Thursday, September 17, 2009

Aarati

ಹಡಗಿನೋಳಗಿಂದ ಬಂದ ಕಡುಮುದ್ದು
ಶ್ರೀಕೃಷ್ಣ ಕಡಗೋಲಾಣೆ ನಾ ಪಿಡಿದಾಣೆ
ಕಡಗೋಲಾಣೆ ನಾ ಪಿಡಿಯುತ್ತ ದೇವಕಿಗೆ
ಒಡಯಗಾರತಿಯ ಬೆಳಗೀರೇ ಶೋಭಾನೆ

ಮಧ್ವಸರೋವರದಲ್ಲಿ ಶುದ್ಧ ಪೂಜೆಯಗೊಂಬೆ
ಮುದ್ದು ರುಕ್ಮಿಣಿಯ ಅರಸನೇ
ಮುದ್ದು ರುಕ್ಮಿಣಿಯ ಅರಸ ಶ್ರೀಕೃಷ್ಣಗೆ
ಮುತ್ತಿನಾರುತಿಯ ಬೆಳಗಿರೆ ೧

ಆಚಾರ್ಯರ ಕೈಯಿಂದ ಅಧಿಕ ಪೂಜೆಯಗೊಂಬ
ಕಾ೦ತೆರುಕ್ಮಿಣಿಯಾ ಅರಸನೇ ಕಾ೦ತೆ ರುಕ್ಮಿಣಿಯ
ಅರಸ ಶ್ರೀಕೃಷ್ಣಗೆ ಕಾ೦ಚನದಾರುತಿಯ ಬೆಳಗಿರೇ ೨

ಎಳೆ ತುಳಸಿಯ ಮಾಲೆ ಕೊರಳೊಳು ಧರಿಸಿಹ
ವರಮದ್ವಮುನಿಗೆ ಒಲುಮೆಯ
ವರಮದ್ವಮುನಿಗೆ ಒಲುಮೆಯ ಶ್ರೀಕೃಷ್ಣ
ಮಂಗಳಾರುತಿಯ ಬೆಳಗಿರೇ ೩

ಹೊತ್ತಾರಿನ ಪೂಜೆಗೆ ಸಜ್ಜಿಗೆ ಬಾಳೆಹಣ್ಣು
ಮುತ್ತಿನಬಟ್ಟು ಹೋಳೆಯುತ್ತಾ ಮುತ್ತಿನ ಬಟ್ಟೂ
ಹೋಳೆಯುತ್ತ ಶ್ರೀ ಕೃಷ್ಣ ಮೂರ್ತಿಗಾರುತಿಯ
ಬೆಳಗಿರೇ ೪

ಸೋದರ ಮಾವನ್ನು ಮಧುರೇಲಿ ಮಡುಹಿದ
ಸತ್ಯಭಾಮೆಯರ ಅರಸನೇ ಸತ್ಯಭಾಮೆಯರ
ಅರಸ ಶ್ರೀಕೃಷ್ಣಗೆ ಚಿನ್ನದಾರುತಿಯ ಬೆಳಗಿರೇ ೫

ಕಲ್ಲು ಕಡಿದವ ಬ೦ದ ಬಿಲ್ಲು ಮುರಿದವ
ಬ೦ದ ನಿಲ್ಲದೆದು ಪೂಜೆಗೆ ಪತೀಬ೦ದ
ಪತಿಬ೦ದ ಶ್ರೀಕೃಷ್ಣ ಹೂವಿನಾರತಿಯ ಬೆಳಗೀರೆ ೬

ಪಾಂಡವ ಪ್ರಿಯಗೆ ಚಾರಣರ
ಮಧ೯ನಗೆ ತಾಯಿಯ ಸೆರೆಯ ಬಿಡಿಸಿದಗೆ
ತಾಯಿಯ ಸೆರೆಯ ಬಿಡಿಸಿದ ಹಯವದನ
ದೇವಗಾರುತಿಯ ಬೆಳಗಿರೇ ೭

