Thursday, August 27, 2009

Daya maado Ranga /ದಯ ಮಾಡೋ ರಂಗ

ದಯಮಾಡೋ ರಂಗಾ ದಯಮಾಡೋ
ನಿನ್ನ ದಾಸನು ನಾನೆಂದು IIಪII

ಹಲವು ಕಾಲದಿ೦ದ ಹ೦ಬಲ ಎನಗೆ
ಒಲಿದು ಪಾಲಿಸಬೇಕು ವಾರಿಜನಾಭ II೧II

ಇಹಪರಗತಿ ನೀನೆ ಇಂದಿರಾರಮಣ
ಸಹಾಯ ನಿನ್ನದೇ ಸವ೯ದಾ ತೋರಿ ಕರುಣ II೨II

ಕರಿರಾಜವರದನೆ ಕಾಮಿತ ಫಲದ
ಪುರಂದರವಿಠಲ ಹರಿಸಾವ೯ಭೌಮ II೩ II

In English:

Dayamaado ranga dayamaado
ninna daasanu naanendu pa

Halavu kaaladinda hambala yenage

olidu paalisabeeku varijanabha 1

Ehaparagati neene indiraramana

sahaya ninnade sarvada toori karuna 2

karirajavaradane kamitaphalada

purandara vitthala hari sarvabhooma 3



Idu Bhagya Bhagya / ಇದು ಭಾಗ್ಯ ಭಾಗ್ಯ ಭಾಗ್ಯವಯ್ಯ

ಇದು ಭಾಗ್ಯವಿದು ಭಾಗ್ಯವಿದು ಭಾಗ್ಯವಯ್ಯ IIಪII
ಪದುಮನಾಭನ ಪಾದಭಾಜನೆ ಸುಖವಯ್ಯ IIಅಪII

ಕಲ್ಲಾಗಿ ಇರಬೇಕು ಕಠಿಣ ಭವತೋರೆಯೋಳಗೆ
ಬಿಲ್ಲಾಗಿರಲು ಬೇಕು ಬಲ್ಲವರೋಳು
ಮೆಲ್ಲನೆ ಮಾಧವನ ಮನವ ಮೆಚ್ಚಿಸಬೇಕು
ಬೆಲ್ಲವಾಗಿರಬೇಕು ಬಂಧುಜನರೂಳಗೆ II೧II

ಬುದ್ಧಿಯಲಿ ತನುಮನವ ತಿದ್ದಿ ಕೊಳ್ಳಲುಬೇಕು
ಮದ್ದಾಗಿರಬೇಕು ಮುನಿಯೋಗಿಗಳಿಗೆ
ಮಧ್ವಮಾತಾಬ್ಧಿಯೋಳು ಮೀನಾಗಿರಬೇಕು
ಶುಧನಾಗಿರಬೇಕು ಕರಣತ್ರಯಗಳಲಿ II೨II


ವಿಷಯಭೋಗದ ತೃಣಕೆ ಉರಿಯಾಗಿರಲು ಬೇಕು
ನಿಶಿಹಗಲು ಶ್ರೀ ಹರಿಯ ನೆನೆಯಬೇಕು
ವಸುಧೇಶ ಶ್ರೀ ಪುರಂದರ ವಿಠಲರಾಯನ
ಹಸನಾದ ದಾಸರನು ಸೇವಿಸಲುಬೇಕು II೩ II

Audio Link:
http://www.kannadaaudio.com/Songs/Classical/BM/IduBhagya.ram

In English:

IDU BHGYAVUDU BHAGYAVIDU BHAGYAVAYYA
PADUMANAABHANA PAADABHAJANE SUKHAVAYYA

KALLAGI IRABEKU KATHINA BHAVATOOREYOOLAGE
BILLAGIRABEKU BALLAVAROOLU
MELLANE MAADHAVANA MANAVA MECCHISABEEKU
BELAAVAAGIRABEEKU BANDHUJAROOLAGE

BUDDIYALLI TANUMANAVA TIDDI KOLLALUBEEKU
MADDAGIRABEEKU MUUNIYOOGIGALIGE
MADWAMATABDIYOOLU MIINAAGIRABEEKU
SHUDHANAAGIRABEEKU KARANATRAYAGALALI

VISHAYABHOGADA TRUNAKE URIYAAGIRALU BEEKU
NISHIHAGALU SRI HARIYA NENEYABEEKU
VASUDHESHA SRI PURANDARAVITTHALARAAYANA
HASANAADA DAASARANU SEVISALUBEEKU.

Sunday, August 23, 2009

Aparaadhi naanalla /ಅಪರಾಧಿ ನಾನಲ್ಲ ಅಪರಾಧ

ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ

ನೀನೇ ಆಡಿಸದಿರಲು ಜಡ ಒನಿಕೆಯ ಬೊಂಬೆ
ಏನುಮಾಡಲು ಬಲ್ಲದು ತಾನೆಬೇರೆ
ನೀನಿಟ್ಟ ಸೂತ್ರದಿಂ ಚಲಿಪವು ಕೈಕಾಲುಗಳು
ನೀನೇ ಮುಗ್ಗಿಸಲು ಮುಗ್ಗುವ ದೇಹದವನು II೧II

ಒಂದೆಂಟು ಬಾಗಿಲ ಪಟ್ಟಣಕ್ಕೆ ತನ್ನ
ದೆಂದು ಇಪ್ಪತ್ತಾರು ಮನೆಯಾಳ್ಗಳ
ತಂದು ಕಾವಲ ನಿಲಿಸಿ ಎನ್ನ ನೀ ಒಳಗಿಟ್ಟು
ಮುಂದೆ ಭವದಲಿ ಬವಣಿಪುದನ್ಯಾಯ II೨ II

ಯಂತ್ರವಾಹಕ ನೀನೇ ಒಳಗಿದ್ದು ಎನ್ನ ಸ್ವ
ತಂತ್ರನೆಂದೆನಿಸಿ ಕೊಲಿಸುವರೆ ಹೇಳೊ
ಕಂತುಪಿತ ಲಕ್ಷ್ಮೀಶ ಎಂತಾಡದಂತಹುದಾ
ನಂತಮೂರುತಿ ನಮ್ಮ ಪುರಂದರವಿಠಲII ೩II

Aaru Balidarenu aaru baadukidarenu.

ಆರು ಬಾಳಿದರೇನು ಆರು ಬದುಕಿದರೇನು
ನಾರಯಣನ ಸ್ಮರಣೆ ನಮಗಿಲ್ಲದನಕ IIಪ II

ಉಣ್ಣಬರದವರಲ್ಲಿ ಊರೂಟವಾದರೆ ಏನು
ಹಣ್ಣು ಬಿಡದ ಮರಗಳು ಹಾಳಾದರೇನು
ಕಣ್ಣಿಲ್ಲದವಗಿನ್ನು ಕನ್ನಡಿಯಿದ್ದು ಫಲವೇನು
ಪುಣ್ಯವಿಲ್ಲದವನ ಪ್ರೌಢಿಮೆ ಮೆರೆದರೇನು II೧II

ಅಕ್ಕರಿಲ್ಲದವರಿಗೆ ಮಕ್ಕಳಿದ್ದು ಫಲವೇನು
ಹೊಕ್ಕು ನಡೆಯದ ನಂಟತನದೊಳೇನು
ರೊಕ್ಕವಿಲ್ಲದವಗೆ ಬಂಧುಗಳು ಇದ್ದರೇನು
ಮರ್ಕಟನ ಕೈಯೊಳಗೆ ಮಾಣಿಕ್ಯವಿದ್ದರೇನುII ೨II

ಅಲ್ಪದೊರೆಗಳ ಜೀತ ಎಷ್ತು ಮಾಡಿದರೇನು
ಬಲ್ಪಂಥವಿಲ್ಲದವನ ಬಾಳ್ವೆಯೇನು
ಕಲ್ಪಕಲ್ಪಿತ ಕಾಗಿನೆಲೆಯಾದಿ ಕೇಶವನ
ಸ್ವಲ್ಪವೂ ನೆನೆಯದ ನರನಿದ್ದರೇನು II೩II

Saturday, August 22, 2009

Stotragalu

''ಶ್ರೀ ಗಣೇಶ ಸ್ತೋತ್ರ ''

1ವಕ್ರ ತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನ೦ ಕುರುಮೆ ದೇವ ಸರ್ವ ಕಾರ್ಯೇಷು ಸರ್ವದ .

2 ಶುಕ್ಲಾಂಬರದರ೦ ವಿಷ್ಣು ಶಶಿವಣ೯೦ ಚತುಭು೯ಜ೦
ಪ್ರನನ್ನವದನ೦ ಧ್ಯಾಯೇತ ಸರ್ವ ವಿಘ್ನೋಪ ಶಾಂತಯೇ .



3.ಗಜಾನನ೦ ಭೂತ ಗಣಾದಿ ಸೇವಿತಮ್
ಕಪಿತ್ಥ ಜ೦ಭುಫಲ ಸಾರ ಭಕ್ಷಿತಮ್
ಉಮಾಸುತ೦ ಶೋಕ ವಿನಾಶ ಕಾರಣಮ
ನಮಾಮಿ ವಿಘ್ನೆಶ್ವರ ಪಾದಪ೦ಕಜಮ.


''ಶ್ರೀ ನಾರಾಯಣ ಸ್ತೋತ್ರ ''
ಶಾಂತಾಕಾರ೦ ಭುಜಗಶಯನ೦ ಪದ್ಮನಾಭ೦ ಸುರೇಶ೦
ವಿಶ್ವಾಧರ೦ ಗಗನ ದೃಶ೦ ಮೇಘವಣ೦ ಶುಭಾ೦ಗ೦
ಲಕ್ಷ್ಮೀ ಕಾ೦ತ೦ ಕಮಲನಯನ೦ ಯೋಗಿ ಹೃಧ್ಯಾನಗಮ್ಯ೦
ವಂದೇ ವಿಷ್ಣು೦ ಭವಭಯ ಹರ೦ ಸವ೯ ಲೋಕೈಕ ನಾಥ೦

ಸಶ೦ಖಚಕ್ರ೦ ಸಕಿರೀಟಕು೦ಡಲ೦ ಸಪೀತ ವಸ್ತ್ರ೦
ಸರಸಿರುಹೇಕ್ಷಣ೦ ಸಹಾರ ವಕ್ಷಸ್ಥಳ ಶೋಭಿಕೌಸ್ತುಭ೦
ನಾಮಮಿ ವಿಷ್ಣು೦ ಶಿರಸಾ ಚತುಭು೯ಜ೦

ಕಲ್ಯಾಣ ಅದ್ಭುತ ಗಾತ್ರಾಯ ಕಾಮಿತಾಥ೯ ಪ್ರದಾಯಿನೇ
ಶ್ರೀ ಮದ್ವೇ೦ಕಟ ನಾಥಾಯ ಶ್ರೀ ನಿವಾಸಾಯ ತೇ ನಮಃ

ಸುನೀಲ ನಿಲಧ ಶ್ಯಾಮ೦ ಸಚ್ಚಿದಾನ೦ದ ಹರಿವಿಷ್ಣು೦
ವೇದಸೇ ರಮಾರಮಣ ಮೀಶ೦ ವಿಠಲ೦ ಉಪಾಸ್ಮಹೆ

ರಾಮಾಯ ರಾಮಭಾದ್ರಾಯ ರಾಮಚಂದ್ರಾಯ
ವೇದಸೇ ರಘುನಾಥಾಯ ನಾಥಾಯ ಸೀತಾಯ ಪತಿಯೇ ನಮೋ ನಮಃ

ಒಂದು ಕೈಯಲ್ಲಿ ಖಡ್ಗ ಒಂದು ಕೈಯಲ್ಲಿ ಹಲಗೆ
ಅಂದವಾಗಿ ಪಿಡಿದು ದಿವರಾತ್ರಿಯಲಿ ಬಂದು ಬದಿಯಲ್ಲಿ
ನಿತ್ಯ ಬಾರಾಸನನಾಗಿ ಹಿಂದೆ ಮುಂದೆ ಉಪದ್ರವ ಆಗದಂತೆ
ಇಂದಿರೆರಮಣ ಕಾಯುತ್ತಲಿರೆ ಎನಗಾವ ಬಂಧನಗಳಿಲ್ಲ
ಧನ್ಯ ಧನ್ಯ ಕಂದಪ೯ನ್ಯಯ
ಸಿರಿ ವಿಜಯವಿಠಲರೆಯ ಎಂದೆಂದಿಗೂ ಆಪತ್ತು ಬರಲೀಸನು.




''ಶ್ರೀ ಆ೦ಜನೇಯ ಸ್ತೋತ್ರಂ :''


1 ಮನೋಜವ೦ ಮಾರುತತುಲ್ಯ ವೇಗ೦
ಜಿತೇ೦ದ್ರಿಯ೦ ಬುದ್ಧಿಮತಾ೦ ವರಿಷ್ಠ೦
ವಾತಾತ್ಮಜ೦ ವಾನರ ಯೂಥ ಮುಖ್ಯ೦
ಶ್ರೀ ರಾಮದೋತ೦ ಶರಣಂ ಪ್ರಪದ್ಧೆ ( ಶಿರಸಾ ನಮಾಮಿ)



2 ಬುದ್ಧಿಬ೯ಲ೦ ಯಶೋ ಧೈಯ೯೦
ನಿಭ೯ಯತ್ವ೦ ಅರೋಗತಾ
ಅಜಾಡ್ಯ೦ ವಾಕ್ಪಟು೦ ಚ
ಹನೂಮತ್ ಸ್ಮರಣಾದ್ಭವೇತ್




''ಕೃಷ್ಣ ವ೦ದನ '':

ಕರಾರವಿ೦ದೆನ ಪದಾರವಿ೦ದಮ್
ಮುಖಾರವಿ೦ದೇ ವಿನಿವೇಶಯ೦ತಮ
ವಟಸ್ಯ ಪತ್ರಸ್ಯ ಪುಟೇ ಶಯಾನಮ
ಬಾಲ೦ ಮುಕು೦ದ೦ ಮನಸಾ ಸ್ಮರಾಮಿ


ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ
ಪ್ರಣತಕ್ಲೇಶ ನಾಶಾಯ ಗೋವಿಂದಾಯ ನಮೋ ನಮಃ

