Wednesday, September 22, 2010

Jayaraaya Jayaraaya

( image source: google search)
This Beautiful song is written by Vadirajyatigalu On sriJayathirtha also know as teekacharya whose brindava is in Malkhed ( Gulbarga district,karnataka state, India.)To know more about teekacharya follow the link below:
http://en.wikipedia.org/wiki/Jayatirtha


ಜಯರಾಯ ಜಯರಾಯ IIಪII

ಜಯರಾಯ ನಿನ್ನ ದಯವುಳ್ಳ ಜನರಿಗೆ
ಜಯವಿತ್ತು ಜಗದೊಳು ಭಯಪರಿಹರಿಸುವ IIಅಪII

ಖುಲ್ಲರಾದ ಮಾಯ್ಗಾ ಳ ಹಲ್ಲು ಮುರಿದು
ವಲ್ಲಭ ಜಗಕೆ ಶ್ರೀನಲ್ಲನೆ೦ದರುಹಿದಿ II೧II

ಮಧ್ವರಾಯರ ಮತ ಶುದ್ಧಶರಧಿಯೊಳು
ಉದ್ಭವಿಸಿದ ಗುರು ಸಿದ್ದಾ೦ತಸ್ಥಾಪಕ II೨II

ಸಿರಿಹಯವದನನ ಚರಣಕಮಲವನು
ಭರದಿ ಭಜಸುವರ ದುರಿತಗಳ ಹರಿಸುವ II೩II

Tuesday, September 21, 2010

vijayarayara kavacha ( smarisi badukiro)

ಸ್ಮರಿಸಿ ಬದುಕಿರೋ ದಿವ್ಯ ಚರಣ ಕೆರಗಿರೋ
ದುರಿತ ತರಿದು ಪೂರೆವ ವಿಜಯಗುರುಳೆ೦ಬರ IIಪII


ದಾಸರಾಯನಾ ದಯವ ಸೂಸಿ ಪಡೆದನಾ
ದೋಷ ರಹಿತನಾ ಸಂತೋಷ ಭರಿತನಾ II೧II

ಜ್ಞಾನವ೦ತನಾ ಬಲು ನಿಧಾನಿಶಾ೦ತನಾ
ಮಾನ್ಯವ೦ತನಾ ಬಹುವ ದಾನ್ಯದಾ೦ತನಾ II೨II

ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷ ಸುರುಸುವ II೩II

ಮೋದ ಭರಿತನಾ ಪಂಚ ಭೇದವರಿತನಾ
ಸಾಧು ಚರಿತನಾ ಮನವಿಷಾದ ಮರೆತನಾ II೪II

ಇವರ ನಂಬಿದ ಜನಕೆ ಭವವಿದೆ೦ಬುದು
ಹವಣವಾಗದೋ ನಮ್ಮವರ ಮತವಿದು II೫II

ಪಾಪಕೋಟಿಯಾ ರಾಶಿ ಲೇಪವಾಗದೋ
ತಾಪಕಳೆವನೋ ಬಲು ದಯಾಪಯೋನಿಧಿ II೬II

ಕವನ ರೂಪದಿ ಹರಿಯಸ್ತವನ ಮಾಡಿದಾ
ಭುವನ ಬೇಡಿದ ಮಾಧವನ ನೋಡಿದಾ II೭II

ರಂಗನೆ೦ದರೆ ಭವವು ಹಿಂಗಿತೆ೦ದನ
ಮಂಗಳಾ೦ಗನಾ ಅಂತರಂಗವರಿತನ II೮II

ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ
ಸೂಸಿಪಡೆದನಾ ಉಲ್ಲಾಸತನದಲೀ II೯II

