Tuesday, November 24, 2009

BRamhandadolu

ಬ್ರಹ್ಮಾಂಡದೊಳಗೆ ಅರಸಿ ನೋಡಲು ನಮ್ಮೂರೇ ವಾಸಿ
ರಮ್ಮೆಯರಸನು ಸರ್ವದ ವಾಸಿಪ ಸುಮ್ಮಾನದಿ ತಾನು


ಜನನ ಮರಣವಿಲ್ಲ ಅಲ್ಲಿ ಉಣುವ ದುಃಖವಿಲ್ಲ
ಅನುಜ ತನುಜರು ಅಲ್ಲಿಲ್ಲ ಅನುಮಾನದ ಸೊಲ್ಲೇ ಇಲ್ಲ

ನಿದ್ರೆಯು ಅಲ್ಲಿಲ್ಲ ರೋಗೋ ಪದ್ರಗಳಲ್ಲಿಲ್ಲ
ಕ್ಷುದ್ರಜನಂಗಳು ಅಲ್ಲಿಲ್ಲ ಸಮುದ್ರಶಯನ ಬಲ್ಲ ಎಲ್ಲ

ಸಾಧುಜನರ ಕೂಡೆ ಮೋಕ್ಷಕೆ ಸಾಧನೆಗಳ ಮಾಡೆ
ಮಾಧವ ಪುರಂದರವಿಠಲರಾಯನು ಆದರಿಸುವನಲ್ಲೆ ಬಲ್ಲೆ

Sunday, November 22, 2009

Teeliso Ella

ತೇಲಿಸೋ ಇಲ್ಲ ಮೂಳುಗಿಸೂ
ನಿನ್ನ ಕಾಲಿಗೆ ಬಿದ್ದೇನೂ ಪರಮಕೃಪಾಳೂ


ಸತಿಸುತ ಧನದಾಸೇ ಎ೦ದೆ೦ಬ ಮೋಹದಿ
ಹಿತದಿ೦ದ ಅತಿನೋ೦ದು ಬೇ೦ಡಾದೆನೋ
ಗತಿ ಕೂಡುವರ ಕಾಣೆ ಮತಿಯ ಪಾಲಿಸೂ ಲಕ್ಷ್ಮಿ
ಪತಿ ನಿನ್ನ ಚರಣದ ಸ್ಮರಣೆಯಿತ್ತೆನಗೆ II೧II


ಜರೆರೋಗ ದಾರಿದ್ರ್ಯ ಕಲ್ಮಶವೆ೦ಬ
ಶರಧಿಯೂಳಗೆ ಬಿದ್ದು ಮುಳುಗಿದೇನೂ
ಸ್ಥಿರವಲ್ಲ ದೇಹವು ನೆರೆ ನಂಬಿದೆ ನಿನ್ನ
ಕರುಣಾಭಯವಿತ್ತು ಪಾಲಿಸೂ ಹರಿಯೇ II೨ II


ದೋಷವುಳ್ಳವ ನಾನು ಭಾಷೆಯುಳ್ಳವ ನೀನು
ಮೋಸ ಹೂದೇನೂ ಭಕ್ತಿರಸವ ಬಿಟ್ಟು
ಶೇಷಶಯನ ಶ್ರೀ ಪುರಂದರವಿಠಲನೆ
ದಾಸರ ಸ೦ಗವಿತ್ತು ಪಾಲಿಸೂ ಹರಿಯೇ II೩II

Daari yavudayya vaikunthake

ದಾರಿಯಾವುದಯ್ಯ ವೈಕು೦ಠಕೆ ದಾರಿ ತೂರಿಸಯ್ಯ
ಅಧರ ಮೂರುತಿ ನಿನ್ನ ಪಾದ ಸೇರುವುದಕ್ಕೆ ದಾರಿಯಾವುದಯ್ಯ

ಅನುಭವದ ಅನುಭವದಿ ಕತ್ತಲೆಯೂಳು ಬಲು ಅ೦ಜುವೆ ನಡುಗಿ
ಬಳಲುತ್ತ ತಿರುಗಿದೆ ಹಾದಿಯ ಕಾಣದೆ ಹೋಳೆವ೦ತ ದಾರಿಯ ತೋರೋ ನಾರಾಯಣ

ಪಾಪ ಪೋವ೯ದಲ್ಲಿ ಮಾಡಿದುದಕ್ಕೆ ಲೇಪವಾಗಿದೆ ಕಮ೯
ಈ ಪರಿಯಿ೦ದಲಿ ನಿನ್ನ ನೇನೇಸಿ ಕೋ೦ಬೆ ಶ್ರೀ ಪತಿ ಸಲಹೆನ್ನ ಧೂಪನಾರಾಯಣ

ಇನ್ನು ನಾ ಜನಿಸಲಾರೆ ಭೂಮಿಯಮೇಲೇ ನಿನ್ನ ದಾಸಾನಾದೇನೂ
ಪನ್ನಗಶಯನ ಶ್ರೀ ಪುರ೦ದರವಿಠಲ ಇನ್ನು ಪುಟ್ಟಿಸದಿರು ಎನ್ನ ನಾರಾಯಣ