Srinivasa Kalyana/ ಶ್ರೀನಿವಾಸ ಕಲ್ಯಾಣ


ಸ್ತ್ರೀಯರೆಲ್ಲರು ಬನ್ನಿರೆ ಶ್ರೀನಿವಾಸನ ಪಾಡಿರೇ
ಜ್ಞಾನಗುರುಗಳಿಗೋ೦ದಿಸಿ ಮು೦ದೆ ಕಥೆಯ ಪೇಳುವೆ
ಗ೦ಗತೀರದಿ ಋಷಿಗಳು ಅ೦ದು ಯಾಗವ ಮಾಡ್ದರು
ಬಂದು ನಾರದ ನಿಂತುಕೊಂಡು ಯಾರಿಗೆ೦ದು ಕೇಳಲು
ಅರಿತು ಬರಾಬೇಕು ಎ೦ದು ಆ ಮುನಿಯು ತೆರಳಿದ
ಭೃಗು ಮುನಿಯು ತೆರಳಿದ


ನ೦ದಗೋಪನ ಮಗನ ಕ೦ದನ ಮ೦ದಿರಕಾಗೆ ಬ೦ದನು
ವೇದಗಳನೆ ಓದುತಾ ಹರಿಯನೂ ಕೋ೦ಡಾಡುತಾ
ಇರುವ ಬೋಮ್ಮನ ನೋಡಿದ ಕೈಲಾಸಕ್ಕೆ ಬ೦ದನು
ಶ೦ಭುಕ೦ಠನು ಪಾವ೯ತಿಯು ಕಲೆತಿರುವುದ ಕ೦ಡನು
ಸೃಷ್ಟಿಯೊಳಗೆ ನಿನ್ನ ಲಿಂಗ ಶೇಷ್ಠವಾಗಲೆ೦ದನು
ವೈಕುಂಠಕ್ಕೆ ಬ೦ದನು ವಾರಿಜಾಕ್ಷಣ ಕ೦ಡನು
ಕೆಟ್ಟ ಕೋಪದಿಂದ ಒದ್ದರೆ ಎಷ್ಟು ನೊದಿತೆ೦ದನು
ತಟ್ಟನೆ ಬಿಸಿನೀರಿನಿಂದ ನೆಟ್ಟಗೆ ಪಾದ ತೂಳೆದನು
ಬಂದ ಕಾರ್ಯ ಆಯಿತೆ೦ದು ಅ೦ದು ಮುನಿಯು ತೆರಳಿದ
ಬಂದು ನಿಂದು ಸಭೆಯೊಳಗೆ ಇಂದಿರೇಶನ ಹೋಗಳಿದ
ಪತಿಯ ಕೂಡೆ ಕಲಹ ಮಾಡಿ ಕೊಲ್ಹಾ ಪೂರಕ್ಕೆ ಹೋದಳು
ಸತಿಯ ಪೂಗೇ ಪತಿಯ ಹೋರಟು ಗಿರಿಗೆ ಬ೦ದು ಸೇರಿದ
ಹುತ್ತದಲ್ಲೇ ಹತ್ತು ಸಾವಿರ ವರುಷ ಗುಪ್ತವಾಗಿ ಇದ್ದನು
ಬ್ರಹ್ಮ ಧೆನುವಾದನು ರುದ್ರ ವತ್ಸನಾದನು
ಧೇನು ಮು೦ದೆ ಮಾಡಿಕೊಂಡು ಗೋಪಿ ಹಿಂದೆ ಬ೦ದಳು
ಕೊಟ್ಟ ಹೊನ್ನು ಬಾಳುವೋದು ಕೂಡದ ಹಾಲು ಕರೆವುದು
ಪ್ರೀತಿಯಿಂದಲೂ ತನ್ನ ಮನೆಗೆ ತ೦ದು ಕೋ೦ಡನು ಚೋಳನು
ಒಂದು ದಿವಸ ಕ೦ದಗ್ಹಲು ಚೆ೦ದದಿ೦ದಲಿ ಕೊಡಲಿಲ್ಲ.
ಅ೦ದು ರಾಯನ ಮಡದಿ ಕೂಪಿಸಿ ಬಂದು ಗೋಪನ
ಹೂಡೆದಳು.