ಜಯ ಜಯ ಆರತಿ /Jaya jaya aarti

ಜಯ ಜಯ ಆರತಿ ವಿಘ್ನವಿನಾಯಕ

ವಿಘ್ನವಿನಾಯಕ ಶ್ರೀ ಗಣೇಶ

ಜಯ ಜಯ ಆರತಿ ಸುಬ್ರಮಣ್ಯ೦

ಸುಬ್ರಮಣ್ಯ೦ ಕಾರ್ತಿಕೇಯ

ಜಯ ಜಯ ಆರತಿ ವೇಣುಗೋಪಾಲ

ವೇಣುಗೋಪಾಲ ವೇಣುಲೋಲ

ಪಾಪ ವಿದುರ ನವನೀತಚೂರ

ಜಯ ಜಯ ಆರತಿ ವೆಂಕಟರಮಣ

ವೆಂಕಟರಮಣ ಸಂಕಟಹರಣ

ಸೀತಾರಾಮ ರಾಧೆಶ್ಯಾಮಾ

ಜಯ ಜಯ ಆರತಿ ಗೌರಿಮನೋಹರ

ಗೌರಿಮನೋಹರ ಭವಾನಿಶಂಕರ

ಸಾಂಬ ಸದಾಶಿವ ಉಮಾಮಹೇಶ್ವರ

ಜಯ ಜಯ ಆರತಿ ರಾಜರಾಜೇಶ್ವರಿ

ರಾಜರಾಜೇಶ್ವರಿ ತ್ರಿಪುರಸುಂದರಿ

ಮಹಾಕಾಳಿ ಮಹಾಲಕ್ಷ್ಮಿ

ಮಹಾಸರಸ್ವತಿ ಮಹಾಶಕ್ತಿ

ಜಯ ಜಯ ಆರತಿ ಆ೦ಜನೆಯ

ಆ೦ಜನೆಯ ಹನುಮಂತ

ಜಯ ಜಯ ಆರತಿ ದತ್ತಾತ್ರೇಯ

ದತ್ತಾತ್ರೇಯ ತ್ರಿಮೂರ್ತಿ ಅವತಾರ

ಜಯ ಜಯ ಆರತಿ ಶನೆಶ್ವರಾಯ

ಶನೆಶ್ವರಾಯ ಭಾಸ್ಕರಾಯ

ಜಯ ಜಯ ಆರತಿ ಸದ್ಗುರುನಾಥ

ಸದ್ಗುರುನಾಥ ಶಿವಾನಂದ

ಜಯ ಜಯ ಆರತಿ ವೇಣುಗೋಪಾಲ

Rama yembo eradu aksharada /ರಾಮ ಎಂಬೋ ಎರಡು ಅಕ್ಷರದ ಮಹಿಮೆಯನು

ರಾಮ ಎಂಬೋ ಎರಡು ಅಕ್ಷರದ ಮಹಿಮೆಯನು
ಪಾಮರರು ತಾವೇನು ಬಲ್ಲರಯ್ಯ ಪ

'ರಾ ' ಎಂಬ ಮಾತ್ರದೊಳು ರಕ್ತ ಮಾಂಸ ದೊಲಿದ್ದ
ಆಯಸ್ಥಿ ಗತವಾದ ಅತಿ ಪಾಪವನ್ನು
ಮಾಯವನು ಮಾಡಿ ಮಹಾರಾಯ ಮುಕ್ತಿಯನು ಕೊಡುವ
ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ೧

ಮತ್ತೆ "ಮ "ಎಂದೆನಲು ಹೊರಬಿದ್ದ ಪಾಪಗಳು
ಬತ್ತಿ ಒಳ ಪೂಗದಂತೆ ಕಾವಟವಾಗಿ
ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ
ಭಕ್ತವರ ಹನುಮಂತನೊಬ್ಬ ತಾ ಬಲ್ಲ ೨

ಧರೆಯೋಳಿ ನಾಮಕ್ಕೆ ಸರಿ ಮಿಗಿಲು ಇಲ್ಲೇ೦ದು
ಪರಮವೇದಗಳೆಲ್ಲ ಪೂಗುಳುತಿಹಳು
ಸಿರಿಯರಸ ಪುರಂದರ ವಿಠಲನ ನಾಮವನು
ಸಿರಿ ಕಾಶಿಯಳಗಿಪ್ಪ ಶಿವನು ತಾ ಬಲ್ಲ ೩

Aacharavillada Naalige / ಆಚಾರವಿಲ್ಲದ ನಾಲಿಗೆ

ಆಚಾರ ವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ IIಪII
ವಿಚಾರವಿಲ್ಲದೆ ಪರರದೂಷಿಪುದಕ್ಕೆ ಚಾಚಿ ಕೊಂಡಿರುವಂಥ ನಾಲಿಗೆ IIಅಪIII

ಪ್ರಾತ: ಕಾಲದೋಳೆದ್ದು ನಾಲಿಗೆ ಶ್ರೀಪತಿ ಎನ್ನಬಾರದೆ ನಾಲಿಗೆ
ಪತಿತಪಾವನ ನಮ್ಮ ರತಿಪತಿಜನಕನ ಸತತವು ನುಡಿ ಕಂಡ್ಯ ನಾಲಿಗೆ II೧II

ಛಾಡಿ ಹೇಳಲು ಬೇಡ ನಾಲಿಗೆ ನಿನ್ನ ಬೇಡಿಕೊಂಬೆನು ನಾಲಿಗೆ
ರೂಢಿಗೋಡೆಯ ಶ್ರೀ ರಾಮನ ನಾಮವ ಪಾಡುತಲಿರು ಕಂಡ್ಯ ನಾಲಿಗೆ II೨II

ಹರಿಯ ಸ್ಮರಣೆ ಮಾಡು ನಾಲಿಗೆ ನರಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರವಿಠಲರಾಯನ ಚರಣ ಕಮಲ ನೆನೆ ನಾಲಿಗೆ II೩ II


Audio Link:http://www.youtube.com/watch?v=Om31yuvQoqU

Atulita baladhamam

अतुलित बलधामम हेमशैलाभ देहम
दनुजवन कृशानुम ज्ञानिनाम अग्रगण्यम
सकलगुणनिधानम वानराणाम धीशम
रघुपतीप्रिय भक्तम वातजातम नमामि
गोष्पदिकृत वारिशम मशकीकृत राक्षसम
रामायणमहामाला रत्नम वंदे अनिलात्मजम
अंजनानंदं वीरम जानकीशोकनाशनम
कपीशमस्य हंतारम वंदे लंका भयंकरम
उल्लंघ्य सिंधो सलिलम सलिलम, यः शोकवन्हीं जनकत्मजायाः
आदाय ते नैव ददाह लंकाम नमामि तं प्रंजलिरांजनेयम
मनोजवं मारुततुल्यवेगम, जितेंद्रियम बुद्धिमताम वरिष्ठम
वातात्मजम वानरयुथमुख्यम, श्रीरामदुतम शरणं प्रपद्ये
आंजनेय मतिपाटलाननम कांचनाद्रिक मनीय विग्रहम
पारिजाततरुमूल वासिनम, भावयामि पवमाननंदनम
यत्र यत्र रघुनाथकिर्तनम तत्र तत्र कृत मस्तकांजलिम
वाष्पवारिपरिपूर्ण लोचनम, भावयामि पवमाननंदनम

Audio link:http://www.youtube.com/watch?v=p4GTXPyacJA

Thursday, August 20, 2009

Sukhkarta Dukharta

My Mother always sings this aarti at home.. Especially On sankashti (sankashta Chaturthi) and Ganesh chaturthi ..Growing up we learnt the meaning and started singing this Beautiful aarti.

सुखकर्ता दुखहर्ता
सुखकर्ता दुखहर्ता वार्ता विघ्नाची ।। नुरवी, पुरवी प्रेम कृपा जयाची।। सर्वांग सुंदर उटी शेंदुराची ।। कंठी झळके माळ मुक्ता फळाची जयदेव जयदेव जय मंगलमुर्ती ।। दर्शनमात्रे मन कामना पुरती ।। १



।।रत्नखचित फरा तुज गौरी कुमरा ।। चंदनाची उटी कुंकुमकेशरा ।। हिरे जडीत मुकुट शोभतो बरा ।। रुणझुणती नुपुरे चरणी घागरीया ।। जयदेव जयदेव जय मंगलमुर्ती ।। दर्शनमात्रे मन कामना पुरती ।। २ ।।

लंबोदर पितांबर फणिवर वंधना ।। सरळ सोंड वक्रतुंड त्रिनयना ।। दास रामाचा वाट पाहे सदना ।। संकटी पावावे निर्वाणी रक्षावे सुरवर वंदना ।। जयदेव जयदेव जय मंगलमुर्ती ।। दर्शनमात्रे मन कामना पुरती ।। ३ ।।



Audio Link:
http://www.youtube.com/watch?v=NCyKAbz56gc







IN ENGLISH:

Sukhkarta Dukhharta Varta VighnachiNurvi Purvi Prem Krupa Jayachi Sarvangi Sundar Uti Shendurachi Kanti Jhalke Mal Mukataphalaanchi Jai dev jai dev Jai mangal murtiDarshan marte maan kamana purtiJai dev jai dev 1

Ratnakhachit Phara Tujh GaurikumraChandanaachi Uti Kumkum ke shara Hire jadit Mukut Shobhato Bara Runjhunati Nupure Charani GhagriyaJai dev jai dev Jai mangal murtiDarshan marte maan kamana purtiJai dev jai dev 2

Lambodar Pitaambar Phanivar vandanaSaral Sond Vakratunda Trinayana Das Ramacha Vat Pahe SadnaSankati Pavave Nirvani Rakshave Survar vandana Jai dev jai dev 2Jai mangal murtiDarshan marte maan kamana purtiJai dev jai dev ೩

ಕನ್ನಡ ದಲ್ಲಿ :
ಸುಖ ಕಾತಾ೯ ದುಃಖ ಹತಾ೯ ವಾತಾ೯ ವಿಘ್ನಾಚಿ ನುರವೀ ಪುರವಿ ಪ್ರೇಮ ಕೃಪಾ ಜಯಾಚಿ
ಸವಾ೯೦ಗೀ ಸುಂದರ ಉಟಿ ಶೇ೦ದೂರಾಚಿ ಕಂಠಿ ಝಳಕೆ ಮಾಳ ಮುಕ್ತಾ ಫಳಾ೦ಚೀ
ಜಯ ದೇವ ಜಯ ದೇವ ಜಯ ಮಂಗಳಮೂರ್ತಿ ದರ್ಶನ ಮಾತ್ರೇ ಮಾನ ಸ್ಮರಣೆ ಮಾತ್ರೇ ಮಾನ ಕಾಮನಾಪುರ್ತಿ ೧

ರತ್ನ ಖಚಿತ ಪಾರಾ ತುಜ ಗೌರಿಕುವರಾ ಚಂದನಾಚಿ ಉಟಿ ಕುಂಕುಮಕೇಶರಾ
ಹೀರೆ ಜಡಿತಮುಗುಟ ಶೋಭಾತೋ ಬರಾ ಋಣಝಣತಿ ನೂಪೂರೇ ಚರಣೀ ಘಾಗರಿಯಾ ಜಯ ದೇವ ಜಯ ದೇವ
ಜಯ ಮಂಗಳಮೂರ್ತಿ ದರ್ಶನ ಮಾತ್ರೇ ಮಾನ ಸ್ಮರಣೆ ಮಾತ್ರೇ ಮಾನ ಕಾಮನಾ ಪೂರ್ತಿ ೨

ಲಂಬೋದರ ಪೀತಾಂಬರ ಫಣಿವರ ಬಂದನಾ ಸರಳ ಸೂಂಡ ವಕ್ರತುಂಡ
ತ್ರಿನಯನ ದಾಸರಾಮಾಚಾ ವಾತಪಹೇ ಸದನಾ ಸಂಕಟಿ ಪಾವಾವೆ ನಿವಾ೯ಣಿ
ರಕ್ಷಾವೆ ಸುರವರ ವಂದನ ಜಯ ದೇವ ಜಯ ದೇವ ಜಯ ಮಂಗಳಮೂರ್ತಿ ದರ್ಶನ ಮಾತ್ರೇ ಮಾನ ಸ್ಮರಣೆ ಮಾತ್ರೇ ಮಾನ ಕಾಮನಾ ಪೂರ್ತಿ ೩

Sri Narayana Stotram




ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ
ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ


ಕರುಣಾಪಾರಾವಾರ ವರುಣಾಲಯ ಗಂಭೀರ ನಾರಾಯಣ II1II
ನವನೀರದಸಂಕಾಶ ಕೃತಕಲಿಕಲ್ಮಶನಾಶ ನಾರಾಯಣ II2 II
ಯಮುನಾತೀರವಿಹಾರ ದೃತ ಕೌಸ್ತುಭ ಮಣಿಹಾರ ನಾರಾಯಣ II3II
ಗೋವಿಂದ ಪಿತಾಂಬರಪರಿಧಾನ ಸುರಕಲ್ಯಾಣನಿಧಾನ ನಾರಾಯಣ II೪II

ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ


ಮಂಜುಲಗುಂಜಾಭೂಷ ಮಾಯಾ ಮಾನುಷವೇಷ ನಾರಾಯಣ II೫ II
ರಾಧಾಧರಮಧುರಸಿಕ ರಜನೀಕರಕುಲತಿಲಕ ನಾರಾಯಣ II೬ II
ಮುರಲಿಗಾನವಿನೋದ ವೇದಸ್ತುತಭೂಪಾದ ನಾರಾಯಣ II೭ II
ವಾರಿಜಭೋಷಾಭರಣ ರಾಜೀವರುಕ್ಮಿಣೀರಮಣ ನಾರಾಯಣII ೮II

ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ

ಜಲರುಹದಲನಿಭನೇತ್ರ ಜಗದಾರ೦ಭಕಸೂತ್ರ ನಾರಾಯಣ II೯ II
ಪಾತಕರಜನಿಸಂಹಾರ ಕರುಣಾಲಯ ಮಾಮುದ್ಧರ ನಾರಾಯಣII ೧೦II
ಅಘಬಕಕ್ಷಯಕ೦ಸಾರೆ ಕೇಶವ ಕೃಷ್ಣ ಮುರಾರೇ ನಾರಾಯಣ II೧೧II
ಹಾಟಕನಿಭಪೀತಾಂಬರ ಅಭಯಂ ಕುರು ಮೇ ಮಾವರ ನಾರಾಯಣ II೧೨II

ನಾರಾಯಣ ನಾರಾಯಣ ಜಯ ಗೋವಿಂದ ಹರೇ

ನಾರಾಯಣ ನಾರಾಯಣ ಜಯ ಗೋಪಾಲ ಹರೇ

ದಶರಥರಾಜಕುಮಾರ ದಾನವಮದಸ೦ಹಾರ ನಾರಾಯಣ II೧೩ II

ಗೋವಧ೯ನಗಿರಿರಮಣ ಗೋಪಿಮಾನಸಹರಣ ನಾರಾಯಣ II೧೪II
ಸರಯೂತೀರವಿಹಾರ ಸಜ್ಜನ ಋಷಿಮಂದಾರ ನಾರಾಯಣ II೧೫ II
ವಿಶ್ವಾಮಿತ್ರ ಮುಖತ್ರ ವಿವಿಧಪರಾಸುಚರಿತ್ರ ನಾರಾಯಣ II೧೬II

ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ

ಧ್ವಜವಜ್ರಾ೦ಕುಶಪಾದ ಧರಣಿ ಸೂತ ಸಹಮೋದ ನಾರಾಯಣ II೧೭II

ಜನಕಸುತಾಪ್ರತಿಪಾಲ ಜಯ ಜಯ ಸ೦ಸ್ಮ್ರುತಿ ಲೀಲಾ ನಾರಾಯಣ II೧೮II

ದಶರಥ ವಾ ಗ್ಧೃತಿಭಾರ ದಂಡಕವನಸಂಚಾರ ನಾರಾಯಣ II೧೯II

ಮುಷ್ಟಿಕಚಾಣೂರ ಸಂಹಾರ ಮುನಿ ಮಾನಸವಿಹಾರ ನಾರಾಯಣ II೨೦II

ನಾರಾಯಣ ನಾರಾಯಣ ಜಯ ಗೋವಿಂದ ಹರೇ

ನಾರಾಯಣ ನಾರಾಯಣ ಜಯ ಗೋಪಾಲ ಹರೇ

ವಾಲಿನಿಗ್ರಹಶೌರ್ಯ ವರಸುಗ್ರೀವಹಿತಾಯ೯ ನಾರಾಯಣ II೨೧II

ಮಾ೦ ಮುರಲಿಕರ ಧೀವರ ಪಾಲಯ ಪಾಲಯ ಶ್ರೀಧರ ನಾರಾಯಣ II೨೨II

ಜಲನಿಧಿಬಂಧನಧೀರ ರಾವಣಕಂಠವಿದಾರ ನಾರಾಯಣ II2೩II

ತಾಟಕಮದ೯ನರಾಮ ನಟಗುಣ ವಿವಿಧಧ ನಾಢ್ಯ ನಾರಾಯಣ II೨೪II

ನಾರಾಯಣ ನಾರಾಯಣ ಜಯ ಗೋವಿಂದ ಹರೇ

ನಾರಾಯಣ ನಾರಾಯಣ ಜಯ ಗೋಪಾಲ ಹರೇ

ಗೌತಮಪತ್ನಿಪೂಜನ ಕರುಣಾ ಘನಾವಲೋಕನ ನಾರಾಯಣ II೨೫ II

ಸಂಭ್ರಮ ಸೀತಾಕಾರ ಸಾಕೇತ ಪುರವಿಹಾರ ನಾರಾಯಣ II೨೬II

ಅಚಲೋದ್ಧೃತಿ ಚಂಚತ್ಕರ ಭಕ್ತಾನುಗ್ರಹತತ್ಪರ ನಾರಾಯಣ II೨೭II

ನೈಗಮಗಾನವಿನೋದ ರಕ್ಷಿತಸುಪ್ರಹ್ಲಾದ ನಾರಾಯಣ II೨೮II

ನಾರಾಯಣ ನಾರಾಯಣ ಜಯ ಗೋವಿಂದ ಹರೇ

ನಾರಾಯಣ ನಾರಾಯಣ ಜಯ ಗೋಪಾಲ ಹರೇ

IIಇತಿ ಶ್ರೀ ನಾರಾಯಣ ಸ್ತೋತ್ರಂ ಸಂಪೂಣ೯೦II

Audio Link:http://www.youtube.com/watch?v=cA1xRo8FgGA( This link has Narayana stotram in English).

Wednesday, August 19, 2009

SriRama Bhajana

ರಾಮ ರಾಮ ಜಯ ಸೀತಾ ರಾಮ
ರಾಮ ರಾಮ ಜಯ ರಾಜಾ ರಾಮ

ಶುದ್ಧ ಬ್ರ್ಮಹಪರಾತ್ಪರ ರಾಮ
ಕಾಲಾತ್ಮಕ ಪರಮೇಶ್ವರ ರಾಮ
ಲೀಲಾಕಲ್ಪಿತ ಜಗದ೦ಧಿ ರಾಮ
ಶೇಷತಲ್ಪಸುಖನಿದ್ರಿತ ರಾಮ
ಬ್ರ್ಮಹಾದ್ಯಮರಪ್ರಾಥಿ೯ಪ ರಾಮ
ಶಿಷ್ಟಾ ಶ್ರಿತಜನ ರಕ್ಷಕ ರಾಮ
ಚಂದ ಕಿರಣ ಕುಲಮಂಡಲ ರಾಮ
ಶ್ರೀ ಮದ್ ದಶರಥನಂದನ ರಾಮ
ಕೌಸಲ್ಯಾ ಸುಖವಧ೯ನ ರಾಮ
ಕೌಸಲ್ಯಾ ಸುಖವಧ೯ನ ರಾಮ
ಶ್ರೇಷ್ಠ ವಶಿಷ್ಠ ಮುನಿ ಸೇವಿತ ರಾಮ
ವಿಶ್ವಾಮಿತ್ರಪ್ರಿಯಧನ ರಾಮ
ಮುನಿವರ ಲಬ್ಧ ಬಲಾಬಲ ರಾಮ
ಘೋರ ತಾಟಕಾ ಘಾತಕ ರಾಮ
ಮಾರಿಚಾದಿನಿಪಾತಕ ರಾಮ
ಕೌಶಿಕಮುಖಸಂರಕ್ಷಕ ರಾಮ
ಶ್ರೀ ಮದ್ ಅಹಲ್ಯೂದಾದ್ಧರಕ ರಾಮ
ಗೌತಮಮುನಿಸಂಪೂಜಿತ ರಾಮ
ಸುರಮುನಿ ವರಗಣ ಸ೦ಸ್ತುತ ರಾಮ
ಗಂಗಾ ವರ್ಣನನ೦ದಿತ ರಾಮ
ನಾವಿಕಧಾವಿತಮ್ರುದುಪದ ರಾಮ
ಮಿಥಿಲಾಪುರಜನ ಮೂದದ ರಾಮ
ವಿದೇಹ ಮಾನ ಸರ೦ಜಕ ರಾಮ
ತ್ರಯ೦ಬಕ ಕಾತುಮ್ಮಕ ಭ೦ಜಕ ರಾಮ
ಸೀತಪಿ೯ತವರಮಾಲಿಕ ರಾಮ
ಕೃತವೈವಾಹಿಕಕೌತುಕ ರಾಮ
ಭಾಗ೯ವದಪ೯ವಿನಾಶಕ ರಾಮ
ಶ್ರೀ ಮದಯೋಧ್ಯಾನ೦ದನ ರಾಮ

Tuesday, August 18, 2009

Sri Venkateshwara Shatanamavali

ಓಂ ಶ್ರೀ ವೆಂಕಟೇಶಾಯಾ ನಮಃ
ಶ್ರೀನಿವಾಸಾಯ ನಮಃ
ಲಕ್ಷ್ಮಿಪತಯೇ ನಮಃ
ಅನಾಮಯಾಯ ನಮಃ
ಅಮೃತಾ೦ಶಾಯ ನಮಃ
ಜಗದ್ವ೦ದ್ಯಾಯ ನಮಃ
ಗೋವಿಂದಾಯ ನಮಃ
ಶಾಶ್ವತಾಯ ನಮಃ
ಪ್ರಭುವೇ ನಮಃ
ದೇವಾಯ ನಮಃ
ಕೇಶವಾಯ ನಮಃ
ಮಧುಸುಧನಾಯ ನಮಃ
ಅಮೃತಾಯ ನಮಃ
ಮಾಧವಾಯ ನಮಃ
ಕೃಷ್ಣಾಯ ನಮಃ
ಶ್ರೀ ಹರಯೇ ನಮಃ
ಜ್ಞಾ ನಪಂಜರಾಯ ನಮಃ
ಶ್ರೀ ವತ್ಸ ವಕ್ಷಸೇ ನಮಃ
ಶೇಷಾದ್ರಿನಿಲಯಾಯ ನಮಃ
ಗೋಪಾಲಯ ನಮಃ
ಪುರುಶೋತ್ತಮಾಯ ನಮಃ
ಗೋಪಿಶ್ವರಾಯ ನಮಃ
ಪರಂಜ್ಯೋತಿಷೆ ನಮಃವೈಕುಂಠಪತಯೇ ನಮಃ
ಅವ್ಯಯಾಯ ನಮಃ ಸುಧತನವೇ ನಮಃ
ಯಾದವೆಂದ್ರಾಯ ನಮಃ
ನಿತ್ಯ ಯೌವನರುಪವತೇ ನಮಃ
ಸರ್ವೇಶಾಯ ನಮಃ
ಧಾರಾಪತಯೇ ನಮಃ
ಸುರಪತಯೇ ನಮಃ
ನಿರ್ಮಲಾಯ ನಮಃ
ದೇವಪೂಜಿತಾಯ ನಮಃ
ಚತುಭು೯ಜಾಯ ನಮಃ
ಚಕ್ರಧರಾಯ ನಮಃ
ತ್ರಿಧಾಮೇನ್ನೆ ನಮಃ
ತ್ರಿಗುಣಾಶ್ರಯಾಯ ನಮಃ
ನಿವಿ೯ಕಲಾಪ್ಪ ನಮಃ
ಚತುಮೇ೯ದಾತ್ಮಕಾಯ ನಮಃ
ವಿಷ್ಣವೇ ನಮಃ
ಅಚ್ಯುತಾಯ ನಮಃ
ಪದ್ಮಿನಿ ಪ್ರಿಯಾಯ ನಮಃ
ನಿತ್ಯ ತೃಪ್ತಯ ನಮಃ
ನಿಗು೯ಣಾಯ ನಮಃ
ನಿರುಪದ್ರವಾಯ ನಮಃ
ಗದಾಧರಾಯ ನಮಃ
ಶಾಙಗ೯ಪಾಣಯೇ ನಮಃ
ನಿಷ್ಕಳ೦ಕಾಯ ನಮಃ
ನೀರಾತ೦ಕಾಯ ನಮಃ
ನಿರಂಜನಾಯ ನಮಃ
ನಿರಾಭಾಸಾಯ ನಮಃ
ಆತ೯ಲೋಕಾಭಯ ಪ್ರದಾಯ ನಮಃ
ಆಕಾಶ ರಾಜವರದಾಯ ನಮಃ
ಯೋಗಿ ಹೃತ್ಪದ್ಮಮ೦ದಿರಾಯ ನಮಃ
ದಾಮೋದರಾಯ ನಮಃ ಜಗತಪಾಲಾಯ ನಮಃ
ಪಾಪಘಾನ್ನಯ ನಮಃ ಶ೦ಖಧಾರಕಾಯ ನಮಃ
ಅನೇಕ ಮೂತ೯ಯೇ ನಮಃಅವ್ಯಕಾತ್ತಯ ನಮಃ
ಕತಹಸ್ತಾಯ ನಮಃ ವರಪ್ರದಾಯ ನಮಃ
ಅನೇಕಾತ್ಮನೆ ನಮಃದಿನಬಂಧೇನೆ ನಮಃ
ಬಿಲ್ವಪತ್ರಾಚ೯ನಪ್ರಿಯಾಯ ನಮಃ
ಜಗದ್ವಾಯಾ ಪಿನೇ ನಮಃ
ಜಗತಕ್ಕ ತ್ರೆ ನಮಃ
ಭಕ್ತ ವತ್ಸಲಾಯ ನಮಃ
ತ್ರಿವಿಕ್ರಮಾಯ ನಮಃ
ಶಿ೦ಶುಮಾರಾಯ ನಮಃ
ಜಟಾಮುಕುಟ ಶೋಭಿ ತಾಯ ನಮಃ
ಶ೦ಖಮಧೋಯ್ಯಲ್ಲಸನ್ಮ೦ಜುಲಕಿ೦ಕಿ
ಣಾಧ್ಯಕರು೦ಡಕಾಯ ನಮಃ
ನೀಲಮೇಘಶ್ಯಾಮತನವೇ ನಮಃ
ಅನಘಾಯ ನಮಃ
ವನಮಾಲಿನೆ ನಮಃ
ಪದ್ಮನಾಭಾಯ ನಮಃ
ಜಗತ್ಪತಯೇ ನಮಃ
ಚಿಂತಿತಾಥ೯ಪ್ರ ದಾಯ ನಮಃ
ಜಿಷ್ಣವೇ ನಮಃ
ದಶರೂಪವತೆ ನಮಃ
ದೇವಕೀನ೦ದಾನಾಯ ನಮಃ
ಶೌರಯೇ ನಮಃ
ಹಯಗ್ರಿವಾಯ ನಮಃ
ಜನಾಧ೯ನಾಯ ನಮಃ
ಕನಾಶ್ರವನತಾರೀಜ್ಯಾಯ ನಮಃ
ಪಿತಾ೦ಬರಧರಾಯ ನಮಃ
ಮೃಗಯಾಸಕ್ತ ಮಾನಸಾಯ ನಮಃ
ಅಷ್ವಾರೂಡಾಯ ನಮಃ
ಖಡ್ಗ ಧಾರಿಣೀ ನಮಃ
ಧನಾಜ೯ನಸುಮುತ್ಸಕಾಯ ನಮಃ
ಘನಸಾರಳಸ್ಮನಧ್ಯ ಕಸ್ತೂರಿ
ತಿಲಕೋಜ್ವಲಾಯ ನಮಃ
ಸಚ್ಚಿ ದಾನ೦ದರೋಪಾಯ ನಮಃ
ಜಗನ್ಮ೦ಗಳದಾಯಕಾಯ ನಮಃ
ಯಜ್ಞ ರೂಪಾಯ ನಮಃ
ಯಜ್ಞ ಭೋ ಕ್ತೆರ ನಮಃ
ಚಿನ್ಮ್ಯಾಯ ನಮಃ
ಪರಮೆಶ್ವರಾಯ ನಮಃ
ಪರಮಾಥ೯ ಪ್ರದಾಯ ನಮಃ
ಶಾ೦ತಾಯ ನಮಃ ಶ್ರೀ ಮತೇ ನಮಃ
ದೋದ೯ಡವಿಕ್ರಮಾಯ ನಮಃ
ಪರಾತ್ಪರಾಯ ನಮಃ
ಪರಬ್ರಹಮ್ಮನೆ ನಮಃ
ಶ್ರೀ ವಿಭವೇ ನಮಃ
ಜಗದಿಶ್ವರಾಯ ನಮಃ

ಶ್ರೀ ವೆಂಕಟೇಶಾಷ್ಟೂತ್ತರ ಶತನಾಮಾವಳಿ ಸಮಾಪ್ತಿ
.