Sripatiyu namage sampadaviyali

ಶ್ರೀಪತಿಯು ನಮಗೆ ಸ೦ಪದವಿಯಲಿ
ವಾಣಿಪತಿಯು ನಮಗೆ ದೀಘಾ೯ಯು ಕೊಡಲಿ

ವರಬುಧರನು ಪೋರೆಯೇ ವಿಷವ ಕ೦ಠದಲ್ಲಿಟ್ಟ
ಹರ ನಿತ್ಯ ನಮಗೆ ಸಹಾಯ ಮಾಡಲಿ
ನರರೂಳುನತವಾದ ನಿತ್ಯ ಭೋಗ೦ಘಲನು
ಪುರುಹೂತ ಪೂರ್ಣ ಮಾಡಿಸಲಿ ನಮಗೆ II೧II

ವಿನುತ ಸಿದ್ಧಿಪ್ರದನು ವಿಘನ್ನೆಶನ ದಯದಿ೦ದ
ನೆನೆದ ಕಾಯ೯ಗಲೆಲ್ಲ ನೆರವೇರಲಿ
ದಿನದಿನದಿ ಧನ್ವ೦ತ್ರಿ ಆಪತ್ತುಗಳ ಕಳೆದು
ಮನಹರುಷ ವಿತ್ತು ಮನಿಸಲಿ ಬಿಡದೆ II೨ II


ನಿರುತ ಸುಜ್ಞಾನವನು ಈವ ಗುರು ಮದ್ವಾರಾಯ
ಗುರುಗಳಾಶೀವಾ೯ದ ನಮಗಾಗಲಿ
ಪುರಂದರವಿಠಲನ ಕರುಣೆಯೆ೦ದಲಿ ನಿತ್ಯ
ಸುರರೋಲುಮೇ ನಮಗೇ ಸುಸ್ಥಿರವಾಗಲಿII
೩II

Saturday, November 21, 2009

Ranga baaro Panduranga baaro

ರಂಗ ಬಾರೋ ಪಾಂಡು ರಂಗ ಬಾರೋ
ರಂಗ ಬಾರೋ ನರಸಿಂಗ ಬಾರೋ IIಅಪII

ಕಂದ ಬಾರೋ ಎನ್ನ ತಂದೆ ಬಾರೋ
ಇಂದಿರಾ ರಮಣ ಮುಕುಂದ ಬಾರೋ II1II


ಅಪ್ಪ ಬಾರೋ ತಿಮ್ಮಪ್ಪ ಬಾರೋ
ಕಂದರ್ಪನಯ್ಯನೆ ಕಂಚಿ ವರದ ಬಾರೋ II2II

ಅಣ್ಣ ಬಾರೋ ಎನ್ನ ಚಿನ್ನ ಬಾರೋ
ಪುಣ್ಯಮೂರ್ತಿ ಮಹಿಷಪುರಿ ಚಿನ್ನ ಬಾರೋ II3II

ವಿಷ್ಣು ಬಾರೋ ಉಡುಪಿ ಕೃಷ್ಣ ಬಾರೋ
ಎನೀಷ್ಟ ಮೂರ್ತಿ ಪುರಂದರ ವಿಠಲ ಬಾರೋ II4II




In English:

RAnga baaro panduranga baaro
Ranga baaro narasinga baaro

Kandabaaro enna tande baaro
Indiraramana mukunda baaro

Appabaaro timmappa baaro
Kandarpanayyanee kanchivarada baaro

Anna baaro enna chinna baaro
Punyamurti mahishapuri china baaro

Vishnubaaro udupikrishna baaro
Enishta murti purandaravitthalabaaro



posted on may 27th 09

Toogire Rayara Toogire

ತೂಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯಕಿಕುಲ ತಿಲಕರ IIಪII


ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ
ತೂಗಿರೆ ಗುರು ರಾಘವೇಂದ್ರ ರ IIಅಪII

ಕು೦ದನ ಮಯವಾದ ಚಂದದ ತೊಟ್ಟಿಲೊಳ್
ಆನಂದದಿ ಮಲಗ್ಯಾ ರ ತೂಗಿರೆ
ನಂದನ ಕಂದ ಗೋವಿಂದ ಮುಕುಂದನ
ಚಂದದಿ ಭಜಿಪರ ತೋಗಿರೆ II೧II

ಯೋಗ ನಿದ್ರೆಯಾನ ಬೇಗನೆ ಮಡುವ
ಯೋಗಿಶ್ಯ ವಂದ್ಯರ ತೂಗಿರೆ
ಭೋಗಿಶಯನನ ಪಾದ
ಮೋದದಿ ಭಜಿಪರ ಭಾಗವತರನ್ನ ತೂಗಿರೆ II೨II

ಅದ್ವೈತ ಮತದ ವಿದ್ವಂಸದ ನಿಜ ಗುರು
ಮಧ್ವಮತೋದ್ಧಾರನ ತೂಗಿರೆ
ಶುದ್ದ ಸಂಕಲ್ಪ ದಿ ಬಂದ ನಿಜ ಭಕ್ತರ
ಉಧ್ಧಾರಮಾಲ್ಪರ ತೂಗಿರೆ II೩ II

ಭಜಕ ಜನರು ತಮ್ಮ ಭಜಜೆಯ ಮಾಡಲು
ನಿಜ ಗತಿ ಇಬ್ಬರ ತೂಗಿರೆ
ನಿಜ ಗುರು ಜಗನಾಥ ವಿಠಲನ ಪಾದವ
ಭಜನೆಯ ಮಲ್ಪರಣ ತೂಗಿರೆ II೪II

Toogiree Rayara Toogiree GuruGala
Toogiree yatikula tilakara
Toogire yoginDRa kaRakamala pojyara
Toogiree Guru Raghavendrara

