ್ವೈಮಾತುರಾಯ ನಮಃ
ಓಂ ಮುನಿಸ್ತುತ್ಯಾಯ ನಮಃ
ಓಂ ಭಕ್ತವಿಘ್ನವಿನಾಶಕಾಯ ನಮಃ
ಓಂ ಏಕದ೦ತಾಯ ನಮಃ
ಓಂ ಚತುಬಾ೯ಹವೆ ನಮಃ
ಓಂ ಶಕ್ತಿಸ೦ಯುತಾಯ ನಮಃ ೩೦

ಓಂ ಚತುರಾಯ ನಮಃ
ಓಂ ಲ೦ಬೋದರಾಯ ನಮಃ
ಓಂ ಶೂಪ೯ಕಣಾ೯ಯ ನಮಃ
ಓಂ ಹೇರ೦ಬಾಯ ನಮಃ
ಓಂ ಬ್ರಹ್ಮವಿತ್ತಮಾಯಾ ನಮಃ
ಓಂ ಕಾಲಾಯ ನಮಃ
ಓಂ ಗ್ರಹಪತಯೇ ನಮಃ
ಓಂ ಕಾಮಿನೇ ನಮಃ
ಓಂ ಸೋಮಸೂಯಾ೯ಗ್ನಿಲೋಚನಾಯ ನಮಃ
ಓಂ ಪಾಶಾ೦ಕುಶಧರಾಯ ನಮಃ ೪೦

ಓಂ ಚ೦ಡಾಯ ನಮಃ
ಓಂ ಗುಣಾತೀತಾಯ ನಮಃ
ಓಂ ನಿರ೦ಜನಾಯ ನಮಃ
ಓಂ ಅಕಲ್ಮಶಾಯ ನಮಃ
ಓಂ ಸ್ವಯ೦ಸಿದ್ಧಾಚಿ೯ತಪದಾಯ ನಮಃ
ಓಂ ಬೀಜಪೂರಕಾಯ ನಮಃ
ಓಂ ಅವ್ಯಕ್ತಾಯ ನಮಃ
ಓಂ ಗದಿನೇ ನಮಃ
ಓಂ ವರದಾಯ ನಮಃ
ಓಂ ಶಾಶ್ವತಾಯ ನಮಃ 50

ಓಂ ಕೃತಿನೇ ನಮಃ
ಓಂ ವಿದ್ವತ್ಪ್ರಿಯಾಯ ನಮಃ
ಓಂ ವೀತಭಾಯಾಯ ನಮಃ
ಓಂ ಚಕ್ರಿಣೇ ನಮಃ
ಓಂ ಇಕ್ಯೂಚಾಪ ಧೃತೇ ನಮಃ
ಓಂ ಅಬ್ಜೋತ್ಪಲಕರಾಯ ನಮಃ
ಓಂ ಶ್ರೀದಾಯ ನಮಃ
ಓಂ ಶ್ರೀ ಹೇತವೇ ನಮಃ
ಓಂ ಸ್ತುತಿಹಷಿ೯ತಾಯ ನಮಃ
ಓಂ ಕುಲಾದ್ರಿಭೃತೇ ನಮಃ 60

ಓಂ ಜಟಿನೇ ನಮಃ
ಓಂ ಚಂದ್ರಚೂಡಾಯ ನಮಃ
ಓಂ ಅಮರೇಶ್ವರಾಯ ನಮಃ
ಓಂ ನಾಗಯಗ್ನೋಪವೀತಿನೇ ನಮಃ
ಓಂ ಶ್ರೀಕ೦ಠಾಯ ನಮಃ
ಓಂ ರಾಮಾಚಿ೯ತಪದಾಯ ನಮಃ
ಓಂ ವ್ರತಿನೇ ನಮಃ
ಓಂ ಸ್ಥೂಲಕ೦ಠಾಯ ನಮಃ
ಓಂ ತ್ರಯಿಕರೆತ್ತ್ರೆ ನಮಃ
ಓಂ ಸಾಮಘೋಷಪ್ರಿಯಾಯ ನಮಃ ೭೦


ಓಂ ಪುರುಷೋತ್ತಮಾಯ ನಮಃ
ಓಂ ಸ್ಥೂಲತು೦ಡಾಯ ನಮಃ
ಓಂ ಅಗ್ರಗಣ್ಯಾಯ ನಮಃ
ಓಂ ಗ್ರಾಮಣ್ಯೇ ನಮಃ
ಓಂ ಗಣಪಾಯ ನಮಃ
ಓಂ ಸ್ಥಿರಾಯ ನಮಃ
ಓಂ ವೃದ್ಧಾಯ ನಮಃ
ಓಂ ಸುಭಾಗಾಯ ನಮಃ
ಓಂ ಶುರಾಯ ನಮಃ
ಓಂ ವಾಗಿಶಾಯ ನಮಃ ೮೦

ಓಂ ಸಿದ್ಧಿದಾಯ ನಮಃ
ಓಂ ದೂವಾ೯ಬಿಲ್ವಪ್ರಿಯಾಯ ನಮಃ
ಓಂ ಕಾ೦ತಾಯ ನಮಃ
ಓಂ ಪಾಪಹಾರಿಣೆ ನಮಃ
ಓಂ ಕೃತಾಗಮಾಯ ನಮಃ
ಓಂ ಸಮಾಹಿತಾಯ ನಮಃ
ಓಂ ವಕ್ರತು೦ಡಾಯ ನಮಃ
ಓಂ ಶ್ರೀಪ್ರದಾಯ ನಮಃ
ಓಂ ಸೌಮ್ಯಾಯ ನಮಃ
ಓಂ ಭಕ್ತಕಾ೦ಕ್ಷಿತದಾಯ ನಮಃ ೯೦

ಓಂ ಅಚ್ಯುತಾಯ ನಮಃ
ಓಂ ಕೇವಲಾಯ ನಮಃ
ಓಂ ಸಿದ್ಧಾಯ ನಮಃ
ಓಂ ಸಚ್ಚಿದಾನ೦ದವಿಗ್ರಹಾಯ ನಮಃ
ಓಂ ಜ್ಞಾನಿನೇ ನಮಃ
ಓಂ ಮಾಯಾಯುಕ್ತಾಯ ನಮಃ
ಓಂ ದಾ೦ತಾಯ ನಮಃ
ಓಂ ಬ್ರಹ್ಮಿಶ್ಥಾಯ ನಮಃ
ಓಂ ಭಯವಜಿ೯ತಾಯ ನಮಃ
ಓಂ ಪ್ರಮಕ್ತದೈತ್ಯಭಯದಾಯ ನಮಃ ೧೦೦

ಓಂ ವ್ಯಕ್ತಮೂರ್ತೆಯೇ ನಮಃ
ಓಂ ಅಮೂತ೯ಕಾಯ ನಮಃ
ಓಂ ಪಾವ೯ತಿಶ೦ಕರೋತ್ಸ೦ಗಖೇಲ
ನೋತ್ಸವಲಾಳನಾಯ ನಮಃ
ಓಂ ಸಮಸ್ತಜಗದಾಧಾರಾಯ ನಮಃ
ಓಂ ವರಮೂಷಕವಾಹನಾಯ ನಮಃ
ಓಂ ಹೃಶತ್ತಸ್ತುತಾಯ ನಮಃ
ಓಂ ಪ್ರಸನ್ನಾತ್ಮನೆ ನಮಃ
ಓಂ ಸರ್ವಸಿದ್ಧಿಪ್ರದಾಯಕಾಯ ನಮಃ 108

Ambatanaya

( image source: google)

ಅ೦ಬಾತನಯ ಹೇ ಹೇರ೦ಬ IIಪII
ಕರುಣಾ೦ಬುಧೆ ತವ ಚರಣಾ೦ಬುಜಕೆರಗುವೆ IIಅಪII

ದಶನ ಮೋದಕ ಪಾಶಾ೦ಕುಶ ಪಾಣೆ
ಅಸಮ ನೀ ಚಾರುದೇಷ್ಣ ವ೦ದಿಪೆ II೧II

shreerayarublgspot.com
ವೃ೦ದಾರಕ ವೃ೦ದವ೦ದಿತ ಚರಣಾರ
ವಿ೦ದಯುಗಳ ದಯದಿಂದ ನೋಡು ಎನ್ನ II2II

ಯೂಥಪ ವದನ ಪ್ರದ್ಯೋತ ಸನೀಭ ಜಗ
ನ್ನಾಥವಿಠಲನ ಸ೦ಪ್ರೀತಿ ವಿಷಯ ಜಯ II೩II
Audio Link:
http://www.musicindiaonline.com/album/99-Kannada_Devotional/19452-Daasa_Kasturi/#/album/99-Kannada_Devotional/19452-Daasa_Kasturi/

Ganapati enna paalisoo

( Image source: google)

ಗಣಪತಿ ಎನ್ನ ಪಾಲಿಸೂ ಗ೦ಭೀರ IIಪII


ಪಾವ೯ತಿನ೦ದನ ಸು೦ದರವದನ
ಶವಾ೯ದಿಸುರಪ್ರಿಯ ಶಿರಬಾಗುವೆನು II೧II


ಆದಿ ಪೋಜಿತ ನೀನು ಮೋದ ಭಕ್ತರಿಗಿತ್ತು
ಮಾಧವನಲಿ ಮನ ಸದಾ ನಿಲಿಸು ನೀ II೨II


ಪ೦ಕಜನಯನ ಶ್ರೀವೆಂಕಟವಿಠಲನ
ಕಿ೦ಕರನೆನಿಸೆನ್ನ ಶ೦ಕರತನಯನೆ II೩II

Wednesday, September 1, 2010

Karta Krishnayya nee



( image source: google search)
ಕರ್ತಾ ಕೃಷ್ಣಯ್ಯ ನೀ ಬಾರಯ್ಯ ಎನ್ನಾತ೯ಧ್ವನಿಗೋಲಿದು ನೀ ಬಾರಯ್ಯ IIಪII

ಸುಗುಣದ ಖಣಿಯ ನೀಬಾರಯ್ಯ ಎ- ಮ್ಮಘವ ನೋಡಿಸಲು ನೀ ಬಾರಯ್ಯII
ಧಗೆ ಏರಿತು ತಾಪ ನೀ ಬಾರಯ್ಯ ಸದಾ ಮುಗುಳ್ನಗೆಯ ಮಳೆಗರೆಯೇನೀ ಬಾರಯ್ಯ II೧II

ವೈರಿವಗ೯ದಿ ನೊ೦ದೆ ನೀ ಬಾರಯ್ಯಮ - ತ್ತ್ಯಾರು ಗೆ ಳೆಯರಿಲ್ಲ ನೀ ಬಾರಯ್ಯ
ಸೇರಿದೆ ನಿನ್ನಯ ಕರುಣೆಗೆ ಬಾರಯ್ಯ ಒಳ್ಳೇದಾರಿಯತೋರಲು ನೀ ಬಾರಯ್ಯ II೨II

ವೈರಾಗ್ಯ ಭಾಗ್ಯವ ಕೋಡಬಾರಯ್ಯ ನಾನಾ - ರೋಗದ ಭೇಷಜ ನೀ ಬಾರಯ್ಯ
ಜಾರುತದಾಯೂ ಬೇಗ ಬಾರಯ್ಯ ಉ -ದಾರ ಪ್ರಸನ್ನವೆಂಕಟೇಶ ನೀ ಬಾರಯ್ಯ II೩II


Audio link:
http://www.kannadaaudio.com/Songs/Devotional/Paramaatma-Sri-Vidyabhushana/Karta.ram

Tuesday, August 24, 2010

Sri Raghavendra swamy aaradhana Mahotsava in Mantralaya

II HARI SARVOTTAMA VAAYU JEEVOTTAMA II
II GURU RAJO VIJAYETE II


Srsmutt has published the pictures of On going Sri Raghavendra swamy aaradhana Mahotsava(2010) in Mantralaya.Iam sharing the Link of Srsmutt with you all.

please visit srsmutt website given below
:


http://www.sriraghavendramutt.org/galleries/index.php?level=collection&id=4

Monday, August 23, 2010

Raajabidiyolaginda kasturi Ranga



(image source : google)

ರಾಜ ಬೀದಿಯೊಳಗಿಂದ ಕಸ್ತೂರಿ ರಂಗ
ತೇಜನೇರಿ ಮೆರೆದು ಬಂದಾ IIಪII
shreerayarublogspot.com
ಸುತ್ತಮುತ್ತಲು ಸಾವಿರಾರು ಸಾಲು ದೀವಿಗೆ
ಹತ್ತು ದಿಕ್ಕಲಿ ಬೆಳಗುತ್ತಿದ್ದ ಹಗಲು ಬತ್ತಿಯು
ವಿಸ್ತಾರದಿ ಭೂಸುರರು ಸುತ್ತುಗಟ್ಟಿ ನಿಂತಿರಲು
ಮತ್ತೆ ನಮ್ಮೊಳೆಂತೊ ತೇಜ ಮೆಲ್ಲನೆ ನಡೆಸುತ ಜಾಣ II೧II

ತಾಳ ಶಂಖ ಭೇರಿ ತಂಬೂರಿ ಮೊದಲಾದ
ಮೇಲು ಪಂಚಾಗಗಳೆಲ್ಲ ಹೊಗಳಿ ಹೊಗಳಲು
ಗಾಳಿಗೋಪುರದ ಮುಂದೆ ಧಾಳಿಯಾಡುತ ಸುತ್ತ
ಧೂಳಿಯನ್ನೆಬ್ಬಿಸಿ ವೈಯಾಳಿಸಿ ನಿಕ್ಕುತ ಜಾಣ II೨II

ವೇದಶಾಸ್ತ್ರ ಪುರಾಣಗಳು ವಂದಿಸಿ ಪೊಗಳಲು
ಮೋದದಿಂದ ಗಾಯಕರು ಮೌರಿ ಪಾಡಲು
ಹಾದಿ ಬೀದಿಯಲ್ಲಿ ನಿಂತು ಭೂಸುರ ಜನರಿಗೆಲ್ಲಾ
ಅದರಿಂದ ಅಷ್ಟಮೃತಾನ್ನವ ನಿಕ್ಕುತ ಜಾಣ II೩II

ರಂಭಾ ಮೊದಲಾದ ಸುರರಮಣಿಯರು
ತುಂಬಿದಾರುತಿಯ ಪಿಡಿದು ಕೂಡಿ ಪಾಡಲು
ಶಂಭು ಮುಖ ನಿರ್ಜರನೇ ಪರಾಕೆನುತಲಿ
ಅಂಬುದಿ ಭವಾದ್ಬಿಗಳ ಆಳಿದ ಶ್ರೀರಂಗನಾಥ II೪II
shreerayarublogspot.com
ಹಚ್ಚನಗೆ ಸಾರು ಬೇಳೆ ಹಾಲು ಕೆನೆಗಳು
ಮುಚ್ಚಿ ತಂದ ಕೆನೆ ಮೊಸರು ವೀಸಲು ಬೆಣ್ಣೆಯು
ಹಚ್ಚಿ ತುಪ್ಪ ಪಕ್ವವಾದ ಅತಿರಸ ಹುಗ್ಗಿಯನ್ನು
ಮೆಚ್ಚಿ ಉಂಡು ಪಾನಕ ನೀರ್ ಮಜ್ಜಿಗೆಗಳಸವಿದು ಬೇಗ II೫II

ಮುತ್ತಿನ ತುರಾಯಿ ಮುಂಡಾಸನದಿ ತತ್ತಳಿಪ
ತಾಳಿ ವಜ್ರ ತಾಳಿ ಚೌಕಳಿ ಮುತ್ತಿನ ಕುಂಡಲನಿಟ್ಟು
ಮೋಹಿಸುತ್ತ ಬೀದಿಯಲ್ಲಿ ಕತ್ತಿಯ
ಕೈಯಲ್ಲಿ ಪಿಡಿದು ಮತ್ತಿಲ್ಲೆ ವಿರಾಜಿಸುತ್ತ II೬II

shreerayarublogspot.com

ಸಣ್ಣ ಮುತ್ತು ಕೆತ್ತಿಸಿದ ಸಕಲಾಧಿಗಳು
ಹೊನ್ನಹೊಸ ಜಾನ ಜಂಗುಳಿ ಹೊಳೆವಸೊಬಗಿನ
ಉನ್ನತ ಪಾರಾಯಣ ಉತ್ತಮರಾಜಶ್ವವೇರಿ
ಎನ್ನ ಹಯವದನರಂಗ ಎಲ್ಲರಿಗಷ್ಟಾರ್ಥಕೊಡುತ II೭II



Audio Link:

Sunday, August 22, 2010

Varamahalakshmi vrata 2010

VaramahaLakshmi Vrata



( picture 1)




(picture2)


(picture3)shreerayarublogspot.com





Varamalakshi Vrata is performed by married Ladies on friday in the month of shravana ( accoding to hindu calender).Vara means boon Lakshmi goddess of wealth and prosperity. This Vrata is celebrated in southern indian especially in karnataka, Andhrapradesh, tamilnadu,some parts of maharashtra.
This year Varamahalakshmi festival was on Ekadashi day , so only pooja was performed on friday and saturday early morning ( dwadashi )day naivedya is offered to the Goddess.
we dont have this vrata in my house , my Parents house they celebrate this vrata, my Brother (vinay katti) has forwarded the pictures which iam sharing with u all
.