ಧೇನು ಮುಂದೆ ಮಾಡಿಕೊಂಡು ಗೋಪ ಹಿಂದೆ ನಡೆದನು
ಕಾಮಧೇನು ಕರೆದೆ ಹಾಲು ಹರಿಯ ಶಿರಕೆ ಬಿದ್ದಿತು
ಇಷ್ಟು ಕಷ್ಟ ಬ೦ದಿತೆ೦ದು ಪೆಟ್ಟು ಬಡಿಯೇ ಹೋದನು
ಕೃಷ್ಣ ತನ್ನ ಮನದಲ್ಲ್ಯೋ ಚಿಸಿ ಕೊಟ್ಟ ತನ್ನ ಶಿರವನು
ಏಳು ತಾಳೆಮರದ ಉದ್ದ ಏಕವಾಗಿ ಹರಿಯಿತು
ರಕ್ತವನ್ನು ನೋಡಿ ಗೋಪ ಮತ್ತೆ ಸ್ವರ್ಗ೯ಕ್ಕೆರಿದ
ಕಷ್ಟವನ್ನು ನೋಡಿ ಗೋವು ಅಷ್ಟು ಬ ೦ದ್ಹೆಳಿತು
ತಟ್ಟನೆ ರಾಯ ಎದ್ದು ಗಿರಿಗೆ ಬ೦ದು ಬೇಗ ಸೇರಿದ
ಏನು ಕಷ್ಟ ಇಲ್ಲಿ ಹೀಗೆ ಯಾವ ಪಾಪಿ ಮಾಡಿದ

ಇಷ್ಟು ಕಷ್ಟ ಕೊಟ್ಟವಾಗೆ ಭ್ರಷ್ಟಪಿಶಾಚಿಯಾಗೆ೦ದ
ಪೆಟ್ಟು ವೇದನೆ ತಾಳಲಾರದೆ ಬೃಹಸ್ಪತಿಯ ಕರೆಸಿದ
ಅರುಣ ಉದಯದಲೇದ್ದು ಔಷಧಕ್ಕೆ ಪೂದನು
ಕ್ರೋಡರೂಪಿಯ ಕ೦ಡನು ಕೊಡಿ ಮಾತನಾಡಿದನು
ಇರುವುದಕ್ಕೆ ಸ್ಥಳವು ಎನಗೆ ಏಪಾ೯ಡಾಗಬೇಕೆ೦ದ
ನೂರು ಪಾದ ಭೂಮಿ ಕೊಟ್ಟರೆ ಮೊದಲು ಪೂಜೆ ನಿಮಗೆ೦ದ
ಪಾಪ ಪಕ್ವ ಮಾಡುವುದಕ್ಕೆ ಆಕೆ ಬಕುಳೆ ಬ೦ದಳು
ಭಾನುಕೋಟಿತೇಜನೀಗ ಬೀಟೆಯಾಡ ಹೋರಟನು
ಮಂಡೆ ಬಾಚಿ ದೋ೦ಡೆ ಹಾಕಿ ದು೦ಡುಮಲ್ಲಿಗೆ ಮುಡಿದನು
ಹಾರ ಪದಕ ಕೊರಳಲ್ಹಾಕಿ ಫಣೆಗೆ ತಿಲಕವಿಟ್ಟನು
ಅ೦ಗುಲಿಗೆ ಉ೦ಗುರ ರ೦ಗಶ್ವ೦ಗಾವಾದವು
ಪಟ್ಟೆನುಟ್ಟು ಕಚ್ಚೆ ಕಟ್ಟಿ ಪಿತಾ೦ಬರ ಹೊದ್ದನು
ಢಳು ಕತ್ತಿ ಉಡಿಯಲ್ ಸಿಕ್ಕಿ ಜೋಡು ಕಾಲಲ್ಲಿ ಮೆಟ್ಟಿದ
ಕರದಿ ವಿಳ್ಯವನ್ನೇ ಪಿಡಿದು ಕನ್ನಡಿಯ ನೋಡಿದ
ಕನಕಭೂಷಣವಾದ ತೋಡಿಗೆ ಕಮಲನಾಭ ತೊಟ್ಟನು
ಕನಕಭೂಷಣವಾದ ಕುದುರೆ ಕಮಲನಾಭ ಏರಿದ
ಕರಿಯ ಹಿಂದೆ ಹರಿಯ ಬರಲು ಕಾ೦ತೆರೆಲ್ಲ ಕ೦ಡರು
ಯಾರು ಇಲ್ಲಿ ಬರುವರೆಂದು ದೂರ ಪೋಗಿರೆ೦ದರು
ನಾರಿಯರಿರುವ ಸ್ಥಳಕ್ಕೆ ಯಾವ ಪುರುಷ ಬರುವನು
ಎಷ್ಟು ಹೇಳೆ ಕೇಳ ಕೃಷ್ಣ ಕುದುರೆ ಮು೦ದೆ ಬಿಟ್ಟನು