Tirupati Girivasa Srivenkatesha /ತಿರುಪತಿ ಗಿರಿವಾಸ ಶ್ರೀ ವೆಂಕಟೇಶ

ತಿರುಪತಿ ಗಿರಿವಾಸ ಶ್ರೀ ವೆಂಕಟೇಶ
ನೀ ನೋಲಿದ ಮನೆ ಮನೆಯು ಲಕ್ಷ್ಮೀ ನಿವಾಸ


ಅಖಿಲಾಂಡ ಕೋಟಿ ಬ್ರಹ್ಮಾ೦ಡ ಪಾಲ
ಅಲಮೇಲು ಮಂಗಾ ಮನೋಲಾಸ ಲೋಲ

ಪಂಕಜ ಲೋಚನ ಪತಿತೋಧಾರ
ಸಂಕಟಹರಣ ಸುಧಾರಸಧಾರ

ಶಂಖ ಚಕ್ರಧರ ಶ್ರೀಕರ ಸುಂದರ
ನಿತ್ಯ ವಿನೂತನ ಸಾಕ್ಷಾತ್ಕಾರ
ವೇದ ಶಾಸ್ತ್ರ ಸಾರ ಸಕಲ ಸೂತ್ರಧಾರ
ಶಿರಸಾ ನಮಾಮಿ ಮನಸಾ ಸ್ಮರಾಮಿ




Monday, August 17, 2009

Hanumana Matave Hariya matavu /ಹನುಮನ ಮತವೆ ಹರಿಯ ಮತವು

ಹನುಮನ ಮತವೇ ಹರಿಯ ಮತವೂ
ಹರಿಯ ಮತವೇ ಹನುಮನ ಮತವೂ IIಪII

ಹನುಮನು ಒಲಿದರೆ ಹರಿ ತಾ ಒಲಿವನು
ಹನುಮನು ಮುನಿದರೆ ಹರಿ ಮುನಿವಾ IIಅಪII

ಹನುಮನು ಒಲಿದರೆ ಸುಗ್ರೀವನು
ಗೆದ್ದಾ ಹನುಮನು ಮುನಿದರೆ ವಾಲಿಯು ಬಿದ್ದಾ II೧II

ಹನುಮನು ಒಲಿದರೆ ವಿಭೀಷಣ ತಾ ಗೆದ್ದಾ
ಹನುಮನು ಮುನಿದರೆ ರಾವಣ ಬಿದ್ದಾ II೨II

ಹನುಮನು ಪುರಂದರ ವಿಠಲ ದಾಸ
ಪುರಂದರ ವಿಠಲನು ಹನುಮನೋಳ್ವಾಸಾ
II೩II

Sharanu sharanayya sharanu Benaka /ಶರಣು ಶರಣಯ್ಯ ಶರಣು ಬೆನಕ

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ
ಸುಖ ತಂದೆ ಕಾಯೋ ನಮ್ಮ ಕರಿಮುಖ IIಪII

ಎಲ್ಲಾರು ಒ೦ದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ
ಗರಿಕೆ ತಂದರೆ
ನೀನು ಕೊಡುವೆ ವರವನ್ನು ಗತಿ
ನೀನೆ ಗಣಪನೆ ಕೈ ಹಿಡಿಯೋ ಮುನ್ನ II೧ II


ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓಡುವುದು ಭೀತಿ
ನೀಡಯ್ಯ ಬಾಳೆಲ್ಲ ಬೆಳಗುವ ಶಕುತಿ
ತೋರಯ್ಯ ನಮ್ಮಲ್ಲಿ ನಿನ್ನಯ ಪ್ರೀತಿ II೨II

ಬೆನಕ ಬೆನಕ ಎಕದಂತ
ಪಚ್ಚೆಗಲ್ಲು ಪಾಣಿಮೆಟ್ಟ್ಲು ಒಪ್ಪುವ ವಿಘನೇಶ್ವರ
ನಿನಗೆ ಇಪ್ಪತೊಂದು ನಮಸ್ಕಾರಗಳು II೩II

Audio
Link:
http://www.kannadaaudio.com/Songs/Devotional/GaneshaChaturthiDevotional/Sharanu.ram

Saturday, August 15, 2009

Sri krishnashtakam /ಶ್ರೀ ಕೃಷ್ಣ ಅಷ್ಟಕಂ



ವಸುದೇವ ಸುತಂ ದೇವಂ ಕಂಸ ಚಾನುರ ಮರ್ದನಂ
ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗಧ್ಗುರುಂ
ಅಥಸೀ ಪುಷ್ಪ ಸಂಕಾಶಂ ಹಾರ ನೂಪುರ ಶೋಭಿತಂ
ರತ್ನ ಕಂಕಣ ಕೇಯುರಂ ಕೃಷ್ಣಂ ವಂದೇ ಜಗಧ್ಗುರುಂ
ಕುಟಿಲಾಲಕ ಸಂಯುಕ್ತಂ ಪೂರ್ಣ ಚಂದ್ರ ನಿಭಾನನಂ
ವಿಲಸತ್ ಕುಂಡಲ ಧರಂ ಕೃಷ್ಣಂ ವಂದೇ ಜಗಧ್ಗುರುಂ
ಮಂಧಾರ ಗಂಧ ಸಂಯುಕ್ತಂ ಚಾರುಹಾಸಂ ಚತುರ್ಭುಜಂ
ಬಾರ್ಹಿ ಪಿಂಚವ ಚುಡಗಂ ಕೃಷ್ಣಂ ವಂದೇ ಜಗಧ್ಗುರುಂ
ಉತ್ಪುಲ್ಲ ಪದಂ ಪತ್ರಕ್ಷಂ ನೀಲ ಜೀಮೂತ ಸಂನಿಭಂ
ಯಾದವಾನಂ ಶಿರೋ ರತ್ನಂ ಕೃಷ್ಣಂ ವಂದೇ ಜಗಧ್ಗುರುಂ
ರುಕ್ಮಿಣಿ ಕೇಳಿ ಸಂಯುಕ್ತಂ ಪಿಥಮ್ಬರ ಸುಶೋಭಿತಂ
ಆವಾಪ್ತ ತುಳಸಿ ಗಂಧಂ ಕೃಷ್ಣಂ ವಂದೇ ಜಗಧ್ಗುರುಂ
ಗೋಪಿಕಾನಾಂ ಕುಸಥ್ವಂಥ್ವ ಕುಮ್ಕುಮಾನ್ಗಿಥ ವಕ್ಷಸಂ
ಶ್ರೀನಿಕೇತಂ ಮಹೇಶ್ವಾಸಂ ಕೃಷ್ಣಂ ವಂದೇ ಜಗಧ್ಗುರುಂ
ಶ್ರೀವತ್ಸಾಂಕಂ ಮಹೋರಸ್ಕಂ ವನ ಮಾಲ ವಿರಯಿತಂ
ಶಂಖ ಚಕ್ರ ಧರಂ ದೇವಂ ಕೃಷ್ಣಂ ವಂದೇ ಜಗಧ್ಗುರುಂ
ಕ್ರಿಷ್ಣಷ್ಟಕಂ ಇಥಂ ಪುಣ್ಯಂ ಪ್ರಾಥ ರುಥ್ಥಾಯ ಯ್ಹಪತೆಥ್
ಕೋಟೀ ಜನ್ಮ ಕೃತಂ ಪಾಪಂ ಸ್ಮರನಾಥ್ ತಸ್ಯ ನಚ್ಯಥಿ

SRI KRISHNASHTAKAM
vasudevasutam dEvam kamsaChaNooraMardhanam (1)
DEvakeeParamAnandam Krishnam Vande Jagadgurum
ataseePushpaSankAsham hAranoopuraShobhitam (2)
ratnakankaNakeyooram Krishnam Vande Jagadgurum
kutilAlakaSamyuktam PoorNaChandranibhAsanam (3)
vilasatkundaladharam Krishnam Vande Jagadgurum
mandAragandhasamyuktam chAruhAsam chaturbhujam (4)
barhiPinchAvachoodangam Krishnam Vande Jagadgurum
utphalaPadmaPatrAksham neelajeemootasannibham (5)
yAdavAnam shiroratnam Krishnam Vande Jagadgurum
rukmiNi Kelisamyuktam PeetAmbara Sushobhitam (6)
avApta Tulasigandham krishnam Vande Jagadgurum
gopikAnAm KuchadwandwakukumAnkitavakshasam (7)
shriniketam MahEshwasam Krishnam Vande Jagadgurum
shrivatsAnkam Mahoraskam VanamAlAvirAjitam (8)
shankachakradharam Devam Krishnam Vande Jagadgurum
krishnAshTakamidam puNyam prAtarutthAya yah paThet (9)
koTiJanmaKrutam PApam SmaraNena Vinashyati.

Audio Link:
http://www.youtube.com/watch?v=i1Qm3s5e_a4&feature=related
( This video has telugu lyrics of Krishnashtakam
).

Monday, August 10, 2009

Yaak nirdayanaade

ಯಾಕೆ ನಿರ್ದಯನಾದೆ ಎಲೊ ದೇವನೆ ಪ
ಶ್ರೀ ಕಾಂತ ಎನಮೇಲೆ ಎಳ್ಳಷ್ಟು ದಯವಿಲ್ಲ ಅ ಪ

ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು

ಹಿಂಗದೆ ಪ್ರಹ್ಲಾದನಪ್ಪಿಕೊಂಡೆ
ಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆ
ಬಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ ೧

ಸಿರಿದೀವಿಗಹೀಲದೆ ಸೆರಗು ಸಂವರಿಸಿದೆ
ಗರುಡನ ಮೇಲೆ ಗಮನವಾಗದೆ
ಭರದಿಂದ ನೀ ಬಂದು ಕರಿಯನುದ್ಧರಿದೆ
ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ ೨

ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೇ
ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೆ
ಭಜನೆಗವರೇ ಹಿತರೆ ನಾ ನಿನಗೆ ಅನ್ಯನೇ
ತ್ರಿಜಗಪತಿ ಸಲಹೆನ್ನ ಪುರಂದರವಿಠಲ ೩

Yeke malagihe hariye

ಏಕೆ ಮಲಗಿಹೆ ಹರಿಯೆ ಏಸು ಆಯಾಸ
ಜೋಕೆ ಮಾಡುವ ಬಿರುದು ಸಾಕಾಯಿತೇನೊ IIಪII

ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ
ಅಮೃತಮಥನದಿ ಗಿರಿಯು ಅತಿ ಭಾರವಾಯ್ತೊ
ರಮಣಿಯನು ತರುವಾಗ ರಣರಂಗ ಬಹಳಯ್ತೊ
ಅಮರರಿಪುವನು ಸೀಳೆ ಆಯಾಸವಾಯ್ತೊ II೧II

ಅಕಾಶ ಭೇದಿಸಲು ಆ ಕಾಲು ಉಳುಕಿತೊ
ಕಾಕುನೃಪರನು ಸೀಳಿ ಕರ ಸೋತಿತೊ
ಭೂದೇವಿಯನರಸಿ ಬಳಲಿಕೆಯು ಬಹಳಾಯ್ತೊ
ಲೋಕಭಾರವ ಇಳುಹಿ ಸಾಕುಸಾಕಾಯ್ತೊ II೨ II

ಚಪಲೆಯರ ಮೋಹಿಸಲು ಉಪಟವು ಬಹಳಯ್ತೊ
ಅಪವಿತ್ರವನಡಗಿಸಲು ಅಧಿಕ ಶ್ರಮವಾಯ್ತೊ
ಕೃಪೆಮಾಡಿ ನೋಡೈಯ್ಯ ಕಣ್ಣುತೆರೆದು ಎನ್ನಕಡೆ
ಕಪಟನಾಟಕ ಶ್ರೀ ಗೋಪಾಲವಿಠಲ II೩II

Vadiraajamunipa

ವಾದಿರಾಜಮುನಿಪ ಹಯಮುಖ
ಪಾದಕಮಲ ಮಧುಪ IIಪII

ನೀ ದಯದಲಿ ತವಪಾದಧ್ಯಾನವನು
ಆದರದಲಿ ಕೊಟ್ಟಾದರಿಸೆನ್ನನು IIಅಪII

ಮೂಷಕಬಿಲದಿಂದ ಉದರ ಪೋಷಕ ಬರಲಂದು
ವಾಸುಕಿ ಭಯದಿ ನಿಮ್ಮಾಸನದೆಡೆ ಬರೆ
ಕ್ಲೇಶ ಕಳೆದು ಸಂತೋಷಗೈಸಿದೆ II೧II

ಮುಂದೆ ಭೂತನರನ ಪ್ರೇರಿಸಿ ಹಿಂದೆ ಒಬ್ಬ ನರನ
ನಿಂದರಿಸಿ ಆನಂದದಿಂದ ಜನ-
ವೃಂದ ನೋಡುತ್ತಿರೆ ಅಂದಣ ನಡೆಸಿದ್ಯೊ II೨II

ಶಾಸ್ತ್ರ ಪ್ರಸಂಗದಲಿ ನಾರಾಯಣಭೂತರ ಗೆಲಿದಲ್ಲೆ
ಖ್ಯಾತಿಯಿಂದ ಬಹು ಮಾತನಾಡಿ

ಶ್ರೀನಾಥನ ಮಂದಿರ ಪ್ರೀತಿಲಿ ತರಿಸಿದ್ಯೊ II೩II

ತುರಗವದನ ಪಾದ ಭುಜಗಳಲಿ
ಧರಿಸಿಕೋಂಡು ಮೋದ ಕಡಲೆಮಡ್ಡಿಯನು
ಕರದಿಂದುಣಿಸಿದ ಗುರುವರಶೇಖರ II೪II

ಆ ಮಹಾ ಗೋಪಾಲವಿಠಲ ತಾಮರಸದಳಗಳ
ಧೀಮಂತರಿಗೆ ಸುಕಾಮಿತವನು ಕೊಡುವ
ಆ ಮಹಾಮಹಿಮ II೫II
ರಾಮ ನಾಮವ ನೆನೆ ಮನವೆ ಪ
ರಾಮ ಎಂದವನೆ ಧನ್ಯನೆಂದು ಶೃತಿತತಿಗಳು ಪೊಗಳುತಿರೆ ಅ ಪ

ತರುಣತನದಿ ದಿನದಾಟಿತು ಸುಮ್ಮನೆ
ಶರೀರದೊಳು ಸ್ವರವಾಡುತಲೆ
ತರುಣಿ ಸುತರು ಸಂಸಾರವೆಂಬ
ಶರಧಿಯೊಳಗೆ ಮುಳುಗಿರದೆ ಮನವೆ ೧

ಬಗೆ ಬಗೆ ಜನ್ಮದಿ ಜನಿಸಿದೆ ನಾಳೆಗೆ
ಸಿಗುವುದೆ ನಿಜದಿಂ ಈ ಸಮಯ
ಮುಗುಧನಾಗಿ ಮತ್ತೆ ಜನಿಸಿ ಬರುವುದು
ಸೊಗಸು ಕಾಣುವುದೆ ಛೀ ಮನವೆ ೨

ಚಿಂತೆಯನೆಲ್ಲ ಒತ್ತಟ್ಟಿಗೆ ಇಟ್ಟು
ಅಂತರಂಗದಲಿ ಧ್ಯಾನಿಸುತ
ಕಂತುಪಿತ ಕನಕಾದಿಕೇಶವನ
ಎಂತಾದರೂ ನೀ ಬಿಡಬೇಡ ಮನವೆ 3II

Rokka eradakku

ರೊಕ್ಕ ಎರಡಕ್ಕು ದುಃಖ ಕಾಣಕ್ಕ ಪ

ಮಕ್ಕಳ ಮರಿಗಳ ಮಾಡೋದು ರೊಕ್ಕ
ಸಕ್ಕರೆ ತುಪ್ಪವ ಸವಿಸೊದು ರೊಕ್ಕ
ಕಕ್ಕುಲತೆಯನು ಬಿಡಿಸೋದು ರೊಕ್ಕ
ಘಕ್ಕನೆ ಹೋದರೆ ಘಾತಕ ಕಾಣಕ್ಕ ೧

ನೆಂಟರ ಇಷ್ಟರ ಮರೆಸೋದು ರೊಕ್ಕ
ಕಂಟಕಗಳ ಪರಿಹರಿಸೋದು ರೊಕ್ಕ
ಗಂಟು ಕಟ್ಟಲಿಕ್ಕೆ ಕಲಿಸೋದು ರೊಕ್ಕ
ತುಂಟತನಗಳ ಬಲಿಸೋದು ರೊಕ್ಕ ೨