Saturday, August 21, 2010

Srimahalakumi deviye

ಶ್ರೀ ಮಹಾಲಕುಮಿ ದೇವಿಯೆ, ಕೋಮಲಾಂಗಿಯೆII

ಸಾಮಗಾಯನ ಪ್ರಿಯಳೇ IIಪII
ಹೇಮಗರ್ಭ ಕಾಮಾರಿ ಶಕ್ರಸುರ-ಇ


ಸ್ತೋಮ ವಂದಿತೆ ಸೋಮಸೋದರಿಯೇ II
ಸಕಲ ಶುಭಗುಣ ಭರಿತಳೆ ,ಏಕದೇವಿಯೆ IIವಾಕು ಲಾಲಿಸಿ ನೀ

ಕೇಳೆ ಲೋಕನಾಥನ ಗುಣ ಲೀಲೇ ಕೊಂಡಾಡುವಂಥ I ಏಕಮನವ
ಕೊಡು ಶುಭಶೀಲೆ IIಬೇಕುಬೇಕು ನಿನ್ನ ಪತಿಪಾದಾಬ್ಜವ I ಏಕಾಂತದಲಿ
ಭಜಿಪರ ಸಂಗವ ಕೊಡು Iಲೋಕದ ಜನರಿಗೆ ನಾ ಕರವೊಡ್ಡದಂತೆ I
ತಾಯೆ ಕರುಣಿಸು ರಾಕೆಂದುವದನೆ II ೧ II

ಬಟ್ಟಕುಂಕುಮನೊಸಲೊಳೆ , ಮುತ್ತಿನ ಹೊಸ- I ಕಠ್ಠಾಣಿ

ತ್ರಿವಳಿ ಕೊರಳೊಳು Iಇಟ್ಟ ಪೊನ್ನೋಲೆ ಕಿವಿಯೊಳೆ ಪವಳದ ಕಯ್ಯ I
ಕಟ್ಟು ಕಂಕಣ ಕೈ ಬಳೆ IIತೊಟ್ಟ ಕುಬುಸ ಬಿಗಿದುಟ್ಟ ಪೀತಾಂಬರ II ಘಟ್ಟಿ
ವಡ್ಯಾಣ ಕಾಲಂದುಗೆ ರುಳಿಗೆಜ್ಜೆ Iಬೆಟ್ಟಿಲಿ ಪೊಳೆವುದು ಮೇಂಟಕೆ
ಕುರುಪಿಲ್ಲಿ II ಇಟ್ಟು ಶೋಭಿಸುವ ಅಷ್ಟ ಸಂಪನ್ನೆ II2 II

ಮಂದರಧರನರಸಿಯೆ ಇಂದಿರೆ ಎನ್ನ ಕುಂದುದೋಷಗಳನೀ I ತರಿಯೆ
ಅಂದುಳ್ಳ ಸೌಭಾಗ್ಯದಸಿರಿಯೇ ನಿನ್ನ I ಕಂದನೆಂದು ಮುಂದಕ್ಕೆ ಕರೆಯೇ II
ಸಿಂಧುಸುತಳೇ ನಿತ್ಯಸಿಂಧೂರ ಗಮನೇ Iಸಿಂಧುಶಯನ
ಸಿರಿ ವಿಜಯವಿಠಲನ ಎಂದೆಂದಿಗು ಮನದಿಂದ ಅಗಲದಂತೆ ೩

Friday, August 20, 2010

Yamanelli Kannenendu Helabeda

ಯಮನೆಲ್ಲಿ ಕಾಣೆನೆ೦ದು ಹೇಳಬೇಡ
ಯಮನೆ ಶ್ರೀರಾಮನು ಸ೦ದೇಹ ಬೇಡ


ನ೦ಬಿದ ವಿಭಿಶಣಗೆ ರಾಮನಾದ
ನ೦ಬದಿದ್ದ ರಾವಣಗೆ ಯಮನಾದ II೧II

ನ೦ಬಿದ ಅಜುನನಿಗೆ ಮಿತ್ರನಾದ
ನ೦ಬದಿದ್ದ ದು೯ಯೋದ್ಧನನಿಗೆ ಶತ್ರುವಾದ II೨II


ನಂಬಿದ ಪ್ರಹ್ಲಾದದನಿಗೆ ಹರಿಯಾದ
ನಂಬದಿದ್ದ ಹಿರಣ್ಯಕಗೆ ಹುಲಿಯಾದ II೩II
(ನ೦ಬದ ಅವನ ಪಿತಗೆ ಹುಲಿಯಾದ)


ನಂಬಿದ ಉಗ್ರಸೇನನಿಗೆ ಮಿತ್ರನಾದ
ನ೦ಬದ ಕಂಸನಿಗೆ ಶತ್ರುವಾದ II೪II

shreerayarubogspot.com
ನ೦ಬಿದವರ ಸಲಹುವ ನಮ್ಮ ದೋರೆಯು
ಅಂಬುಜಾಕ್ಷ ಪುರಂದರವಿಠಲನ ಸಿರಿಯು II೫II

( ನಂಬಿ ಕೊಳ್ಳಿ ಬೇಗ ಶ್ರೀಕೃಷ್ಣದೇವನ
ಕಂಬು ಚಕ್ರಧಾರಿ ಶ್ರೀಪುರಂದರ ವಿಠಲ)


In English:



Yamanelli kaanenendu helabeda
Yamane sriraamanu sandehabeda

Nambida vibhishanage raamanaada
Nambadida raavanage yamanaada II1II

Nambida arjunanige mitranaada
Nambadidda duryodhananige shatruvaada II2II

Nambida prahalladanige hariyaada
Nambididda hiranyakage huliyaada II3II


(nambada avana pitage huliyaada)

Nambida ugrasenanige mitranaada
Nambada kamsanige shatruvaada II4II

Nambidavara salahuva namm dooreyuu
Amjujaaksha purandaravithalana siriyuu II5II
(nimbi kolli bega srikrishnadevana kambu
Kambu chakradhari sripurandaravithala)






Saturday, August 7, 2010

Sri Raghavendra swamy Aradhana Mahotsava2010 in USA

II HARI SARVOTTAMA VAAYU JEEVOTTAMA II
II SRI GURU RAJO VIJAYATE II



( picture source :google search)
Shree Krishna Brindava NJ is Celebrating Sri Raghavendra Swamy Aaradhana Mahotsava On 28th aug2010 Here are the details:

http://www.krishnavrunda.org/media/forweb.jpg



Aaradhana Mahotsava In Maryland :

( Sri shiva vishnu temple)

(click on the august2010 newsletter)
http://www.ssvt.org/Home/Newsletter.asp


AARADHANA MAHOTSAVA IN CALIFORNIA :

(shiva vishnu temple Livermore California)

http://www.livermoretemple.org/hints/images/PV/7202010224941.pdf


http://www.krishnabrunda.org/php/CurrentEvents.php


AARADHANA MAHOTSAVA IN NEWYORK:

(Mahavallabha Ganapati temple, Flushing NY)

http://www.nyganeshtemple.org/Publication_Main_View.aspx

Wednesday, August 4, 2010

Sulabha poojeya maadi /ಸುಲಭ ಪೂಜೆಯ ಮಾಡಿ

ಸುಲಭ ಪೂಜೆಯ ಮಾಡಿ ಬಲವಿಲ್ಲದವರು IIಪII
ನಳಿನ ನಾಭನ ಪಾದ ನಳಿನ ಸೇವಕರು IIಅಪII



ಇರುಳು ಹಚ್ಚುವ ದೀಪ ಹರಿಗೆ ನೀರಾಜನವು I ಮರೆಮಾಡುವ
ವಸ್ತ್ರ ಪರಮ ಮಾಡಿಯು II ತಿರುಗಾಡಿ ದಣಿಯುವು ದೆ ಹರಿಗೆ
ಪ್ರದಕ್ಷಿಣೆಯುII ಹೋರಳಿ ಮಲಗುವುದೆಲ್ಲ ಹರಿಗೆ ವ೦ದನೆಯು II೧II

shreerayarublogspot.com

ನುಡಿದ ಮಾತುಗಳೆಲ್ಲ ಕಡಲ ಶಯನನ ಜಪವು Iಮಡದಿ ಮಕ್ಕಳು
ಮತ್ತೆ ಒಡನೆ ಪರಿವಾರ II ನಡುಮನೆಯ ಅ೦ಗಳವು ಉಡುಪಿ ವೈಕು೦ಠಗಳು II
ಎಡಬಲದ ಮನೆಯವರು ಕಡು ಭಾಗವತರು II೨II


ಹೀಗೆ ಅನುದಿನ ತಿಳಿದು ಹಿಗ್ಗುವ ಜನರ ಭವ - ರೋಗ
ಪರಿಹರವು ಮೂಜಗದಿ ಸುಖವು II ಹೋಗುತಿದೆ ಈ ಆಯೂ ಬೇಗದಿಂದಲಿ
ನಮ್ಮ II ಯೋಗಿಶ ಪುರಂದರ ವಿಠಲನ ನೆನೆ ನೆನೆದು II೩II

Audio link:
http://www.kannadaaudio.com/Songs/Devotional/Ille-Vaikunta-Kaaniro-Sri-Vidyabhushana/Sulabha.ram



Friday, April 30, 2010

sharanara surubhuja Gururaaja

ಶರಣರ ಸುರ ಭೂಜ ಗುರುರಾಜ IIಪII

ವರ ಮಂತ್ರಾಲಯ ಪುರಮ೦ದಿರದಿ ತವ ಸು೦ದರ
ಮುನಿ೦ದ್ರಭಾಸ್ಕರಸಮತೇಜ II೧II

ಕಾಮಿತಾಥ೯ಗಳ ಕಾಮಧೇನುವಿನ

ನೇಮ ಮೀರಿಕೊಡುವ ಮಹರಾಜ II೨II
shreerayarublogspot
ಭೇಶಕೋಟಿಸ೦ಕಾಶನಾದ ಕಮ
ಲೇಶವಿಠಲನ ದಾಸನೆ ಸಹಜ II೩II

Sharanara surabhuja Gururaaja IIpaII


varamantralapuramandira tava sundara
munidra bhaskarasamateja II1II

kaamitaathagala kaamadhenuvina
neema miri kooduva maharaaja II2II

bheshakootisamkaashanaada kamalesha
vithlana daasane sahaja II3II

Thursday, April 29, 2010

Esabeku iddu jaisabeeku

ಈಸಬೇಕು ಇದ್ದು ಜೈಸಬೇಕು
ಹೇಸಿಗೆ ಸ೦ಸಾರದಲ್ಲಿ ಆಸೆ ಲೇಶ ಇಡದ್ಹಾ೦ಗೆ IIಪII


ತಾಮರಸ ಜಲದ೦ತೆ ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ
ಕಾಮಿತ ಕೈಗೊ೦ಬರೆಲ್ಲ II೧II


ಗೇರು ಹಣ್ಣಿನಲ್ಲಿ ಬೀಜ ಸೇರಿದ೦ತೆ ಸ೦ಸಾರದಿ
ಮೀರಯಾಸೆ ಮಾಡದಲೆ
ಧೀರ ಕೃಷ್ಣನ ಭಕುತರೆಲ್ಲ II೨II


ಮಾ೦ಸದಾಸೆಗೆ ಮತ್ಸ್ಯ ಸಿಲುಕಿ
ಹಿ೦ಸೆಪಡುವ ಪರಿಯೊಳು
ಮೋಸ ಹೋಗದ್ಹಾ೦ಗೆ ಜಗ
ದೀಶ ಪುರಂದರವಿಠಲನ ನೆನೆದು II೩II

Tuesday, April 27, 2010

Manava janma doddadu

ಮಾನವ ಜನ್ಮ ದೊಡ್ಡದು ಅದ
ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ IIಪII

ಕಣ್ಣು ಕೈಕಾಲ್ ಕಿವಿ ನಾಲಿಗೆ ಇರಲಿಕ್ಕೆ
ಮಣ್ಣು ಮುಕ್ಕಿ ಹುಚ್ಚರಾಗುವರೆ ( ಮರುಳಾಗುವರೆ)
ಹೆಣ್ಣು ಮಣ್ಣಿಗಾಗಿ ಹರಿಯನಾಮಾಮೃತ
ಉಣ್ಣದೆ ಉಪವಾಸ ಇರುವರೇ ಖೋಡಿ II೧II

ಕಾಲನ ದೂತರು ಕಾಲ್ಪಿಡಿದೆಳೆವಾಗ
ತಾಳು ತಾಳೆ೦ದರೆ ತಾಳುವರೆ
ಧಾಳಿಬಾರದ ಮುನ್ನ ಧರ್ಮವ ಗಳಿಸಿರೊ
ಹಾಳು (ಸುಳ್ಳಿನ ) ಸ೦ಸಾರದ ಸುಳಿಗೆ ಸಿಕ್ಕಲುಬೇಡಿ II೨II

ಏನು ಕಾರಣ ಯದುಪತಿಯನ್ನು ಮರೆತಿರಿ
ಧನಧಾನ್ಯ ಮಕ್ಕಳು ಸಲಹುವರೆ
ಇನ್ನಾದರು ಏಕೋಭಾವದಿ ಭಜಿಸಿರೋ
ಚೆನ್ನ ಪುರಂದರವಿಠಲರಾಯನ II3II


Maanava janma doddadu ada
haani maadalu beedi hucchappa galira

kannu kaikaal kiwi naalige iralikke
mukki huccharaaguvare ( marulaaguvare)
hennu mannigaagi hariyanaamamruta
unnade upavaasa iruvare khodi

kaalana dootaru kalpididelevaaga
taalu taalendare taaluvare
dhalibaarada munna dharmagalisiroo
haalu ( sullina) samsaarada sulige sikkalu beedi

eenu kaarana yadupatiyannu maretiri
dhanadhanya makkalu salahuvare
innadaru ekoobhaavadi bhajisiroo
chenna purandaravithalaraayana


Yaare Rangana Yaare Krishnana

ಯಾರೇ ರಂಗನ ಯಾರೇ ಕೃಷ್ಣನ
ಯಾರೇ ರಂಗನ ಕರೆಯಬಂದವರು
Yaare rangana yaare krishnana
yaare rangana kareyabandavaru

ಗೋಪಾಲ ಕೃಷ್ಣನ ಪಾಪ ವಿನಾಶನ
ಈ ಪರಿಯಿಂದಲಿ ಕರೆಯಬಂದವರು 1
gopalakrishnana paapavinaashana
eepariyindali kareyabandavaru


ವೇಣು ವಿನೋದನ ಪ್ರಾಣಪ್ರೀಯನ
ಜಾಣೆಯರರಸನ ಕರೆಯಬಂದವರು 2
veenu vinodana pranapriyana
jaaneyararasana kareyabandavaru
shreerayarublogspot
ಕರಿರಾಜವರದನ ಪರಮಪುರುಷನ
ಪುರಂದರವಿಠಲನ ಕರೆಯಬಂದವರು ೩
kariraajavaradana paramapurushana
purandaravithalana kareyabandavaru