ಚಿಂತೆ ಬ್ಯಾಡಿರೋ ನಿಶ್ಚಿ೦ತರಾಗಿರೋ
ಶಾಂತ ಗುರುಗಳಾ ಪಾದವಾ೦ತು ನಂಬಿರೋ II೧೦II

ಖೇದವಾಗದೋ ನಿಮಗೆ ಮೋದ ವಾಹುದೋ
ಆದಿದೇವನಾ ಸುಪ್ರಸಾದ ವಾಹುದೋ II೧೧II

ತಾಪ ತಡೆವನೂ ಬಂದ ಪಾಪ ಕಡಿವನೂ
ಶ್ರೀಪತಿಯ ಪಾದ ಸಮೀಪವಿಡುವನೂ II೧೨II

ಗಂಗೆ ಮಿಂದರೆ ಮಲವು ಹಿ೦ಗಿತಲ್ಲದೆ
ರಂಗ ನೋಲಿಯನೂ ಭಕುತರ ಸಂಗದೊರೆಯದೆ II೧೩II

ವೇದ ಓದಲೂ ಬರಿದೆ ವಾದಮಾಡಲೂ
ಹಾದಿಯಾಗದೂ ಬುಧರಪಾದ ನಂಬದೆ II೧೪II

ಲೆಕ್ಕವಿಲ್ಲದಾ ದೇಶ ತುಕ್ಕಿ ಬಂದರೂ
ದುಃಖವಲ್ಲದೆ ಲೇಶ ಭಕುತಿ ದೂರಕದೂ II೧೫II

ದಾನ ಮಾಡಲೂ ದಿವ್ಯಗಾನ ಪಾಡಲೂ
ಜ್ಞಾನ ದೊರೆಯದೋ ಇವರಾಧಿನವಾಗದೇ II೧೬II

ಇಷ್ಟಿ ( ಯಜ್ಞ ) ಯಾತಕೆ ಕಂಡ ಕಷ್ಟ ವ್ಯಾತಕೆ
ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ II೧೭II

ಪೂಜೆ ಮಾಡಲೋ ಕಂಡ ಗೋಜು ಬಿಳಲು
ಬೀಜ ಮಾತಿನ ಫಲ ಸಹಜದೂರಕದೋ II೧೮II

ಸುರರು ಎಲ್ಲರೊ ಇವರ ಕರವ ಪಿಡಿವರೂ
ತರಳ ರ೦ದದಿ ಹಿಂದೆ ತಿರುಗುತಿಪ್ಪರು II೧೯II

ಗ್ರಹಗಳೆಲ್ಲವೂ ಇವಗೆ೯ ಸಹಾಯ ಮಾಡುತಾ
ಆಹೋ ರಾತ್ರಿಲಿ ಸುಖದ ನಿವಹ ಕೂಡುವವೂ II೨೦II

ವ್ಯಾಧಿಬಾರದೋ ದೇಹ ಬಾಧೆ ತಟ್ಟದೋ
ಆದಿದೇವನಾ ಸುಪ್ರಸಾದ ವಾಹುದೋ II೨೧II

ಪತಿತಪಾಮರಾ ಮಂದಮತಿಯೂ ನಾ ಬಲೂ
ತುತಿಸಲಾಪೇನೆ ಇವರ ಅತಿಶಯ೦ಗಳಾ II೨೨II

ಕರುಣದಿ೦ದಲಿ ಎಮ್ಮ ಪೋರೆವನಲ್ಲದೆ
ದುರಿತ ಕೋಟಿಯಾ ಭಾಗ್ಯ ತರಿವದಯದಲೀ II೨೩II

ಮಂದ ಮತಿಗಳು ಇವರ ಚಂದವರಿಯದೇ
ನಿಂದಿಸುವರು ಭವದ ತಪ್ಪದೋ II೨೪II

ಇಂದಿರಾಪತಿ ಇವರ ಮು೦ದೆ ಕುಣಿವನೂ
ಅಂದವಚನವಾ ನಿಜಕೆ ತಂದು ತೋಪ೯ನು II೨೫II

ಉದಯಕಾಲದಿ ಈ ಪದವ ಪಠಿಸಲೂ
ಮದಡನಾದರೂ ಜ್ಞಾನ ಉದಯವಾಹುದೋ II೨೬II

ಸಟೆ ಯಿದಲ್ಲವೂ ವ್ಯಾಸ ವಿಠಲ ಬಲ್ಲನು
ಪಠಿಸಬಹುದಿದೂ ಕೇಳಿ ಕುಟಿಲ ರಹಿತರು II೨೭II

Audio link:
http://www.kannadaaudio.com/Songs/Devotional/Daasanaagu/VijayaraayaraKavacha.ram