ಇಲ್ಲದ ಗುಣಗಳ ತರಿಸೋದು ರೊಕ್ಕ
ಸಲ್ಲದ ನಾಣ್ಯವ ನಡಿಸೋದು ರೊಕ್ಕ
ಬೆಲ್ಲಕಿಂತಲು ಬಹು ಸವಿಯಾದ ರೊಕ್ಕ
ಇಲ್ಲದಿರಲು ಬಹು ದುಃಖ ಕಾಣಕ್ಕ ೩

ಉಂಟಾದ ಗುಣಗಳ ಮರೆಸೋದು ರೊಕ್ಕ
ಬಂಟರನೆಲ್ಲರ ಬರಿಸೋದು ರೊಕ್ಕ
ಕಂಠಿ ಸರಿಗೆಯನ್ನು ಗಳಿಸೋದು ರೊಕ್ಕ
ಒಂಟೆ ಕುದುರೆ ಆನೆ ತರಿಸೋದು ರೊಕ್ಕ ೪

ವಿದ್ಯದ ಮನುಜರ ಕರೆಸೋದು ರೊಕ್ಕ
ಹೊದ್ದಿದ ಜನರನು ಬಿಡಿಸೋದು ರೊಕ್ಕ
ಮುದ್ದು ಪುರಂದರ ವಿಠಲನ ಮರೆಸುವ
ಬಿದ್ಹೋಗೋ ರೊಕ್ಕವ ಸುಡು ನೀನಕ್ಕ ೫II

Ratuna dorakitalla

ರತುನ ದೊರಕಿತಲ್ಲ ಎನಗೆ ದಿವ್ಯ ರತುನ ದೊರಕಿತಲ್ಲ ಪ

ರತುನ ದೊರಕಿತು ಎನ್ನ ಜನ್ಮ

ಪವಿತ್ರವಾಯಿತು ಈ ದಿನವು ನಾ
ಯತುನಗೈವುತ ಬರುತಿರಲು

ಪ್ರಯತನವಿಲ್ಲದೆ ವಿಜಯರಾಯರೆಂಬ ಅ ಪ

ಪಥದಿ ನಾ ಬರುತಿರಲು ಥಳಥಳವೆಂದು
ಅತಿಕಾಂತಿ ಝಳಪಿಸಲು ಬೆರಗಾಗುತ್ತ
ಅತಿಚೋದ್ಯವ ಕಾಣಲು ಸೇವಿಸುತಿರೆ
ಸತತ ಕರಪಿಡಿದಾದರಿಸಿ ಮನೋ
ರಥವ ಪೂರೈಸುತಲಿ ದಿವ್ಯ

ಸನ್ಮತಿಯ ಪಾಲಿಸಿ ಮೋಕ್ಷ ಸುಪಥವ
ಅತಿಶಯದಿ ತೋರುತಲಿ ಪೊರೆಯುವ ೧

ಜ್ಞಾನವೆಂಬೋ ಪುತ್ಥಳಿ ಕಂಬಿಯಲಿ
ಅಣಿಮುತ್ತಿನ ಭಕ್ತಿಲಿ ಸುಕೃತಮಾತಾ
ನಾನಾ ವಿದ್ಹವಳದಲಿ ಸೇರಿಸುತಿರೆ
ಪ್ರಾಣಪದಕವೆಂಬ ಮಾಲಾನು
ಮಾನವಿಲ್ಲದೆ ಕೊರಳಿಗ್ಹಾಕುತ
ಗಾನದಿಂ ಕುಣಿಯುತಲಿ ಪಾಡುತ ೨

ದೀನ ಜನರುದ್ಧಾರ ಗಯ್ಯುವ
ಶೋಧಿಸಿ ಗ್ರಂಥಗಳ ಸುಳಾದಿಯ
ಮೋದದಿಂದಲಿ ಬಹಳ ಕವಿತೇ ಮಾಡಿ
ಸಾಧುಜನಕೆ ಸುಕಾಲ ಆನಂದವಿತ್ತು
ವಾದಿ ಜನರನು ಗೆದ್ದು ವಾದಿಸಿ
ಮಾಧವ ಜಗನ್ನಾಥವಿಠಲನ
ಪಾದಕಮಲಕೆ ಮಧುಪನಂದದಿ
ಸಾದರದಿ ತೋರಿಸುತ ಮೆರೆಯುವ ೩

Raagi tandirya

ರಾಗಿ ತಂದೀರ್ಯ ಭಿಕ್ಷಕೆ ರಾಗಿ ತಂದೀರ್ಯ IIಪII
ಯೋಗ್ಯರಾಗಿ ಭೋಗ್ಯರಾಗಿ ಭಗ್ಯವಂತರಾಗಿ ನೀವು IIಅಪII

ಅನ್ನದನವ ಮಾಡುವರಾಗಿ ಅನ್ನಛತ್ರವನಿತ್ತವರಾಗಿ
ಅನ್ಯವಾರ್ಥೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ II೧II

ಮಾತಪಿತೃಗಳ ಸೇವಿಪರಾಗಿ ಪಪ ಕಾರ್ಯಗಳ ಬಿಟ್ಟವರಾಗಿ
ಜಾತಿಯಲ್ಲಿ ಮಿಗಿಲಾದವರಾಗಿ ನೀತಿಮರ್ಗದಲಿ ಖಾತರಾಗಿ II೨II

ಗುರುಕಾರುಣ್ಯವ ಪಡೆದವರಾಗಿ ಗುರುವಿನ ಮರ್ಮದ ತಿಳಿದವರಾಗಿ
ಗುರುವಿನ ಪಾದವ ಸ್ಮರಿಸುವರಾಗಿ ಪರಮಪುಣ್ಯವ ಮಾಡುವರಾಗಿ II೩II

ಶ್ರೀನಿವಾಸನ ಸ್ಮರಿಸುವರಾಗಿ ಪ್ರಾಣ್ರಾಯರ ದಾಸರಾಗಿ
ದಾನಕೆಂದು ಬಲು ಹೆದರಿ ಇಂಥ ದೀನವೃತ್ತಿಯಲಿ ಹೀನರಾಗಿ II೪II

ಪಕ್ಷ ಮಾಸ ವ್ರತ ಮಾಡುವರ್ರಗಿ ಪಕ್ಷಿವಹನಗೆ ಪ್ರಿಯರಾಗಿ
ಕುಕ್ಷಿಯಲಿ ಕಲುಷವಿಲ್ಲದವರಾಗಿ ಭಿಕ್ಷುಕರು ಅತಿ ತುಚ್ಚರಾಗಿ II೫II

ವೇದ ಪುರಾಣವ ತಿಳಿದವರಾಗಿ ಮೇದಿನಿಯೊಳುವರಂಥವರಾಗಿ
ಸಾಧು ಧರ್ಮಗಳ ಚರಿಸುವರಾಗಿ ಓದಿ ಗ್ರಂಥಗಳ ಪಂಡಿತರಾಗಿ II೬II

ಆರು ಮಾರ್ಗವ ಅರಿತವರಾಗಿ ಮೂರು ಮರ್ಗವ ತಿಳಿದವರಾಗಿ
ಭೂರಿತತ್ವ ಬೆರದವರಾಗಿ ಕ್ರೂರರ ಸಂಗವ ಬಿಟ್ಟವರಾಗಿ II೭II

ಕಾಮಕ್ರೋಧವ ಅಳಿದವರಾಗಿ ನೇಮ ನಿತ್ಯವ ಮಾಡುವರಾಗಿ
ಆ ಮಹ ಪದವಿಯ ಸುಖಿಸುವರಾಗಿ ಪ್ರೇಮದಿ ಕುಣಿಕುಣಿದಾಡುವರಾಗಿ II೮II

ಸಿರಿರಮಣನ ಸದಾ ಸ್ಮರಿಸುವರಾಗಿ ಗುರುತಿಗೆ ಬಾಹೋರಂಥವರಾಗಿ
ಕರೆ ಸಂಸಾರವ ನೀಗುವರಾಗಿ ಪುರಂದರ ವಿಠಲನ ಸೇವಿಪರಾಗಿII9II





Neene Ballidanoo hari

ನೀನೆ ಬಲ್ಲಿದನೋ ಹರಿ ನಿನ್ನ ದಾಸರು ಬಲ್ಲಿದರೋ ಪ
ನಾನಾ ತೆರದಿ ನಿಧಾನಿಸಿ ನೋಡಲು
ನೀನೆ ಭಕ್ತರಾಧೀನನಾದ ಮೇಲೆ ಅ ಪ

ಜಲಜ ಭವಾಂಡಕ್ಕೆ ಒಡೆಯ ನೀನೆಸುವೆ
ಬಲು ದೊಡ್ಡವನು ನೀನಹುದೊ
ಆಲಸದೆ ಹಗಲಿರುಳೆನ್ನದೆ ಅನುದಿನ
ಒಲಿದು ಬಲಿಯ ಮನೆಬಾಗಿಲು ಕಾಯ್ದ ಮೇಲೆ ೧

ಖ್ಯಾತಿಯಿಂದಲಿ ಪುರುಹೂತಸಹಿತ ಸುರ
ವ್ರಾತವು ನಿನ್ನನ್ನು ಓಲೈಸಲು
ಭೂತಳದೊಳು ಸಂಪ್ರೀತಿಗೆ ಸಲುಕಿ ನೀ
ಪರ್ಥನ ರಥಕೆ ಸೂತನಾದ ಮೇಲೆ ೨

ಪರಮಪುರುಷ ಪರಬೊಮ್ಮ ನೀನೆನುತಲಿ
ನಿರತ ಶ್ರುತಿಯು ಕೊಂಡಾಡುತಿರೆ
ವರ ಪಂಡವರ ಮನೆಯೊಳಿಗ ಮಾಡ್ಯವರು
ಕರೆಕರೆದಲ್ಲಿಗೆ ಪೋಗಿ ಕಾಯ್ದ ಮೇಲೆ ೩

ಧುರದಲ್ಲಿ ಪಣೆಗೆ ಹೊಡೆಯಲು ಭೀಷ್ಮನು ಸಂ
ಹರಿಪೆನೆನುತ ಚ್ಕ್ರ ಝಳಿಸುತ
ಭರದಿಂದ ಬರಲಿಲ್ಲ ಹರಿನಾಮ ಬಲವಿರೆ
ಪರಕಿಸಿ ನೋಡಿ ಸುಮ್ಮನೆ ತಿರುಗಿದ ಮೇಲೆ ೪

ತರಳ ಕರೆಯಲು ನೀ ತ್ವರಿತದಿ ಕಂಬದಿ ನಂದು
ನರಮೃಗರೂಪದಿಂದವನ ಕಾಯ್ದೆ
ವರಗಳೀವ ಪುರಂದರ ವಿಠಲ ನಿನ್ನ
ಸ್ಮರಿಪರ ಮನದಲ್ಲಿ ಸೆರೆಯ ಸಿಕ್ಕಿದ ಮೇಲೆ ೫

Narayana ninna naamada smarane

ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವೆನ್ನ ಬಾಯಿಗೆ ಬರಲಿ ಬಾ ರಂಗ IIಪII

ಆಡುವಾಗ ನಲಿದಾಡುವಾಗಲಿ ನೋಡುತ ನಿಂದು ಮಾತ್ತಡುವಾಗ
ಕೇಡುತನದಿಂದ ಕೂಡಿ ಭವದೊಳು
ಮಾಡಿದ ಪಾಪವು ಓಡಿ ಹೋಗುವಹಾಗೆ II೧II

ಉರಿ ಬಂದಾಗಲಿ ಛಳಿಬಂದಾಗಲಿ ಗಡಗಡ ನಡಗುತ್ತಿರುವಾಗಲಿ
ಹರಿನಾರಾಯಾಣ ದುರಿತ ನಿವಾರಣ
ಇರುಳು ಹಗಲು ನಿನ್ನ ಸ್ಮರಣೆ ಮಾಡುವಂತೆ II೨II

ಕಷ್ಟವಾಗಿರಲಿ ಉತ್ಕೃಷ್ಟವಾಗಿರಲಿ ಇಷ್ಟಾರ್ಥಗಳೆಲ್ಲ ಕೂಡಿರಲಿ
ಕೃಷ್ಣ ಕೃಷ್ಣಯೆಂಬಭೀಷ್ಟದ ನಾಮದ
ಅಷ್ಟಾಕ್ಷರಿ ಮಂತ್ರ ಜಪಿಸುವ ಹಾಗೆ II೩II

ಕನಸಿನೊಳಾಗಲಿ ಮನಸಿನೊಳಾಗಲಿ ಮನಸು ಕೆಟ್ಟಿರಲಿ ಮುನಿದಿರಲಿ
ಜನಕಜಾಪತಿ ನಿನ್ನ ನಾಮದ ಸ್ಮರಣೆಯು
ಮನಸಿನೊಳಗೆ ಒಮ್ಮೆ ನೆನೆಸುವ ಹಾಗೆ II೪II

ಸಂತತ ನಿನ್ನಯ ಸಾಸಿರನಾಮವೆನ್ನ ಅಂತರಂಗದೊಳಿರುತಿರಲಿ
ಸಂತತ ವರದ ಪುರಂದರ ವಿಠಲ ಎ
ನ್ನಂತಕಾಲದೊಳೊಮ್ಮೆ ನೆನೆಸುವಹಾಗೆ



Naa ninagenu beduvadilla

ನಾ ನಿನಗೇನು ಬೇಡುವುದಿಲ್ಲ ಎನ್ನ
ಹೃದಯಕಮಲದೊಳು ನೆಲೆಸಿರು ಹರಿಯೆ

ಶಿರ ನಿನ್ನ ಚರಣಕ್ಕೆರಗಲಿ ಚಕ್ಷು

ಎರಕದಿಂದಲಿ ನಿನ್ನ ನೋಡಲಿ ಹರಿಯೆ
ಕರಣ ಗೀತಂಗಳ ಕೇಳಲಿ ನಾಸಿಕ
ನಿರ್ಮಾಲ್ಯಾನುದಿನ ಘ್ರಾಣಿಸಲಿ ಹರಿಯೆ II1II


ನಾಲಿಗೆ ನಿನ್ನ ಕೊಂಡಾಡಲಿ ಎನ್ನ
ತೋಳು ಕರಂಗಳ ಮುಗಿಯಲಿ ಹರಿಯೆ
ಕಾಲು ತೀರ್ಥಯಾತ್ರೆಗೆ ಪೋಗಲಿ ಮನ
ಬಲ್ಪಿನಿಂದಲಿ ನಿನ್ನ ಸ್ಮರಿಸಲಿ ಹರಿಯೆII2II


ಚಿತ್ತ ನಿನ್ನೊಳು ಮುಳುಗಾಡಲಿ ನಿನ್ನ
ಭಕ್ತ ಜನರ ಸಂಗ ದೊರಕಲಿ ಹರಿಯೆ
ವೃತ್ತಿ ತತ್ವಯೋಗಾಭ್ಯಾಸಕ್ಕಾಗಲಿ ರಂಗ
ವಿಠಲ ನಿನ್ನ ದಯವಾಗಲಿ ಹರಿಯೆ II3II

