Wednesday, July 8, 2009

ಪವಮಾನ ಪವಮಾನ ಜಗದ ಪ್ರಾಣ / Pavamana jagada prana



ಪವಮಾನ ಪವಮಾನ ಜಗದ ಪ್ರಾಣ ಸಂಕರುಷಣ
ಭವಭಯಾರಣ್ಯ ದಹನ

ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಜನ


ಹೇಮಕಚ್ಚುಟ ಉಪವೀತ ಧರಿಪ ಮಾರುತ
ಕಾಮಾದಿ ವರ್ಗರಹಿತ
ವ್ಯೂಮಾದಿ ಸರ್ವ ವ್ಯಾಪುತ ಸತತ ನಿರ್ಭೀತ
ರಾಮಚಂದ್ರನ ನಿಜ ದೂತ

ಯಾಮ ಯಾಮಕೆ ನಿನ್ನರಾಧಿಪುದಕೆ
ಕಾಮಿಪೆ ಯೇನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರಮತಿಯನು ನಿ ಮಾಣಿಪುದು

ವಜ್ರಶರೀರಗಂಭೀರ ಮುಕುಟಧರ
ದುರ್ಜನ ವನಕುಠಾರಾ
ನಿರ್ಜನ ಮಣಿ ದಯಾ ಪಾರಾವಾರ ಉದಾರ
ಸಜ್ಜನರಘಪರಿಹಾರ

ಅರ್ಜುನಗೊಲಿದಂದು ಧ್ವಜವಾನಿಸಿನಿಂದು
ಮೂಜ೯ಗವರಿವಂತೆ ಗರ್ಜನೆ ಮಾಡಿದೆ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜದಪಾದದ ಧೂಳಿ
ಮಾಜ೯ನದಲಿ ಭವವ೯ಜಿತನೆನಿಸಿಸೂ
ಪ್ರಾಣ ಅಪಾನವ್ಯಾನೋದಾನ ಸಮಾನಾ
ಆನಂದಭಾರತಿ ರಮಣಾ
ನೀನೇ ಶವಾ೯ದಿಗಿವಾ೯ಣಾದ್ಯರಿಗೆ
ಜ್ಞಾನಧನಪಾಲಿಪರೆಣ್ಯ

ನಾನು ನಿರುತದಲಿ ಏನೇನೆಸಗಿದೆ

ಮಾನಸಾದಿ ಕರ್ಮ ನಿನಗೋಪ್ಪಿಸಿದೇನೂ

ಪ್ರಾಣನಾಥ ಸಿರಿವಿಜಯ ವಿಠಲನ

ಕಾಣಿಸಿಕೊಡುವದು ಭಾನುಪ್ರಕಾಶ

Audio link:http://www.youtube.com/watch?v=6QLoQS2ljK8

ಘಟಿಕಾ ಚಲದಿ ನಿಂತ ಶ್ರೀ ಹನುಮಂತ /Ghatika chaladi ninta sri Hanumanta.

ಘಟಿಕಾ ಚಲದಿ ನಿಂತಾ ಶ್ರೀ ಹನುಮಂತಾ
ಘಟಿಕಾ ಚಲದಿ ನಿಂತಾ

ಘಟಿಕಾ ಚಲದಿ ನಿಂತಾ ಪಟು ಹನುಮಂತನು
ಪಠನೆಯ ಮಾಡಲುತ್ಕಟದಿ ಪೋರೆವೆನೆಂದು


ಚತುರಯಗದಿ ತಾನು ಮುಖ್ಯಪ್ರಾಣನು
ಚತುರಮುಖನಯ್ಯನ
ಚತುರ ಮೂರುತಿಗಳನು ಚತುರತನದಿ ಭಜಿಸಿ
ಚರುತ ಮೂರ್ಖನಾಗಿ ಜಗಕೆ ಚತುವಿ೯ದ ಫಲವಕೊಡುತ

ಸರಸಿಜಭವಗೋಸ್ಕರ ಕಲ್ಮಷದೂರ
ವರಚಕ್ರ ತೀರ್ಥಸರ
ಮೆರೆವಾಚಲದಿ ನಿತ್ಯ ನರಹರಿಗೆದುರಾಗಿ
ಸ್ಥಿರಯೋಗಸನದಿ ಕರೆದು ವರಗಳ ಕೊಡುತ

ಶಂಖಚಕ್ರವಧರಿಸಿ ಭಕ್ತರ ಮನ
ಪಂಕವ ಪರಿಹರಿಸಿ
ಪಂಕಜನಾಭ ಶ್ರೀ ಪುರಂದರವಿಠಲನ
ಬಿಂಕದ ಸೇವಕ ಸಂಕಟಕಳೆಯುತ