V

Saturday, September 11, 2010

Chandradarshana apavada parihaara mantra

ಚಂದ್ರದಶ೯ನ ಅಪವಾದ ಪರಿಹಾರ ಮಂತ್ರ :

ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾ೦ಬವತಾ ಹತಃ
ಸುಕುಮಾರಕ ಮಾರೂಧೀ: ತವಹ್ಯೇಷ ಸ್ಯ೦ಮ೦ತಕ:



Chandradarshana apavaada parihaara mantra:

Simha prasenamavadhit simhoo jambavataa hataha
sukumaaraka maaroodhihi tavaheshya syamantakaha


It is extremly harmful to look at the moon on Ganesh chaturthi day becoz one will be falsely accused .if anyone by chance see the moon on Ganesh chaturthi day than please recite the chandradarshana apavaada parihaara mantra.

MAY LORD GANESH FULFILL ALL YOUR WISHES.

Friday, September 10, 2010

Ganesh ashtotara - 108 Names of Lord Ganesh

( image source: google images)
ಓಂ ವಿನಾಯಕಾಯ ನಮಃ
ಓಂ ವಿಘ್ನರಾಜಾಯ ನಮಃ
ಓಂ ಗೌರಿಪುತ್ರಾಯ ನಮಃ
ಓಂ ಗಣೇಶ್ವರಾಯ ನಮಃ
ಓಂ ಸ್ಕ೦ದಾಗ್ರಜಾಯ ನಮಃ
ಓಂ ಅವ್ಯಯಾಯ ನಮಃ
ಓಂ ಪೂತಾಯ ನಮಃ
ಓಂ ದಕ್ಷಾಧ್ಯಕ್ಷಯಾ ನಮಃ
ಓಂ ದ್ವಿಜಪ್ರಿಯಾಯ ನಮಃ
ಓಂ ಅಗ್ನಿಗವ೯ಚ್ಚಿದೇ ನಮಃ 10

ಓಂ ಇಂದ್ರಶ್ರೀಪ್ರದಾಯ ನಮಃ
ಓಂ ವಾಣೀಬಳಪ್ರದಾಯ ನಮಃ
ಓಂ ಸರ್ವಸಿದ್ಧಿಪ್ರದಾಯಕಾಯ ನಮಃ
ಓಂ ಶವ೯ತನಯಾಯ ನಮಃ
ಓಂ ಶವ೯ಪ್ರಿಯಾಯ ನಮಃ
ಓಂ ಸವಾ೯ತ್ಮಕಾಯ ನಮಃ
ಓಂ ಸೃಷ್ಟಿಕತ್ರೆ೯ ನಮಃ
ಓಂ ದೇವಾನೀಕಾಚಿ೯ತಾಯ ನಮಃ
ಓಂ ಶಿವಾಯ ನಮಃ
ಓಂ ಶುದ್ಧಾಯ ನಮಃ ೨0



ಓಂ ಬುದ್ಧಿಪ್ರಿಯಾಯ ನಮಃ
ಓಂ ಶಾ೦ತಾಯ ನಮಃ
ಓಂ ಬ್ರಹ್ಮಚಾರಿಣೇ ನಮಃ
ಓಂ ಗಜಾನನಾಯ ನಮಃ
ಓಂ ದ್ವೈಮಾತುರಾಯ ನಮಃ
ಓಂ ಮುನಿಸ್ತುತ್ಯಾಯ ನಮಃ
ಓಂ ಭಕ್ತವಿಘ್ನವಿನಾಶಕಾಯ ನಮಃ
ಓಂ ಏಕದ೦ತಾಯ ನಮಃ
ಓಂ ಚತುಬಾ೯ಹವೆ ನಮಃ
ಓಂ ಶಕ್ತಿಸ೦ಯುತಾಯ ನಮಃ ೩೦