KUndanaMayavada chandada totiilolu
Anandadi malaGyara toogire
Nandana Kanda mukundana
Chandadi bhajipara toogire

YogaNidreyanu Begane maaduva
Yogishyavandyara toogiree
Bhogishayananapaada
MooDadi Bhajipara bhagavataranna toogire

Adwaita matada vidwasada nija guru
madWamatadoddhranna toogiree
shuddha sankalpadi Banda nija Bhaktara
uddhara malpara toogiree

Bhajaka janaru tamma bhajaneya maadalu
Nijagati ibbara toogiree
Nija guru jagannathavitthalana paadava
Bhajaneya Malpara Toogire


Posted on may 19th 2009

audio Link:http://www.youtube.com/watch?v=X6CR9ZEmD9s



satata gananaatha Siddiyaiva

ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ
ಮತಿ ಪ್ರೇರಿಸುವಳು ಪಾವ೯ತಿದೆವಿ ಮು
ಕುತಿ ಪಥಕೆ ಮನವೀವ ಮಹಾರುದ್ರದೇವರು
ಹರಿಭಕುತಿ ದಾಯಕಳು ಭಾರತಿದೇವಿ ಯು
ಕುತಿ ಶಾಸ್ತ್ರಗಳಲಿ ವನಜಸ೦ಭವನರಸಿ
ಸತ್ಕರ್ಮಗಳ ನಡೆಸಿ ಸುಜ್ಞಾನ ಮತಿ ಇತ್ತು
ಗತಿ ಪಾಲಿಸುವವನು ನಮ್ಮ ಪವಮಾನನು
ಚಿತ್ತದಲಿ ಆನ೦ದ ಸುಖವಿವಳು ರಮಾ
ಭಕ್ತ ಜನರೊಡೆಯ ನಮ್ಮ ಪುರಂದರ ವಿಠಲನು
ಸತತ ಇವರಲಿ ನಿಂತು ಕೃತಿಯ ನಡೆಸುವನು


In English:

Satata gananaatha siddhiyaniva karyadali
Mati prerisuvalu parvathidevi muu
Kuti pathake manaviva maharudradevaru
Haribhakuti daayakalu bharatidevi yuu
Kuti shastragalalli vanajasambhavanarasi
Satkarmagala nadesi sugjnana mati ittu
gati paalisuvavanu namma pavamaanana
chittadali aanada sukhavivalu ramaa
bhkta janarodeya namma purandaravitthalanu
satata evarali nintu krutiya nadesuvanu



Posted On may 9th 2009

Hondi Badukiro Raghavendra

ಹೊಂದಿ ಬದುಕಿರೊ ರಾಘವೇಂದ್ರ ರಾಯರ IIಪII

ಕುಂದದೆಮ್ಮನು ಕರುಣದಿಂದ ಪೊರೆವರ IIಅಪ II


ನಂಬಿ ತುತಿಸುವ ನಕದಂಬಕಿಷ್ಟವ
ತುಂಬಿ ಕೊಡುವರು ಅನ್ಯರ್ಹಂಬಲೀಯನು II೧II

ಅಲವಬೋಧರ ಸಮತಜಲಧಿಚಂದಿರ
ಒಲಿದು ಭಕ್ತರ ಕಾಯ್ವ ಸುಲಭ ಸುಂದರ II೨ II

ಗುರು ಸುಧಿಂದ್ರರ ವಿಮಲಕರಜರೆನಿಪರ
ಸ್ಮರಿಸಿ ಸುರುಚಿರ ವಿಮಲಚರಣ ಪುಷ್ಯರ II೩II

ಘಾಲಲೋಚನ ವಿನುತ ಮೂಲರಾಮನ
ಲೀಲೆಯನುದಿನ ತುತಿಪ ಶೀಲ ಸದ್ಗುಣ II೪ II

ಭೂತ ಭಾವನ ಜಗನ್ನಾಥವಿಠಲನ
ಪ್ರೀತಿಪಾತ್ರನ ನಂಬಿರೀತನುದಿನ II೫ II

Audio Link:
http://www.kannadaaudio.com/Songs/Devotional/SriVidyabhushana/Old/HondiBadukiro.ram


Enu Dhanyalo lakumi

ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ
ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡು ತಿಹಳು ಪ

ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ
ಸಾಟಿಯಿಲ್ಲದೆ ಮಾಡಿ ಪೂರ್ಣ ನೋಟದಿಂದ ಸುಖಿಸುತಿಹಳು ೧

ಛತ್ರ ಚಾಮರ ವ್ಯಜನ ಪರಿಯಂಕ ಪಾತ್ರ ರೂಪದಲ್ಲಿ ನಿಂತು
ಛಿತ್ರ ಚರಿತನಾದ ಹರಿಯ ನಿತ್ಯ ಸೇವೆ ಮಾಡುತಿಹಳು ೨

ಸರ್ವತ್ರದಿ ವ್ಯಾಪ್ತನಾದ ಸರ್ವ ದೋಷರಹಿತನಾದ
ಸರ್ವ ವಂದ್ಯನಾದ ಪುರಂದರ ವಿಟ್ಠಲನ್ನ ಸೇವಿಸುವಳೊ


Audio link:http://www.kannadaaudio.com/Songs/Devotional/EnuDhanyaloLakumi-SriVidyabhushana/Enu.ram



