ಸತತ ಪಾಲಿಸೋ ಎನ್ನ ಯತಿ ರಾಘವೇಂದ್ರ IIಪII
ಪತಿತ ಪಾವನ ಪವನ ಸುತಮತಾ೦ಬುಧಿ ಚಂದ್ರಾ IIಅಪII
ಕ್ಷೋಣಿಯೋಳಗೆ ಕು೦ಭ ಕೋಣ ಕ್ಷೇತ್ರದಿ ಮೆರೆದೆ I ವೀಣಾವೆಂಕಟ
ಅಭಿದಾನದಿಂದಾII ಸಾನುರಾಗದಿ ದ್ವಿಜನ ಪ್ರಾಣವುಳುಹಿದ ಮಹಿಮೆI
ಏನೆ೦ದು ಬಣ್ಣಿಸಲಿ ಜ್ಞಾನಿಗಳ ಕುಲತಿಲಕ II೧II
ನಂಬಿದೆನೂ ನಿನ್ನ ಚರಣಾ೦ಬುಜವ Iಮನ್ಮನದ ಹಂಬಲ
ಪೂರೈಸೂ ಬೆ೦ಬಿಡದಲೆ II ಕು೦ಭಿಣಿ ಸುರನಿಕುರು೦ಬವಂದಿತ ಜಿತ I
ಶ೦ಭರಾ೦ತಕ ಶಾತ ಕು೦ಭಕಶ್ಯಪ ತನಯ II೨II
ಮ೦ದಮತಿಗಳ ಸಂಗದಿಂದ ನಿನ್ನಯ ಪಾದ Iಇಂದಿನ ತನಕ ನಾ
ಪೋ೦ದಲಿಲ್ಲಾ Iಕುಂದು ಎಣಿಸದೆಕಾಯೊ ಕಂದಪ೯ಪಿತ
ಶ್ಯಾಮಸುಂದರದಾಸ ಕಮ೯೦ದಿಗಳ ಕುಲವಯ೯ II೩II `