Thursday, June 11, 2009

ಆರತಿ ಬೆಳಗಿರೆ ನಾರಿಯರೆಲ್ಲರು / aarati Belagire nariyarellaru

ಆರತಿ ಬೆಳಗಿರೆ ನಾರಿಯರು ಬೇಗ ಆದಿ ಕೊಲ್ಹಾಪುರದ ಮಹಾಲಕ್ಷ್ಮಿ ಗೆ
ಹಾಡುತ ಪಾಡುತ ಜಾಣೆ ಯರೆಲ್ಲರು ಆದಿ ನಾರಾಯಣ ಪ್ರಿಯಳಿಗೆ
ಪಿಲ್ಲೆ ಕಾಲುಂಗುರ ಲುಲ್ಲು ಪೈಜಣರುಳಿ ಗಿಲ್ಲು ಗಿಲ್ಲೆಂದು ಹೆಜ್ಜೆಯನಿಡುತ
ಉಲ್ಲಾಸದಿಂದಲಿ ಗೋಡ್ಯಾನವ ಪುಲ್ಲನಾಭನ ಪ್ರಿಯಳಿಗೆ

ಜರದ ಪೀತಾಂಬರ ನಿರಿಗೆಗಳಲೆಯುತ ಝಗಝಗಿಸುತ ತ ಹೊಳೆಯುತಲಿ
ತೊಟ್ಟ ಕಂಚುಕವು ಇಟ್ಟ ವಂಕಿ ತೋಡೆ ಬೆಟ್ಟ ವೆಂಕೋಬನ ಮಡದಿಗೆ
ಚೌರಿರಗುಟಿ ಗೊಂಡೆ ಹರಳು ಬಂಗಾರಬುಗುಡಿಬಾವುಲಿಗಳು ಹೊಲಿಯುತಲಿ
ಸಡಗರದಿ ಕುಡಿಯ ಕುಂಕುಮ ಹಚ್ಚಿದ ಒಡೆಯ ವೆಂಕೋಬನ ಮಡದಿಗೆ

Gajavadana Beduve /ಗಜವದನ ಬೇಡುವೆ

ಗಜವದನ ಬೇಡುವೆ ಗೌರಿ ತನಯ
ತ್ರಿಜಗ ವಂದಿತನೇ ಸುಜನರ ಪೊರೆವನೇ ಪ

ಪಾಶಾಂಕುಶಧರ ಪರಮ ಪವಿತ್ರ
ಮೂಷಿಕವಾಹನ ಮುನಿಜನಪ್ರೇಮಾ IIಅ ಪII

ಮೋದದಿ ನಿನ್ನಯ ಪಾದವ ತೋರೋ
ಸಾಧು ವಂದಿತನೆ ಆದರದಿಂದಲಿ II೧ II

ಸರಸಿಜನಾಭ ಶ್ರಿ ಪುರಂದರ ವಿಠಲನ
ನಿರುತ ನೆನೆಯುವಂತೆ ದಯ ಮಾಡೋII ೨II

Audio link:http://www.kannadaaudio.com/Songs/Devotional/SriGaneshaPushpanjali/GajavadanaBeduve.ram



Dasanna Madiko yenna /ದಾಸನ ಮಾಡಿಕೊ ಎನ್ನ ಸ್ವಾಮಿ

ದಾಸನ ಮಾಡಿಕೊ ಎನ್ನ ಸ್ವಾಮಿ
ಸಾಸಿರ ನಾಮದ ವೆಂಕಟರಮಣ

ದುರ್ಬುದ್ಧಿಗಳನೆಲ್ಲ ಬಿಡಿಸೊ ನಿನ್ನ
ಕರುಣ-ಕವಚವೆನ್ನ ಹರಣಕೆ ತೊಡಿಸೊ
ಚರಣಸೇವೆ ಎನಗೆ ಕೊಡಿಸೊ ಅಭಯ
ಕರ ಪುಷ್ಪವ ಎನ್ನ ಶಿರದಲ್ಲಿ ಮುಡಿಸೊ II೧II

ದೃಢಭಕ್ತಿ ನಿನ್ನಲ್ಲಿ ಬೇಡಿ ನಾ
ಅಡಿಗೆರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣಲೇಕೆನ್ನ ನೋಡಿ ಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ II೨ II

ಮೊರೆಹೊಕ್ಕವರ ಕಾಯುವ ಬಿರುದು ಎನ್ನ
ಮರೆಯದೆ ರಕ್ಷಣೆ ಮಾಡಯ್ಯ ಪೊರೆದು
ದುರಿತಗಳೆಲ್ಲವ ತರಿದು ಸಿರಿ
ಪುರಂದರ ವಿಠಲ ಎನ್ನನು ಪೊರೆದು II೩
II


Audio Link:http://www.kannadaaudio.com/Songs/Devotional/home/Daasana-Madiko-Enna-Belluru-Sisters.php

Sharanu siddhi Vinayaka /ಶರಣು ಸಿದ್ಧಿ ವಿನಾಯಕ

ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾ ಪ್ರದಾಯಕ
ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಕ ವಾಹನ

ನಿಟಿಲ ನೇತ್ರನ ದೇವಿ ಸುತನೆ ನಾಗಭೂಷಣ ಪ್ರಿಯನೆ
ತಟಿಲತಾಂಕಿತ ಕೋಮಲಾಂಗನೆ ಕರ್ಣಕುಂಡಲ ಧಾರನೆII೧II

ಬಟ್ಟ ಮುತ್ತಿನ ಪದಕ ಹಾರನೆ ಬಾಹುಹಸ್ತ ಚತುಷ್ಟನೆ
ಇಟ್ಟ ತೊಡುಗೆಯ ಹೇಮ ಕಂಕಣ ಪಾಶ ಅಂಕುಶ ಧರನೆII೨ II

ಕುಕ್ಷಿ ಮಹಾ ಲಂಬೋದರನೆ ಇಕ್ಷುಚಾಪನ
ಗೆಲಿದನೆ ಪಕ್ಷಿವಾಹನ ಸಿರಿ ಪುರಂದರ ವಿಠಲನ ನಿಜ ದಾಸನೆII೩II



http://www.kannadaaudio.com/Songs/Devotional/SriGaneshaPushpanjali/SharanuSiddivinayaka.ram
In English:

Sharanu Siddhi Vinayaka Sharanu Vidya Pradayaka
Sharanu Parvati tanaya muruti sharanu musika vahana

Nitila Netrana varada putrane nagabhusasa priyane
Tatilatankita komalangane karna kundala dharane 1

Batta muttina hara padaka bahu hasta chatustane
Itta todugeya hemakankana pasha ankusha dharane 2

Kukshi Maha Lambodarane Ikshu chapana gelidane
pakshi vahana siripurandara vittalana nija dasane 3