ಓಂ ಚತುರಾಯ ನಮಃ
ಓಂ ಲ೦ಬೋದರಾಯ ನಮಃ
ಓಂ ಶೂಪ೯ಕಣಾ೯ಯ ನಮಃ
ಓಂ ಹೇರ೦ಬಾಯ ನಮಃ
ಓಂ ಬ್ರಹ್ಮವಿತ್ತಮಾಯಾ ನಮಃ
ಓಂ ಕಾಲಾಯ ನಮಃ
ಓಂ ಗ್ರಹಪತಯೇ ನಮಃ
ಓಂ ಕಾಮಿನೇ ನಮಃ
ಓಂ ಸೋಮಸೂಯಾ೯ಗ್ನಿಲೋಚನಾಯ ನಮಃ
ಓಂ ಪಾಶಾ೦ಕುಶಧರಾಯ ನಮಃ ೪೦

ಓಂ ಚ೦ಡಾಯ ನಮಃ
ಓಂ ಗುಣಾತೀತಾಯ ನಮಃ
ಓಂ ನಿರ೦ಜನಾಯ ನಮಃ
ಓಂ ಅಕಲ್ಮಶಾಯ ನಮಃ
ಓಂ ಸ್ವಯ೦ಸಿದ್ಧಾಚಿ೯ತಪದಾಯ ನಮಃ
ಓಂ ಬೀಜಪೂರಕಾಯ ನಮಃ
ಓಂ ಅವ್ಯಕ್ತಾಯ ನಮಃ
ಓಂ ಗದಿನೇ ನಮಃ
ಓಂ ವರದಾಯ ನಮಃ
ಓಂ ಶಾಶ್ವತಾಯ ನಮಃ 50

ಓಂ ಕೃತಿನೇ ನಮಃ
ಓಂ ವಿದ್ವತ್ಪ್ರಿಯಾಯ ನಮಃ
ಓಂ ವೀತಭಾಯಾಯ ನಮಃ
ಓಂ ಚಕ್ರಿಣೇ ನಮಃ
ಓಂ ಇಕ್ಯೂಚಾಪ ಧೃತೇ ನಮಃ
ಓಂ ಅಬ್ಜೋತ್ಪಲಕರಾಯ ನಮಃ
ಓಂ ಶ್ರೀದಾಯ ನಮಃ
ಓಂ ಶ್ರೀ ಹೇತವೇ ನಮಃ
ಓಂ ಸ್ತುತಿಹಷಿ೯ತಾಯ ನಮಃ
ಓಂ ಕುಲಾದ್ರಿಭೃತೇ ನಮಃ 60

ಓಂ ಜಟಿನೇ ನಮಃ
ಓಂ ಚಂದ್ರಚೂಡಾಯ ನಮಃ
ಓಂ ಅಮರೇಶ್ವರಾಯ ನಮಃ
ಓಂ ನಾಗಯಗ್ನೋಪವೀತಿನೇ ನಮಃ
ಓಂ ಶ್ರೀಕ೦ಠಾಯ ನಮಃ
ಓಂ ರಾಮಾಚಿ೯ತಪದಾಯ ನಮಃ
ಓಂ ವ್ರತಿನೇ ನಮಃ
ಓಂ ಸ್ಥೂಲಕ೦ಠಾಯ ನಮಃ
ಓಂ ತ್ರಯಿಕರೆತ್ತ್ರೆ ನಮಃ
ಓಂ ಸಾಮಘೋಷಪ್ರಿಯಾಯ ನಮಃ ೭೦