Bhushanake Bhushana

ಭೂಷಣಕೆ ಭೂಷಣ ಇದು ಭೂಷಣ
ಶೇಷಗಿರಿವಾಸ ಶ್ರೀವರವೆಂಕಟೇಶ IIಪII

ನಾಲಿಗೆಗೆ ಭೂಷಣ ನಾರಾಯಣ ನಾಮ
ಕಾಲಿಗೆ ಭೂಷಣ ಹರಿಯಾತ್ರೆಯು
ಆಲಯಕೆ ಭೂಷಣ ತುಲಸಿವೃಂದವನ
ವ್ಶಾಲ ಕರ್ಣಕೆ ಭೂಷಣ ವಿಷ್ಣುಕಥೆಯು II೧II

ದಾನವೇ ಭೂಷಣ ಇರುವ ಹಸ್ತಂಗಳಿಗೆ
ಮಾನವೇ ಭೂಷಣ ಮಾನವರಿಗೆ
ಜ್ಞಾನವೇ ಭೂಷಣ ಮುನಿಯೊಗಿವರರಿಗೆ
ಮಾನಿನಿಗೆ ಭೂಷಣ ಪತಿಭಕ್ತಿಯು II೨II

ರಂಗನನು ನೋಡುವುದೆ ಕಂಗಳಿಗೆ ಭೂಷಣ
ಮಂಗಳಾಂಗಿಗೆ ಮಣಿವ ಶಿರ ಭೂಷಣ
ಶೃಂಗರ ತುಲಸಿಮಣಿ ಕೊರಳಿಗೆ ಭೂಷಣ
ರಂಗವಿಠಲ ನಿಮ್ಮ ನಾಮ ಅತಿ ಭೂಷಣ II೩II
Posted On Aug 10 2009

Wednesday, November 11, 2009

Sri Lakshmidwadashanaama stotram

ಶ್ರೀದೇವೀ ಪ್ರಥಮ೦ ನಾಮ ದ್ವಿತೀಯಮಮೃತೋದ್ಭವಾ
ತ್ರಿತೀತುಥ೯೦ ಕಮಲಾ ಪ್ರೋಕ್ತಾ ಚತುಥ೯೦ ಲೋಕಸು೦ದರೀ 1

ಪ೦ಚಮ೦ ವಿಷ್ಣು ಪತ್ನಿ ಚ ಸ್ಯಾತ್ ವೈಷ್ಣವಿ ತಥಾ
ಸಪ್ತ ತ೦ ತು ವರಾರೋಹಾ ಅಷ್ಟಮ೦ ಹರಿವಲ್ಲಭಾ 2

ನವಮ೦ ಶಾರ್೦ಗಿಣೀಪ್ರೋಕ್ತಾ ದಶಮ೦ ದೇವದೇವಿಕಾ
ಏಕಾದಶ೦ ತು ಲಕ್ಷ್ಮೀ: ಸ್ಯಾತ್ ದ್ವಾದಶ೦ ಶ್ರೀ ಹರಿಪ್ರಿಯಾ 3

ದ್ವಾದಶೈತಾನಿ ನಾಮಾನಿ ತ್ರಿಸ೦ಧ್ಯ೦ ಪಠೆನ್ನರ:
ಆಯೂರಾರೊಗ್ಯಮೈಶ್ವರ್ಯ೦ ತಸ್ಯ ಪುಣ್ಯ ಫಲಪ್ರದ೦ 4

ದ್ವಿಮಾಸ೦ ಸರ್ವಕಾಯಾ೯ಣಿ ಷಣ್ಮಾಸಾದ್ರಾಜ್ಯಮೇವ ಚ
ಸ೦ವತ್ಸರ೦ ತು ಪೂಜಾಯಾ: ಶ್ರೀ ಲಕ್ಷಾಮ್ಯ: ಪೂಜ್ಯ ಏವ ಚ 5


ಲಕ್ಷ್ಮೀ೦ ಕ್ಷೀರಸಮುದ್ರರಾಜತನಯಾ೦ ಶ್ರೀರ೦ಗಧಾಮೇಶ್ವರರೀ೦
ದಾಸೀಭೂತ ಸಮಸ್ತ ದೇವವನಿತಾ೦ ಲೋಕೈಕ ದೀಪಾ೦ಕುರಾ೦
ಶ್ರೀ ಮನ್ಮ೦ದಕಟಾಕ್ಷ ಲಬ್ದ ವಿಭವ ಬ್ರಹ್ಮೆ೦ದ್ರ ಗ೦ಗಾಧರಾ೦
ತ್ವಾ೦ ತ್ರೈಲೋಕ್ಯ ಕುಟು೦ಬಿನೀ೦ ಸರಸಿಜಾ೦ ವ೦ದೇ ಮುಕು೦ದಪ್ರಿಯಾ೦ 6


ಇತಿ ಶ್ರೀ ಲಕ್ಷ್ಮಿದ್ವಾದಶನಾಮ ಸ್ತೋತ್ರಂ ಸಂಪೂರ್ಣಂ .

