Saturday, November 21, 2009

Ranga baaro Panduranga baaro

ರಂಗ ಬಾರೋ ಪಾಂಡು ರಂಗ ಬಾರೋ
ರಂಗ ಬಾರೋ ನರಸಿಂಗ ಬಾರೋ IIಅಪII

ಕಂದ ಬಾರೋ ಎನ್ನ ತಂದೆ ಬಾರೋ
ಇಂದಿರಾ ರಮಣ ಮುಕುಂದ ಬಾರೋ II1II


ಅಪ್ಪ ಬಾರೋ ತಿಮ್ಮಪ್ಪ ಬಾರೋ
ಕಂದರ್ಪನಯ್ಯನೆ ಕಂಚಿ ವರದ ಬಾರೋ II2II

ಅಣ್ಣ ಬಾರೋ ಎನ್ನ ಚಿನ್ನ ಬಾರೋ
ಪುಣ್ಯಮೂರ್ತಿ ಮಹಿಷಪುರಿ ಚಿನ್ನ ಬಾರೋ II3II

ವಿಷ್ಣು ಬಾರೋ ಉಡುಪಿ ಕೃಷ್ಣ ಬಾರೋ
ಎನೀಷ್ಟ ಮೂರ್ತಿ ಪುರಂದರ ವಿಠಲ ಬಾರೋ II4II




In English:

RAnga baaro panduranga baaro
Ranga baaro narasinga baaro

Kandabaaro enna tande baaro
Indiraramana mukunda baaro

Appabaaro timmappa baaro
Kandarpanayyanee kanchivarada baaro

Anna baaro enna chinna baaro
Punyamurti mahishapuri china baaro

Vishnubaaro udupikrishna baaro
Enishta murti purandaravitthalabaaro



posted on may 27th 09

Toogire Rayara Toogire

ತೂಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯಕಿಕುಲ ತಿಲಕರ IIಪII


ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ
ತೂಗಿರೆ ಗುರು ರಾಘವೇಂದ್ರ ರ IIಅಪII

ಕು೦ದನ ಮಯವಾದ ಚಂದದ ತೊಟ್ಟಿಲೊಳ್
ಆನಂದದಿ ಮಲಗ್ಯಾ ರ ತೂಗಿರೆ
ನಂದನ ಕಂದ ಗೋವಿಂದ ಮುಕುಂದನ
ಚಂದದಿ ಭಜಿಪರ ತೋಗಿರೆ II೧II

ಯೋಗ ನಿದ್ರೆಯಾನ ಬೇಗನೆ ಮಡುವ
ಯೋಗಿಶ್ಯ ವಂದ್ಯರ ತೂಗಿರೆ
ಭೋಗಿಶಯನನ ಪಾದ
ಮೋದದಿ ಭಜಿಪರ ಭಾಗವತರನ್ನ ತೂಗಿರೆ II೨II

ಅದ್ವೈತ ಮತದ ವಿದ್ವಂಸದ ನಿಜ ಗುರು
ಮಧ್ವಮತೋದ್ಧಾರನ ತೂಗಿರೆ
ಶುದ್ದ ಸಂಕಲ್ಪ ದಿ ಬಂದ ನಿಜ ಭಕ್ತರ
ಉಧ್ಧಾರಮಾಲ್ಪರ ತೂಗಿರೆ II೩ II

ಭಜಕ ಜನರು ತಮ್ಮ ಭಜಜೆಯ ಮಾಡಲು
ನಿಜ ಗತಿ ಇಬ್ಬರ ತೂಗಿರೆ
ನಿಜ ಗುರು ಜಗನಾಥ ವಿಠಲನ ಪಾದವ
ಭಜನೆಯ ಮಲ್ಪರಣ ತೂಗಿರೆ II೪II

Toogiree Rayara Toogiree GuruGala
Toogiree yatikula tilakara
Toogire yoginDRa kaRakamala pojyara
Toogiree Guru Raghavendrara

KUndanaMayavada chandada totiilolu
Anandadi malaGyara toogire
Nandana Kanda mukundana
Chandadi bhajipara toogire

YogaNidreyanu Begane maaduva
Yogishyavandyara toogiree
Bhogishayananapaada
MooDadi Bhajipara bhagavataranna toogire

Adwaita matada vidwasada nija guru
madWamatadoddhranna toogiree
shuddha sankalpadi Banda nija Bhaktara
uddhara malpara toogiree

Bhajaka janaru tamma bhajaneya maadalu
Nijagati ibbara toogiree
Nija guru jagannathavitthalana paadava
Bhajaneya Malpara Toogire


Posted on may 19th 2009

audio Link:http://www.youtube.com/watch?v=X6CR9ZEmD9s



satata gananaatha Siddiyaiva

ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ
ಮತಿ ಪ್ರೇರಿಸುವಳು ಪಾವ೯ತಿದೆವಿ ಮು
ಕುತಿ ಪಥಕೆ ಮನವೀವ ಮಹಾರುದ್ರದೇವರು
ಹರಿಭಕುತಿ ದಾಯಕಳು ಭಾರತಿದೇವಿ ಯು
ಕುತಿ ಶಾಸ್ತ್ರಗಳಲಿ ವನಜಸ೦ಭವನರಸಿ
ಸತ್ಕರ್ಮಗಳ ನಡೆಸಿ ಸುಜ್ಞಾನ ಮತಿ ಇತ್ತು
ಗತಿ ಪಾಲಿಸುವವನು ನಮ್ಮ ಪವಮಾನನು
ಚಿತ್ತದಲಿ ಆನ೦ದ ಸುಖವಿವಳು ರಮಾ
ಭಕ್ತ ಜನರೊಡೆಯ ನಮ್ಮ ಪುರಂದರ ವಿಠಲನು
ಸತತ ಇವರಲಿ ನಿಂತು ಕೃತಿಯ ನಡೆಸುವನು


