Friday, June 12, 2009

satyavantara sagaveralu /ಸತ್ಯವಂತರ ಸಂಗವಿರಲು

ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ IIಪII

ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನ ಹೀನನಾಗಿ ಬಾಳ್ವ ಮನುಜನೇತಕೆ
ಜ್ಞಾನವಿಲ್ಲದೇ ನೂರು ಕಾಲ ಬದುಕಲೇತಕೆ
ಮಾನಿನಿಯ ತೊರೆದವಗೆ ಭೋಗವೇತಕೆ II೧II

ಮಾತು ಕೇಳದೆ ಮಲತು ನಡೆವ ಮಕ್ಕಳೇತಕೆ
ಪ್ರೀತಿ ಇಲ್ಲದೆ ಎಡೆಯನಿಕ್ಕಿದ ಅನ್ನವೇತಕೆ
ನೀತಿಯರಿತು ನಡೆಯದಿರುವ ಬಂಟನೇತಕೆ
ಸೋತು ಹೆಣ್ಣಿಗೆ ಹೆದರಿ ನಡೆವ ಪುರುಶನೇತಕೆ II೨ II

ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಮುನ್ನ ಕೊಟ್ಟು ಪಡೆಯದನ್ನು ಬಯಸಲೇತಕೆ
ಮನ್ನಣೆಯ ನಡೆಸದಿರುವ ದೊರೆಯು ಏತಕೆ
ಚೆನ್ನ ಆದಿ ಕೇಶವನಲ್ಲದ ದೈವವೇತಕೆ II3 II

Audio Link:
http://www.musicindiaonline.com/p/x/HsK9CKz2SS.As1NMvHdW/

Bandano Raghavendra / ಬಂದಾನೋ ರಾಘವೇಂದ್ರ

ಬಂದಾನೋ ರಾಘವೇಂದ್ರ ಇoದಿಲ್ಲಿಗೆ
ಕಂದನ ಮೂರೆ ಕೇಳಿ ಜನನಿಯು ಬರುವಂತೆ

ಗಜವೇರಿ ಬಂದ ಜಗದಿತಾನಿಂದ
ಅಜಪಿತರಾಮನ ಪಾದಬ್ಜ ಸ್ಮರಿಸುತಲಿ

ಹರಿಯ ಕುಣಿಸುತ ಬಂದಾ ನರಹರಿ ಪ್ರಿಯ ಬಂದ
ಶರಣಾಗತರನು ಕರವ ಪಿಡಿವೆನೆಂದು

ಪ್ರಹ್ಲಾದ ವ್ಯಾಸ ಮುನಿದ್ರ ರಾಘವೇಂದ್ರ
ನಿಲ್ಲಿಸುತ ಮನವ ಮಧ್ವೇಶ ವಿಠಲನ