Madhwantargata vedavyasa /ಮಧ್ವಾಂತರ್ಗತ ವೇದವ್ಯಾಸ ಕಾಯೊ

ಮಧ್ವಾಂತರ್ಗತ ವೇದವ್ಯಾಸ ಕಾಯೊ
ಶುದ್ಧ ಮೂರುತಿಯೆ ಸರ್ವೇಶ IIಪII

ಶುದ್ಧಮನದಲಿ ನಿನ್ನ ಭಜಿಸುವ ಭಕ್ತರಿಗೆ
ಬುದ್ಧ್ಯಾದಿಗಳ ಕೊಟ್ಟು ಸಲಹೊ ದೇವರ ದೇವ IIಅಪII

ದ್ವಾಪರದಲಿ ಒಬ್ಬ ಮುನಿಪ ತನ್ನ
ಕೋಪದಿಂದಲಿ ಕೊಡಲು ಶಾಪ
ಸ್ಥಾಪಿಸಲು ಜ್ಞಾನ ಲೋಪ
ಅಪಾರ ತತ್ತ್ವಸ್ವರೂಪ
ಶ್ರೀಪತಿಯೇ ಪೊರೆಯೆಂದು ಮೊರೆಯಿಡೆ
ಪಾಪವಿರಹಿತಳಾದ ಯಮುನೆಯ
ದ್ವೀಪದಲಿ ಅಂಬಿಗರ ಹೆಣ್ಣಿನ
ರೂಪಗೊಲಿದವನಲ್ಲಿ ಜನಿಸಿದಿ II೧II

ವೇದವಾದಿಗಳೆಲ್ಲ ಕೆಡಲು ತತ್ತ್ವ-
ವಾದಿ ಜನರು ಬಾಯಿ ಬಿಡಲು
ಮೇದಿನಿ ಸುರರು ಕಂಗೆಡಲು ನಾನಾ
ವೇದವಿಭಾಗ ರಚಿಸಲು
ಮೋದದಿಂದ ತದರ್ಥಬೋಧಕ
ವಾದಶಾಸ್ತ್ರ ಪುರಾಣ ರಚಿಸಿ ವಿ-
ವಾದಗಳ ನಿರ್ವಾದ ಮಾಡಿದ
ಸಾಧುವಂದಿತಬಾದರಾಯಣII ೨II

ಸುಮತಿಗಳಿಗೆ ಬೋಧಿಸಿದೆ ಮಿಕ್ಕ
ಕುಮತಿಗಳನು ಭೇದಿಸಿದೆ
ಕ್ರಿಮಿಯಿಂದ ರಾಜ್ಯವಾಳಿಸಿದ ಜಗ-
ತ್ಸ್ವಾಮಿ ನೀನೆಂದು ತೋರಿಸಿದೆ
ವಿಮಲರೂಪನೆ ಕಮಲನಾಭನೆ
ರಮೆಯ ಅರಸನೆ ರಮ್ಯಚರಿತನೆ
ಮಮತೆಯಲಿ ಕೊಡು ಕಾಮಿತಾರ್ಥವ
ನಮಿಸುವೆನು ಹಯವದನಮೂರುತಿ II೩II

Kangalidyatako /ಕಂಗಳಿದ್ಯಾತಕೊ ಕಾವೇರಿ




ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ IIಪII

ಜಗಂಗಳೊಳಗೆ ಮಂಗಳಮೂರುತಿ
ರಂಗನ ಶ್ರೀಪಾದಂಗಳ ನೋಡದ IIಅಪII


ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲಿ ನಿಂದು
ಚಂದ್ರ ಪುಷ್ಕರಣಿ ಸ್ನಾನವ ಮಾಡಿ ಆ-
ನಂದದಿಂದಲಿ ರಂಗನ ನೋಡದ II೧II

ಹರಿಪಾದೋದಕ ಸಮ ಕಾವೇರಿ
ವಿರಜಾನದಿ ಸ್ನಾನವ ಮಾಡಿ
ಪರಮ ವೈಕುಂಠ ರಂಗಮಂದಿರ
ಪರವಾಸುದೇವನ ನೋಡದ II೨II

ಹಾರ ಹೀರ ವೈಜಯಂತಿ
ತೋರಮುತ್ತಿನ ಸರವ ಧರಿಸಿ
ತೇರನೇರಿ ಬೀದಿಲಿ ಮೆರೆವ
ರಂಗವಿಠಲನ ನೋಡದ II3II

Audio Link:
http://www.youtube.com/watch?v=PbkHXSa9eQQ&feature=related

Ishtu Dina e vaikuntha / ಇಷ್ಟು ದಿನ ಈ ವೈಕುಂಠ

ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೊ ಎನ್ನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ
ಸೃಷ್ತಿಗೀಶನೆ ಶ್ರೀರಂಗಶಾಯಿ IIಪII

ಎಂಟು ಏಳನು ಕಳೆದುದರಿಂದೆ
ಬಂಟರೈವರ ತುಳಿದುದರಿಂದೆ
ಕಂಟಕನೊಬ್ಬನ ತರಿದುದರಿಂದೆ
ಬಂಟನಾಗಿ ಬಂದೆನೊ ಶ್ರೀರಂಗಶಾಯಿ II1 II

ವನ ಉಪವನಗಳಿಂದ
ಘನ ಸರೋವರಗಳಿಂದ
ಕನಕ ಗೋಪುರಗಳಿಂದ
ಘನಶೊಭಿತನೆ ಶ್ರೀರಂಗಶಾಯಿ II2II


ವಜ್ರ ವೈಡೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ಕಂಡೆ
ದುರ್ಜನಾಂತಕನೆ ಶ್ರೀರಂಗಶಾಯಿ II೩II

ರಂಭೆ ಊರ್ವಶಿಯರ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ
ಅಂಬುಜೋದ್ಭವ ರುದ್ರರ ಕಂಡೆ
ಶಂಬರಾರಿಪಿತನೆ ರಂಗಶಾಯಿ II೪II

ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ II೫II


Daasoham tava Daasoham / ದಾಸೋಹಂ ತವ ದಾಸೋಹಂ

ದಾಸೋಹಂ ತವ ದಾಸೋಹಂ ತವ
ದಾಸೋಹಂ ತವ ದಾಸೋಹಂ IIಪII

ವಾಸುದೇವ ವಿಘತಾಘಸಂಘ ತವ IIಅ ಪII

ಜೀವಾಂತರ್ಗತ ಜೀವ ನಿಯಾಮಕ
ಜೀವ ವಿಲಕ್ಷಣ ಜೀವನದ
ಜೀವಾಧಾರಕ ಜೀವರೂಪಿ ರಾ
ಜೀವ ಭವಜನಕ ಜೀವೇಶ್ವರ ತವ II೧II

ಕಲಾಂತರ್ಗತ ಕಾಲನಿಯಮಕ
ಕಾಲ ತೀತ ತ್ರಿಕಾಲಜ್ಞ
ಕಾಲಪ್ರವರ್ತಕ ಕಾಲನಿವರ್ತಕ
ಕಾಲೋತ್ಪಾದಕ ಕಾಲ ಮೂರ್ಥಿ ತವ II೨II

ಕರ್ಮಕರ್ಮಕೃತ ಕರ್ಮಕೃತಾಗಮ
ಕರ್ಮ ಫಲಪ್ರದ ಕರ್ಮಜಿತ
ಕರ್ಮಬಂಧ ಮಹ ಕರ್ಮವಿಮೋಚಕ
ಕಮ ನಿಗ್ರಹ ಕರ್ಮಸಾಕ್ಷಿ ತವ II೩II

ಧರ್ಮಯೂಪ ಮಹ ಧರ್ಮವಿವರ್ಧನ
ಧರ್ಮವಿದೊತ್ತಮ ಧರ್ಮನಿಧೇ
ಧರ್ಮಸೂಕ್ಷ್ಮ ಮಹ ಧರ್ಮಸಂರಕ್ಷಕ
ಧರ್ಮಸಾಕ್ಷಿ ಯಮಧರ್ಮಪುತ್ರ ತವ II೪II

ಮಂತ್ರಯಂತ್ರ ಮಹ ಮಂತ್ರ ಬೀಜ ಮಹ
ಮಂತ್ರ ರಾಜಗುರು ಮಂತ್ರಧೃತ
ಮಂತ್ರಮೇಯ ಮಹ ಮಂತ್ರನಿಯಾಮಕ
ಮಂತ್ರದೇವ ಜಗನ್ನಾಥ ವಿಠಲ ತವ II೫II

Audio Link:
http://www.kannadaaudio.com/Songs/Devotional/Haridasapadagalu-Vidyabhushana/Daso.ram


Baaro namma manege gopalakrishna / ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ

ಬಾರೊ ನಮ್ಮ ಮನೆಗೆ ಗೋಪಾಲಕೃಷ್ಣ IIಪII

ಗೊಲ್ಲಬಾಲಕರನು ನಿಲ್ಲಿಸಿ ಪೆಗಲೇರಿ
ಗುಲ್ಲುಮಾಡದೆ ಮೊಸರೆಲ್ಲ ಕುಡಿದ ಕೃಷ್ಣ II೧II

ಮೂಜ್ಜಗವನೆಲ್ಲ ಬೊಜ್ಜೆಯೊಳಗೆ ಇಟ್ಟು
ಗೆಜ್ಜೆಯಕಚ್ಚಿ ತಪ್ಹೆಜ್ಜೆಯನಿಕ್ಕುತ II೨II

ಅಂಗನೇಯರ ವ್ರತ ಭಂಗವ ಮಾಡಿದ
ರಂಗವಿಠಲ ಭವಭಂಗವ ಮಾಡುವ II೩II



Audio Link:
http://www.kannadaaudio.com/Songs/Devotional/BS/BaroNammaManege.ram


Aava rogavu yenage deva /ಆವ ರೊಗವು ಎನಗೆ ದೇವ

ಆವ ರೊಗವೊ ಎನಗೆ ದೇವಧನ್ವಂತ್ರಿ IIಪII
ಸವಧಾನದಿ ಎನ್ನ ಕೈಯ ಪಿಡಿದು ನೀ ನೊಡಯ್ಯII ಅ ಪII

ಹರಿ ಮುರ್ತಿಗಳು ಕಾಣಿಸವು ಎನ್ನ ಕಂಗಳಿಗೆ ಕಾಣಿಸರು
ಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆ
ಹರಿ ಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆ
ಹರಿಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ II೧II

ಹರಿಪಾದ ಸೆವೆಗೆನ್ನ ಹಸ್ತಗಳು ಚಲಿಸವು
ಗುರುಹಿಯರಂಘ್ರಿಗೆ ಶಿರ ಬಾಗದು
ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು
ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ II೨II

ಅನಾಥಬಂಧು ಗೋಪಾಲವಿಠಲರೆಯಾ
ಎನ್ನ ಭಾಗದ ವೈದ್ಯ ನೀನೆಯಾದೆ
ಅನಾದಿ ಕಾಲದ ಭವರೊಗ ಕಳೆಯಯ್ಯ
ನಾನೆಂದಿಗುಮರೆಯೆ ನೀ ಮಾಡಿದ ಉಪಕಾರ II೩II

Audio Link:http://www.kannadaaudio.com/Songs/Devotional/KalluSakkareKolliro/Aava.ram

Baaro krishnayya ninna Bhaktara /ಬಾರೋ ಕೃಷ್ಣಯ್ಯ ನಿನ್ನ ಭಕ್ತರ

ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗಿಗ IIಪII

ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗದಲೇ ಶೀಲನೆ


ಅಂದುಗೆ ಪಾದವು ಕಾಲು೦ದುಗೆ ಕಿರು ಗೆಜ್ಜೆ ಧಿಂ ಧಿಮಿ ಧಿಮಿ ಧಿಮಿ ಧಿಮಿ ಧಿಮಿ ಎನುತ
ಪೋ೦ಗೋಳನೂದೂತ ಬಾರಯ್ಯ II1II


ಕಂಕಣ ಕರದಲ್ಲಿ ಪೂನ್ನು೦ಗುರ ಹೊಳೆಯುತ ಕಿಂಕಿಣಿ ಕಿಣಿ ಕಿಣಿ ಕಿಣಿ ಎನುತ
ಪೋ೦ಗೋಳನೂದೂತ ಬಾರಯ್ಯ ಬಾರೋ ಕೃಷ್ಣಯ್ಯ II೨II


ವಾಸ ಉಡುಪಿಲಿ ನೇಲೆಯಾದಿ ಕೇಶವನೆ ದಾಸ ನಿನ್ನ ಪದ ದಾಸ ನಿನ್ನ ಪದ ದಾಸ
ನಿನ್ನ ಪದ ದಾಸ ಕರೆವೇನು ಬಾರಯ್ಯ II೩ II



Audio link:
http://www.kannadaaudio.com/Songs/Classical/MLV-1/BaaroKrishnayya.ram

krishna ni Begane Baaro /ಕೃಷ್ಣ ನೀ ಬೇಗನೆ ಬಾರೋ

ಕೃಷ್ಣ ನೀ ಬೇಗನೆ ಬಾರೋ IIಪII

ಬೇಗನೆ ಬಾರೋ ಮುಖವನ್ನೇ ತೋರೋ IIಅಪII

ಕಾಲಲಂದುಗಿ ಗೆಜ್ಜೆ ನಿಲದ ಬಾವುಲಿ

ನೀಲವರ್ಣನೆ ನಾಟ್ಯ ವಾಡೂತ್ತ ಬಾರೋ II೨II



ಉಡಿಯಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ

ಕೊರಳಲ್ಲಿ ಹಾಕಿದ ವೈಜಯಂತಿ ಮಾಲ II೩ II



ಕಾಶಿ ಪೀತಾಂಬರ ಕೈಯಲ್ಲಿ ಕೊಳಲು

ಪೂಶಿದ ಶ್ರೀಗಂಧ ಮೈಯೊಳು ಗಮ ಗಮ II೪II





ತಾಯಿಗೆ ಬಾಯೊಳು ಜಗವನ್ನು ತೂರಿದ

ಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ II೫ II




Audio link:http://www.kannadaaudio.com/Songs/Devotional/KrishnaNeeBeganeBaaro-KJYesudas/Krishna.ram



Sunday, August 9, 2009

Sri satyanarayana swami aarati




जय लक्ष्मीरमणा, श्री जय लक्ष्मीरमणा ।

सत्यनारायण स्वामी, जनपातक हरणा ॥

रत्न जड़ित सिंहासन, अदभुत छवि राजे ।

नारद करत निराजन, घंटा ध्वनि बाजे ॥

प्रगट भये कलि कारण, द्विज को दरश दियो ।

बूढ़ो ब्राह्मण बनकर, कंचन महल कियो ॥

दुर्बल भील कठारो, इन पर कृपा करी ।

चंद्रचूड़ एक राजा, जिनकी विपत्ति हरी ॥

वैश्य मनोरथ पायो, श्रद्धा तज दीनी ।

सो फल भोग्यो प्रभुजी, फिर स्तुति कीनी ॥

भाव भक्ति के कारण छिन-छिन रूप धरयो ।

श्रद्धा धारण कीनी, तिनको काज सरयो ॥

ग्वाल बाल संग राजा, वन में भक्ति करी ॥

मनवांछित फल दीन्हो, दीनदयाल हरी ॥

चढ़त प्रसाद सवाया, कदली फल मेवा ॥

धूप दीप तुलसी से, राजी सत्यदेवा ॥

सत्यनारायण की आरति, जो कोइ नर गावे ।

कहत शिवानंद स्वामी, वांछित फल पावे ॥


In English:

Jai Lakshmiramana, Shri Jay Lakshmiramana,

Satyanarayan Svaami, Janapaatak Harana.

