Tuesday, February 23, 2010

Baagilanu teradu

ಬಾಗಿಲನು ತೆರೆದು ಸೇವೆಯನು ಕೋಡೂ ಹರಿಯೆ
ಕೂಗಿದರು ದ್ವನಿ ಕೇಳಲಿಲ್ಲವೇ ನರಹರಿಯೆ

ಪರಮಪದದೊಳಗೆ ವಿಷಧರನ ತಲ್ಪದಲಿ ನೀ
ಸಿರಿಸಹಿತ ಕ್ಷಿರವಾರಿಧಿಯೂಳಿರಲು
ಕರಿರಾಜ ಕಷ್ಟದಲಿ ಆದಿಮೂಲ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೂ ನರಹರಿಯೆII ೧II

ಕಡುಕೋಪದಿ೦ ಖಳನು ಖಡುಗ ಕೈಯಲಿ ಪಿಡಿದು ನಿ
ನ್ನೋದೆಯನೆಲ್ಲಿಹನೆ೦ದು ಕ೦ಬವನು ಜಡಿಯೆ
ದೃಢಭಕುತಿಯಿ೦ ಶಿಶುವು ಬಿಡದೆ ನಿನ್ನನು ಭಜಿಸೆ
ಸಡಗರದಿ ಸ್ತ೦ಭದಿ೦ದೂದೆಡೆ ನರಹರಿಯೆ II೨ II

ಯಮಸುತನ ರಾಣಿಗಕ್ಷಯವಸನವನಿತ್ತೆ
ಸಮಯದಲಿ ಅಜಮಿಳನಪೂರೆದೆ
ಸಮಾಯಾಸಮಯವು೦ಟೆ ಭಕ್ತವತ್ಸಲ ನಿನಗೆ
ಕಮಾಲಾಕ್ಷ ಕಾಗಿನೆಲೆಯಾದಿ ಕೇಶವನೆ II೩ II




Mangala GuruRaghavendrage Jaya

ಮಂಗಳ ಗುರು ರಾಘವೇಂದ್ರಗೆ ಜಯ
ಮಂಗಳ ಸುಜನಾ೦ಬುಧಿಚಂದ್ರಗೆ

ಶ್ರೀಸುಧೀ೦ದ್ರಕುಮಾರಗೆ ಮಂಗಳ
ಭೂಸುರನುತ ಮಹಿಮೆಗೆ ಮಂಗಳ
ದೇಶಿಕ ಕುಲವನಜಾಕ೯ಗೆ ಮಂಗಳ
ಭಾಸುರ ಕೀತ೯ಯ ಪಡೆದವಗೆ II೧II

ವೃ೦ದಾವನ ಭುವಿಯೂಳಗೆ ಸುರದ್ರುಮ
ದ೦ದದಿ ರಾಜಿಸುವಗೆ ಮಂಗಳ
ಅ೦ಧ ಪಂಗು ಮೂಕ ಬಧಿರರ ಈಪ್ಸಿತ
ಸ೦ದೋಹ ಸಲಿಸುವ ಮುನಿವರಗೆ II೨ II

ಭೂತಪ್ರೇತಬೇತಾಳ ಭಯವಿಪಿನ
ವೀತಿಹೋತ್ರನೆನಿಪಗೆ ಮಂಗಳ
ವಾತಜನುತ ಜಗನ್ನಾಥವಿಠಲನ
ದೂತರ ಸಲಹುವ ದಾತನಿಗೆ II೩II