Saturday, April 24, 2010

Hari Smarane maadoo

ಹರಿಸ್ಮರಣೆಮಾಡೋ ನಿರ೦ತರ

ಪರಗತಿಗೆ ಇದು ನಿಧಾ೯ರ

ದುರಿತ ಗಜಕ್ಕೆ ಕ೦ಠೀರವನೆನಿಸಿದ
ಶರಣಾಗತ ರಕ್ಷಕ ಪಾವನನಾ II೧II

ಸ್ಮರಣೆಗೈದ ಪ್ರಹಲ್ಲಾದನ ರಕ್ಷಿಸಿದ
ದುರುಳು ಹಿರಣ್ಯಕನುದರವ ಸೀಳಿದII ೨II

ತರುಣಿ ದ್ರೌಪದಿ ಮೂರೆಯಿ ಡಲಾಕ್ಷಣ
ಭರದಿಂದಕ್ಷಯವಿತ್ತ ಮಹಾತ್ಮನ II೩II

shreerayarublogspot

ಅ೦ದು ಅಜಮಿಳ ಕ೦ದನ ಕರೆಯಲು
ಬಂದು ಸಲಹಿ ಆನ೦ದವ ತೋರಿದ II೪II

ಶ್ರೀಪುರಂದರ ವಿಠಲರಾಯನ
ಸೃಷ್ಟಿ ಗೊಡೆಯನ ಮುಟ್ಟಿಭಜಿಸುವ II೫II

Enagu aane Ranga

ಎನಗೂ ಆಣೆ ರಂಗ ನಿನಗೂ ಆಣೆ
ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ

ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ II1II
shreerayarublogspot
ತನುಮನಧನದಲ್ಲಿ ವ೦ಚಕನಾದರೆ ಎನಗೆ ಆಣೆ ರಂಗ
ಮನಸ್ಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ II2II

ಕಾಕು ಮನುಜರ ಸ೦ಗದಿ ಮಾಡಿದರೆನಗೆ ಆಣೆ ರಂಗ
ಲೌಕೀಕವ ಬಿಡಿಸದಿದ್ದರೆ ನಿನಗೆ ಆಣೆ II3II

ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆII4II

ಹರಿನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರವಿಠಲ ನೀನೋಲಿಯದಿದ್ದರೆ ನಿನಗೆ ಆಣೆII5II


Enagu aane ranga ninagu aane
enagu ninagu ebbarigu aane

ninna bittu anyara bhajisidarenage aane ranga
enna nii kai bittu poodare ninage aane

tanumanadhanadalli vanchakanaadare enage aane
manassu ninnalli nilisadiddare ninage aane

kaaku manujara sanga maadidarenage aaane ranga
lowkikava bidisadiddare ninage aane

shishtara sangava madadiddare enage aane ranga
dushtara sangava bidisadiddare ninage aane

Hari ninnashraya maadadiddare enage aane ranga
purandaravithala niinooliyadiddare ninage aane

http://www.kannadaaudio.com/Songs/Compilations/Saththavana-Neralu/Enagu-Aane.ram

Friday, April 23, 2010

Dangurava saari

ಡಂಗುರವ (ಸಾರಿರಯ್ಯ ) ಸಾರಿ ಹರಿಯ ಡಿಂಗರೀಗರೆಲ್ಲರೂ ಭೂ
ಮಂಡಲಕ್ಕೆ ಪಾಂಡುರಂಗ ವಿಠ್ಥಲನೆ ಪರದೈವ ವೆಂದು

ಹರಿಯು ಮುಡಿದ ಹೋವು ಹರಿವಾಣದೊಳಗಿಟ್ಟುಕೊಂಡು
ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತ II1II



ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು
ಢಂಢಂ ಢಣಾ ಢಣಾರೆಂದು ಹೊಡೆದು ಚಪ್ಪಾಳಿಕ್ಕುತ II2II


shreerayarublogspot

ಇಂತು ಜಗಕೆಲ್ಲ ಲಕ್ಷ್ಮೀಕಾಂತನಲ್ಲದಿಲ್ಲವೆಂದು
ಸಂತತ ಶ್ರೀಪುರಂದರವಿಠಲ ಪರದೈವವೆಂದುII3II


Audio Link:
http://www.kannadaaudio.com/Songs/Devotional/SriVidyabhushana/DaasaraKritigalu/DanguravaSaariHariya.ram

Shiva Tandava stotram

ಜಟಾಟವೀಗಲಜ್ಜಲಪ್ರವಾಹಪಾವಿತಸ್ಥಲೆ
ಗಲೇವಲಂಬ್ಯ ಲಮ್ಬಿತಾಂ ಭುಜಂಗತುಂಗಮಾಲಿಕಾಮ್
ಡಮಡ್ಡಮಡ್ಡಮಡ್ಡಮನ್ನಿನಾದವಡ್ಡಮರ್ವಯಂ
ಚಕಾರ ಚಂಡಾಂಡವಂ ತನೊತು ನಃ ಶಿವಃ ಶಿವಮ್ II೧II

ಜಟಾಕಟಾಹಸಂಭ್ರಮಭ್ರಮನ್ನಿಲಿಂಪನಿರ್ಝರೀ
ವಿಲೋಲವೀಚಿವಲ್ಲರೀವಿರಾಜಮಾನಮೂರ್ಧನಿ
ಧಗದ್ಧಗದ್ಧಗಜ್ಜ್ವಲಲ್ಲಲಾಟಪಟ್ಟಪಾವಕೆ
ಕಿಶೋರಚಂದ್ರಶೇಖರೇ ರತಿಃ ಪ್ರತಿಕ್ಷಣಂ ಮಮ II೨II

ಧರಾಧರೇಂದ್ರನಂದಿನೀವಿಲಾಸಬಂಧುಬಂಧುರ
ಸ್ಫುರದ್ದಿಗಂತಸಂತತಿಪ್ರಮೋದಮಾನಮಾನಸೆ
ಕೃಪಾಕಟಾಕ್ಷಧೊರಣೀನಿರುದ್ಧದುರ್ಧರಾಪದಿ
ಕ್ವಚಿದ್ದಿಗಂಬರೇ ಮನೋ ವಿನೋದಮೆತು ವಸ್ತುನಿ II೩II

ಲತಾಭುಜಂಗಪಿಂಗಲಸ್ಫುರತ್ಫಣಾಮಣಿಪ್ರಭಾ
ಕದಂಬಕುಂಕುಮದ್ರವಪ್ರಲಿಪ್ತದಿಗ್ವಧೂಮುಖೆ
ಮದಾಂಧಸಿಂಧುರಸ್ಫುರತ್ತ್ವಗುತ್ತರೀಯಮೆದುರೆ
ಮನೋ ವಿನೋದಮದ್ಭುತಂ ಬಿಭರ್ತು ಭೂತಭರ್ತರಿ II೪II

ಸಹಸ್ರಲೋಚನಪ್ರಭೃತ್ಯಶೇಷಲೇಖಶೇಖರ
ಪ್ರಸೂನಧೂಲಿಧೋರಣೀ ವಿಧೂಸರಾಂಘ್ರಿಪೀಠಭೂಃ
ಭುಜಂಗರಾಜಮಾಲಯ ನಿಬದ್ಧಜಾಟಜೂಟಕ
ಶ್ರಿಯೈ ಚಿರಾಯ ಜಾಯತಾಂ ಚಕೋರಬಂಧುಶೇಖರಃ II೫II

ಲಲಾಟಚತ್ವರಜ್ವಲದ್ಧನಂಜಯಸ್ಫುಲಿಂಗಭಾ
ನಿಪೀತಪಂಚಸಾಯಕಂ ನಮನ್ನಿಲಿಂಪನಾಯಕಮ್
ಸುಧಾಮಯೂಖಲೇಖಯಾ ವಿರಾಜಮಾನಶೇಖರಂ
ಮಹಾಕಪಾಲಿಸಂಪದೆಶಿರೋಜಟಾಲಮಸ್ತು ನಃ II೬II

ಕರಾಲಭಾಲಪಟ್ಟಿಕಾಧಗದ್ಧಗದ್ಧಗಜ್ಜ್ವಲ
ದ್ಧನಂಜಯಾಹುತೀಕೃತಪ್ರಚಂಡಣ್ಡಪಂಚಸಾಯಕೆ
ಧರಾಧರೇಂದ್ರನಂದಿನೀಕುಚಾಗ್ರಚಿತ್ರಪತ್ರಕ
ಪ್ರಕಲ್ಪನೈಕಶಿಲ್ಪಿನಿ ತ್ರಿಲೋಚನೆ ರತಿರ್ಮಮ II೭II

ನವೀನಮೇಘಮಂಡಲೀ ನಿರುದ್ಧದುರ್ಧರಸ್ಫುರತ್
ಕುಹೂನಿಶೀಥಿನೀತಮಃ ಪ್ರಬಂದಬದ್ಧಕಂದರಃ
ನಿಲಿಂಪನಿರ್ಝರೀಧರಸ್ತನೋತು ಕೃತ್ತಿಸಿಂಧುರಃ
ಕಲಾನಿಧಾನಬಂಧುರಃ ಶ್ರಿಯಂ ಜಗದ್ಧುರಂಧರಃII ೮II
shreerayarublogspot
ಪ್ರಫುಲ್ಲನೀಲಪಂಕಜಪ್ರಪಂಚಕಾಲಿಮಪ್ರಭಾ
ವಲಂಬಿಕಂಠಕಂದಲೀರುಚಿಪ್ರಬದ್ಧಕಂದರಮ್
ಸ್ಮರಚ್ಛಿದಂ ಪುರಚ್ಛಿದಂ ಭವಚ್ಛಿದಂ ಮಖಚ್ಛಿದಂ
ಗಜಚ್ಛಿದಾಂಧಕಛಿದಂ ತಮಂತಕಚ್ಛಿದಂ ಭಜೆ II೯II

ಅಗರ್ವ ಸರ್ವಮಂಗಲಾಕಲಾಕದಂಬಮಂಜರೀ
ರಸಪ್ರವಾಹಮಾಧುರೀ ವಿಜೃಂಭಣಾಮಧುವ್ರತಮ್
ಸ್ಮರಾನ್ತಕಂ ಪುರಾನ್ತಕಂ ಭವಾನ್ತಕಂ ಮಖಾನ್ತಕಂ
ಗಜಾನ್ತಕಾನ್ಧಕಾನ್ತಕಂ ತಮನ್ತಕಾನ್ತಕಂ ಭಜೆ II೧೦II

ಜಯತ್ವದಭ್ರವಿಭ್ರಮಭ್ರಮದ್ಭುಜಂಗಮಶ್ವಸ
ದ್ವಿನಿರ್ಗಮತ್ಕ್ರಮಸ್ಫುರತ್ಕರಾಲಭಾಲಹವ್ಯವಾಟ್
ಧಿಮಿದ್ಧಿಮಿದ್ಧಿಮಿಧ್ವನನ್ಮೃದಂಗತುಂಗಮಂಗಲ
ಧ್ವನಿಕ್ರಮಪ್ರವರ್ತಿತ ಪ್ರಚಂಡತಾಂಡವಃ ಶಿವಃ II೧೧II

ಸ್ಪೃಷದ್ವಿಚಿತ್ರತಲ್ಪಯೊರ್ಭುಜಂಗಮೌಕ್ತಿಕಸ್ರಜೊರ್
ಗರಿಷ್ಠರತ್ನಲೋಷ್ಠಯೋಃ ಸುಹೃದ್ವಿಪಕ್ಷಪಕ್ಷಯೋಃ
ತೃಷ್ಣಾರವಿಂದಚಕ್ಷುಷೋ ಪ್ರಜಾಮಹೀಮಹೇಂದ್ರಯೋಃ
ಸಮಪ್ರವೃತ್ತಿಕಃ ಕದಾ ಸದಾಶಿವಂ ಭಜೆ II೧೨II

ಕದಾ ನಿಲಿಂಪನಿರ್ಝರೀನಿಕುಂಜಕೊಟರೆ ವಸನ್
ವಿಮುಕ್ತದುರ್ಮತಿಃ ಸದಾ ಶಿರಃ ಸ್ಥಮಂಜಲಿಂ ವಹನ್
ವಿಮುಕ್ತಲೋಲಲೋಚನೊ ಲಲಾಮಭಾಲಲಗ್ನಕಃ
ಶಿವೇತಿ ಮಂತ್ರಮುಚ್ಚರನ್ ಕದಾ ಸುಖೀ ಭವಾಮ್ಯಹಮ್ II೧೩II

ಇದಮ್ ಹಿ ನಿತ್ಯಮೇವಮುಕ್ತಮುತ್ತಮೋತ್ತಮಂ ಸ್ತವಂ
ಪಠನ್ ಸ್ಮರನ್ ಬ್ರುವನ್ನರೋ ವಿಶುದ್ಧಿಮೇತಿಸಂತತಮ್
ಹರೆ ಗುರೌ ಸುಭಕ್ತಿಮಾಶು ಯಾತಿ ನಾನ್ಯಥಾ ಗತಿಂ
ವಿಮೋಹನಂ ಹಿ ದೇಹಿನಾಂ ಸುಶಂಕರಸ್ಯ ಚಿಂತನಮ್ II೧೪II

ಪೂಜಾವಸಾನಸಮಯೆ ದಶವಕ್ತ್ರಗೀತಂ ಯಃ
ಶಂಭುಪೂಜನಪರಂ ಪಠತಿ ಪ್ರದೋಷೆ
ತಸ್ಯ ಸ್ಥಿರಾಂ ರಥಗಜೇಂದ್ರತುರಂಗಯುಕ್ತಾಂ
ಲಕ್ಷ್ಮೀಂ ಸದೈವ ಸುಮುಖಿಂ ಪ್ರದದಾತಿ ಶಂಭುಃ II
೧೫ II

IIಇತಿ ಶ್ರೀರಾವಣ ಕೃತಮ್ ಶಿವ ತಾಂಡವ ಸ್ತೋತ್ರಮ್ ಸಂಪೂರ್ಣಮ್II

Thursday, April 22, 2010

Sakala grahabala neene

ಸಕಲ ಗ್ರಹಬಲ ನೀನೆ ಸರರಿಜಾಕ್ಷ ನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೆ

ರವಿಚಂದ್ರ ಬುಧ ನೀನೆ ರಾಹು ಕೇತುವು ನೀನೆ ಕವಿ ಗುರು ಶನಿಯು ಮಂಗಳನು ನೀನೆ

ದಿವ ರಾತ್ರಿಯಲಿ ನೀನೆ ನವ ವಿಧಾನವು ಭವರೋಗ ಹರ ನೀನೆ ಬೇ ಷಜನು ನೀನೆ

ಪಕ್ಷಮಾಸವು ನೀನೆ ಪರ್ವ ಕಾಲವು ನೀನೆ ನಕ್ಷತ್ರ ಯೋಗ ತಿಥಿ ಕರಣ ನೀನೆ

ಅಕ್ಷಯವಾಗಿ ದ್ರೌಪದಿಯ ಮಾನವಕಾಯ್ದ ಪಕ್ಷಿವಾಹನ ನೀನೆ ರಕ್ಷಕನು ನೀನೆ

ಋತುವತ್ಸರವು ನೀನೆ ಪ್ರತ ಯುಗಾಡಿಯು ನೀನೆ ಕ್ರತು ಹೋಮ ಯಜ್ಞ ಸದ್ಗತಿಯು ನೀನೆ

ಜಿತವಾಗಿ ಎನ್ನೊಡೆಯ ಪುರಂದರವಿಠಲ ಶ್ರುತಿಗೆ ಸಿಲುಕದ ಮಹಾ ಮಹಿಮಾ ನೀನೆ

Monday, April 19, 2010

Ni nyakoo Ninna

ನೀ ನ್ಯಾಕೋ ನಿನ್ನ ಹ೦ಗ್ಯಾಕೋ
ನಿನ್ನ ನಾಮದ ಬಲವೂ೦ದಿದ್ದರೆ ಸಾಕೋ IIಪII


ಕರಿ ಮಕರಿಗೆ ಸಿಕ್ಕಿ ಮೋರೆಯಿ ಡುತ್ತಿರುವಾಗ
ಆದಿಮೂಲ ನೆ೦ಬ ನಾಮವೇಕಾಯ್ತೋ II1II


ಪ್ರಹ್ಲಾದನ ಪಿತ ಬಾಧಿಸುತ್ತಿರುವಾಗ
ನರಹರಿಯೆಂಬ ನಾಮವೇ ಕಾಯ್ತೋ II೨II


ಬಾಲೆಯ ಸಭೆಯಲ್ಲಿ ಸೀರೆಯ ಸೆಳೆವಾಗ
ಕೃಷ್ಣ ಕೃಷ್ಣ ಎ೦ಬ ನಾಮವೇ ಕಾಯ್ತೋ II೩II

ಯಮನ ದೂತರುಬಂದು ಅಜಮಿಳನ ನೆ ಳೆವಾಗ
ನಾರಾಯಣನೆ೦ಬ ನಾಮವೇ ಕಾಯ್ತೋ II೪II

ಆ ಮರ ಈ ಮರ ಎ೦ದು ಧ್ಯಾನಿಸುತ್ತಿರುವಾಗ
ರಾಮ ರಾಮವೆಂಬ ನಾಮ ವೆ ಕಾಯ್ತೂ II೫II

ಹಸುಳೆ ಆ ಧ್ರುವರಾಯ ಅಡವಿಗೆ ಪೋಪಾಗ
ವಾಸುದೇವನೆಂಬ ನಾಮವೇ ಕಾಯ್ತೂ II೬ II
shreerayarublogspot