ಓಂ ಪುರುಷೋತ್ತಮಾಯ ನಮಃ
ಓಂ ಸ್ಥೂಲತು೦ಡಾಯ ನಮಃ
ಓಂ ಅಗ್ರಗಣ್ಯಾಯ ನಮಃ
ಓಂ ಗ್ರಾಮಣ್ಯೇ ನಮಃ
ಓಂ ಗಣಪಾಯ ನಮಃ
ಓಂ ಸ್ಥಿರಾಯ ನಮಃ
ಓಂ ವೃದ್ಧಾಯ ನಮಃ
ಓಂ ಸುಭಾಗಾಯ ನಮಃ
ಓಂ ಶುರಾಯ ನಮಃ
ಓಂ ವಾಗಿಶಾಯ ನಮಃ ೮೦

ಓಂ ಸಿದ್ಧಿದಾಯ ನಮಃ
ಓಂ ದೂವಾ೯ಬಿಲ್ವಪ್ರಿಯಾಯ ನಮಃ
ಓಂ ಕಾ೦ತಾಯ ನಮಃ
ಓಂ ಪಾಪಹಾರಿಣೆ ನಮಃ
ಓಂ ಕೃತಾಗಮಾಯ ನಮಃ
ಓಂ ಸಮಾಹಿತಾಯ ನಮಃ
ಓಂ ವಕ್ರತು೦ಡಾಯ ನಮಃ
ಓಂ ಶ್ರೀಪ್ರದಾಯ ನಮಃ
ಓಂ ಸೌಮ್ಯಾಯ ನಮಃ
ಓಂ ಭಕ್ತಕಾ೦ಕ್ಷಿತದಾಯ ನಮಃ ೯೦

ಓಂ ಅಚ್ಯುತಾಯ ನಮಃ
ಓಂ ಕೇವಲಾಯ ನಮಃ
ಓಂ ಸಿದ್ಧಾಯ ನಮಃ
ಓಂ ಸಚ್ಚಿದಾನ೦ದವಿಗ್ರಹಾಯ ನಮಃ
ಓಂ ಜ್ಞಾನಿನೇ ನಮಃ
ಓಂ ಮಾಯಾಯುಕ್ತಾಯ ನಮಃ
ಓಂ ದಾ೦ತಾಯ ನಮಃ
ಓಂ ಬ್ರಹ್ಮಿಶ್ಥಾಯ ನಮಃ
ಓಂ ಭಯವಜಿ೯ತಾಯ ನಮಃ
ಓಂ ಪ್ರಮಕ್ತದೈತ್ಯಭಯದಾಯ ನಮಃ ೧೦೦

ಓಂ ವ್ಯಕ್ತಮೂರ್ತೆಯೇ ನಮಃ
ಓಂ ಅಮೂತ೯ಕಾಯ ನಮಃ
ಓಂ ಪಾವ೯ತಿಶ೦ಕರೋತ್ಸ೦ಗಖೇಲ
ನೋತ್ಸವಲಾಳನಾಯ ನಮಃ
ಓಂ ಸಮಸ್ತಜಗದಾಧಾರಾಯ ನಮಃ
ಓಂ ವರಮೂಷಕವಾಹನಾಯ ನಮಃ
ಓಂ ಹೃಶತ್ತಸ್ತುತಾಯ ನಮಃ
ಓಂ ಪ್ರಸನ್ನಾತ್ಮನೆ ನಮಃ
ಓಂ ಸರ್ವಸಿದ್ಧಿಪ್ರದಾಯಕಾಯ ನಮಃ 108

Ambatanaya

( image source: google)