Ratn Jadit Sinhasan, Adbhut Chavi Raaje,

Naarad Karat Niraajan, Ghanta Dhvani Baaje.

Pragat Bhaye Kali Kaaran, Dvij Ko Darash Diyo

,Budho Braahman Bankar, Kanchan Mahal Kiyo.

Durbal Bhil Kathaaro, In Par Kripa Kari,

Chandrachud Ek Raja, Jinaki Vipati Hari.

Vaishy Manorath Paayo, Shraddha Taj Dini,

So Phal Bhogyo Prabhuji, Phir Stuti Kini.

Bhaav Bhakti Ke Kaaran, Chhin-Chhin Rup Dharyo,

Shraddha Dhaaran Kini, Tinako Kaaj Saryo.

Gvaal Baal Sang Raja, Van Mein Bhakti Kari,

Manavaanchhit Phal Dinho, Dindayaal Hari.

Chadhat Prasaad Savaaya, Kadali Phal Meva,

Dhup Dip Tulasi Se, Raaji Satyadeva.

Satyanarayan Ki Aarati, Jo Koi Nar Gave

,Kahat Shivanand Svami, Vanchhit Phal Pave. OM JAI





Saturday, August 8, 2009

Raghavendra tirtha nita /ರಾಘವೇಂದ್ರ ತೀರ್ಥನೀತ - ರಾಜಿಸುವಾತ

ರಾಘವೇಂದ್ರ ತೀರ್ಥನೀತ ರಾಜಿಸುವಾತ ಪ
ಪಾಪೌಘಗಳೆಲ್ಲವ ನೋಡಿಸಿ ಪುಣ್ಯಗಳೀವಾತಾ IIಅII

ಬಣ್ಣ ಬಣ್ಣದಿಂದ ಬಹಳ ಬೋಧಿಸುವಾತ - ಬಹಳ
ಸಣ್ಣ ದೊಡ್ಡಭೀಷ್ಟಗಳ ಸಾಧಿಸುವಾತಾ
ಪುಣ್ಯವಂತರಿಂದ ಬಹು ಪೂಜೆಗೊಂಬಾತ - ನಮಗೆ
ಕಣ್ಣ ಹಬ್ಬವಾಗುವಂತೆ ಕಾಣಿಸುವಾತಾ II೧ II

ಕಾಮಕ್ರೋಧಾದಿಗಳನೆ ಕಾಲಲೊದ್ದಾತ - ಈತ
ವ್ಯೋಮಕೇಶನಂತೆ ನಾಲ್ಕು ವೇದ ಪ್ರಖ್ಯಾತಾ
ಭೂಮಿಯೊಳು ದುರ್ವಾದಿಗಳನೆ ಭೂರಿ ಗೆದ್ದಾತ - ಪ್ರೌಢ
ಶ್ರೀಮಧ್ವಯೋಗೀಂದ್ರತೀರ್ಥ ಶಿಷ್ಯನೆಂಬಾತಾII ೨II

ಸಿಧ್ಧವಿದ್ಯೆಗಳಲಿ ಬಹು ಪ್ರಸಿಧ್ಧನಾದಾತಾ - ನಮ್ಮ
ಮಧ್ವಶಾಸ್ತ್ರಗಳನೆ ಮಾಡಿಕೊಟ್ಟಾತ
ಮಧ್ವೇಶವಿಠ್ಠಲನ ಧ್ಯಾನದಲಿದ್ದಾತ - ತುಂಗ
ಭದ್ರತೀರದಲ್ಲಿ ತಾನು ವಾಸವಾದಾತ II೩II




http://www.kannadaaudio.com/Songs/Devotional/home/EkeVrundaavanidi.php
(The first song in the album)

Friday, August 7, 2009

Aaradhana mahotsava 2009 pictures

These pictures are forwarded to me from Sri Raghavendra swamy community.
Thanks to them and thanks to srs mutt for providing the link.
Thanks to Mr Raghunandan for sharing the picasa link with all of us.

http://picasaweb.google.com/nandana18/Aradhana2009FirstDay#
http://picasaweb.google.com/nandana18/Aradhana2009Day2Shakotsava#
http://picasaweb.google.com/nandana18/Aradhana2009PoorvaAradhanaEvening#
http://picasaweb.google.com/nandana18/Aradhana2009Day3PoorvaAradhana#
http://picasaweb.google.com/nandana18/Aradhana2009Madhyaradhana#
http://picasaweb.google.com/nandana18/Aradhana2009UttaraAradhanaMahaRathotsava#

Yaake mukanadyo guruve

ಯಾಕೆ ಮೂಕನಾದ್ಯೋ -
ಗುರುವೇ ನೀನ್ಯಾಕೆ ಮೂಕನಾದ್ಯೋ IIಪII

ಯಾಕೆ ಮೂಕನಾದ್ಯೋ ಲೋಕಪಾಲಕ ಎನ್ನ
ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ IIಅಪII

ಹಿಂದಕ್ಕೆ ನೀ ಎನ್ನ ಮುಂದೆ ಸುಳೀದೀಗ
ಮಂದಿಯೆಂದದಿ ಎನ್ನ ಮಂದನ್ನ ಮಾಡೀಗ II೧II

ಬೇಕಾಗದಿದ್ದರೆ ಯಾಕೆ ಕೈಪಿಡಿದಿ
ಕಾಕುಜನರೊಳೆನ್ನ ನೂಕಿಬಿಟ್ಟು ಈಗ II೨ II

ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ
ಘನ್ನಮಹಿಮನೆ ನೀ ಎನ್ನ ಬಿಟ್ಟು ಈಗ II೩II

ಎಂದಿಗಾದರು ನಿನ್ನ ಪೊಂದಿಕೊಂಡವನಲ್ಲೆ
ಇಂದು ನೀ ಬಿಟ್ಟರೆನ್ನ ಮುಂದೆ ಕಾಯುವರ್ಯಾರೋ II೪II

ಜನ್ಯನು ನಾನೀಗ ಎನ್ನ ಜನಕನು ನೀನು
ಮನ್ನಿಸು ನೀ ನಿತ್ಯ ನನ್ಯಶರಣನಲ್ಲೆ II೫ II

ಈಗ ಪಾಲಿಸದಿರೆ ಯೋಗಿ ಕುಲವರ್ಯ
ರಾಘವೇಂದ್ರನೆ ಭವಸಾಗುವ್ಹಧ್ಯಾಗಯ್ಯII ೬II

ನಾಥನು ನೀನು ಅನಾಥನು ನಾನಯ್ಯ
ಪಾಥೋಜ ಗುರುಜಗನ್ನಾಥ ವಿಠ್ಠಲ ಪ್ರೀಯ II೭ II




Audio link:
http://www.kannadaaudio.com/Songs/Devotional/EkeVrundaavanidi/Yaake.ram





In English:
YaaKe mukanaadyoo
GuRuvee Ni Nyake mukanaadyoo

yaaKe mukanadyaoo lookapaalaka enna
SaaKuvaryaarayya srikara RaGhavendra

Hindakke nii enna munde sulidiga
Mandiyolage enna mandanna maadiga

Bekaagagiddre yaake kai pidi
Kaakujanarolenna nookibittu eega

Ninnatha karunilla ennatha krupanilla
Ghannamahimanee nii enna bittu eea

EnDigaadaru ninna pondikondavanalaa
Indu nii Bittare munde kaayuuvaryaaroo

JAnyanu naaniga enna janakanu niinu
Mannisu nii nitya nanyasharananalle

Eega paalisadire yogi kulavarya
Raghavendrane bhavasaaguhdyagaya

naathaNu niinu Anathanu Naanayya
paaThooja Gurujagannatha VItthala priya

karamugive Gururaya / ಕರಮುಗಿವೆ ಗುರುರಾಯ

ಕರಮುಗಿವೆ ಗುರು ರಾಯ ನೀ
ಹರಸಬೇಕು ವರವಂದ ಬೇಡುವೆನು ನಿಡಲೇ ಬೇಕು

ನಿನ್ನ ಪಾವನ ನಾಮ ಉಸಿರಾಗ ಬೇಕು
ನಿನ್ನ ಸೇವೆಗೆ ಬಾಳು ಮುಡಿಪಾಗಬೇಕು
ನೀ ನಡೆವ ಹಾದಿಯಲಿ ಮಣ್ಣಾಗ ಬೇಕು
ನಿನ್ನ ನೆನಪಲೆ ಮನವು ಹಣ್ಣಾಗ ಬೇಕು

ತುಂಗೆಯ ನೀರಾಗಿ ನಾ ಹರಿಯ ಬೇಕು
ಪಾದದ ಧುಳಾಗಿ ನಾ ನಲಿಯ ಬೇಕು
ಹೇಗಾದರೂ ನಿನ್ನ ನಾ ಸೇರಬೇಕು
ನಿನ್ನಲ್ಲಿ ನನ್ನನು ನಾ ಕಾಣಬೇಕು


Audio Link:
http://www.kannadaaudio.com/Songs/Devotional/Brudavanadali/Karamugive.ram

Yeddu Barutare Noode /ಎದ್ದು ಬರುತಾರೆ ನೋಡೆ

ಎದ್ದು ಬರುತಾರೆ ನೋಡೆ (ಗುರುಗಳು ) ತಾ
ವೆದ್ದು ಬರುತಾರೆ ನೋಡೆ IIಪII

ಮುದ್ದು ಬೃಂದಾವನ ಮಧ್ಯದೊಳಗಿಂದ
ತಿದ್ದಿ ಹಚ್ಚಿದ ನಾಮ ಮುದ್ರೆ ಗಳೋಪುತಿವೆ IIಅಪII

ಗಳ ಡೋಲು ಶ್ರೀ ತುಳಸಿ ನಳಿನಾಕ್ಷಿಮಾಲೆ
ಚೆಲುವ ಮುಖದೊಳು ಪೊಳೆವ ದಂತಗಳಿಂದ II೧II

ಹೃದಯ ಮಂದಿರದಲ್ಲಿ ಪದುಮನಾಭನ
ಭಜಿಸಿ ಮುದಮನದಿಂದ ನಿತ್ಯ ಸದಮಾಲರೂಪ ತಾಳಿII ೨II

ದಾತ ಗುರು ಜಗನಾಥ ವಿಠಲನ
ಪ್ರೀತಿಯ ಪಡಿಸುತ ದೂತರ ಪೋರೆಯುತ II೩ II

Audio Link:
http://www.musicindiaonline.com/music/devotional/s/album.8447/language.9/

Thursday, August 6, 2009

Taratamya sangraha / ತಾರತಮ್ಯ ಸಂಗ್ರಹ

ಸತ್ಯ ಜಗಕಿದು ಪಂಚಭೇದವು
ನಿತ್ಯ ಶ್ರೀ ಗೋವಿಂದನ
ಕೃತ್ಯುವರಿತು ತಾರತಮ್ಯದಿ
ಕೃಷ್ಣ ನಧಿಕೆಂದು ಸಾರಿರೆ



ಜೀವ ಈಶಗೆ ಭೇದ ಸರ್ವತ್ರ
ಜೀವ ಜೀವಕೆ ಭೇದವು
ಜೀವ ಜಡ ಜಡ ಜಡಕೆ ಭೇದ
ಜೀವ ಜಡ ಪರಮಾತ್ಮಗೆ II1 II

ಮನುಷೋತ್ತಮನಿಗಧಿಪತಿ ಕ್ಷಿತಿಪರು
ಮನುಜದೇವರು ಗಂಧರ್ವರು
ಜಾನಪಿತ್ರಾಜಾನ ಕರ್ಮಜ
ದಾನವಾರಿತತ್ವಾತ್ಮರುII 2II

ಗಣಪ ಮಿತ್ರರು ಸಪ್ತ ಋಷಿಗಳು
ವಹ್ನಿ ನಾರದ ವರುಣರು
ಇನಜಗೆ ಸಮ ಸೂರ್ಯಚಂದ್ರರು ಮನುಸತಿಯು
ಹೆಚ್ಚುಪ್ರಹವನು II3 II


ದಕ್ಷಸಮ ಅನಿರುದ್ಧ ಗುರು ಶಚಿ ರತಿ
ಸ್ವಾಯಂಭುವರಾವ೯ರು
ಪಕ್ಷ ಪ್ರಾಣನಿಗಿಂತ ಕಾಮನು
ಕಿಂಚಿಧಿಕನು ಇಂದ್ರನು II4 II


ದೇವೇಂದ್ರನಿಗಿ೦ದಧಿಕ ಮಹಾರುದ್ರದೇವ
ಸಮಶೇಷಗರುಡರು
ಕೇವಲಧಿಕರು ಶೇಷಗರುಡಗೆ
ದೇವಿಭಾರತಿ ಸ ರಸ್ವತಿII ೫II

ವಾಯುವಿಗೆ ಸಮರಿಲ್ಲ ಜಗದೊಳು
ವಾಯು ದೇವರೇ ಬ್ರಹ್ಮ್ರುರು
ವಾಯುಬ್ರಹ್ಮ್ರುಗೆ ಕೋಟಿ ಗುಣದಿಂದ ಅಧಿಕ
ಶಕ್ತಳು ಶ್ರೀ ರಮಾ II೬ II

ಅನಂತ ಗುಣದಿಂ ಲಕುಮಿಗಧಿಕನು

ಶ್ರೀ ಪುರಂದರವಿಠಲನು

ಘನ ಸಮರು ಇವಗಿಲ್ಲ ಜಗದೊಳು

ಹನುಮಹೃತ್ವದ್ಮವಾಸಿಗೆ II೭ II

Wednesday, August 5, 2009

Ee pariya sobagaava Devarali /ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ

ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ IIಪII
ಗೋಪಿಜನಪ್ರಿಯ ಗೋಪಾಲಗಲ್ಲದೆ IIಅಪ II

ದೊರಯತನದಲಿ ನೋಡೆ ಧರಣಿ ದೇವಿಗೆ ರಮಣ
ಸಿರಿಯ ತನದಲಿ ನೋಡೆ ಶ್ರೀಕಾಂತನು
ಹಿರಿಯ ತನದಲಿ ನೋಡೆ ಸರಸಿಜೋದ್ಭವನಯ್ಯ
ಗುರುವುತನದಲಿ ನೋಡೆ ಜಗದಾದಿ ಗುರುವು II೧II

ಪಾವನತ್ವದಿ ನೋಡೆ ಅದುರು ಗಂಗಾಜನಕ
ದೇವತ್ವದಿ ನೋಡೆ ದಿವಿಜರೋಡೇಯ
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ
ಅವಧೈಯ೯ದಿ ನೋಡೆ ಅಸುರಾಂತಕ II೨ II

ಗಗನದಲಿ ಸಂಚರಿಪ ಗಗನ ದೇವನೆ ತುರಗ
ಜಗತಿಧರ ಶೇಷಪಯ೯೦ಕಶನ
ನಿಗಮಗೋಚರ ಪುರಂದರಗಲ್ಲದೆ
ಮಿಗಿಲಾದ ದೈವಗಳಿಗೆ ಭಾಗ್ಯವುಂಟೆ II೩ II





Sankalpa seva of Sri Raghavendra Swamy

SRI GURU RAJO VIJAYATE


Here is the Link of SANKALPA SEVA OF GURU RAGHAVENDRA SWAMY.
http://www.gururaghavendra1.org/~srsmutt/articles/sankalpa.htm
I thank srs mutt for providing such avaluable information about the Sri Guragala seva and also thanks to gururaghavendra1.org .