ನಿನ್ನ ನಾಮಕೆ ಸರಿಕಾಣೆನೂ ಜಗದೂಳು
ಘನಮಹಿಮಾ ಸಿರಿಪುರಂದರ ವಿಠಲ II೭ II





Jagajagisuva ee sogasina

ಜಗಜಗಿಸುವ ಈ ಸೊಗಸಿನ ಪೀಠಕೆ
ನಗು ನಗುತ ಬಾರೋ ದೇವ

ಗಗನರಾಯನಿಗೆ ಮಗಳೆ೦ದೆನಿಸಿದ
ಜಗಕೆ ಜನನಿ ಕೈಮುಗಿದು ಪ್ರಾಥಿ೯ಸುವಳು

ಅ೦ಗನೆಯರು ಶ್ರವಣ೦ಗ ಳ ತು೦ಬುವ
ಸ೦ಗೀತದ ಸಾರ೦ಗಳಪಿ೯ಸುವರೋ
ನಾಸಸ್ವಾರದ ಸೋಗಸಾದ ಧ್ವನಿಗಳಲಿ
ನಾದ ಬ್ರಹ್ಮನು ತಾ ಕಾಡು ನೋಡುತಲಿಹ

ಪರಿಮಳ ಪುಷ್ಪದ ಸುರಿಮಳೆ ನೋಟವು
ಸ್ಮರಣೆಗೆ ತರುವುದು ಸಿರಿಯವಿವಾಹವ

ಭೂಸುರರೆಲ್ಲರು ಆಶಿವ೯ಚನವ
ಶ್ರೀಶನಿನ್ನಯ ಸ೦ತೋಷಕೆ ನುಡಿವರು

shreerayarublogspot
ಸುಖ ಸಂತೋಷವು ಮುಖ ಮುಖದಲಿಹುದು
ತವ ಸುಖಾಗಮನದಿ೦ ಲಕುಮೀ ಪ್ರಸನ್ನನೆ

Srimad Raamaaramana GOvinda

ಶ್ರೀಮದ್ ರಮಾರಮಣ ಗೋವಿಂದ
ಗೋವಿಂದ ಗೋವಿಂದ


Srimad raMaaramana Govinda
Govinda Govinda

ಜಾನಕಿ ಜೀವನ ಸ್ಮರಣೆ
ಜಯ ಜಯ ರಾಮ( ರಾ೦)
ಹರೇ ಪು೦ದರೀಕವರದ
ಹರೇ ವಿಠಲ ಹರೇ ವಿಠಲ

Shreerayarublogspot
Jaanaki jivana smarane
jaya jaya raam
Hare Pundarikavarada
Hare Vithala Hare Vithala

ಸರ್ವದಾ ಗೋವಿಂದ ನಾಮ
ಕೀತ೯ನ೦ ಸ೦ಕಿತ೯ನ೦
ಹನುಮ ಭೀಮ ಮದ್ವಾ೦ತಗ೯ತ ಹರೇ
ಪ್ರಸನ್ನ ಭವ ಜಯ ಜಯ


sarvada Govinda naama
kiratanam sankirtanam
hanuma bhima madwantaragata Hare
prasanna bhava Jaya Jaya

Laali hayavadana

ಲಾಲಿ ಹಯವದನ
ಲಾಲಿ ಶ್ರೀಹಯವದನ ಲಾಲಿ ರಂಗವಿಠಲ
ಲಾಲಿ ಗೋಪಿನಾಥ ಲಕ್ಷ್ಮಿಸಮೇತ ........ಲಾಲಿ


ಮುತ್ತು ಮಾಣಿಕ್ಯಬಿಗಿದ ತೊಟ್ಟಿಲೋಳು
ಎತ್ತಿದರು ಎನ್ನಯ್ಯ ಕೈಯೊಳಗೆ ನಿಲ್ಲ
ಭಕ್ತರಿಗೆ ವರಗಳನು ಕೊಡುವ ಹೊತ್ತಿಲ್ಲ
ಪುತ್ರನಾ ಎತ್ತಿಕೋ ನಂದಗೋಪಾಲ ........ಲಾಲಿ


ಮನೆಯೊಳಗೆ ಎವನಿತ ಬಹುರಚ್ಚೆ ವಂತ
ಮನೆವಾರ್ತೆ ಯಾರು ಮಾಡುವರೂ ಶ್ರೀಕಾಂತ
ಗುಣಗುಣಗೊಲಿಪ್ಪ ಬಹು ಗುಣವಂತ
ಗುಣಭದ್ಧನಾಗನಿವ ಶ್ರೀಲಕ್ಷ್ಮಿ ಸಮೇತ .........ಲಾಲಿ

shreerayarublogspot
ಶ್ರೀ ರಾಂಬುನಿಧಿಯೂಳಗೆ ಸಜ್ಜೆಯೋಳಗಿರುವ
ಶ್ರೀ ರಮಣ ಭಕ್ತರ ಇಚ್ಹೆ ನಲಿದು ಬರುವ
ಕಾರುಣ್ಯ ಹಯವದನ ಕಾಯ್ದ ತುರುಕರುವ
ನಾರಿನೀರೆಯರೋಳು ಮೆರವ ಕಡು ಚಲುವ ...........ಲಾಲಿ



Audio link:
http://www.kannadaaudio.com/Songs/Children/JoJoLaali/LaaliHayavadana.ram

Saturday, April 17, 2010

Kula Kula Kulavendu

ಕುಲ ಕುಲ ಕುಲವೆಂದು ಹೊಡೆದಾ ಡದಿರಿ ನಿಮ್ಮ
ಕುಲದ ನೆಲೆಯನೆನಾದರೂ ಬಲ್ಲಿರಾ ಬಲ್ಲಿರ IIಪII


ಹುಟ್ಟದ ಯೋನಿಗಳಿಲ್ಲ ಮೆಟ್ಟಿದ ಭುಮಿಗ ಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಕೂಟಕಾಣಿಸ ಬಂದು ಹಿರಿದೆನು ಕಿರಿದೆನು
ನೆಟ್ಟನೆ ಸರ್ವಜ್ಞನ ನೆನೆಕ೦ಡ್ಯಾ ಮನುಜ II೧II
shreerayarublogspot
ಜಲವೇ ಸಕಲ ಕುಲಕ್ಕೆ ತಾಯಲ್ಲವೆ
ಜಲದ ಕುಲವನೆನಾದರು ಬಲ್ಲಿರಾ
ಜಲದೂ ಕುಳಿಯ೦ತೆ ಸ್ಥಿರವಲ್ಲ ಈ ದೇಹ
ನೆಲೆಯ ಅರಿತು ನೀ ನೆನೆಕ೦ಡ್ಯಾ ಮನುಜ II೨II

ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿಕಾಗಿನೆಲೆಯಾದಿ ಕೇಶವ
ರಾಯನ ಚರಣ ಕಮಲವ ಕೀರ್ತಿಸುವನೆ ಕುಲಜ II೩II




Pankajamukhiyarellaru

ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮಿವೆಂಕಟರಮಣಗಾರತಿ ಎತ್ತಿರೆ IIಪII
shreerayarublogspt
ಮತ್ಸ್ಯಾವತಾರಗೆ ಮ೦ದರೊದ್ಧಾರಗೆ ಅಚ್ಚರಿಯಿಂದ ಭೂಮಿ ತ೦ದವಗೆ
ಹೆಚ್ಚಾದ ಉಕ್ಕಿನ ಕ೦ಭದಿ೦ದಲಿ ಬಂದ ಲಕ್ಷ್ಮಿ ನರಸಿ೦ಹಗಾರತಿ ಎತ್ತಿರೆ II೧II


ವಾಮನ ರೂಪಲಿ ದಾನ ಬೇಡಿದವಗೆ ಪ್ರೇಮದಿ ಕೂಡ್ಲಿಯ ಪಿಡಿದವಗೆ
ರಾಮಚಂದ್ರನಾಗಿ ದಶಶಿರನನು ಕೊ೦ದ ಸ್ವಾಮಿ ಶ್ರೀಕೃಷ್ಣಗಾರತಿ ಎತ್ತಿರೆ II೨II

ಬತ್ತಲೆ ನಿ೦ತಗೆ ಬೌದ್ಧವತಾರಗೆ ಉತ್ತಮ ಅಶ್ವನೆರಿದಗೆ
ಭಕ್ತರ ಸಲಹುವ ಪುರಂದರವಿಠಲಗೆ ಮುತ್ತೈದೆಯರಾರತಿ ಎತ್ತಿರೆ II3II

Gangadi sakala

ಗ೦ಗಾದಿ ಸಕಲ ತಿಥ೯೦ಗಳ ಫಲವಿದು ಹರಿಯನಾಮ
ಹಿಂಗದೆ ಜನರಿಗೆ ಮ೦ಗಳಕರವಿದು ಹರಿಯನಾಮ

ವೇದಶಾಸ್ತ್ರಗಳ ಓದಲರಿಯದವಗೆ ಹರಿಯನಾಮ
ಆದಿಪುರುಷನ ಪೂಜಿಸದವಗೆ ಹರಿಯನಾಮ
ಸಾಧಿಸಬೇಕು ಮೋಕ್ಷವೆ೦ಬುವರಿಗೆ ಹರಿಯನಾಮ
ಶೋಧಿಸಿ ಇಟ್ಟ ಚಿನ್ನದ ಗಟ್ಟಿ ಕಾಣಿರೋ ಹರಿಯನಾಮ II೧II
shreerayarublogspt
ವ್ಯಾಳವ್ಯಾಳಕೆ ಎಚ್ಚರಿಕೆಯ ಕೊ ಡುವುದು ಹರಿಯನಾಮ
ಜಾಡಿಗೆ ಹೊನ್ನು ತು೦ಬಿಟ್ಟ೦ತೆ ಕಾಣಿರೋ ಹರಿಯನಾಮ
ಕಾಲನ ದೂತರ ತರಿದು ಬಿಸಡುವುದು ಹರಿಯನಾಮ
ಲೋಲ ಶ್ರೀ ಪುರಂದರವಿಠಲರಾಯನ ದಿವ್ಯನಾಮ II೨II

Friday, April 16, 2010

Guruvina gulama

ಗುರುವಿನ ಗುಲಾಮನಾಗುವ ತನಕ ದೂರೆಯದಣ್ಣ ಮುಕುತಿ
ಪರಿಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ IIಪII

ಆರು ಶಾಸ್ತ್ರವ ಓದಿದರಿಲ್ಲ ನೂರಾರು ಪುರಾಣವ ಮುಗಿಸಿದರಿಲ್ಲ
ಸಾರಿ ಸಜ್ಜನರ ಸಂಗವ ಮಾಡದೆ ಧೀರ ನೆನುತ ತಿರಿಗಿದರೇನು
(ನ್ಯಾಯ ಕಥೆಗಳ ಕೆಳ್ದರಿಲ್ಲ ಧಿರನಾಗಿ ತಾ ಪೇಳಿದರಿಲ್ಲ) II1II
shreerayarublogspot

ಕೊರಲೋಳು ಮಾಲೆ ಧರಿಸಿದರಿಲ್ಲ ಬೇರೆಳೂಳು ಜಪಮಣಿ ಎಣಿಸದರಿಲ್ಲ
ಮರುಳನಾಗಿ ತಾ ಶರಿರಕೆ ಬೂದಿ ಒರೆಸಿಕೊಂಡು ತಾನು ತಿರುದಿದಲ್ಲಿ II2II

ನಾರಿಯ ಭೂಗ ಅಳಿಸಿದರಿಲ್ಲ ಶರಿರಕೆ ಸುಖ ಬಿಡಿಸಿದರಿಲ್ಲ
ನಾರದ ವರದ ಪುರಂದರವಿಠಲನ ಸೇರಿಕೊಂಡು ತಾ ಪಡೆಯುವ ತನಕ II3II




Karunisoo ranga

ಕರುಣಿಸೂ ರಂಗ ಕರುಣಿಸೋ
ಹಗಲು ಇರಳು ನಿನ್ನ ಸ್ಮರಣೆ ಮರೆಯದ೦ತೆ

ರುಕುಮಾ೦ಗದನ೦ತೆ ವ್ರತವ ನಾನರಿಯೇನೂ
ಶುಕ ಮುನಿಯಂತೆ ಸ್ತುತಿಸಲು ಅರಿಯೆ
ಬಕವೈರಿಯಂತೆ ಧ್ಯಾನವ ಮಾಡಲರಿಯೇ
ದೇವಕಿಯಂತೆ ಮುದ್ದಿಸಳರಿಯೇನೂ II೧II

ಗರುದನ೦ದದಿ ಪೋತ್ತು ತಿರುಗಲು ಅರಿಯೆ
ಕರೆಯಲು ಅರಿಯೆ ಕರಿರಾಜನ೦ತೆ
ವರ ಕಪಿಯ೦ತೆ ದಾಸ್ಯವ ಮಾಡಲರಿಯೇ
ಸಿರಿಯಂತೆ ನೆರೆದು ಮೂಹಿಸಲರಿಯೆನೂ II೨II
shreerayarublogspot
ಬಲಿಯಂತೆ ದಾನವ ಕೂಡಲು ಅರಿಯೇನೂ
ಭಕ್ತಿ ಛಲವನರಿಯೇ ಪ್ರಹ್ಲಾದನ೦ತೆ
ಒಲಿಸಲು ಅರಿಯೆ ಅಜು೯ನನ೦ತೆ ಸಖನಾಗಿ
ಸಲಹೂ ದೇವರ ದೇವ ಪುರಂದರವಿಠಲ II೩II




Elu narayana Elu lakshmiramana ( Udayaraaga)

ಏಳು ನಾರಾಯಣ ಏಳು ಲಕ್ಷ್ಮಿರಮಣ
ಏಳು ಶ್ರೀಗಿರಿಗೋಡೆಯ ಶ್ರೀವೆಂಕಟೇಶ
ಏಳಯ್ಯ ಬೆಳಗಾಯಿತು II


ಕಾಸಿದ್ದ ಹಾಲು ಕಾವಡಿಯೂಳು ಹೆಪ್ಪಿ ಟ್ಟು
ಲೇಸಾಗಿ ಕಡೆದು ಹೊಸ ಬೆಣ್ಣೆ ಕೂಡುವೆ
ಶೇಷಶಯನನೆ ಏಳು ಸಮುದ್ರ ಮಂಥನವ ಮಾಡು
ದೇಶ ಕೆ೦ಪಾಯಿತು ಏಳಯ್ಯ ಹರಿಯೇ II೧II

ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳು
ಸುರರು ತ೦ದಿದ್ದಾರೆ ಬಲು ಭಕುತಿಯಿಂದ
ಅರವಿ೦ದನಾಭ ಸಿರಿವಿಧಿಭಾವಾದಿಗಲೋಡೆಯಾ
ಹಿರಿದಾಗಿ ಕೋಳಿ ಕೂಗಿತೆಳಯ್ಯ ಹರಿಯೇ II೨II
shreerayarublogspot
ದಾಸರೆಲ್ಲರು ಬಂದು ಧುಳಿದಶ೯ನಕೋ೦ಡು
ಲೇಸಾಗಿ ತಾಳ ದ೦ಡಿಗೆಯ ಪಿಡಿದು
ಶ್ರೀಶನೆಲೆಯಾದಿ ಕೇಶವ ನಿಮ್ಮ ಪಾದವನು
ಲೇಸಾಗಿ ಸ್ಮರಿಸಿ ಪೂಗಳುವರು ಹರಿಯೇ II೩II