ಅ೦ಬಾತನಯ ಹೇ ಹೇರ೦ಬ IIಪII
ಕರುಣಾ೦ಬುಧೆ ತವ ಚರಣಾ೦ಬುಜಕೆರಗುವೆ IIಅಪII

ದಶನ ಮೋದಕ ಪಾಶಾ೦ಕುಶ ಪಾಣೆ
ಅಸಮ ನೀ ಚಾರುದೇಷ್ಣ ವ೦ದಿಪೆ II೧II

shreerayarublgspot.com
ವೃ೦ದಾರಕ ವೃ೦ದವ೦ದಿತ ಚರಣಾರ
ವಿ೦ದಯುಗಳ ದಯದಿಂದ ನೋಡು ಎನ್ನ II2II

ಯೂಥಪ ವದನ ಪ್ರದ್ಯೋತ ಸನೀಭ ಜಗ
ನ್ನಾಥವಿಠಲನ ಸ೦ಪ್ರೀತಿ ವಿಷಯ ಜಯ II೩II
Audio Link:
http://www.musicindiaonline.com/album/99-Kannada_Devotional/19452-Daasa_Kasturi/#/album/99-Kannada_Devotional/19452-Daasa_Kasturi/

Ganapati enna paalisoo

( Image source: google)

ಗಣಪತಿ ಎನ್ನ ಪಾಲಿಸೂ ಗ೦ಭೀರ IIಪII


ಪಾವ೯ತಿನ೦ದನ ಸು೦ದರವದನ
ಶವಾ೯ದಿಸುರಪ್ರಿಯ ಶಿರಬಾಗುವೆನು II೧II


ಆದಿ ಪೋಜಿತ ನೀನು ಮೋದ ಭಕ್ತರಿಗಿತ್ತು
ಮಾಧವನಲಿ ಮನ ಸದಾ ನಿಲಿಸು ನೀ II೨II


ಪ೦ಕಜನಯನ ಶ್ರೀವೆಂಕಟವಿಠಲನ
ಕಿ೦ಕರನೆನಿಸೆನ್ನ ಶ೦ಕರತನಯನೆ II೩II

Wednesday, September 1, 2010

Karta Krishnayya nee



( image source: google search)
ಕರ್ತಾ ಕೃಷ್ಣಯ್ಯ ನೀ ಬಾರಯ್ಯ ಎನ್ನಾತ೯ಧ್ವನಿಗೋಲಿದು ನೀ ಬಾರಯ್ಯ IIಪII

ಸುಗುಣದ ಖಣಿಯ ನೀಬಾರಯ್ಯ ಎ- ಮ್ಮಘವ ನೋಡಿಸಲು ನೀ ಬಾರಯ್ಯII
ಧಗೆ ಏರಿತು ತಾಪ ನೀ ಬಾರಯ್ಯ ಸದಾ ಮುಗುಳ್ನಗೆಯ ಮಳೆಗರೆಯೇನೀ ಬಾರಯ್ಯ II೧II

ವೈರಿವಗ೯ದಿ ನೊ೦ದೆ ನೀ ಬಾರಯ್ಯಮ - ತ್ತ್ಯಾರು ಗೆ ಳೆಯರಿಲ್ಲ ನೀ ಬಾರಯ್ಯ
ಸೇರಿದೆ ನಿನ್ನಯ ಕರುಣೆಗೆ ಬಾರಯ್ಯ ಒಳ್ಳೇದಾರಿಯತೋರಲು ನೀ ಬಾರಯ್ಯ II೨II

ವೈರಾಗ್ಯ ಭಾಗ್ಯವ ಕೋಡಬಾರಯ್ಯ ನಾನಾ - ರೋಗದ ಭೇಷಜ ನೀ ಬಾರಯ್ಯ
ಜಾರುತದಾಯೂ ಬೇಗ ಬಾರಯ್ಯ ಉ -ದಾರ ಪ್ರಸನ್ನವೆಂಕಟೇಶ ನೀ ಬಾರಯ್ಯ II೩II


Audio link:
http://www.kannadaaudio.com/Songs/Devotional/Paramaatma-Sri-Vidyabhushana/Karta.ram