Govindashtakam

ಸತ್ಯ೦ ಜ್ಞಾನಮನ೦ತ೦ ನಿತ್ಯಮನಾಕಾಶ೦ ಪರಮಾಕಾಶ೦
ಗೂಷ್ಠ ಪ್ರಾ೦ಗಣರಿ೦ಗಣಲೋಲಮನಾಯಾಸ೦ ಪರಮಾಯಾಸ೦
ಮಾಯಾಕಲ್ಪಿತನಾನಾಕಾರಮನಾಕಾರ೦ ಭುವನಾಕಾರ೦
ಕ್ಷ್ಮಾಮಾನಾಥಮನಾಥ೦ ಪ್ರಣಮತ ಗೋವಿ೦ದ೦ ಪರಮಾನ೦ದ೦ II1II

ಮೃತಾಸ್ನಮತಿಸ್ಸಹೇತಿ ಯಶೋದಾತಾಡನಶೈಶವ ಸ೦ತ್ರಾಸ೦
ವ್ಯಾದಿತವಕಾತ್ತ್ರಲೋಕಿತ ಲೋಕಾಲೋಕ ಚತುದ೯ಶಲೋಕಾಲ೦
ಲೋಕತ್ರಯಪುರಮುಲಸ್ತ೦ಭ೦ ಲೋಕಲೋಕಮನಾಲೋಕ೦
ಲೋಕೇಶ೦ ಪರಮೇಶ೦ ಪ್ರಣಮತ ಗೊವಿ೦ದ೦ ಪರಮಾನ೦ದ೦ II2 II

ತ್ರೈವಿಷ್ಟಪರಿಪುವಿರಘ್ನ೦ ಕ್ಷಿತಿಭಾರಘ್ನ೦ ಭವರೋಗಘ್ನ೦
ಕೈವಲ್ಯ೦ ನವನೀತಾಹಾರಮನಾಹಾರ೦ ಭುವನಾಹಾರ೦
ವೈಮಲ್ಯಸ್ಫಟಚೇಟೂವೃತ್ತಿವಿಶೇಷಾಭಾಸಮನಾಭಾಸ೦
ಶೈವ೦ ಕೇವಲ ಶಾ೦ತ೦ ಪ್ರಣಮತ ಗೊವಿ೦ದ೦ ಪರಮಾನ೦ದ೦ II3II

ಗೋಪಾಲ೦ ಭೂಲೀಲಾವಿಗ್ರಹಗೋಪಾಲ೦ ಕುಲಗೋಪಾಲ೦
ಗೋಪಿಖೆಲನಗೋವರ್ಧನಧೃತಿಲೀಲಾಲಾಲಿತಗೋಪಾಲ೦
ಗೋಭಿನಿ೯ಗದಿತ ಗೋವಿಂದ ಸ್ಫುಟನಾಮಾನ೦ ಬಹುನಾಮಾನ೦
ಗೋಪಿ ಗೋಚರದೋರ೦ ಪ್ರಣಮತ ಗೊವಿ೦ದ೦ ಪರಮಾನ೦ದಂ II4 II

ಗೋಪಿಮ೦ಡಲಗೊಷ್ಠಿಭೇದ೦ ಬೇದಾವಸ್ಥಮಭೇದಾಭ೦
ಶಶ್ವದ್ಗೂಖುರನಿಧು೯ತೋತ್ಕ್ರುತಧುಲಿಧುಸರಸೌಭಾಗ್ಯಂ
ಶ್ರದ್ಧಾಭಕ್ತಿಗೃಹಿತಾನ೦ದಮಚಿ೦ತ್ಯ೦ಚಿ೦ತಿತಸದ್ಭಾವ೦
ಚಿ೦ತಾಮಣೀಮಹಿಮಾನ೦ ಪ್ರಣಮತ ಗೋವಿಂದಂ ಪರಮಾನದ೦ II5II

ಸ್ನಾನವ್ಯಾಕುಲಯೂಷಿದ್ವಸ್ತ್ರಮುಪಾದಾಯಾಗಮೂಪಾರೂಢ೦
ವ್ಯಾದಿತ್ಸ೦ತಿರಥ ದಿಗ್ವಸ್ತ್ರಾ ದಾತುಮುಉಪಾಕಷ೯೦ತ೦ ತಾ:
ನಿಧು೯ತದ್ವಯಶೋಕವಿವೋಹ೦ ಬುದ್ಧ೦ ಬುದ್ಧೇರ೦ತಸ್ಸ್ಥ೦
ಸತ್ತಾಮಾತ್ರ ಶರೀರ೦ ಪ್ರಣಮತ ಗೋವಿಂದಂ ಪರಮಾನದ೦ II6 II

ಕಾ೦ತ೦ ಕಾರಣಕಾರಣಮಾದಿಮುನಾದಿ೦ ಕಾಲಮನಾಭಾಸ೦
ಕಾಲಿ೦ದೀಗತಕಾಲಿಯಶಿರಸಿ ಮುಹುನ್ರು೯ತ್ಯ೦ತ೦ ಸುನ್ರುತ್ಯ೦ತ೦
ಕಾಲ೦ ಕಾಲಕಲಾತಿತ೦ ಕಲಿತಾಶೇಷ೦ ಕಲಿದೋಷಘ್ನ೦
ಕಾಲತ್ರಯಗತಿಹೇತು೦ ಪ್ರಣಮತ ಗೋವಿಂದಂ ಪರಮಾನದ೦ II7II

ವೃ೦ದಾವನಭುವಿ ವೃ೦ದಾರಕಗಣ ವೃ೦ದಾರಾಧ್ಯ೦ ವ೦ದೇSಹ೦
ಕು೦ದಾಭಾಮಲಮ೦ದಸ್ಮೇರಸುಧಾನ೦ದ೦ ಸುಹೃದಾನ೦ದ೦
ವ೦ದ್ಯಾಶೇಷಮಹಾಮುನಿಮಾನಸವ೦ದ್ಯಾನ೦ದಪದದ್ವ೦ದ್ವ೦
ವಂದ್ಯಾಶೇಷಗುಣಾಬ್ಧಿ೦ ಪ್ರಣಮತ ಗೋವಿಂದಂ ಪರಮಾನದ೦ II8 II