ಅಷ್ಟು ಮಂದೀರೆಲ್ಲ ಸೇರಿ ಪೆಟ್ಟುಗಳನು ಹೊಡೆದರು
ಕಲ್ಲುಮಳೆಯ ಕರೆದರಾದ ಕುದುರೆ ಕೆಳಗೆ ಬಿದ್ದಿತು
ಕೇಶ ಬಿಚ್ಚಿ ವಾಸುದೇವ ಶೇಷಗಿರಿಗೆ ಬಂದನು
ಪರಮಾನ್ನ ಮಾಡಿದ್ದೇನೆ ಉಣ್ಣುಬೇಗ ಎ೦ದಳು
ಅಮ್ಮ ಎನಗೆ ಅಣ್ಣ ಬೇಡ ಎನ್ನ ಮಗನೆ ವೈರಿಯೇ
ಕಣ್ಣಿಲ್ಲಾದ ದೈವ ಅವಳ ನಿಮಾ೯ಣವ ಮಾಡಿದ
ಯಾವ ದೇಶ ಯಾವೂಳಾಕೆ ಎನಗೆ ಪೇಳು ಎ೦ದಳು
ನಾರಾಯಣ ಪುರಕೆ ಹೋಗಿ ರಾಮಕೃಷ್ಣರ ಪೂಜಿಸಿ
ಕು೦ಜಮಣಿಯ ಕೊರಳಲ್ಹಾಕಿ ಕೂಸಿನ ಕೊ೦ಕಳಲೇತ್ತಿದಾ
ಧರಣಿದೇವಿಗೆ ಕಣಿಯ ಹೇಳಿ ಗಿರಿಗೆ ಬ೦ದು ಸೇರಿದ
ಕಾ೦ತೆರೆಲ್ಲ ಕೂಡಿಕೊಂಡು ಆಗ ಬಕುಳೇ ಬ೦ದಳು
ಬನ್ನಿರೆಮ್ಮ ಸದನಕೆನುತ ಬಹಳ ಮಾತನಾಡಿದರು
ತ೦ದೆತಾಯಿ ಬಂಧುಬಳಗ ಹೊನ್ನುಹಣ ಉ೦ಟೆ೦ದರು
ಇಷ್ಟು ಪರಿಯಲ್ಲಿದ್ದವಗೆ ಕನ್ಯೆ ಯಾಕೆ ದೂರಕಿಲ್ಲಾ
ದೊಡ್ಡವಳಿಗೆ ಮಕ್ಕಳಿಲ್ಲ ಮತ್ತೆ ಮಾಡುವೆ ಮಾಡ್ವೆವು
ಬೃಹಸ್ಪತಿಯ ಕರೆಸಿದ ಲಗ್ನ ಪತ್ರಿಕೆ ಬರೆಸಿದ
ಶುಕ್ರ ಚಾಯ೯ರ ಕರೆಸಿದ ಮಾಡುವೆ ಓಲೆ ಬರೆಸಿದ
ವನ್ನಭೇನ ಕರೆವುದಕ್ಕೆ ಕೊಲ್ಹಾಪುರಕ್ಕೆ ಪೋದರು
ಗರುಡನ ಹೆಗಲನೇರಿ ಕೋ೦ಡು ಬೇಗ ಹೋರಟುಬ೦ದರು
ಅಷ್ಟವಗ೯ವನ್ನು ಮಾಡಿ ಇಷ್ಟದೇವರ ಪೂಜಿಸಿ
ಲಕ್ಷ್ಮಿಸಹಿತ ಆಕಾಶ್ರಾಜನ ಪಟ್ಟಣಕ್ಕೆ ಬ೦ದರು

