Thursday, April 29, 2010

Esabeku iddu jaisabeeku

ಈಸಬೇಕು ಇದ್ದು ಜೈಸಬೇಕು
ಹೇಸಿಗೆ ಸ೦ಸಾರದಲ್ಲಿ ಆಸೆ ಲೇಶ ಇಡದ್ಹಾ೦ಗೆ IIಪII


ತಾಮರಸ ಜಲದ೦ತೆ ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ
ಕಾಮಿತ ಕೈಗೊ೦ಬರೆಲ್ಲ II೧II


ಗೇರು ಹಣ್ಣಿನಲ್ಲಿ ಬೀಜ ಸೇರಿದ೦ತೆ ಸ೦ಸಾರದಿ
ಮೀರಯಾಸೆ ಮಾಡದಲೆ
ಧೀರ ಕೃಷ್ಣನ ಭಕುತರೆಲ್ಲ II೨II


ಮಾ೦ಸದಾಸೆಗೆ ಮತ್ಸ್ಯ ಸಿಲುಕಿ
ಹಿ೦ಸೆಪಡುವ ಪರಿಯೊಳು
ಮೋಸ ಹೋಗದ್ಹಾ೦ಗೆ ಜಗ
ದೀಶ ಪುರಂದರವಿಠಲನ ನೆನೆದು II೩II