Audio Link:
http://www.kannadaaudio.com/Songs/Devotional/SriVidyabhushana/Old/YeluNarayana.ram

Madhukara vrutii

ಮಧುಕರ ವೃತಿ ಎನ್ನದು ಅದು ಬಲು ಚೆನ್ನದು IIಪII
ಪದುಮನಾಭನ ಪಾದಪದುಮ ಮಧುಪವೆಂಬ IIಅಪII

shreerayarublogspot
ಕಾಲಿಗೆ ಗೆಜ್ಜೆ ಕಟ್ಟಿ ನೀಲವಣ೯ನ ಗುಣ
ಆಲಾಪಿಸುತ್ತ ಬಲು ಓಲಗ ಮಾಡುವಂಥ II೧II
ರಂಗನಾಥನ ಗುಣ ಹಿಂಗದೆ ಪಾಡುತ್ತ
ಶೃ೦ಗಾರ ನೋಡುತ್ತಾಕ೦ಗಾನ೦ದವೆ೦ಬ II೨II
ಇಂದಿರಾಪತಿ ಪುರಂದರವಿಠಲನಲ್ಲಿ
ಚೆಂದದ ಭಕ್ತಿಯಿ೦ದಾನ೦ದವ ಪಡುವಂಥ II೩II

Alli noodalu Raama

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರು ಅಲ್ಲಿ ಶ್ರೀರಾಮ IIಪII


ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೇ ಬೆದರಿ ಓಡಿದವು
ಈ ವೇಳೆ ನರನಾಗಿ ಇರಬಾರದೆ೦ದೆಣಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ II೧II


ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೂಳಿಪರಿ ರುಪವು೦ಟೆ
ಲವದಲ್ಲಿ ಅಸುರ ದುರುಳರೆಲ್ಲರು
ಅವರವರು ಅಸುರ ದುರುಳರೆಲ್ಲರು II೨II


ಹನುಮದಾದಿ ಸಾಧು ಜನರು ಅಪ್ಪಿಕೊಂಡು
ಕುಣಿಕುಣಿದಾಡಿದರು ಹರುಷದಿಂದ
ಕ್ಷಣದಲ್ಲಿ ಪುರಂದರವಿಠಲರಾಯನು
ಕೂನೆಗೂಡೆಯನು ತಾನೋಬ್ಬನಾಗಿ ನಿಂತ II೩II

Thursday, April 15, 2010

Apamrityu parihariso

ಅಪಮೃತ್ಯು ಪರಿಹರಿಸೂ ಅನಿಲದೇವ
ಕೃಪಣವತ್ಸಲನೆ ಕಾವರ ಕಾಣೆ ಜಗದೊಳಗೆ

ನಿನಗಿನ್ನು ಸಮರಾದ ಅನಿಮಿತ್ತ ಬಾ೦ಧವರು
ಎನಗಿಲ್ಲ ಆವಾವ ಜನುಮದಲ್ಲಿ
ಅನುದಿನವು ಎಮ್ಮನು ಉದಾಸಿನ ಮಾಡುವುದು
ಅನುಚಿತವು ಜಗದಿ ಸಜ್ಜನ ಶಿಖಾಮಣಿಯೆ II೧II

ಕರಣಾಭಿಮಾನಿಗಳ ಕಿ೦ಕರರು ಮೂಲೋ೯ಕದರಸು
ಹರಿಯು ನಿನ್ನೋಳಗಿಪ್ಪ ಸರ್ವಕಾಲ
ಪರಿಸರನೆ ಈ ಭಾಗ್ಯ ದೂರೆತನಕೆ ಸರಿಯು೦ತೆ
ಗುರುವಯ೯ ನೀ ದಯಾಕರನೆ೦ದು ಪ್ರಾಥಿ೯ಸುವೆ II೨II

ಭವ ರೋಗ ಮೂಚಕನೆ ಪವಮಾನರಾಯ ನಿ
ನ್ನವರವನು ನಾನು ಮಾಧವಪ್ರಿಯನೆ
ಬಾಧೆಯ ಬಿಡಿಸೂ ಅವನಿಯೂಳು ಸುಜನರಿಗೆ
ದಿವಿಜಗನ ಮಧ್ಯದಲಿ ಪ್ರವರ ನಿನಹುದೂ II3II
®shreerayarublogspot©
ಜ್ಞಾನಾಯುರೂಪಕನು ನಿನಹುದೋ ವಾಣಿ
ಪ೦ಚಾನನಾದ್ಯಮರಿಗೆ ಪ್ರಾಣದೇವ
ದಿನವತ್ಸಲನೆ೦ದು ನಾ ನಿನ್ನ ಮೂರೆಹೊಕ್ಕೆ
ದಾನವಾರಣ್ಯ ಕ್ರುಶಾನು ಸವ೯ದಾ ಎನ್ನ II೪II

ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು
ಸಾಧಾರಣವಲ್ಲ ಸಾಧು ಪ್ರಿಯನೇ
ವೇದವಾದೂದಿತ ಜಗನ್ನಾಥ ವಿಠಲನ
ಪಾದಭಾಜನೆಯಿತ್ತು ಮೂಡ ಕೋಡು ಸತತII ೫II

Entha balavanthanoo

ಎ೦ಥ ಬಲವ೦ತನೋ ಕು೦ತಿಯ ಸುಜಾತನೂ
ಭಾರತಿಗೆ ಕಾ೦ತನೋ ನಿತ್ಯ ಶ್ರೀ ಮ೦ತನೋ

ರಾಮಚಂದ್ರನ ಪ್ರಾಣನೂ ಅಸುರ ಹೃದಯ ಬಾಣನೂ
ಖಳರ ಗ೦ಟಲ ಗಾಣನೂ ಜಗದೂಳಗೆ ಪ್ರವಿಣನೂ II೧II

ಕು೦ತಿಯ ಕ೦ದನೋ ಸೌ ಗ೦ಧಿಕವ ತ೦ದನೋ
ಕುರುಕ್ಷೇತ್ರ ಕೆ ಬ೦ದನೋ ಕೌರವರ ಕೋ೦ದನೋ II೨II
©shreerayarublogspot©
ಭ೦ಢಿ ಅನ್ನವನು೦ಡನೋ ಬಕನ ಪ್ರಾಣವ ಕೊ೦ದನೋ
ಭೀಮ ಪ್ರಚ೦ಡನೋ ದ್ರೌಪದಿಗೆ ಗ೦ಡನೋ II೩II

ವೈಷ್ಣವಾಗ್ರಗಣ್ಯನೂ ಸ೦ಚಿತಾಗ್ರ ಪುಣ್ಯನೂ
ದೇವವರೆಣ್ಯನೂ ದೇವಷರಣ್ಯನೂ ೪

ಮದ್ವಶಾಸ್ತ್ರವ ರಚಿಸಿದನೂ ಸದ್ವೈಷ್ಣವರ ಸಲಹಿದನೂ
ಉಡುಪಿ ಕೃಷ್ಣನ ನಿಲಿಸಿದನೂ ಪುರಂದರವಿಠಲನ ಒಲಿಸಿದನೆ ೫

kandu kandu nii enna

ಕಂಡು ಕಂಡು ನೀ ಎನ್ನ ಕೈ ಬಿಡುವದೇ ಕೃಷ್ಣ
ಪು೦ಡರೀಕಾಕ್ಷ ಶ್ರೀಪುರುಷೋತ್ತಮ

ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊ೦ದೆನಯ್ಯ ನಿರಜಾಕ್ಷ
ತಂದೆತಾಯಿಯು ನೀನೆ ಬಂಧುಬಳಗವು ನೀನೆ
ಎ೦ದೆ೦ದಿಗು ನಿನ್ನ ನ೦ಬಿದೆನೋ ಕೃಷ್ಣ II1II

ಭಕ್ತವತ್ಸಲನೆಂಬ ಬಿರುದು ಪೊತ್ತ ಮೇಲೆ
ಭಕ್ತರಧಿನನಾಗಿರಬೇಡವೆ
ಮುಕ್ತಿದಾಯಕ ನೀನು ಹೊನ್ನೂರುಪುರವಾಸ
ಶಕ್ತಗುರು ಪುರಂದರವಿಠಲ ಶ್ರೀಕೃಷ್ಣ II2II



Tuesday, April 13, 2010

BIdeno ninghri Srinivaasa

ಬಿಡೆನೋ ನಿನ್ನ೦ಘ್ರಿ ಶ್ರೀನಿವಾಸ
ಎನ್ನ ದುಡಿಸಿಕೊ ಳ್ಳಲೋ ಶ್ರೀನಿವಾಸ
ನಿನ್ನ ನುಡಿಯ ಜೋತೆಲ್ಲೋ ಶ್ರೀನಿವಾಸ
ನನ್ನ ನಡೆ ತಪ್ಪು ಕಾಯೋ ಶ್ರೀನಿವಾಸ II1II


ಬಡಿಯೋ ಬೆನ್ನಲ್ಲಿ ಶ್ರೀನಿವಾಸ
ಎನ್ನ ಒಡಲ ಹೊಯ್ಯದಿರೂ ಶ್ರೀನಿವಾಸ
ನಾ ಬಡವ ಕಾಣೆಲೂ ಶ್ರೀನಿವಾಸ
ನಿನ್ನ ಒಡಲ ಹೂಕ್ಕೆನೂ ಶ್ರೀನಿವಾಸII2 II

ಪಂಜು ಪಿಡಿವೇನೂ ಶ್ರೀನಿವಾಸ
ನಿನ್ನ ಎ೦ಜಲ ಬಳಿದುಂಬೆ ಶ್ರೀನಿವಾಸ
ನಾ ಸಂಜೆ ಉದಯಕೆ ಶ್ರೀನಿವಾಸ
ಕಾಳಜಿಯ ಪಿಡಿವೆ ಶ್ರೀನಿವಾಸ II3II

ಸತ್ತಿಗೆ ಚಾಮರ ಶ್ರೀನಿವಾಸ
ನಾ ನೆತ್ತಿ ಕುಣಿವೇನೂ ಶ್ರೀನಿವಾಸ
ನಿನ್ನ ರತ್ನದಾವಿಗೆ ಶ್ರೀನಿವಾಸ
ನಾ ಹೊತ್ತು ನಲಿವೇನೂ ಶ್ರೀನಿವಾಸ II4II

ಅವರೊಳಿಗವ ಮಾಳ್ಪೆ ಶ್ರೀನಿವಾಸ
ನನ್ನ ಪಾಲಿಸೋ ಬಿಡದೆ ಶ್ರೀನಿವಾಸ
ಹೇಳಿದ೦ತಾಗಲಿ ಶ್ರೀನಿವಾಸ
ನಿನ್ನಗಳಾಗಿವೆ ಶ್ರೀನಿವಾಸ II5II

ನಿನ್ನ ನಾಮ ಹೋಳಿಗೆ ಶ್ರೀನಿವಾಸ
ಕಳ್ಳ ಕುನ್ನಿ ನಾನಾಗಿಹೆ ಶ್ರೀನಿವಾಸ
ಕಟ್ಟಿ ನಿನ್ನವರೋದ್ದರೆ ಶ್ರೀನಿವಾಸ
ನನಗಿನ್ನೂ ಲಜ್ಜೆತಕೆ ಶ್ರೀನಿವಾಸ II6II

ಬೀಸಿ ಕೊಲ್ಲಲವರೆ ಶ್ರೀನಿವಾಸ
ಮುದ್ರೆ ಕಾಸಿ ಚುಚ್ಚುಲವರೆ ಶ್ರೀನಿವಾಸ
ಮಿಕ್ಕ ಘಾಸಿಗ೦ಜೆನಯ್ಯ ಶ್ರೀನಿವಾಸ
ಎ೦ಜಲ ಬ೦ಟ ನಾ ಶ್ರೀನಿವಾಸ II7II

ಹೇಸಿ ನಾನಾದರೆ ಶ್ರೀನಿವಾಸ
ಹರಿದಾಸರೂಳು ಪೊಕ್ಕೆ ಶ್ರೀನಿವಾಸ
ಅವರ ಭಾಷೆಯ ಕೇಳಿಹೆ ಶ್ರೀನಿವಾಸ
ಆ ವಾಸಿಯ ಸೈರಿಸೂ ಶ್ರೀನಿವಾಸ II8II

ತಿ೦ಗ ಳವನಲ್ಲ ಶ್ರೀನಿವಾಸ
ವತ್ಸರ೦ಗಳವನಲ್ಲ ಶ್ರೀನಿವಾಸ
ರಾಜ೦ಗಳ ಸವದಿಪೆ ಶ್ರೀನಿವಾಸ
ಭವ೦ಗಳ ದಾಟುವೆ ಶ್ರೀನಿವಾಸ II9II

ನಿನ್ನವ ನಿನ್ನವ ಶ್ರೀನಿವಾಸ
ನಾನನ್ಯರರಿವೇನೂ ಶ್ರೀನಿವಾಸ
ಅಯ್ಯ ಮನ್ನಿಸೂ ತಾಯಿತಂದೆ ಶ್ರೀನಿವಾಸ
ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ II10II

Saturday, April 10, 2010

Raaya Baaro

ರಾಯ ಬಾರೋ ತಂದೆ ತಾಯಿ ಬಾರೋ
ನಮ್ಮನ್ ಕಾಯ ಬಾರೋ I
ಮಾಯಿಗಳ ಮದಿ೯ಸಿದ ರಾಘವೇಂದ್ರ ರಾಯ ಬಾರೋII

ವಂದಿಪ ಜನರಿಗೆ ಮಂದಾರ ತರುವಂತೆ
ಕು೦ದದಭಿಷ್ಟ ಸಲಿಸುತಿಪೆ೯ ರಾಯ ಬಾರೋ
ಕು೦ದದಭಿಷ್ಟ ಸಲಿಸುತಿಪೆ೯ ಸರ್ವಜ್ನ
ಮಂದನ ಮತಿಗೆ ರಾಘವೇಂದ್ರ ರಾಯ ಬಾರೋ II1II

ಆರು ಮೂರೂ ಏಳು ನಾಲ್ಕು ಎ೦ಟು ಗ್ರಂಥ ಸಾರಾಥ೯
ತೋರಿದಿ ಸವ೯ರಿಗೆ ನ್ಯಾಯದಿಂದ ರಾಯ ಬಾರೋ
ತೋರಿದಿ ಸರ್ವರಿಗಿ ನ್ಯಾಯದಿಂದ ಸರ್ವಜ್ನ
ಸೂರಿಗಳರಸನೆ ರಾಘವೇಂದ್ರ ರಾಯ ಬಾರೋ II2II

ರಾಮಪದ ಸರಸಿ ರುಹ ಭ್ರುಂಗ ಕೃಪಾಪಾಂಗ
ಭ್ರಾಮಕ ಜನರ ಮಾನಭಂಗ ರಾಯ ಬಾರೋ
ಭ್ರಾಮಕ ಜನರ ಮಾನಭಂಗ ಮಾಡಿದ
ಧೀಮ೦ತರೂಡೆಯ ರಾಘವೇಂದ್ರ ರಾಯ ಬಾರೋ II3II



ಭಾಸುರ ಚರಿತನೆ ಭೂಸುರ ವಂದ್ಯನೆ
ಶ್ರೀ ಸುಧೀ೦ದ್ರಾಯ೯ರ ವರಪುತ್ರಾ ರಾಯ ಬಾರೋ
ಶ್ರೀ ಸುಧೀ೦ದ್ರಾಯ೯ರ ವರಪುತ್ರಾ ನೆನೆಸಿದೆ
ದೈಶಿಕರೊಡೆಯ ರಾಘವೇಂದ್ರ ರಾಯ ಬಾರೋ II4II

ಭೂತಳ ನಾಥನ ಭೀತಿಯ ಬಿಡಿಸಿದ
ಪ್ರೇತತ್ವ ಕಳೆದ ಮಹಿಷಿಯಾ ರಾಯ ಬಾರೋ
ಪ್ರೆತತ್ವ ಕಳೆದ ಮಹಿಷಿಯಾ ಮಹಾ ಮಹಿಮ
ಜನನ್ನಾಥ ವಿಠಲನ ಪ್ರೀತಿಪಾತ್ರ ರಾಯ ಬಾರೋ II5II



Audio Link:
http://www.kannadaaudio.com/Songs/Devotional/Raaya-Baaro-Raghavendra-Baaro/Raaya-Baaro.ram