ಗೋವಿಂದಾಷ್ಟಕಮೇತೆದಧಿತೇ ಗೋವಿ೦ದಾಪಿ೯ತಚೇತಾ ಯೋ
ಗೊವಿ೦ದಾಚ್ಯುತ ಮಾಧವ ವಿಷ್ಣೋ ಗೋಕುಲನಾಯಕ ಕೃಷ್ಣೇತಿ
ಗೊವಿ೦ದಾ೦ಘ್ರಿಸರೋಜಧ್ಯಾನಸುಧಾಜಲಧೌತಸಸ್ತಾಘೋ
ಗೊವಿ೦ದ೦ಪರಮಾನ೦ದಾಮೃತಮ೦ತಸ್ಸ್ಥ೦ಸಮಭ್ಯೇತಿ II9 II



Audio Link:
http://www.youtube.com/watch?v=okQUQqEYChk&feature=related

In English:.
Satyam gyaanamanantam nityamanaakaasham paramaakaasham
goshhThapraan ganarinkhanalolamanaayaasam paramaayaasam maayaakalpitanaanaakaaramanaakaaram bhuvanaakaaram
kshmaayaa naathamanaatham pranamata govindam paramaanandam

Mritsnaamatsiiheti yashodaataadanashaishava santraasam.
vyaditavaktraalokitalokaalokachaturdashalokaalim
lokatrayapuramuulastambham lokaalokamanaalokam
lokesham paramesham pranamata govindam paramaanandam

Traivishhtaparipuviiraghnam kshitibhaaraghnam bhavarogaghna
kaivalyam navaniitaahaaramanaahaaram bhuvanaahaaram
vaimalyasphutachetovrittivisheshhaabhaasamanaabhaasam.
shaivam kevalashaantam pranamata govindam paramaanandam

Gopaalam prabhuliilaavigrahagopaalam kulagopaalam.
gopiikhelanagovardhanadhritiliilaalaalitagopaalam
gobhirnigadita govindasphutanaamaanam bahunaamaanam.
gopiigocharapathikam pranamata govindam paramaanandam.

gopiimandalagoshhthibhedam bhedaavasthamabhedaabham.
shashvadhgokhuranirghuutoddhatadhuulIdhuusarasaubhaagyam.
shraddhAbhaktigrihiitaanandamachintyam chintitasadbhaavam .
chintaamanimahimaanam praNamata govindam paramaanandam .

snaanavyaakulayoshid.hvastramupaadaayaagamupaaruudham.
vyaditsa ntiratha digvastraa hyupudaatumupaakarshha ntam.
nirdhuutadvayashokavimoham buddham buddherantastham .
sattaamaatrashariiram pranamata govindam paramaanandam.

kaa.ntam kaaranakaaranamaadimanaadim kaalamanaabhaasam .
kaalindIgatakaaliyashirasi muhurnrityantam nrityantam .
kaalam kaalakalaatiitam kalitaasheshham kalidoshhaghnam.
kaalatrayagatihetum praNamata govindam paramaanandam.


vrindaavanabhuvi vrindaarakaganavrindaaraadhyam vandeaham
kundaabhaamalamandasmerasudhaanandam suhridaanandam.
vandyaasheshhamahaamunimaanasavandyaanandapadadvandvam
vandyaasheshhaguNaabdhim pranamata govindam paramaanandam


govindaashhtakametadadhiite govindaarpitachetaa yo
govindaachyuta maadhava vishhNo gokulanaayaka krishhNeti
govindaanghrisarojadhyaanasudhaajaladhautasamastaagho
govindam paramaana.ndaamritama.ntaHstham satamabhyeti

Monday, November 9, 2009

Elelu sharadhiya

ಏಳೇಳು ಶರಧಿಯು ಏಕವಾಗಿದೆ ಕಂಡ್ಯ
ಹೇಗೆ ಬಂದೆ ಹೇಳೋ ಕೋತಿ IIಪII
ಏಳು ಶರಧಿಯು ಎನಗೆ ಏಳು ಕಾಲುವೆಯು
ತೂಳಿ ಲಂಘಿಸಿ ಬಂದೆ ಭೂತ IIಅಪII

ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ
ಹೇಗೆ ಬಿಟ್ಟರು ಹೇಳೊ ಕೋತಿ
ಏಳು ಸಮುದ್ರದ ಮಕರಿ ಮತ್ಸ್ಯದ ಕೂಡೆ
ಮಾತಾಡಿ ಬಂದೆನೊ ಭೂತ II1II


ಲಂಕಾದ್ವಾರದೊಳೊಬ್ಬ ಲಂಕಿಣಿ ಇರುವಳು
ಹೇಗೆ ಬಿಟ್ಟಳು ಹೇಳೊ ಕೋತಿ
ಲಂಕಿಣಿಯನು ಕೊಂದು ಶಂಕೆಯಿಲ್ಲದೆ ನಾನು
ಬಿಂಕದಿಂದಲಿ ಬಂದೆ ಭೂತ II2II

ಕೊಂಬೆಕೊಂಬೆಗೆ ಕೋಟಿಮಂದಿ ರಾಕ್ಷಸರಿರೆ
ಹೇಗೆ ಬಿಟ್ಟರು ಪೇಳೊ ಕೋತಿ
ಕೊಂಬೆ ಕೊಂಬೆಗೆ ಕೋಟಿಮಂದಿ ರಾಕ್ಷಸರನ್ನು
ಕೊಂದ್ಹಾಕಿ ಬಂದೆನೊ ಭೂತ II3II