Dasara nindisa Beda /ದಾಸರ ನಿಂದಿಸ ಬೇಡ ಮನುಜ

ದಾಸರ ನಿಂದಿಸ ಬೇಡ ಮನುಜ
ಹರಿ ದಾಸರ ನಿಂದಿಸ ಬೇಡ IIಪII

ರಾಮನ ನಿಂದಿಸಿ ರಾವಣ
ಕೆಟ್ಟ ವಿಭೀಷಣಗಾಯಿತು ಪಟ್ಟ
ಭೂಮಿಯ ಲೋಭದಿ ಕೌರವ ಕೆಟ್ಟ
ಧರ್ಮಗೆ ರಾಜ್ಯವ ಬಿಟ್ಟ II೧II

ಉಡಿಯಲ್ಲಿ ಕೆಂಡವ ಕಟ್ಟಿಕೊಂಡರೆ
ಸುಡದಲೇ ಬಿಡುವದೇನಣ್ಣ
ಪೋಡವಿಯ ಜನರಿಗೆ ಬಡತನ ಬಂದರೆ
ಬಿರುನುಡಿ ಆಡದಿರಣ್ಣ II೨ II

ದೇವಕಿಯ ಸೇರೆಯನ್ನು ಬಿಡಿಸಿದ ದಾಸರು
ನರರೆನೈ ಈ ಜಗದೊಳು
ಭಾವಜನಯ್ಯ ಭಕುತರ ಸೇವಿಸೆ
ಪಾವನ ಮಾಡೋ ಪುರಂದರ ವಿಠಲ II೩II

Tuesday, August 4, 2009

Jagadoddrana /ಜಗದೋದ್ಧಾರನ ಆಡಿಸಿದಳೆಶೋದಾ

ಜಗದೋದ್ಧಾರನ ಆಡಿಸಿದಳೆಶೋದಾ
ಜಗದೋದ್ಧಾರನ IIಪII

ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆಶೋದಾII ಅಪII

ನಿಗಮಕೆ ಸಿಲುಕದ ಅಗಣಿತ ಮಹಿಮನ ಮಹಿಮನ
ಮುಗುಗಳ ಮಣಿಕ್ಯನ ಆಡಿಸಿದಳೆಶೋದಾ II1II

ಅಣೋರಣೀಯನ ಮಹತೋ ಮಹಿಮನ
ಅಪ್ರಮೇಯನ ಆಡಿಸಿದಳೆಶೋದಾ II೨ II

ಪರಮ ಪುರುಶನ ಪರವಾಸುದೇವನ
ಪುರಂದರ ವಿಠಲನ ಆಡಿಸಿದಳೆಶೋದಾII ೩II



Yantrodharaka PranaDevara stotra /ಯಂತ್ರೋದ್ಧಾರಕ ಪ್ರಾಣದೇವ ಸ್ತೋತ್ರಂ


ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್

ಪೀನವೃತ್ತ ಮಹಾಬಾಹುಂ ಸರ್ವ ಶತೃ ನಿವಾರಣಂ II೧II

ನಾನಾರತ್ನ ಸಮಾಯುಕ್ತಂ ಕುಂಡಲಾದಿ ವಿರಾಜಿತಮ್

ಸರ್ವದಾಭೀಷ್ಠದಾತರಾಂ ಸತಾಂ ವೈ ಧೃಢಮಾವಹೇ II೨II

ವಾಸಿನಂ ಚಕ್ರ ತೀರ್ಥಸ್ಯ ದಕ್ಷಿಣಸ್ಥ ಗಿರೌಸದಾ

ತುಂಗಾಂಬೋಧಿ ತರಂಗಸ್ಯ ವಾತೇನ ಪರಿಶೋಭಿತೇ II೩II

ನಾನಾದೇಶಗತೈಃ ಸದ್ಭಿಃ ಸೇವ್ಯಮಾನಂ ನೃಪೋತ್ತಮೈಃ

ಧೂಪದೀಪಾದಿ ನೈವೇದೈಃ ಪಂಚಖಾದ್ಯೈಶ್ಚಶಕ್ತಿತಃ II೪II

ಭಜಾಮಿ ಶ್ರೀ ಹನೂಮತಂ ಹೇಮಕಾಂತಿ ಸಮಪ್ರಭಮ್

ವ್ಯಾಸತೀರ್ಥ ಯತೀಂದ್ರೇಣ ಪೂಜಿತಂ ಪ್ರಣಿಧಾನತಃ II೫II

ತ್ರಿವಾರಂ ಯಃ ಪಠೇನ್ನಿತ್ಯಂ ಸ್ತೋತ್ರಂ ಭಕ್ತ್ಯಾ ದ್ವಿಜೋತ್ತಮಃ

ವಾಂಛಿತಂ ಲಭತೇ ಭೀಷ್ಟಂ ಷಣ್ಮಾಸಾಭ್ಯಂತರೇ ಖಲು II೬II

ಪುತ್ರಾರ್ಥಿ ಲಭತೇ ಪುತ್ರಾನ್ ಯಶಾರ್ಥಿ ಲಭತೇ ಯಶಃ

ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥಿ ಲಭತೇ ಧನಂ II೭II

ಸರ್ವಥಾ ಮಾಸ್ತು ಸಂದೇಹೋ ಹರಿಃ ಸಾಕ್ಷೀ ಜಗತ್ಪತಿಃ

ಯಃಕರೋತ್ಯತ್ರ ಸಂದೇಹಂ ಸಯಾತಿ ನರಕಂ ಧೃವಮ್II ೮II
Iಇತಿ ಶ್ರೀವ್ಯಾಸರಾಜಯತಿ ಕೃತ ಯಂತ್ರೋದ್ಧಾರಕ ಪ್ರಾಣದೇವ ಸ್ತೋತ್ರಂ ಸಂಪೂರ್ಣಂI
IIಶ್ರೀಕೃಷ್ಣಾರ್ಪಣಮಸ್ತು II





http://www.youtube.com/watch?v=oyWaibj_rHI
( This is the video Link of Yantrodharaka Pranadevara devasthana In Hampi, Karnataka ,India.
One can see the glimpse of Yandtodharaka Pranadevaru
)

Bho yati varadrendra /ಭೋ ಯತಿ ವರದೇಂದ್ರ

ಭೋ ಯತಿ ವರದೇಂದ್ರ - ಶ್ರೀಗುರುರಾಯ ರಾಘವೇಂದ್ರ IIಪII

ಕಾಯೋ ಎನ್ನ ಶುಭಕಾಯ ಭಜಿಸುವೆನು
ಕಾಯೋ ಮಾಯತಮಕೆ ಚಂದ್ರಾ IIಅII

ಕಂಡ ಕಂಡ ಕಡೆಗೆ ತಿರುಗಿ - ಬೆಂಡಾದೆನೋ ಕೊನೆಗೆ
ಕಂಡ ಕಂಡವರ ಕೊಂಡಾಡುತ
ನಿಮ್ಮ ಕಂಡೆ ಕಟ್ಟ ಕಡೆಗೆ II೧II


ನೇಮವು ಎನಗೆಲ್ಲೀ ಇರುವುದು - ಕಾಮಾಧಮನಲ್ಲಿ
ಭೋ ಮಹಾಮಹಿಮನೆ ಪಾಮರ ನಾ
ನಿಮ್ಮ ನಾಮವೊಂದೆ ಬಲ್ಲೆ II೨II

ಮಂತ್ರವ ನಾನರಿಯೇ - ಶ್ರೀಮನ್ಮಂತ್ರಾಲಯ ಧೊರೆಯೆ
ಅಂತರಂಗದೊಳು ನಿಂತು ಪ್ರೇರಿಸುವ
ಅನಂತಾದ್ರೀಶ ನಾನರಿಯೆ II೩ II
Audio Link:
http://www.kannadaaudio.com/Songs/Devotional/EkeVrundaavanidi/Bhoyati.ram

Monday, August 3, 2009

Live Telecast of Aaradhna mahotsava 2009.

Etv kannada is telecasting Sri Raghavendra swamy aaradhna 2009.
plase see the information below and click on the link:http://www.srsmutt.org/.

Sunday, August 2, 2009

ಈಶ ನಿನ್ನ ಚರಣ ಭಜನೆ /Eeesha ninna charana Bhajane

ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು
ದೋಷರಾಶಿ ನಾಶ ಮಾಡೋ ಶ್ರೀಶ ಕೇಶವ IIಪII

ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ II1 II

ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾನವೆನಗೆ
ಬಾಧಿಸುವ ಯಮನ ಬಾಧೆ ಬಿಡಿಸು ಮಾಧವII ೨II


ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನು
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ II೩II


ಭ್ರಷ್ಟನೆನಿಸ ಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ II೪ II


ಮೊದಲು ನಿನ್ನ ಪಾದ ಪೂಜೆ ಮುದದಿ ಮಾಡುವೆನೈ ನಾನು
ಹೃದಯದೊಳಗೆ ಹುದುಗಿಸಯ್ಯ ಮಧುಸೂಧನII ೫II

ಕವಿದುಕೊಂಡು ಇರುವ ಪಾಪ ಸವೆದು ಪೋಗುವಂತೆಮಾಡು
ಜವನ ಬಾಧೆಯನು ಬಿಡಿಸೋ ತ್ರಿವಿಕ್ರಮ II೬ II


ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥೆ
ನೆಮವೇನಗೆ ಪಾಲಿಸಯ್ಯ ಸ್ವಾಮಿ ವಾಮನ II೭II


ಮದನನಯ್ಯ ನಿನ್ನ ಮಹಿಮೆ ವದನದಲ್ಲಿ ಒದಗುವಂತೆ
ಹೃದಯದಲ್ಲಿ ಸದನ ಮಾಡೋ ಮುದದಿ ಶ್ರೀಧರ II೮II



ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದು

ಹುಸಿಗೆ ನೀನು ಹಾಕದಿರೋ ಹೃಷಿಕೇಶನೆ II೯ II



ಆಬ್ದೀಯೊಳಗೆ ಬಿದ್ದು ನಾನು ಒದ್ದು ಕೊಂಬೆನಯ್ಯ ಭವದಿ

ಗೆದ್ದು ಪೋಪ ಬುದ್ಧಿ ತೋರೋ ಪದ್ಮನಭಾನೆII ೧೦II



ಕಾಮ ಕ್ರೋಧ ಬಿಡಿಸಿ ನಿನ್ನ ನಾಮ ಜಿವ್ಹೆಯೊಳಗೆ ನುಡಿಸಿ

ಶ್ರೀ ಮಹಾನುಭಾವನಾದ ದಾಮೋದರ II೧೧ II



ಪಂಕಜಕ್ಷಾ ನೀನೆ ಎನ್ನ ಮಂಕು ಬುದ್ಧಿಯನ್ನು ಬಿಡಿಸಿ ನಿನ್ನ

ಕಿಂಕರನ ಮಾಡಿಕೊಳ್ಳೋ ಸಂಕರುಷಣ II೧೨II



ಏಸುಜನ್ಮ ಬಂದರೇನು ದಾಸನಗಲಿಲ್ಲ ನಾನು

ಗಾಸಿಮಾದದಿರೋ ಇನ್ನು ವಾಸುದೇವನೆ II೧೩II



ಬುದ್ಧಿಶೂನ್ಯನಾಗಿ ನಾನು ಕದ್ದುಕಳ್ಳನಾದೆ ಎನ್ನ

ತಿದ್ದಿ ಹೃದಯ ಶುದ್ಧಮಾಡೋ ಪ್ರದ್ಯುಮನಾನೆ II೧೪ II



ಜನನಿ ಜನಕ ನಿನ್ನೆಯೆಂದು ಎನುವೆನಯ್ಯ ದಿನಬಂದು

ಎನಗೆ ಮುಕ್ತಿ ಪಾಲಿಸಿಂದು ಅನಿರುದ್ದನೆ II೧೫II



ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡೋ ಪ್ರೇಮ

ಇರಿಸು ನಿನ್ನ ಚರಣದಲ್ಲಿ ಪುರುಷೋತ್ತಮ II೧೬II



ಸಾಧುಸಂಗ ಕೊಟ್ಟು ನಿನ್ನ ಪಾದ ಭಜಕನೆನಿಸು ಎನ್ನ

ಭೇದ ಮಾಡಿ ನೋಡದಿರೋ ಅಧೋಕ್ಷದ II೧೭ II



ಚಾರುಚರಣ ತೋರಿ ಎನಗೆ ಪಾರಗಾಣಿಸಯ್ಯ ಕೊನೆಗೆ

ಭಾರ ಹಾಕಿರುವೆ ನಿನಗೆ ನಾರಸಿಂಹನೆ II೧೮ II



ಸಂಚಿತಾರ್ಥ ಪಾಪಗಳನು ಕಿಂಚಿತಾದರಿಲ್ಲದಂತೆ

ಮುಂಚಿತಾಗಿ ಕಳೆಯಬೇಕು ಸ್ವಾಮಿ ಅಚ್ಯುತ್II ೧೯II



ಜ್ಞಾನ ಭಕುತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನ

ಹೀನ ಬುದ್ಧಿ ಬಿಡಿಸೋ ಮುನ್ನ ಜನಾರ್ಧನ II೨೦ II



ಜಪತಪಾನುಷಾಠ ನೀನು ವಪ್ಪುವಂತೆ ಮಾಡಲಿಲ್ಲ

ತಪ್ಪು ಕೋಟಿ ಕ್ಷಮಿಸಬೇಕು ಉಪೇಂದ್ರನೆ II೨೧II



ಮೋರೆಯ ಇಡುವೆನಯ್ಯ ನಿನಗೆ ಸೆರೆಯ ಬಿಡಿಸು ಭಾವದ ಎನಗೆ

ಇರಿಸು ಭಕ್ತರೊಳಗೆ ಪರಮ ಪುರುಷ ಶ್ರೀಹರಿII ೨೨II



ಪುಟ್ಟಿಸಬೇಡವೆನು ಪುಟ್ಟಿಸಿದಕೆ ಪಾಲಿಸೇನು

ಇಷ್ಟು ಬೇಡಿಕೊಂಬೆ ನಾನು ಶ್ರೀಕೃಷ್ಣ II೨೩II



ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವನ

ಅಥಿ೯ಯಿಂದ ಸಲಹುವನು ಕೃತ೯ ಕೇಶವ II೨೪II



ಮರೆತುಬಿಡದೆ ಹರಿಯನಾಮ ಬರೆದು ಓದಿ ಕೇಳಿದವರಿಗೆ

ಕರೆದು ಮುಕ್ತಿ ಕೊಡುವ ಬಾಡದಾದಿಕೇಶವ II೨೫ II