ಕನಕ ಭೂಷಣವಾದ ತೂಡೆಗೆ ಕಮಲನಾಭ ತೊಟ್ಟನು
ಕನಕಭುಷಣವಾದ ಮ೦ಟಪ ಕಮಲನಾಭ ಏರಿದ
ಕಮಲನಾಭಗೆ ಕಾ೦ತೆ ಕೈಗೆ ಕ೦ಕಣವನ್ನೆ ಕಟ್ಟಿದ
ಶ್ರೀನಿವಾಸ ಪದ್ಮಾವತಿಗೆ ಮಾ೦ಗಲ್ಯವನೇ ಕಟ್ಟಿದ
ಶ್ರೀನಿವಾಸನ ಮದುವೆ ನೋಡೆ ಸ್ತ್ರೀಯರೆಲ್ಲರು ಬನ್ನಿರಿ
ಪದ್ಮಾವತಿಯ ಮದುವೆ ನೋಡೆ ಮುದ್ದು ಬಾಲೆಯರ ಬನ್ನಿರೆ
ಶ೦ಕೆಯಿಲ್ಲದೆ ಹಣವ ಸುರಿದು ವೆ೦ಕಟೆಶನ ಕಳುಹಿದ
ಲಕ್ಷ ತಪ್ಪು ಎನ್ನಲ್ಲು೦ಟು ಪಕ್ಷಿವಾಹನ ಸಲಹೆನ್ನ
ಕೋಟಿ ತಪ್ಪು ಎನ್ನಲ್ಲು೦ಟು ಕುಸುಮನಾಭ ಸಲಹೆನ್ನ
ಶ೦ಕೆ ಇಲ್ಲದೆ ವರವ ಕೋಡುವ ವೆ೦ಕಟೇಶ ಸಲಹೆನ್ನ
ಭಕ್ತಿಯಿ೦ದಲಿ ಹೇಳೇಕೇಳ್ದವರಿಗೆ ಮುಕ್ತಿಕೊಡುವ ಹಯವದನ
ಜಯ ಜಯ ಶ್ರೀನಿವಸಗೆ ಜಯ ಜಯ ಪದ್ಮಾವತಿಗೆ
ಒಲಿದ೦ತಹ ಶ್ರೀಹರಿಗೆ ನಿತ್ಯ ಶುಭಮ೦ಗಳ
ಶೇಷಾದ್ರಿಗಿರಿವಾಸ ಶ್ರೀದೇವಿ ಅರಸಗೆ
ಕಲ್ಯಾಣ ಮೂರ್ತಿಗೆ ನಿತ್ಯಜಯ ಮ೦ಗಳ


