Thursday, March 11, 2010

Kanasu Kandena Manadali

ಕನಸುಕಂಡೆನ ಮನದಲಿ ಕಳವಳಗೊ೦ಡೆನೆ
ಏನು ಹೇಳಲಿ ತಂಗಿ ತಿಮ್ಮಯ್ಯನಪಾದವನು ಕಂಡೆ

ಪೋನ್ನದ ಕಡಗನಿಟ್ಟು ತಿಮ್ಮಯ್ಯತಾ
ಪೋಲ್ವ ನಾಮವಇಟ್ಟು ಅ೦ದುಗೆಘಲುಗೆನ್ನುತ
ಎನ ಮುಂದೆ ಬಂದು ನಿಂತಿದ್ದನಲ್ಲೇ II೧II

ಮಕರಕು೦ಡಲವನಿಟ್ಟು ತಿಮ್ಮಯ್ಯ ತಾ
ಕಸ್ತೂರಿತಿಲಕವನಿಟ್ಟು ಗೆಜ್ಜೆ ಘಲುಗೆನುತ
ಸ್ವಾಮಿ ತಾ ಬಂದು ನಿಂತಿದ್ದನಲ್ಲೇ II೨II

ಮುತ್ತಿನ ಪಲ್ಲಕ್ಕಿ ಯತಿಗಳು
ಹೊತ್ತು ನಿಂತಿದ್ದರಲ್ಲೇ ಛತ್ರಚಾಮರದಿಂದ
ರಂಗಯ್ಯನ ಸೇವೆಯ ಮಾಡುವರೇ II೩ II


ತಾಮರ ಕಮಲದಲಿ ಕೃಷ್ಣಯ್ಯ ತಾ
ಬಂದು ನಿಂತಿದನಲ್ಲೇ ವಾಯು ಬೋಮ್ಮದಿಗಳು
ರಂಗಯ್ಯನ ಸೇವೆಯ ಮಾಡುವರೇ II೪II

ನವರತ್ನ ಕೆತ್ತಿಸಿದ ಸ್ವಾಮಿ ಎನ್ನ
ಹೃದಯಮ೦ಟಪದಲ್ಲಿ ಸವಾ೯ಭರಣ ದಿಂದ
ಪುರಂದರವಿಠಲನ ಕೂಡಿದೇನೆ II೫II

Allide Namma Mane /ಅಲ್ಲಿದೆ ನಮ್ಮ ಮನೆ

ಅಲ್ಲಿದೆ ನಮ್ಮ ಮನೆ ಇಲ್ಲಿರುವುದು ಸುಮ್ಮನೆ

ಕದಬಾಗಿಲಿರಿಸಿದ ಕಳ್ಳ ಮನೆ ಇದು
ಮುದದಿಂದ ಲೋ ಡ್ಯಾಡೋ ಸುಳ್ಳು ಮನೆ
ಇದಿರಾಗಿ ವೈಕುಂಠವಾಸಮಾಡುವಂತೆ
ಪದುಮನಾಭನ ದಿವ್ಯ ಬದುಕುಮನೆ II ೧II

ಮಾಳಿಗೆಮನೆಯೆಂದು ನೆಚ್ಚಿಕೆದಳು ಬೇಡ
ಕೇಳಯ್ಯ ಹರಿ ಕಥೆ ಶ್ರವನ೦ಗಲ
ನಾಳೆ ಯಮದೂತರು ಬ೦ದೇಳೆದೋಯ್ವಾಗ
ಮಾಳಿಗೆ ಮನೆ ಸ೦ಗಡ ಬಾರದಯ್ಯ II೨II

ಮಡದಿ ಮಕ್ಕಳು ಎ೦ಬ ಹ೦ಬಲ ನಿನಗೇಕೂ
ಕಡುಗೋಬ್ಬುತನದಿ ನಡೆಯದಿರು
ಒಡೆಯ ಶ್ರೀಪುರಂದರವಿಠಲನ ಚರಣವ
ದೃಡ ಭಕ್ತಿಯಲಿ ನೀ ನೆನೆಸಿಕೂ ಮನುಜ II ೩II



Indina dinave shubha dinavu

ಇಂದಿನ ದಿನವೇ ಶುಭ ದಿನವು
ಇಂದಿನ ವಾರ ಶುಭ ವಾರ
ಇಂದಿನ ತಾರೆ ಶುಭ ತಾರೆ
ಇಂದಿನ ಯೋಗ ಶುಭ ಯೋಗ
ಇಂದಿನ ಕರಣ ಶುಭ ಕರಣ
ಇಂದು ಪುರಂದರವಿಠಲರಾಯನ
ಸಂದರ್ಶನ ಫಲವೆಮಗಾಯಿತು

Indina dinave shubha Dinavu
indina vaara shubhaVaara
indina taare shubhataare
indina Yoga shubhayoga
indina karna Shubha karna
indu PurandaraviThalaraayana
sandarshana phalavemagaayithu.