ಯಾವೂರೊ ಎಲೊ ನೀನು ಯಾವ ಭೂಮಿಯೊ ನಿಂದು
ಯಾಕೆ ಬಂದೆ ಹೇಳೊ ಕೋತಿ
ಯಾವ ವನದೊಳಗೆ ಜಾನಕಿದೇವಿ ಇದ್ದಾಳೊ
ಅವಳ ನೋಡಬಂದೆ ಭೂತ II4II

ದಕ್ಷಿಣಪುರಿ ಲಂಕದಾನವರಿಗಲ್ಲದೆ
ತ್ರ್ಯಕ್ಷಾದ್ಯರಿಗಳವಲ್ಲ ಕೋತಿ
ಪಕ್ಷಿಧ್ವಜ ರಾಮನ ಅಪ್ಪಣೆಯೆನಗಿಲ್ಲ
ಈಕ್ಷಣ ತಪ್ಪಿಸಿಕೊಂಡೆ ಭೂತ II5 II

ದೂತನಗಿಹೆ ಎನ್ನ ಕೈಯೊಳು ಸಿಕ್ಕಿಹೆ
ಕೋಪವಿನ್ನೇತಕ್ಕೊ ಕೋತಿ
ನಾ ತಾಳಿಕೊಂಡಿಹೆನೋ ಈ ಕ್ಷಣದಿ ಲಂಕೆ
ನಿರ್ಧೂಮವನು ಮಾಳ್ಪೆ ಭೂತ II6II


ನಿಮ್ಮಂಥ ದಾಸರು ನಿಮ್ಮರಸನ ಬಳಿ
ಎಷ್ಟು ಮಂದಿದ್ದಾರೆ ಕೋತಿ
ನನ್ನಂಥ ದಾಸರು ನಿನ್ನಂಥ ಹೇಡಿಗಳು
ಕೋಟ್ಯಾನುಕೋಟಿಯೊ ಭೂತ II7 II

ಎಲ್ಲಿಂದ ನೀ ಬಂದೆ ಏತಕ್ಕೆಲ್ಲರ ಕೊಂದೆ
ಯಾವರಸನ ಬಂಟ ಕೋತಿ
ಚೆಲ್ವಯೋದ್ಯಾಪುರದರಸು ಜಾನಕಿಪತಿ
ರಾಮಚಂದ್ರನ ಬಂಟ ಭೂತ II8 II

ಸಿರಿರಾಮಚಂದ್ರನು ನಿನ್ನರಸನಾದರೆ
ಆತ ಮುನ್ನಾರ‍್ಹೇಳೋ ಕೋತಿ
ಹಿರಣ್ಯಕನನು ಸೀಳಿ ಪ್ರಹ್ಲಾದಗೊಲಿದ ಶ್ರೀ
ಪುರಂದರವಿಠಲನೊ ಭೂತ II9II

Friday, November 6, 2009

Navagraha stotram (srivadiraj virachita)

ಭಾಸ್ವಾನ್ ಮೇ ಭಾಸಯೇತ ತತ್ತ್ವ೦ ಚಂದ್ರಶ್ಚಾಹ್ಲಾದಕೃದ್ಭವೇತ್
ಮ೦ಗಲೋ ಮ೦ಗಲ೦ ದಾದ್ಯದ್ಭುಶ್ಚ ಬುಧತಾ೦ ದಿಶೇತ

ಗುರುಮೇ೯ ಗುರುತಾ೦ ದದ್ಯಾತ್ ಕವಿಸ್ಚ ಕವಿತಾ೦ ದಿಶೇತ
ಶನಿಶ್ಚ ಶ೦ ಪ್ರಾಪಯತು ಕೇತು: ಕೇತು೦ ಜಯೇ ಪ೯ಯೇತ

ರಾಹುಮೇ೯ ರಾಹಯೇದ್ರೋಗ೦ ಗ್ರಹಾ:ಸ೦ತು ಕರಗ್ರಹಾ:
ನವ೦ ನವ೦ ಮಮೈಶ್ವಯ೯೦ ದಿಶ೦ತ್ವೇತೇ ನವಗ್ರಹಾ

ಹರೇರನುಗ್ರಹಾಥ೯ಯ ಶತ್ರೂಣಾ೦ ನಿಗ್ರಹಾಯ ಚ
ವಾದಿರಾಜಯತಿಪ್ರೋಕ್ತ೦ ಗ್ರಹಸ್ತೊತ್ರ೦ ಸದಾ ಪಠೇತ

ಇತಿ ಶ್ರೀ ವಾದಿರಾಜತೀರ್ಥಶ್ರೀ ಚರಣವಿರಚಿತ೦ನವಗ್ರಹಸ್ತೋತ್ರಂ

Navagraha Devata prathana

ಸೂರ್ಯ : ಶೌಯ೯೦ ಅರ್ಥ ಇನ್ದು: ಉಚ್ಚ ಪದವೀ೦ ಸನ್ಮ ಙ್ಗಲ೦ ಮಙ್ಗಲ:
ಸದ್ಬು ದ್ಧಿ೦ ಚ ಬುಧೂ ಗುರುಶ್ಚ ಗುರುತಾ೦ ಶುಕ್ರ: ಸುಖ೦ ಶ೦ ಶನಿ:
ರಾಹು: ಬಾಹು ಬಲ೦ ಕರೂತು ವಿಪುಲ೦ ಕೇತು: ಕುಲಸ್ಯ ಉನ್ನತಿಮ್
ನಿತ್ಯ೦ ಪ್ರೀತಿಕರಾ ಭವನ್ತು ಭವತಾ೦ ಸರ್ವೇ ಪ್ರಸನ್ನಾ ಗ್ರಹಾ:

ಆದಿತ್ಯಾದಿ ನವಗ್ರಹ ದೇವತಾಭ್ಯೋ ನಮ

ನವಗ್ರಹ ಸ್ತೋತ್ರಂ / Navagraha stotram

ಜಪಾ ಕುಸುಮ ಸ೦ಕಾಶ೦ ಕಾಶ್ಯಪೇಯ೦ ಮಹಾದ್ಯುತಿ೦
ತವೋರಿ೦ ಸರ್ವ ಪಾಪಘ್ನ೦ ಪ್ರಣತೋಸ್ಮಿ ದಿವಾಕರ೦

ದಧಿಶ೦ಖ ತುಷಾರಾಭ೦ ಕ್ಷಿರಾಣ೯ವ ಸಮೂದ್ಭವ೦
ನಮಾಮಿ ಶಶಿನ೦ ಸೋಮ೦ ಶ೦ಭೋಮು೯ಕುಟಭೂಷಣ೦


ಧರಣಿ ಗರ್ಭ ಸ೦ಭೂತ೦ ವಿದ್ಯುತ್ ಕಾಂತಿ ಸಮಪ್ರಭ೦
ಕುಮಾರ೦ ಶಕ್ತಿಹಸ್ತ೦ತ ಮಗಳಂ ಪ್ರಣಮಾಮ್ಯಹ೦

ಪ್ರಿಯ೦ಗುಕಾಲಿಕಾಶ್ಯಾಮ೦ ರೂಪೇಣಾಪ್ರತಿಮಾ೦ಬುಧ೦
ಸೌಮ್ಯ೦ಸತ್ವಗುಣೋಪೇತ೦ ತ೦ ಬುಧ೦ ಪ್ರಣಮಾಮ್ಯಹ೦

ದೇವಾನಾ೦ಚ ಋಷಿಣಾ೦ಚ ಗುರು೦ಕಾ೦ಚನ ಸನ್ನಿಭ೦
ಬುದ್ಧಿಮ೦ತ೦ ತ್ರಿಲೋಕೆಶ೦ ತ೦ ನಮಾಮಿ ಬೃಹಸ್ಪತಿ

ಹಿಮಕು೦ದಮೃಣಾಲಾಭ೦ ದೈತ್ಯಾನಾ೦ ಪರಮ೦ ಗುರು೦
ಸರ್ವ ಶಾಸ್ತ್ರ ಪ್ರವಕ್ತಾರ೦ ಭಾಗ೯ವ೦ ಪ್ರಣಮಾಮ್ಯಹ೦

ನೀಲಾ೦ಜನ ಸಮಾಭಸ೦ ರವಿಪುತ್ರ೦ ಯಮಾಗ್ರಜ೦
ಛಾಯಾಮಾತಾ೯೦ಡ ಸ೦ಭೂತ೦ ತ೦ ನಮಾಮಿ ಶನೈಶ್ಚರ೦

ಅರ್ಧಕಾಯ೦ ಮಹಾವೀಯ೯೦ ಚ೦ದ್ರಾದಿತ್ಯ ವಿಮಧ೯ನ೦
ಸಿ೦ಹಿಕಾಗಭ೯ ಸ೦ಭೂತ೦ ತ೦ ರಾಹು೦ ಪ್ರಣಮಾಮ್ಯಹ೦

ಫಲಾಷಪುಷ್ಪ ಸ೦ಕಾಶ೦ ತಾರಕಾಗ್ರಹ ಮಸ್ತಕ೦
ರೌದ್ರ೦ ರೌದ್ರಾತ್ಮಕ೦ ಘೋರ೦ ತ೦ ಕೇತು೦ ಪ್ರಣಮಾಮ್ಯಹ೦

ಇತಿ ವ್ಯಾಸ೦ ಮುಖೋದ್ಗಿತ೦ ಯ: ಪಠೇಸ್ತು ಸಮಾಹಿತೌ
ದಿವಾವಾಯ ದಿವಾರಾತ್ರೌ ವಿಘ್ನ: ಶಾಂತಿಭ೯ವಿಷ್ಯತಿ

ನರ ನಾರಿ ನೃ ಪಾಣಾ೦ಚ ಭವೇ ದು: ಸ್ವಪ್ನ ನಾಶನ೦
ಐಶ್ವರ್ಯಮತುಲಾ೦ ತೇಷಾ೦ ಆರೊಗ್ಯ೦ ಪುಷ್ಟಿವಧ೯ನ೦

ಗ್ರಹ ನಕ್ಷತ್ರ ಜಾ: ಪೀಡಾ ಸ್ತಸ್ಕರಾಗ್ನಿ ಸಮುದ್ಭವಾ೦
ತಾ: ಸರ್ವಾ: ಪ್ರಶಮ೦ ಯಾ೦ತಿ ವ್ಯಾಸೋ ಬ್ರೂತೇ ನ ಸ೦ಶಯ:

ಓಂ ಇತಿ ಶ್ರೀ ನವಗ್ರಹ ಸ್ತೋತ್ರಂ ಸಂಪೂರ್ಣಂ