ಹೇಗೆ ಬರೆದಿತ್ತು ಪ್ರಾಚಿನದಲ್ಲಿ
ಹಾಗೆ ಇರಬೇಕು ಸ೦ಸಾರದಲ್ಲಿ
ಪಕ್ಷಿ ಕೂತಿತು ಅ೦ಗ ಳದಲ್ಲಿ
ಹಾರಿಹೋಯಿತು ಆ ಕ್ಷಣದಲ್ಲಿ
ಆಡುವ ಮಕ್ಕಳು ಮನೆ ಕಟ್ಟಿದರು
ಆಟ ಸಾಕೆ೦ದು ಮುರಿದೂಡಿದರು
ಸ೦ತೆ ನೆರೆದಿತು ನಾನಾ ಪರಿ
ತಿರುಗಿ ಆಯಿತು ತಮ್ಮ ತಮ್ಮ ದಾರಿ
ವಸ್ತಿಕಾರನು ವಸ್ತಿಗೆ ಬಂದ
ಹೊತ್ತಾರೆ ಎದ್ದು ಊರಿಗೆ ಹೋದ
ಈ ಸ೦ಸಾರಮಾಯ ಬಿಡಿಸಿ
ಕಾಯೋ ಪುರಂದರವಿಠಲ II
Hege Baredittu Prachinadalli
Haage irabeku samsaaradalli
Pakshi kootitu angaladalli
haarihooyitu aakshanadalli
aaduva makkalu mane kattidaru
aata saakendu muridoodidaru
sante nereditu naanaa pari
tirugi aayitu tamma tamma daari
vastikaaranu vastige banda
hottare eddu urige hooda
ee samsaaramaaya bidisi
kaayoo PurandaraVithala