In English:

Satata gananaatha siddhiyaniva karyadali
Mati prerisuvalu parvathidevi muu
Kuti pathake manaviva maharudradevaru
Haribhakuti daayakalu bharatidevi yuu
Kuti shastragalalli vanajasambhavanarasi
Satkarmagala nadesi sugjnana mati ittu
gati paalisuvavanu namma pavamaanana
chittadali aanada sukhavivalu ramaa
bhkta janarodeya namma purandaravitthalanu
satata evarali nintu krutiya nadesuvanu



Posted On may 9th 2009

Hondi Badukiro Raghavendra

ಹೊಂದಿ ಬದುಕಿರೊ ರಾಘವೇಂದ್ರ ರಾಯರ IIಪII

ಕುಂದದೆಮ್ಮನು ಕರುಣದಿಂದ ಪೊರೆವರ IIಅಪ II


ನಂಬಿ ತುತಿಸುವ ನಕದಂಬಕಿಷ್ಟವ
ತುಂಬಿ ಕೊಡುವರು ಅನ್ಯರ್ಹಂಬಲೀಯನು II೧II

ಅಲವಬೋಧರ ಸಮತಜಲಧಿಚಂದಿರ
ಒಲಿದು ಭಕ್ತರ ಕಾಯ್ವ ಸುಲಭ ಸುಂದರ II೨ II

ಗುರು ಸುಧಿಂದ್ರರ ವಿಮಲಕರಜರೆನಿಪರ
ಸ್ಮರಿಸಿ ಸುರುಚಿರ ವಿಮಲಚರಣ ಪುಷ್ಯರ II೩II

ಘಾಲಲೋಚನ ವಿನುತ ಮೂಲರಾಮನ
ಲೀಲೆಯನುದಿನ ತುತಿಪ ಶೀಲ ಸದ್ಗುಣ II೪ II

ಭೂತ ಭಾವನ ಜಗನ್ನಾಥವಿಠಲನ
ಪ್ರೀತಿಪಾತ್ರನ ನಂಬಿರೀತನುದಿನ II೫ II

Audio Link:
http://www.kannadaaudio.com/Songs/Devotional/SriVidyabhushana/Old/HondiBadukiro.ram


Enu Dhanyalo lakumi

ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ
ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡು ತಿಹಳು ಪ

ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ
ಸಾಟಿಯಿಲ್ಲದೆ ಮಾಡಿ ಪೂರ್ಣ ನೋಟದಿಂದ ಸುಖಿಸುತಿಹಳು ೧

ಛತ್ರ ಚಾಮರ ವ್ಯಜನ ಪರಿಯಂಕ ಪಾತ್ರ ರೂಪದಲ್ಲಿ ನಿಂತು
ಛಿತ್ರ ಚರಿತನಾದ ಹರಿಯ ನಿತ್ಯ ಸೇವೆ ಮಾಡುತಿಹಳು ೨

ಸರ್ವತ್ರದಿ ವ್ಯಾಪ್ತನಾದ ಸರ್ವ ದೋಷರಹಿತನಾದ
ಸರ್ವ ವಂದ್ಯನಾದ ಪುರಂದರ ವಿಟ್ಠಲನ್ನ ಸೇವಿಸುವಳೊ


Audio link:http://www.kannadaaudio.com/Songs/Devotional/EnuDhanyaloLakumi-SriVidyabhushana/Enu.ram



Bhushanake Bhushana

ಭೂಷಣಕೆ ಭೂಷಣ ಇದು ಭೂಷಣ
ಶೇಷಗಿರಿವಾಸ ಶ್ರೀವರವೆಂಕಟೇಶ IIಪII

ನಾಲಿಗೆಗೆ ಭೂಷಣ ನಾರಾಯಣ ನಾಮ
ಕಾಲಿಗೆ ಭೂಷಣ ಹರಿಯಾತ್ರೆಯು
ಆಲಯಕೆ ಭೂಷಣ ತುಲಸಿವೃಂದವನ
ವ್ಶಾಲ ಕರ್ಣಕೆ ಭೂಷಣ ವಿಷ್ಣುಕಥೆಯು II೧II

ದಾನವೇ ಭೂಷಣ ಇರುವ ಹಸ್ತಂಗಳಿಗೆ
ಮಾನವೇ ಭೂಷಣ ಮಾನವರಿಗೆ
ಜ್ಞಾನವೇ ಭೂಷಣ ಮುನಿಯೊಗಿವರರಿಗೆ
ಮಾನಿನಿಗೆ ಭೂಷಣ ಪತಿಭಕ್ತಿಯು II೨II

ರಂಗನನು ನೋಡುವುದೆ ಕಂಗಳಿಗೆ ಭೂಷಣ
ಮಂಗಳಾಂಗಿಗೆ ಮಣಿವ ಶಿರ ಭೂಷಣ
ಶೃಂಗರ ತುಲಸಿಮಣಿ ಕೊರಳಿಗೆ ಭೂಷಣ
ರಂಗವಿಠಲ ನಿಮ್ಮ ನಾಮ ಅತಿ ಭೂಷಣ II೩II
Posted On Aug 10 2009