Thursday, August 6, 2009

Taratamya sangraha / ತಾರತಮ್ಯ ಸಂಗ್ರಹ

ಸತ್ಯ ಜಗಕಿದು ಪಂಚಭೇದವು
ನಿತ್ಯ ಶ್ರೀ ಗೋವಿಂದನ
ಕೃತ್ಯುವರಿತು ತಾರತಮ್ಯದಿ
ಕೃಷ್ಣ ನಧಿಕೆಂದು ಸಾರಿರೆ



ಜೀವ ಈಶಗೆ ಭೇದ ಸರ್ವತ್ರ
ಜೀವ ಜೀವಕೆ ಭೇದವು
ಜೀವ ಜಡ ಜಡ ಜಡಕೆ ಭೇದ
ಜೀವ ಜಡ ಪರಮಾತ್ಮಗೆ II1 II

ಮನುಷೋತ್ತಮನಿಗಧಿಪತಿ ಕ್ಷಿತಿಪರು
ಮನುಜದೇವರು ಗಂಧರ್ವರು
ಜಾನಪಿತ್ರಾಜಾನ ಕರ್ಮಜ
ದಾನವಾರಿತತ್ವಾತ್ಮರುII 2II

ಗಣಪ ಮಿತ್ರರು ಸಪ್ತ ಋಷಿಗಳು
ವಹ್ನಿ ನಾರದ ವರುಣರು
ಇನಜಗೆ ಸಮ ಸೂರ್ಯಚಂದ್ರರು ಮನುಸತಿಯು
ಹೆಚ್ಚುಪ್ರಹವನು II3 II


ದಕ್ಷಸಮ ಅನಿರುದ್ಧ ಗುರು ಶಚಿ ರತಿ
ಸ್ವಾಯಂಭುವರಾವ೯ರು
ಪಕ್ಷ ಪ್ರಾಣನಿಗಿಂತ ಕಾಮನು
ಕಿಂಚಿಧಿಕನು ಇಂದ್ರನು II4 II


ದೇವೇಂದ್ರನಿಗಿ೦ದಧಿಕ ಮಹಾರುದ್ರದೇವ
ಸಮಶೇಷಗರುಡರು
ಕೇವಲಧಿಕರು ಶೇಷಗರುಡಗೆ
ದೇವಿಭಾರತಿ ಸ ರಸ್ವತಿII ೫II

ವಾಯುವಿಗೆ ಸಮರಿಲ್ಲ ಜಗದೊಳು
ವಾಯು ದೇವರೇ ಬ್ರಹ್ಮ್ರುರು
ವಾಯುಬ್ರಹ್ಮ್ರುಗೆ ಕೋಟಿ ಗುಣದಿಂದ ಅಧಿಕ
ಶಕ್ತಳು ಶ್ರೀ ರಮಾ II೬ II

ಅನಂತ ಗುಣದಿಂ ಲಕುಮಿಗಧಿಕನು

ಶ್ರೀ ಪುರಂದರವಿಠಲನು

ಘನ ಸಮರು ಇವಗಿಲ್ಲ ಜಗದೊಳು

ಹನುಮಹೃತ್ವದ್ಮವಾಸಿಗೆ II೭ II