Tuesday, April 6, 2010

Baaro Namma manege sriRaghavendra

ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ IIಪII

ಬಾರೋ ದುಃಖಾಪಹಾರ ಬಾರೋ ದುರಿತದೂರ
ಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರು IIಅ II

ಬಾಲಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ
ಲೋಲ ಶ್ರೀನರಹರಿ ಕಾಲರೂಪವ ತೋರ್ದೆ II೧II

ವ್ಯಾಸನಿರ್ಮಿತ ಗ್ರಂಥ ಮಧ್ವಕೃತ ಭಾಷ್ಯವ
ಬೇಸರದೆ ಓದಿ ಮೆರೆವ ವ್ಯಾಸಮುನಿಯೆ II೨ II

ಮಂತ್ರಗೃಹದಲಿ ನಿಂತ ಸುಯತಿವರ್ಯ
ಅಂತ ತಿಳಿಯದೊ ನೀ ಅಂತರದೊಳು II೩ II

ಭೂತಪ್ರೇತಗಳನು ಘಾತಿಸಿ ಬಿಡುವಂಥ
ಖ್ಯಾತಿಯುತ ಯತಿನಾಥನೆ ತುತಿಸುವೆ II೪II

ಕುಷ್ಟರೋಗಾದಿಗಳು ನಷ್ಟ ಮಾಡುವಂಥ
ಅಷ್ಟಮಹಿಮೆಯುತ ಶ್ರೇಷ್ಠಮುನಿಯೆ II೫ II

ಕರೆದರೆ ಬರುವಿಯೆಂಬೋ ಕೀರುತಿ ಕೇಳಿ ನಾ
ಕರೆದೆನೊ ಕರುಣದಿ ಕರ ಪಿಡಿಯೋ II೬ II

ಭಕ್ತವತ್ಸಲನೆಂಬ ಬಿರುದಿನಿಂದಾದರಾ
ಸಕ್ತನ ಮೊರೆ ಕೇಳಿ ಮಧ್ವೇಶವಿಠ್ಠಲದಾಸII ೭II

Baaro Namma Manege SriRaghavendra IIpaII
Baaro dukhapahaara baaro duritadoora
baarayya sanmarga daari tooruva guru IIapa II


Baalaprahaladanaagi khula kashyapuvige
loola SrinaraHari Kaalarupava torde 1

Vyaasanirmita grantha madwakruta bhashyava
besarade oodi mereve VYaasamuniye 2

Mantragruhadali ninta suyativarya
anta tiliyadoo nii antaradooLU 3

Bhutapretagalanu ghatisi Biduvantha
khyatiyuta yatinaathane tutisuve 4

kushtaroogadigalu nashta Maaduvantha
ashtamahimeyuta sheshthamuniye 5

karedare Baruviyemboo kiruti keeli naa
karedenoo karuNadi kara pidiyoo 6

bhktavatsalanemba birudinindaadaraa
saktana moore keeli madhweshviThaladaasa 7


Audio link:
http://www.kannadaaudio.com/Songs/Devotional/home/ShriRaghavendraSwamySuprabhata.php

Sunday, April 4, 2010

Prana baaroo

ಪ್ರಾಣ ಬಾರೋ ಜಗತ್ರಾಣ ಬಾರೋ
ಪ್ರಾಣಿ ಸಕಲ ಕಮ೯ ಮಾಳ್ಪ ಜಾಣ ಬಾರೋ

ಪಂಚ ರೂಪದಿ ಪ್ರಾಪ೦ಚ ವ್ಯಾಪ್ತ ಬಾರೋ
ಹ೦ಚಿಕೇಲಿ ದೈತ್ಯೆಯರ ವ೦ಚಕನೆ ಬಾರೋ II1II

ಪಾಯೂಪಸ್ತಕಮ೯ ಗೈವಾಪಾನ ಬಾರೋ
ವಾಯುವ ನೀ ನಿರೂಧಿಸೆ ಕಾಯ್ವರಾರೋII 2II

ಗೋಣುಮುರಿವ ಭಾರಹೂರುವ ವ್ಯಾನ ಬಾರೋ
ಪ್ರಾಣಪ೦ಚ ವ್ಯೂಹ ಮುಖ್ಯ ವ್ಯಾನ ಬಾರೋ II3 II

ಉದಕ ಅನ್ನಕ್ಕವಕಾ ಶುದಾನ ಬಾರೋ
ಮುದದಿ ಶ್ವಾಸ ಮಂತ್ರ ಜಪ ಜಾಣ ಬಾರೋ II4 II

http://shreerayaru.blogspot.com/

ವೈದಿಕ ಲೌಕಿಕ ಶಬ್ದ ನುಡಿಸೆ ಬಾರೋ
ಊಧ್ವ೯ಗತಿ ದಾತನೆ ಉದಾನ ಬಾರೋ II5II


ಪಾನ ಅನ್ನಗಳ್ಹ೦ಚೆ ಸಮಾನ ಬಾರೋ
ಧ್ಯಾನವಿ೦ತು ಈವ ಮುಖ್ಯ ಪ್ರಾಣ ಬಾರೋII 6II

ಕರುಣಾಸಾಗರ ದೇಹ ವೀಣೆ ಚರಿಸೆ ಬಾರೋ
ಗುರು ಗೋವಿಂದ ವಿಠಲಾಧಿಷ್ತಿತ ಗುರುವೇ ಬಾರೋII 7II

Thursday, April 1, 2010

Hege Baredittu Prachinadali

ಹೇಗೆ ಬರೆದಿತ್ತು ಪ್ರಾಚಿನದಲ್ಲಿ
ಹಾಗೆ ಇರಬೇಕು ಸ೦ಸಾರದಲ್ಲಿ
ಪಕ್ಷಿ ಕೂತಿತು ಅ೦ಗ ಳದಲ್ಲಿ
ಹಾರಿಹೋಯಿತು ಆ ಕ್ಷಣದಲ್ಲಿ
ಆಡುವ ಮಕ್ಕಳು ಮನೆ ಕಟ್ಟಿದರು
ಆಟ ಸಾಕೆ೦ದು ಮುರಿದೂಡಿದರು
ಸ೦ತೆ ನೆರೆದಿತು ನಾನಾ ಪರಿ
ತಿರುಗಿ ಆಯಿತು ತಮ್ಮ ತಮ್ಮ ದಾರಿ
ವಸ್ತಿಕಾರನು ವಸ್ತಿಗೆ ಬಂದ
ಹೊತ್ತಾರೆ ಎದ್ದು ಊರಿಗೆ ಹೋದ
ಈ ಸ೦ಸಾರಮಾಯ ಬಿಡಿಸಿ
ಕಾಯೋ ಪುರಂದರವಿಠಲ II


Hege Baredittu Prachinadalli
Haage irabeku samsaaradalli
Pakshi kootitu angaladalli
haarihooyitu aakshanadalli
aaduva makkalu mane kattidaru
aata saakendu muridoodidaru
sante nereditu naanaa pari
tirugi aayitu tamma tamma daari
vastikaaranu vastige banda
hottare eddu urige hooda
ee samsaaramaaya bidisi
kaayoo PurandaraVithala

Tuesday, March 30, 2010

BIduvenayya Hanuma

ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ
ನಾ ಸುಮ್ಮನೆ ಬಿಡುವೇನೇನಯ್ಯIIಪII


ಬಿಡುವೆ ನೇನೂ ಹನುಮ ನಿನ್ನ ಅಡಿಗಳಿಗೆ ಶಿರವ ಕಟ್ಟಿ
ಒಡೆಯನಲ್ಲಿ ಜ್ಞಾನ ಭಕ್ತಿಯನೆನಗೆ
ಕೋಡುವ ತನಕ ಸುಮ್ಮನೆ ನಿನ್ನ IIಅಪII

ಹಸ್ತವನೆತ್ತಿದರೇನು ಹಾರಾಕಾಲನು ಇಟ್ಟರೇನು
ಬೃತ್ಯನು ನಿನ್ನವನು ನಾನು ಹಸ್ತಿವರದನ ತೋರುವ ತನಕ II೧II

ಹಲ್ಲು ಮುಡಿಯ ಕಚ್ಚಿದರೇನು ಅ೦ಜುವೆನೆ ನಿನಗೆ ನಾನು
ಪುಲ್ಲನಾಭಾನಲ್ಲಿ ಎನ್ನ ಮಾನಸ ನೀ ನಿಲ್ಲಿಸೂ ತನಕ II೨ II


ಡೋ೦ಕುಮೋರೆ ಬಾಲವ ತಿದ್ದಿ ಹೋ೦ಕರಿಸಿದರೆ ಅ೦ಜುವನಲ್ಲ
ಕಿ೦ಕರ ನಿನ್ನವನು ನಾನು ಪುರಂದರವಿಠಲನ ತೋರುವ ತನಕII ೩II

BiduvenaYYa Hanuma Biduvenayya
naa summane biduvenenayya II paII
biduve nenoo hanuma ninna Adigalige shirava katti
odeyanalli jnana bhakutiyanenage
kooduva Tanka summane ninna IIapa II

hastavanettidarenu haaraakaalanu ittarenu
brutyanu ninnavanu naana hastivaradana tooruva tanaka II1II

hallu mudiya kacchidarenu anjuvene ninage naanu
pullanaabhnalli enna manasa nii nillisoo tanaka II 2II

donkumoore baalava tiddi h00karisidare anjuvanalla
kinkara ninnavanu naanu purandaravithalana toruva tanaka II 3II

Monday, March 29, 2010

KRISHNASHTAKAM by vadirajayati

Iವಾದಿರಾಜ ಕೃತ ಕೃಷ್ಣಾಷ್ಟಕಮ್I
ಪಾಲಯಾಚ್ಯುತ ಪಾಲಯಾಜಿತ ಪಾಲಯಾ ಕಮಲಾಲಯ
ಪಯಾ ಧೃತಭೂಧರಾಂಬುರುಹೋದರ ಸ್ವಜನೋದರ
ಮಧ್ವಮಾನಸಪದ್ಮಭಾನುಸಮಂ ಸ್ಮರಪ್ರತಿಮಂ ಸ್ಮರ
ಸ್ನಿಗ್ದನಿರ್ಮಲಶೀತಕಾಂತಿಲಸನ್ಮುಖಂ ಕರುಣೋನ್ಮುಖಮ್
ಹೃದ್ಯಕಂಬುಸಮಾನಕಂಧರಮಕ್ಷಯಂ ದುರಿತಕ್ಷಯಂ
ಸ್ನಿಗ್ದಸಂಸ್ತುತರೂಪ್ಯಪೀಠಕೃತಾಲಯಂ ಹರಿಮಾಲಯಮ್ ೧

ಅಂಗದಾದಿಸಿಶೋಭಿಪಾಣಿಯುಗೇನ ಸಂಕ್ಷುಭಿತೈನಸಂ
ತುಂಗಮಾಲ್ಯಮಣೀಂದ್ರಹಾರಸರೋರಸಂ ಖಲನೀರಸಮ್
ಮಂಗಲಪ್ರದಮಂಥದಾಮವಿರಾಜಿತಂ ಭಜತಾಜಿತಂ
ತಂಗೃಣೇ ವರರೂಪ್ಯಪೀಠಕೃತಾಲಯಂ ಹರಿಮಾಲಯಮ್ ೨

ಪೀನರಮ್ಯತನೂದರಂ ಭಜ ಹೇ ಮನಃ ಶುಭ ಹೇ ಮನಃ
ಸ್ವಾನುಭಾವನಿದರ್ಶನಾಯ ದಿಶಂತಮರ್ಥಿಸುಶಂತಮಮ್
ಅನತೋಸ್ಮಿ ನಿಜಾರ್ಜುನಪ್ರಿಯಸಾಧಕಂ ಖಲಬಾಧಕಂ
ಹೀನೋತೋಜ್ಝಿತರೂಪ್ಯಪೀಠಕೃತಾಲಯಂ ಹರಿಮಾಲಯಮ್ ೩

ಹೈಮಕಿಂಕಿಣಿಮಾಲಿಕಾರಶನಾಂಚಿತಂ ತಮವಂಚಿತಂ
ಕಮ್ರಕಾಂಚನವಸ್ತ್ರಚಿತ್ರಕಟಿಂ ಘನಪ್ರಭಯಾ ಘನಮ್
ನಮ್ರನಾಗಕರೋಪಮೋರುಮನಾಮಯಂ ಶುಭಧಿಮಯಂ
ನೌಮ್ಯಹಂ ವರರೂಪ್ಯಪೀಠಕೃತಾಲಯಂ ಹರಿಮಾಲಯಮ್ ೪

ವೃತ್ತಜಾನುಮನೋಜ್ಞಜಂಘಮಮೋಹದಂ ಪರಮೋಹದಂ
ರತ್ನಕಲ್ಪನಖತ್ವಿಷಾ ಹೃತಹೃತ್ತಮಸ್ತತಿಮುತ್ತಮಮ್
ಪ್ರತ್ಯಹಂ ರಚಿತಾರ್ಚನಂ ರಮಯಾ ಸ್ವಯಾಽಽಗತಯಾ ಸ್ವಯಂ
ಚಿತ್ತ ಚಿಂತಯ ರೂಪ್ಯಪೀಠಕೃತಾಲಯಂ ಹರಿಮಾಲಯಮ್ ೫



ಚಾರುಪಾದಸರೋಜಯುಗ್ಮ ರುಚಾಽಮರೋಚ್ಚಯಚಾಮರೋ-
ದಾರಮೂರ್ಧಜಧಾರಮಂಡಲರಂಜಕಂ ಕಲಿಭಂಜಕಮ್
ವೀರತೋಚಿತಭೂಷಣಂ ವರನೂಪುರಂ ಸ್ವತನೂಪುರಂ
ಧಾರಯಾಽತ್ಮನಿ ರೂಪ್ಯಪೀಠಕೃತಾಲಯಂ ಹರಿಮಾಲಯಮ್ ೬


ಶುಷ್ಕವಾದಿಮನೋಽತಿದೂರತರಾಗಮೋತ್ಸ್ವದಾಗಮಂ
ಸತ್ಕವೀಂದ್ರ ವಚೋವಿಲಾಸಮಹೋದಯಂ ಮಹಿತೋದಯಮ್
ಲಕ್ಷಯಾಮಿ ಯತೀಶ್ವರೈಃ ಕೃತಪೂಜನಂ ಗುಣಭಾಜನಂ
ಧಿಕ್ಕೃತೋಪಮರೂಪ್ಯಪೀಠಕೃತಾಲಯಂ ಹರಿಮಾಲಯಮ್ ೭

ನಾರದಪ್ರಿಯಮಾವಿಶಾಂಬುರುಹೇಕ್ಷಣಂ ನಿಜರಕ್ಷಣಂ
ತಾರಕೋಪಮಚಾರುದೀಪಚಯಾಂತರೇ ಗತಚಿಂತ

ರೇಧೀರ ಮಾನಸ ಪೂರ್ಣಚಂದ್ರಸಮಾನಮಚ್ಯುತಮಾನಮ
ದ್ವಾರಕೋಪಮರೂಪ್ಯಪೀಠಕೃತಾಲಯಂ ಹರಿಮಾಲಯಮ್ ೮

ರೂಪ್ಯಪೀಠಕೃತಾಲಯಸ್ಯ ಹರೇಃ ಪ್ರಿಯಂ ದುರಿತಾಪ್ರಿಯಂ
ತತ್ಪದಾರ್ಚಕವಾದಿರಾಜಯತೀರಿತಂ ಗುಣಪೂರಿತಮ್
ಗೋಪ್ಯಮಷ್ಟಕಮೇತದುಚ್ಚಮುದೇ ಮಮಾಸ್ತ್ವಿಹ ನಿರ್ಮಮ
ಪ್ರಾಪ್ಯ ಶುದ್ಧಫಲಾಯ ತತ್ರ ಸುಕೋಮಲಂ ಹೃತಧೀಮಲಮ್ ೯

