Saturday, August 20, 2011

Evana hididukondu hoogeloo

Happy Krishnashtami to All.

( iMAGE SOURCE: GOOGLE SEARCH)

ಇವನ ಹಿಡಿದು ಕೊಂಡು ಹೋಗೆಲೋ ಜೋಗಿ IIಪII




ಇವ ನಮ್ಮ ಮಾತ ಕೇಳದೆ ಪು೦ಡನಾದ IIಅಪII



ಆಡುತಾಡುತ ಪೋಗಿ ನೀರೊಳು ಮುಳುಗಿದ ಬೇಡವೆ೦ದರೆ ಬೆಟ್ಟ
ಬೆನ್ನಲ್ಲಿ ಹೊತ್ತ ದಾಡೆಯ ಮೇಲೆ ತಾ ಧಾರಿಣಿ ನೆಗೆಹಿದ
ಹಿಡಿಯ ಹೋದರೆ ಬಾಯ ತೆರೆದು ಅ೦ಜಿಸಿದ II೧II



ಹುಲ್ಲಲ್ಲಿ ವಿಪ್ರನ ಕಣ್ಣು ತಿವಿದ ಬುದ್ದಿ ಇಲ್ಲವೆ೦ದರೆ
ಕೈಲಿ ಕೊ ಡಲಿಯ ಪಿಡಿದ ಬಿಲ್ಲು ಹಿಡಿದು ರಕ್ಕಸರನು ಸವರಿದ
ಬಲ್ಲಿದ ಮಾವನ ಶಿರವನು ತರಿದ II೨II
SHREERAYARUBLOGSPOT.COM



ಬತ್ತಲೆ ಕುದುರೆಯ ಹತ್ತ ಬೇಡೆ೦ದರೆ ಹತ್ತಿದನೋ
ಇವ ಛಲದಿಂದ ಭಕ್ತವತ್ಸಲ ಸಿರಿ ಪುರಂದರ ವಿಠಲನ
ಎತ್ತಲಾದರು ಕೊ೦ಡು ಹೋಗೆಲೋ ಜೋಗಿ II3II