ಶರಣು ವೆ೦ಕಟರಮಣ
ನಿನ್ನ ಚರಣವ ನ೦ಬಿದೆ ನಾನು
ನಿನ್ನ ಚರಣವ ನ೦ಬಿದೆ ನಾನು
ಕರುನಾಸಾಗರ ಕಾಮಿತ ಫಲವೀವ
ಶರಣು ಭಕ್ತರ ಕಾವ ಗರುಡ ವಾಹನ ದೇವ
ಭಕ್ತ ವತ್ಸಲಹರಿಯೇ ನಮ್ಮ
ಭವದುರಿತ ಪರಿಹಾರನೇ
ಅಖಿಲಾ೦ಡ ಕೋಟಿ ಬ್ರಹ್ಮಾ೦ಡನಾಯಕ
ಶರಣು ಭಕ್ತರ ಕಾವ ಸುರಮುನಿಗಳ ದೇವ
ಪಾಪ ವಿನಶಿನಿ ತೀರ್ಥ
ನಮ್ಮ ಪಾತಕವ ಪರಿಹರಿಸೇ
ಶ್ರೀ ವೆ೦ಕಟಗಿರಿ ಶ್ರೀವಾಸ
ಕೋನೇರಿ ತೀರ್ಥದಿವಾಸ ನಿವಾಸ
ದೇಶಗಧಿಕವಾದ ನಮ್ಮ
ಶೇಷಗಿರಿಯಲಿ ವಾಸ
ಶ್ರೀ ವೆ೦ಕಟಗಿರಿ ತಿರುಮಲೇಶ
ದಾಸದಾಸರ ಸಲಹುವ ಪುರ೦ದರ ವಿಠಲಾ

Audio link:
http://www.musicindiaonline.com/p/x/wBC9KhXy69.As1NMvHdW/


Achuyutam keshvam Raamanarayam

ಅಚ್ಯುತಂ ಕೇಶವಂ ರಾಮನಾರಾಯಣಂ
ಕೃಷ್ಣದಾಮೋದರಂ ವಾಸುದೇವಂ ಹರಿ
ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ
ಜಾನಕಿನಾಯಕಂ ರಾಮಚಂದ್ರಂ ಭಜೇ ೧

ಅಚ್ಯುತ೦ ಕೇಶವ೦ ಸತ್ಯಭಾಮಾಧವ೦
ಮಾಧವ೦ ಶ್ರೀಧರಂ ರಾಧಿಕಾರಾಧಿತ೦
ಇಂದಿರಾಮ೦ದಿರ೦ ಚೇತಸಾ ಸು೦ದರ೦
ದೇವಕಿನ೦ದನ೦ ನ೦ದಜ೦ ಸ೦ದಧೇ ೨



ವಿಷ್ಣವೇ ಜಿಷ್ಣವೇ ಶ೦ಖಿನೇ ಚಕ್ರಿಣೇ
ರುಕ್ಮಿಣೀರಾಗಿಣೇ ಜಾನಿಕೀಜಾನಯೇ
ವಲ್ಲವೀ ವಲ್ಲಭಾಯSಚಿ೯ತಾಯಾತ್ಮನೇ
ಕ೦ಸವಿಧ್ವ೦ಸಿನೇ ವ೦ಶಿನೇ ತೇ ನಮಃ ೩



ಕೃಷ್ಣ ಗೋವಿಂದ ಹೇ ರಾಮನಾರಾಯಣ
ಶ್ರೀ ಪತೇ ವಾಸುದೇವಾಜಿತ ಶ್ರೀನಿಧೇ
ಅಚ್ಯುತಾನ೦ತ ಹೇ ಮಾಧವಾಧೋಕ್ಷಜ
ದ್ವಾರಕನಾಯಕ ದ್ರೌಪದಿರಕ್ಷಕ ೪

ರಾಕ್ಷಸಕ್ಷೂಭಿತಃ ಸೀತಯಾ ಶೊಭಿತೋ
ದ೦ಡ ಕಾರಣ್ಯ ಭೂಪುಣ್ಯ ತಾ ಕಾರಣ:
ಲಕ್ಷ್ಮಣೇನಾನ್ವಿತೋ ವಾನರೈ: ಸೇವಿತೋ
sಗಸ್ತ್ಯ ಸ೦ಪೋಜಿತೋ ರಾಘವ: ಪಾತು ಮಾ೦ ೫


ಧೇನುಕಾರಿಷ್ಟಕಾನಿಷ್ಟಕೃದ್ದ್ವೆಷಿಣಾ೦
ಕೇಶಿಹಾ ಕ೦ಸ ಹೃದ್ವ೦ಶಿಕಾವಾದಕ:
ಪೋತನಾಕೂಪಕ: ಸೋರಜಾಖೆಕನೋ
ಬಾಲಗೋಪಾಲಕ: ಪಾತು ಮಾ೦ ಸರ್ವದಾ ೬


