Thursday, June 4, 2009

Piiangoviya cheluva krishna/ಪಿಳ್ಳಂಗೋವಿಯ ಚೆಲುವ ಕೃಷ್ಣನ

ಪಿಳ್ಳಂಗೋವಿಯ ಚೆಲುವ ಕೃಷ್ಣನ
ಎಲ್ಲಿ ನೋಡಿದಿರಿ ರಂಗನ ಎಲ್ಲಿ ನೋಡಿದಿರಿII ಪII
ಎಲ್ಲಿ ನೋಡಿದರಲ್ಲಿ ತನಿಲ್ಲ ದಿಲ್ಲವೆಂದು ಬಲ್ಲ ಜಾಣರು IIಅ.ಪII

ನಂದಗೋಪನ ಮಂದಿರಗಳ ಸಂದುಗೊಂದಿನಲಿ
ಚಂದ ಚಂದದ ಗೋಪ ಬಾಲರ ವೃಂದ ವೃಂದದಲಿ
ಸುಂದರಾಂಗದ ಸುಂದರೀಯರ ಹಿಂದು ಮುಂದಿನಲಿ
ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿII೧ II

ಶ್ರೀ ಗುರುಕ್ತ ಸದಾ ಸುಮಂಗಳ ಯೋಗ ಯೋಗದಲಿ
ಅಗಮಾರ್ಥದೊಳಗೆ ಮಾಡುವ ಯಾಗ ಯಾಗದಲಿ
ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ
ಭಾಗವತರು ಸದಾ ಬಾಗಿ ಪಡುವ ರಾಗ ರಾಗದಲಿII೨II

ಈ ಚರಾಚರದೊಳಗೆ ಜನಂಗಳ ಆಚೆ ಈಚೆಯಲಿ
ಕೆಚರೇಂದ್ರನ ಸುತನ ರಥದ ಚೌಕ ಪೀಠದಲಿ
ನಾಚದೆ ಮಾಧವ ಎಂಬ ಭಕ್ತರ ವಾಚಕಂಗಳಲಿ
ವೀಚುಕೊಂಡದ ಪುರಂದರ ವಿಠಲನ ಲೋಚನಾಗ್ರದಲಿII೩II




Audio link:http://www.kannadaaudio.com/Songs/Devotional/SriVidyabhushana/DaasaraKritigalu/Pillangovia.ram

Anjikinyatakayya /ಅಂಜಿಕಿನ್ಯಾತಕಯ್ಯಾ

ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ
ಭಯವೂ ಇನ್ಯಾತಕಯ್ಯಾ IIಪII


ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ IIಅಪII

ಕನಸಿನ ಮನಸಿನಲಿ ಕಳವಳವಾದರೆ
ಹನುಮನ ನೆನೆದರೆ ಹಾರಿಹೋಗದೇ ಭೀತಿ II೧II

ರೋಮ ರೋಮಕೆ ಕೋಟಿ ಲಿಂಗವುದುರಿಸಿದ
ಭೀಮನ ನೆನೆದರೆ ಬಿಟ್ಟು ಹೋಗದೆ ಪಾಪ II೨ II

ಪುರಂದರ ವಿಠಲನ ಪಾದ ಪೂಜೆಯ ಮಾಳ್ಪ
ಗುರು ಮಧ್ವರಾಯರ ಸ್ಮರಣೆಮಾಡಿದ ಮೇಲೆ II೩II


Audio link:
http://www.kannadaaudio.com/Songs/Devotional/home/Anjikinyathakayya-Dr-M-Balamuralikrishna.php


In English:

Anjikinyatakayya sajjanarige
Bhayavu enyaatakayya
Sanjivarayara Smarane Madida mele

Kanasinali manasinali kalavalavaadare
Hanumana nenedare haarihoogade bhiti

Rooma Rooma Kooti Lingavudurisida
BHimana NEnedare bittu Hogade Paapa

Purandarevitthalana Paada poojeya Malpa
guruMadwarayara smaranemaadidameele