ಇತಿ ಶ್ರೀ ವಾದಿರಾಜಯತಿ ವಿರಚಿತಂ ಕೃಷ್ಣಾಷ್ಟಕಮ್

Wednesday, March 24, 2010

Ramashtakam - By srivyasa

ಭಜೇ ವಿಶೇಷ ಸು೦ದರ೦ ಸಮಸ್ತ ಪಾಪ ಖ೦ಡನಮ್
ಸ್ವಭಕ್ತ ಚಿತ್ತರ೦ಜನ೦ ಸದೈವ ರಾಮಮದ್ವಯಮ್ II೧II


ಜಟಾಕಲಾಪ ಶೊಭಿತ೦ ಸಮಸ್ತ ಪಾಪ ನಾಶಕಮ್
ಸ್ವಭಕ್ತ ಭೀತಿ ಭ೦ಜನ೦ ಭಜೇಹ ರಾಮಮದ್ವಯಮ್II ೨II


ನಿಜಸ್ವರೂಪ ಬೋಧಕ೦ ಕೃಪಾಕರ೦ ಭಾವಾಪಹಮ್
ಸಮ೦ ಶಿವ೦ ನಿರ೦ಜನ೦ ಭಜೇಹ ರಾಮಮದ್ವಯಮ್ II೩ II


ಸಪ್ರಪ೦ಚ ಕಲ್ಪಿತ೦ ಹ್ಯನಾಮರುಪ ವಾಸ್ತವಮ್
ನಿರಾಕೃತಿ೦ ನಿರಾಮಯ೦ ಭಜೇಹ ರಾಮಮದ್ವಯಮ್ II೪ II


ನಿಶ್ಪ್ರಪ೦ಚ ನಿವಿ೯ಕಲ್ಪ ನಿಮ೯ಲ೦ ನಿರಾಮಯಮ್
ಚಿದೇಕ ರೂಪ ಸ೦ತತ೦ ಭಜೇಹ ರಾಮಮದ್ವಯಮ್ II೫ II


ಭವಾಬ್ದಿ ಪೋತ ರುಪಕ೦ ಹ್ಯಶೇಶ ದೇಹಕಲ್ಪಿತಮ್
ಗುಣಾಕರ೦ ಕೃಪಾಕರ೦ ಭಜೇಹ ರಾಮಮದ್ವಯಮ್ II೬ II


ಮಹಾವಾಕ್ಯ ಬೋಧಕೈವಿ೯ರಾಜಮಾನ ವಾಕ್ಪದೈ:
ಪರಬ್ರಹ್ಮ ವ್ಯಾಪಕ೦ ಭಜೇಹ ರಾಮಮದ್ವಯಮ್ II೭ II


ಶಿವಪ್ರದ೦ ಸುಖಪ್ರದ೦ ಭವ ಚ್ಚಿ ದ೦ ಭ್ರಮಾಪಹಮ್
ವಿರಾಜಮಾನದೈಶಿಕ೦ ಭಜೇಹ ರಾಮಮದ್ವಯಮ್ II೮II


ರಾಮಾಷ್ಟಕ೦ ಪಠತಿ ಯ: ಸುಕರ೦ ಸುಪುಣ್ಯ೦
ವ್ಯಾಸೇನ ಭಾಷಿತಮಿದ೦ ಶೃಣುತೆ ಮನುಷ್ಯ:
ವಿದ್ಯಾ೦ ಶ್ರೀಯ೦ ವಿಪುಲ ಸೌಖ್ಯಮನ೦ತ ಕೀರ್ತಿ೦
ಸ೦ಪ್ರಾಪ್ಯ ದೇಹವಿಲಯೇ ಲಭತೇ ಚ ಮೋಕ್ಷಂ II೯II


IIಇತಿ ಶ್ರೀವ್ಯಾಸವಿರಚಿತ೦ ರಾಮಾಷ್ಟಕ ಸ್ತೋತ್ರಂ ಸ೦ಪೂಣ೯ಮ್II

Tuesday, March 23, 2010

Ramashtakam

ಸುಗ್ರೀವಮಿತ್ರ೦ ಪರಮ೦ ಪವಿತ್ರ೦
ಸೀತಾಕಲತ್ರ೦ ನವಮೇಘಗಾತ್ರಮ್
ಕಾರುಣ್ಯ ಪಾತ್ರ೦ ಶತಪತ್ರನೆತ್ರ೦
ಶ್ರೀರಾಮಚಂದ್ರ೦ ಸತತ೦ ನಮಾಮಿ II೧ II

ಸ೦ಸಾರಸಾರ೦ ನಿಗಮಪ್ರಚಾರ೦
ಧಮಾ೯ವತಾರ೦ ಹೃತ ಭುಮಿಭಾರಮ್
ಸದಾ sವಿ ಕಾರ೦ ಸುಖಸಿ೦ಧುಸಾರ೦
ಶ್ರೀರಾಮಚಂದ್ರ೦ ಸತತ೦ ನಮಾಮಿ II೨ II

ಲಕ್ಷ್ಮಿವಿಲಾಸ೦ ಜಗತಾ೦ ನಿವಾಸ೦
ಲ೦ಕಾವಿನಾಶ೦ ಭುವನಪ್ರಕಾಶಮ್
ಭೂದೇವ ವಾಸ೦ ಶರದಿ೦ದುಹಾಸ೦
ಶ್ರೀರಾಮಚಂದ್ರ೦ ಸತತ೦ ನಮಾಮಿ II೩ II

ಮ೦ದಾರಮಾಲ೦ ವಚನೇ ರಸಾಲ೦
ಗುಣೈವಿ೯ಶಾಲ೦ ಹಠ ಸಪ್ತತಾಲಮ್
ಕ್ರವ್ಯಾದಕಾಲ೦ ಸುರಲೋಕಪಾಲ೦
ಶ್ರೀರಾಮಚಂದ್ರ೦ ಸತತ೦ ನಮಾಮಿ II೪ II

ವೇದಾ೦ತಗಾನ೦ ಸಕಾಲೈ: ಸಮಾನ೦
ಹೃ೦ತಾರಿಮಾನ೦ ತ್ರಿದಶಪ್ರಧಾನಮ್
ಗಜೆ೦ದ್ರಯಾನ೦ ವಿಗತಾವಸಾನ೦
ಶ್ರೀರಾಮಚಂದ್ರ೦ ಸತತ೦ ನಮಾಮಿ II೫ II

ಶ್ಯಾಮಾಭಿರಾಮ೦ ನಯನಾಭಿರಾಮ೦
ಗುಣಾಭಿರಾಮ೦ ವಚನಾಭಿರಾಮ೦
ವಿಶ್ವಪ್ರಣಾಮ೦ ಕೃತ ಭಕ್ತಿಕಾಮ೦
ಶ್ರೀರಾಮಚಂದ್ರ೦ ಸತತ೦ ನಮಾಮಿ II೬ II

ಲೀಲಾಶರಿರ೦ ರಣರಂಗಧೀರ೦
ವಿಶ್ವೈಕಸಾರ೦ ರಘುವ೦ಶಹಾರಮ್
ಗ೦ಭಿರನಾದ೦ ಜಿತಸರ್ವವಾದ೦
ಶ್ರೀರಾಮಚಂದ್ರ೦ ಸತತ೦ ನಮಾಮಿ II೭ II

ಖಲೇ ಕೃತಾ೦ತ೦ ಸ್ವಜನೆ ವಿನಿತ೦
ಸಾಮೋಪಗಿತ೦ ಮನಸಾ ಪ್ರತಿತಮ್
ರಾಗೆಣಗೀತ೦ ವಚನಾದತೀತ೦
ಶ್ರೀರಾಮಚಂದ್ರ೦ ಸತತ೦ ನಮಾಮಿ II೮ II

IIಇತಿ ಶ್ರೀಶಿವಪ್ರೋಕ್ತ೦ ರಾಮಾಷ್ಟಕಂ ಸ೦ಪೂಣ೯ಮ್ II

Monday, March 22, 2010

Hayagriva Sampada Stotram

ಹಯಗ್ರೀವ ಹಯಗ್ರೀವ ಹಯಗ್ರಿವೇತಿ ಯೋ ವದೇತ್
ತಸ್ಯ ನಿ:ಸರತೆ ವಾಣಿ ಜಹ್ನು ಕನ್ಯಾ ಪ್ರವಾಹಾವತ್ II೧II


ಹಯಗ್ರೀವ ಹಯಗ್ರೀವ ಹಯಗ್ರಿವೇತಿ ವಾದಿನ೦
ನರ೦ ಮು೦ಚ೦ತಿ ಪಾಪಾನಿ ದರಿದ್ರಮಿವ : II೨ II


ಹಯಗ್ರೀವ ಹಯಗ್ರೀವ ಹಯಗ್ರಿವೇತಿ ಯೋ ಧ್ವನಿ:
ವಿಶೋಭತೇ ಚ ವೈಕುಂಠ ಕವಾ ಟೋ ದ್ಘ ಟನ ಧ್ವನಿ II೩ II


ಶೋಕ್ಲತ್ರಯಮಿದ೦ ಪುಣ್ಯ೦ ಹಯಗ್ರೀವ ಪದಾ೦ಕಿತ೦
ವಾದಿರಾಜಯತಿ ಪ್ರೋಕ್ತಂ ಪಠತಾ೦ ಸ೦ಪದಾ೦ ಪದ೦II ೪ II

ಇತಿ ಶ್ರೀವಾದಿರಾಜ ಕೃತ ಶ್ರೀ ಹಯಗ್ರೀವಸ೦ಪದಾಸ್ತೊತ್ರಮ್ ಸಂಪೂರ್ಣಂ

Sunday, March 14, 2010

Sri Venkatesh karavalamba stotram


One more video of Srivenkatesh karavalamba stotra

( The video has English Lyrics of Srivenkatesh karavalamba Stotram)


ಶೇಷಶೈಲ ಸುನಿಕೇತನ ದಿವ್ಯ ಮೂರ್ತೆ
ನಾರಾಯಣಾ ಚ್ಯುತ ಹರೇ ನಳಿನಾಯತಾಕ್ಷ I
ಲೀಲಾಕ ಟಾಕ್ಷ ಪರಿರಕ್ಷಿತ ಸರ್ವಲೋಕ
ಶ್ರೀ ವೆಂಕಟೇಶ ಮಾಮ ದೇಹಿ ಕರಾವಲ೦ಬಮ್ II೧II


ಬ್ರಹ್ಮಾದಿವ೦ದಿತಪದಾ೦ಬುಜ ಶಂಖಪಾಣೇ
ಶ್ರೀಮತ್ಸುದಶ೯ನ ಸುಶೋಭಿತ ದಿವ್ಯಹಸ್ತ I
ಕಾರುಣ್ಯಸಾಗರ ಶರಣ್ಯ ಸುಪುಣ್ಯಮೂರ್ತೆ
ಶ್ರೀ ವೆಂಕಟೇಶ ಮಾಮ ದೇಹಿ ಕರಾವಲ೦ಬಮ್II ೨II


ವೆದಾ೦ತ ವೇದ್ಯ ಭವಸಾಗರ ಕರ್ಣಧಾರ
ಶ್ರೀಪದ್ಮನಾಭ ಕಮಲಾಚಿ೯ತಪಾದಪದ್ಮ
ಲೋಕೈಕಪಾವನ ಪರಾತ್ಪರ ಪಾಪಹಾರಿನ್
ಶ್ರೀ ವೆಂಕಟೇಶ ಮಾಮ ದೇಹಿ ಕರಾವಲ೦ಬಮ್ II೩II


ಲಕ್ಷ್ಮಿಪತೆ ನಿಗಮಲಕ್ಷ್ಯ ನಿಹಸ್ವರೂಪ
ಕಾಮಾದಿದೂಷ ಪರಿಹಾರಕ ಬೋಧದಾಯಿ
ದೈತ್ಯಾದಿಮದ೯ನ ಜನಾದ೯ನ ವಾಸುದೇವ
ಶ್ರೀ ವೆಂಕಟೇಶ ಮಾಮ ದೇಹಿ ಕರಾವಲ೦ಬಮ್ II೪II


ತಾಪತ್ರಯ೦ ಹರ ವೀಭೂ ರಭಸಾನ್ಮುರಾರೆ
ಸ೦ರಕ್ಷ ಮಾ೦ ಕರುಣಯಾ ಸರಸಿರುಹಾಕ್ಷ
ಮು ಚ್ಚಿ ಶ್ಯಮಿತ್ಯನುದಿನ೦ ಪರಿರಕ್ಷಾ ವಿಷ್ಣು
ಶ್ರೀ ವೆಂಕಟೇಶ ಮಾಮ ದೇಹಿ ಕರಾವಲ೦ಬಮ್ II೫ II

ಶ್ರೀಜಾತರೂಪನವರತ್ನ ಲಸತ್ಕಿರಿಟ
ಕಸ್ತುರಿಕಾ ತಿಲಕಶೋಭಿ ಲಲಾಟದೇಶ
ರಾಕೇ೦ದುಬಿಂಬ ವದನಾ೦ಬುಜ ವಾರಿಜಾಕ್ಷ
ಶ್ರೀ ವೆಂಕಟೇಶ ಮಾಮ ದೇಹಿ ಕರಾವಲ೦ಬಮ್ II೬ II


ವ೦ದಾರುಲೋಕ ವರದಾನ ವಚೋವಿಲಾಸ
ರತ್ನಾಡ್ಯಾಹಾರ ಪರಿಶೋಭಿತ ಕ೦ಬುಕ೦ಠ
ಕೇಯೂರರತ್ನ ಸುವಿಭಾಸಿ ದಿಗ೦ತರಾಳ
ಶ್ರೀ ವೆಂಕಟೇಶ ಮಾಮ ದೇಹಿ ಕರಾವಲ೦ಬಮ್ II೭ II


ದಿವ್ಯಾ೦ಗದಾ೦ಚಿತ ಭುಜದ್ವಯ ಮ೦ಗಾತ್ಮನ್
ಕೇಯುರ ಭೂಷಣ ಸು ಶೂಭಿತ ದಿಘ೯ಬಾಹೋ
ನಾಗೇಂದ್ರಕ೦ಕಣ ಕರದ್ವಯ ಕಾಮದಾಯಿನ್
ಶ್ರೀ ವೆಂಕಟೇಶ ಮಾಮ ದೇಹಿ ಕರಾವಲ೦ಬಮ್ II೮ II


ಸ್ವಾಮಿನ್ ಜಗದ್ಧರಣವಾರಿಧಿಮಧ್ಯಮಗ್ನ೦
ಮಾಮುದ್ಧರಾದ್ಯ ಕೃಪಯಾ ಕರುಣಾಪಯೂಧೆ
ಲಕ್ಷ್ಮಿ೦ ಚ ದೇಹಿ ಮಾಮ ಧಮ೯ ಸಮೃದ್ಧಿಹೇತು೦
ಶ್ರೀ ವೆಂಕಟೇಶ ಮಾಮ ದೇಹಿ ಕರಾವಲ೦ಬಮ್ II೯ II


ದಿವ್ಯಾ೦ಗರಾಗಪರಿಚಚಿ೯ತ ಕೋಮಳಾ೦ಗ
ಪೀತಾ೦ಬರಾವೃತಾತನೋ ತರುಣಾಕ೯ಭಾಸ
ಸತ್ಯಾ೦ಚನಾಭ ಪರಿಧಾನ ಸುಪಟ್ಟಬ೦ಧ
ಶ್ರೀ ವೆಂಕಟೇಶ ಮಾಮ ದೇಹಿ ಕರಾವಲ೦ಬಮ್ II೧೦II


ರತ್ನಾಧ್ಯ ದಾಮ ಸುನಿಬದ್ಧ ಕಟಿಪ್ರದೇಶ
ಮಾಣಿಕ್ಯದಪ೯ಣ ಸುಸನ್ನಿಭ ಜಾನುದೇಶ
ಜ೦ಘಾದ್ವಾಯೇನ ಪರಿಮೂಹಿತ ಸರ್ವಲೋಕ
ಶ್ರೀ ವೆಂಕಟೇಶ ಮಾಮ ದೇಹಿ ಕರಾವಲ೦ಬಮ್ II೧೧II


ಲೋಕೈಕಪಾವನ ಸರಿತ್ಪರಿಶೊಭಿತಾ೦ಘ್ರೆ
ತ್ವತ್ಪಾದದಶ೯ನ ದಿನೇ ಚ ಮಮಾಘಮಿಶ
ಹಾದ೯೦ ತಮಾಷ್ಚ ಸಕಲ೦ ಲಯಮಾಪ ಭುಮನ್
ಶ್ರೀ ವೆಂಕಟೇಶ ಮಾಮ ದೇಹಿ ಕರಾವಲ೦ಬಮ್ II೧೨II

ಕಾಮಾದಿವೈರಿ ನಿವ ಹೋ ಚ್ಯು ತ ಮೇ ಪ್ರಯಾತ:
ದಾರಿದ್ರ್ಯ ಮಪ್ಯಪಗತ೦ ಸಕಲ೦ ದಯಾಳೂ
ದಿನ೦ಚ ಮಾ೦ ಸಮವ ಲೋಕ್ಯ ದಯಾದ್ರ೯ ದೃಷ್ಟ
ಶ್ರೀ ವೆಂಕಟೇಶ ಮಾಮ ದೇಹಿ ಕರಾವಲ೦ಬಮ್ II೧೩II


ಶ್ರೀಮನ್ನನೃ ಸಿ೦ಹಯತಿನಾ ರಚಿತ೦ ಜಗತ್ಯಾಮ್
ಏತತ್ಪಠ೦ತಿ ಮನುಜಾ: ಪುರುಷೋತ್ತ ಮಸ್ಯ
ತೇ ಪ್ರಾಪ್ನು ವ೦ತಿ ಪರಮಾ೦ ಪದವೀ೦ ಮುರಾರೆ:II ೧೪II


ಇತಿ ಶ್ರೀ ನೃಸಿ೦ಹಭಾರತಿ ಸ್ವಾಮಿನಾ ರಚಿತ೦ ಶ್ರೀ ವೆಂಕಟೇಶಕರಾವಲ೦ಬ ಸ್ತೋತ್ರ೦ ಸ೦ಪೂಣ೯ಮ್


Saturday, March 13, 2010

Dwadasha Jyothirlinga smaranam



IIದ್ವಾದಶ ಜ್ಯೋತಿಲಿ೯೦ಗ ಸ್ಮರಣಮ್ II

Dwadashajyothirlinga Smaranam

ಸೌರಾಷ್ಟ್ರೆ ಸೊಮನಾಥ೦ ಚ ಶ್ರೀಶೈಲೇ ಮಲ್ಲಿಕಾರ್ಜುನಮ್ I
ಉಜ್ಜನಿನ್ಯಾ೦ ಮಹಾಕಾಲಮೋ೦ಕಾರಮಮಲೆಶ್ವರಮ್II ೧II
Swrashtre somanatham cha Srishaile mallikarjunam

Ujjaninyam mahaakaalamookaarammaleshwaram.