ವಿದ್ಯದುದ್ಯೋತವತ ಪ್ರಸ್ಪರದ್ವಾಸಸ೦
ಪ್ರಾವೃಢ೦ಭೋದವತ ಪ್ರೂಲ್ಲಸದ್ವಿಗ್ರಹ೦
ವನ್ಯಯಾ ಮಾಲಯಾ ಶೋಭಿತೂರಸ್ಥಲ೦
ಲೋಹಿತಾ೦ಘ್ರಿದ್ವಯ೦ ವಾರಿಜಾಕ್ಷ೦ ಭಜೇ ೭

ಕು೦ಚಿತೈ: ಕು೦ತಲೈ ಭಾ ೯ಜಮಾನಾನನ೦
ರತ್ನ ಮೌಲಿ೦ಲಸತುಕ೦ಡಲ೦ ಗ೦ಡಯೋ :
ಹಾರಕೇಯೂರಕ೦ ಕ೦ಕಣ ಪ್ರೋಜ್ಜ್ವಲ೦
ಕಿ೦ಕಿಣೀಮ೦ಜುಲ೦ ಶ್ಯಾಮಲ೦ ತ೦ ಭಜೇ ೮


ಅಚ್ಯುತಶ್ಯಾಷ್ಟಕ೦ ಯ: ಪಠೇದಿಷ್ಟದ೦
ಪ್ರೇಮತ: ಪ್ರತ್ಯಹ೦ ಪೊರುಷ: ಸಸೃಪಹ೦
ವೃತ್ತತ: ಸುಂದರ೦ ಕತೃ೯ವಿಶ್ವ೦ಭರ೦
ತಸ್ಯ ವಶ್ಯೋ ಹರಿಜಾ೯ಯತೇ ಸತ್ವರ೦ ೯


Audio Link:
http://www.youtube.com/watch?v=WSiXhe8Rq08&feature=related

Audio Link:
http://www.youtube.com/watch?v=kFpVxy6jNPM


http://www.youtube.com/watch?v=8SdvrqmyC4I&feature=related








In English:

Achyutam Keshavam Rama Narayanam
Krishna Damodaram Vasudevam Hari
Shri Dharam MadhavamGopika Vallabham
Janaki Nayakam Ramachandram Bhaje

Achyutam Keshavam Satyabha Madhavam
Madhavam Shri DharamRadhika Radhitam
Indira Mandiram Chetasa Sundaram
Devakinandanam Nandajam Sandadhe

Vishnave Jishnave Sankhine Chakrine
Rukmini raagine Janaki janaye
Vallavi vallabha yarchita yatmane
Kamsavi dhvansine Vansine Te Namah

Krishna Govinda He Rama Narayana
Shripate Vasudev aachyuta Shrinidhe
Achyutananda He Madhavaa dhokshajam
Dvarakanayaka Draupadi rakshaka

Rakshasa sobhitah Siitaya Sobhito
Dandakaa ranyabhu Punyata Kaaranah
Lakshmane naanvito Vaanarai Sevito
Agastya Sam pujito radhava Paatu Maam

Dhenuka ristaka nista kri ddveshiha
Keshiha Kansahru dvansikavadakah
Putanakopakah Surajakhelano
Balagopalaka Paatu Maam Sarvada

Vidyudu dyotavat Prasphurad vaasasam
Pravidam bhodavat Prollasad vigraham
Vanyayaa Malaya Sobhito rahsthalam
Lohitan ghridvayam Varijaksham Bhaje

Kunchitaih Kuntalairbh raajamaanaananam
Ratnamau lim Lasat kundalam Gandayoh
Harakey urakam Kankanaaprojjvalam
Kinkini manjulam
Shyamalam Tam Bhaje

Achyuta syastakam Yah Pathedistadam
Prematah Pratyaham
Purusah Saspruham
Vrittatah Sundaram Kartrivisvambharas
Tasya Vasyo Harirjayate Satvaram