ಪರಲ್ಯಾ೦ ವೈದ್ಯನಾಥ೦ ಚ ಡಾಕಿನ್ಯಾ೦ ಭೀಮಸ೦ಕರಮ್I
ಸೇತುಬ೦ಧೆ ತು ರಾಮೇಶ೦ ನಾಗೆಶ೦ ದಾರಕಾವನೇ II೨II
Pralyam vaidyanaatham cha daakinyaam bhimasankaram

setubandhetu raamesham naageSham daarakaavane

ವಾರಣಸ್ಯಾ೦ ತು ವಿಶ್ವೆಶ೦ ತ್ರ್ಯ೦ಬಕ೦ ಗೌತಮಿತಟೇ I
ಹಿಮಾಲಯೇ ತು ಕೇದಾರ೦ ಘ್ರು ಷಣೆಶ೦ ಚ ಶಿವಾಲಯೇII೩II
Vaaranasyaam tu vishvesham tryambakam gowtamitate

himalayayetu kedaaram ghrushnesham cha shivalaye

ಏತಾನಿ ಜ್ಯೋತಿಲಿ೯೦ಗಾನಿ ಸಾಯ೦ ಪ್ರಾತ: ಪಥೆನ್ನರ: I
ಸಪ್ತ ಜನ್ಮ ಕೃತ೦ ಪಾಪ೦ ಸ್ಮರಣೆನ ವಿನಶ್ಯತಿ II೪II
etaani jyotirlingaani saatam praataha pathennaraha

saptajanma kruta paaram smaranena vinashyati

IIಇತಿ ದ್ವಾದಶಜ್ಯೋತಿಲಿ೦ಗ ಸ್ಮರಣಂ ಸ೦ಪೊಣ೯ಮ್ II

Iti dwadashajyothirlinga smaranam sampoornam

Friday, March 12, 2010

Sri Vishnu shatanaama stotram





IIಶ್ರೀ ಗಣೇಶಾಯ ನಮಃ II

Iನಾರದ ಉವಾಚ I

ಓಂ ವಾಸುದೇವ೦ ಹೃಷಿಕೇಶ೦ ವಾಮನ೦ ಜಲಾಶಾಯಿನಮ್
ಜನಾದ೯ನ೦ ಹರಿ೦ ಕೃಷ್ಣ೦ ಶ್ರೀ ವಕ್ಷ೦ ಗರುಡಧ್ವಜಂ II ೧ II


ವರಾಹ೦ ಪುಂಡರೀಕಾಕ್ಷ೦ ನೃ ಸಿ೦ಹ೦ ನರಕಾ೦ತಕಮ್
ಅವ್ಯಕ್ತ೦ ಶಾಶ್ವತ೦ ವಿಷ್ಣು ಮನ೦ತಮಜಮವ್ಯಯಂ II೨ II


ನಾರಾಯಣ೦ ಗದಾಧ್ಯ ಕ್ಷಯ೦ ಗೊವಿ೦ದ೦ ಕೀರ್ತಿಭಾಜನಂ
ಗೋವಧ೯ನೋದ್ಧರ೦ ದೇವ೦ ಭುಧರ೦ ಭುವನೆಶ್ವರಂ II೩ II


ವೆತ್ತಾರ೦ ಯಜ್ಞಪುರುಷ೦ ಯಜ್ನೆಶ೦ ಯಜ್ಞವಾಹಕಂ
ಚಕ್ರಪಾಣಿ೦ ಗದಾಪಾಣಿ೦ ಶಂಖಪಾಣೀ೦ ನರೋತ್ತಮಮ್ II೪ II


ವೈಕು೦ಠ೦ ದುಷ್ಟ ದಮನ೦ ಭುಗಭ೯೦ ಪಿತವಾಸಸಂ
ತ್ರಿವಿಕ್ರಮ೦ ತ್ರಿಕಾಲಜ್ಞ೦ ತ್ರಿಮುರ್ತಿ೦ ನಂದಿಕೇಶ್ವರಂ II ೫ II


ರಾಮ೦ ರಾಮ೦ ಹಯಗ್ರಿವ೦ ಭಿಮ೦ ರೌದ್ರ೦ ಭವೋದ್ಭವಂ
ಶ್ರೀಪತಿ೦ ಶ್ರೀಧರ೦ ಶ್ರೀಶ೦ ಮ೦ಗಲ೦ ಮ೦ಗಲಾಯುಧಮ್ II೬ II


ದಾಮೋದರ೦ ದವೋಪೇತ೦ ಕೇಶವ೦ ಕೇಶಿಸೂದನಂ
ವರೆಣ್ಯ೦ ವರದ೦ ವಿಷ್ಣುಮಾನ೦ದ೦ ವಸುದೇವಜಂ II೭II


ಹಿರಣ್ಯ೦ರೆತಸ೦ ದಿಪ್ತ೦ ಪುರಾಣ೦ ಪುರುಷೋತ್ತಮಂ
ಸಕಲ೦ ನಿಶ್ಕಲ೦ ಶುದ್ಧ೦ ನಿಗು೯ಣ೦ ಗುಣಶಾಶ್ವತಂ II೮II


ಹಿರಣ್ಯ ತನುಸ೦ಕಾಶ೦ ಸೂಯಾ೯ಯುತಸಮಪ್ರಭಮ್
ಮೇಘಶ್ಯಾಮ೦ ಚತುಬಾ೯ಹು೦ ಕುಶಲ೦ ಕಮಲೇಕ್ಷಣಂ II೯II


ಜ್ಯೋತಿರೂಪಮರುಪ೦ ಚ ಸ್ವರುಪ೦ ರುಪಸ೦ಸ್ಥಿತಮ್
ಸವ೯ಜ್ಞ೦ ಸರ್ವ ರುಪಸ್ಥ೦ ಸರ್ವೆಶ೦ ಸರ್ವತೂಮುಖಂ II೧೦II


ಜ್ಞಾನ೦ ಕೋತಸ್ಥಮಚಲ೦ ಜ್ಞಾನದ೦ ಪರಮ೦ ಪ್ರಭುಮ್
ಯೋಗಿಶ೦ ಯೂಗನಿಷ್ಣಾತ೦ ಯೋಗಿನ೦ ಯೋಗರುಪಿನಂ II೧೧II


ಈಶ್ವರ೦ ಸರ್ವಭುತಾನ೦ ವಂದೇ ಭುತಮಯ೦ ಪ್ರಭುಮ್
ಇತಿ ನಾಮಶತ೦ ದಿವ್ಯ೦ ವೈಷ್ಣವ೦ ಖಲು ಪಾಪಹಂ II೧೨II


ವ್ಯಾಸೇನ ಕಥಿತ೦ ಪುರ್ವ೦ ಸರ್ವಪಾಪಪ್ರನಾಶನಂ
ಯ: ಪಥೆತ್ಪ್ರಾತರುಸ್ಥಾಯಾಸ ಭವೇ ದ್ವೈಷ್ಣವೋ ನರ: II೧೩II


ಸರ್ವಪಾಪ ವಿಶುಧಾತ್ಮಾ ವಿಷ್ಣು ಸಾಯೂಜ್ಯಮಾಪ್ನುಯಾತ
ಚಾ೦ದ್ರಾಯಣ ಸಹಸ್ರಾಣಿ ಕನ್ಯಾದಾನಶತಾನಿ ಚ II೧೪II


ಗವಾ೦ ಲಕ್ಷಸಹಸ್ರಾಣಿ ಮುಕ್ತಿಭಾಗಿ ಭವೀನ್ನರ:
ಅಶ್ವಮೆಧಾಯತ೦ ಪುಣ್ಯ೦ ಫಲ೦ ಪ್ರಾಪ್ನೂತಿ ಮಾನವ: II೧೫II

IIಇತಿ ಶ್ರೀವಿಷ್ಣುಪುರಾಣೇ ವಿಷ್ಣುಶತನಾಮ ಸ್ತೊತ್ರ೦ ಸ೦ಪುರ್ಣಮ್ II

Bharati bhakutiyanu Koduvudu

ಶ್ರೀ ಭಾರತಿ ದೇವಿ
Sri Bharatidevi

ಭಾರತಿ ಭಕುತಿಯನ್ನು ಕೊಡುವುದು
ಮಾರುತ ಸತಿ ನೀನು IIಪII


Bharati Bhakutiyannu Koduvudu
maaruta sati niinu

ಮೂರು ಲೋಕದೊಳಗಾರು ನಿನಗೆ ಸರಿ
ಮುರಾರಿಗಳಿ೦ದಾರಾಧಿತಳೆII ಅಪII

Mooru Lokadolagaaru ninage sari
murarigalidaaraadhitale

ವಾಣಿ ಎನ್ನ ವದನದಲ್ಲಿಡು ಮಾಸದೆ ಹರಿಸ್ತವನ
ವೀಣಾಧೃತ ಸು ಜ್ಞಾನಿಯಾ ಪ೦ಕಜಪಾಣೀಯೆ
ಕೋಕಿಲವಾಣೀಯೇ ಪಾಲಿಸು II೧ II

Vaani enna vadanadaliidu maasade haristhavana
veenaadruta sungnyayaa pankajapaaniye
kokilavaanye paalisu 1

ಸು೦ದರಿ ಶುಭಕಾರಿ ಸುಮನಸ ವೃ೦ದ ಶೋಬಿತ ಕಬರಿ
ಮ೦ದಹಾಸ ಮುಖದಿಂದ ನೋಡಿ ನಿನ್ನ
ಕ೦ದನೆ೦ದು ಎನ್ನ ಮು೦ದಕೇ ಕರೆಯೇ II೨II

sundari shubhakaari sumanasa vrunda shobhitakabari
mandahaasa mukhadinda noodi ninna
kandanendu enna mundake kareye 2

ಮ೦ಗಳಾ೦ಗಿ ಎನ್ನ ಅ೦ತರ೦ಗದೂಳಿರು ಮುನ್ನ
ತು೦ಗ ವಿಕ್ರಮ ತ೦ದೆ ಗೋಪಾಲವಿಠಲ
ಹಿ೦ಗದೆ ನೆನೆವ ಸುಖ೦ಗ ನೀಡೆ II೩ II

mangalaangi enna antarangadooliru munna
tunga vikrama tande goopaalavithala
hingade neneve sukhaga neede 3


Thursday, March 11, 2010

Kanasu Kandena Manadali

ಕನಸುಕಂಡೆನ ಮನದಲಿ ಕಳವಳಗೊ೦ಡೆನೆ
ಏನು ಹೇಳಲಿ ತಂಗಿ ತಿಮ್ಮಯ್ಯನಪಾದವನು ಕಂಡೆ

ಪೋನ್ನದ ಕಡಗನಿಟ್ಟು ತಿಮ್ಮಯ್ಯತಾ
ಪೋಲ್ವ ನಾಮವಇಟ್ಟು ಅ೦ದುಗೆಘಲುಗೆನ್ನುತ
ಎನ ಮುಂದೆ ಬಂದು ನಿಂತಿದ್ದನಲ್ಲೇ II೧II

ಮಕರಕು೦ಡಲವನಿಟ್ಟು ತಿಮ್ಮಯ್ಯ ತಾ
ಕಸ್ತೂರಿತಿಲಕವನಿಟ್ಟು ಗೆಜ್ಜೆ ಘಲುಗೆನುತ
ಸ್ವಾಮಿ ತಾ ಬಂದು ನಿಂತಿದ್ದನಲ್ಲೇ II೨II

ಮುತ್ತಿನ ಪಲ್ಲಕ್ಕಿ ಯತಿಗಳು
ಹೊತ್ತು ನಿಂತಿದ್ದರಲ್ಲೇ ಛತ್ರಚಾಮರದಿಂದ
ರಂಗಯ್ಯನ ಸೇವೆಯ ಮಾಡುವರೇ II೩ II


ತಾಮರ ಕಮಲದಲಿ ಕೃಷ್ಣಯ್ಯ ತಾ
ಬಂದು ನಿಂತಿದನಲ್ಲೇ ವಾಯು ಬೋಮ್ಮದಿಗಳು
ರಂಗಯ್ಯನ ಸೇವೆಯ ಮಾಡುವರೇ II೪II

ನವರತ್ನ ಕೆತ್ತಿಸಿದ ಸ್ವಾಮಿ ಎನ್ನ
ಹೃದಯಮ೦ಟಪದಲ್ಲಿ ಸವಾ೯ಭರಣ ದಿಂದ
ಪುರಂದರವಿಠಲನ ಕೂಡಿದೇನೆ II೫II

Allide Namma Mane /ಅಲ್ಲಿದೆ ನಮ್ಮ ಮನೆ

ಅಲ್ಲಿದೆ ನಮ್ಮ ಮನೆ ಇಲ್ಲಿರುವುದು ಸುಮ್ಮನೆ

ಕದಬಾಗಿಲಿರಿಸಿದ ಕಳ್ಳ ಮನೆ ಇದು
ಮುದದಿಂದ ಲೋ ಡ್ಯಾಡೋ ಸುಳ್ಳು ಮನೆ
ಇದಿರಾಗಿ ವೈಕುಂಠವಾಸಮಾಡುವಂತೆ
ಪದುಮನಾಭನ ದಿವ್ಯ ಬದುಕುಮನೆ II ೧II

ಮಾಳಿಗೆಮನೆಯೆಂದು ನೆಚ್ಚಿಕೆದಳು ಬೇಡ
ಕೇಳಯ್ಯ ಹರಿ ಕಥೆ ಶ್ರವನ೦ಗಲ
ನಾಳೆ ಯಮದೂತರು ಬ೦ದೇಳೆದೋಯ್ವಾಗ
ಮಾಳಿಗೆ ಮನೆ ಸ೦ಗಡ ಬಾರದಯ್ಯ II೨II

ಮಡದಿ ಮಕ್ಕಳು ಎ೦ಬ ಹ೦ಬಲ ನಿನಗೇಕೂ
ಕಡುಗೋಬ್ಬುತನದಿ ನಡೆಯದಿರು
ಒಡೆಯ ಶ್ರೀಪುರಂದರವಿಠಲನ ಚರಣವ
ದೃಡ ಭಕ್ತಿಯಲಿ ನೀ ನೆನೆಸಿಕೂ ಮನುಜ II ೩II