Monday, August 17, 2009

Hanumana Matave Hariya matavu /ಹನುಮನ ಮತವೆ ಹರಿಯ ಮತವು

ಹನುಮನ ಮತವೇ ಹರಿಯ ಮತವೂ
ಹರಿಯ ಮತವೇ ಹನುಮನ ಮತವೂ IIಪII

ಹನುಮನು ಒಲಿದರೆ ಹರಿ ತಾ ಒಲಿವನು
ಹನುಮನು ಮುನಿದರೆ ಹರಿ ಮುನಿವಾ IIಅಪII

ಹನುಮನು ಒಲಿದರೆ ಸುಗ್ರೀವನು
ಗೆದ್ದಾ ಹನುಮನು ಮುನಿದರೆ ವಾಲಿಯು ಬಿದ್ದಾ II೧II

ಹನುಮನು ಒಲಿದರೆ ವಿಭೀಷಣ ತಾ ಗೆದ್ದಾ
ಹನುಮನು ಮುನಿದರೆ ರಾವಣ ಬಿದ್ದಾ II೨II

ಹನುಮನು ಪುರಂದರ ವಿಠಲ ದಾಸ
ಪುರಂದರ ವಿಠಲನು ಹನುಮನೋಳ್ವಾಸಾ
II೩II

Sharanu sharanayya sharanu Benaka /ಶರಣು ಶರಣಯ್ಯ ಶರಣು ಬೆನಕ

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ
ಸುಖ ತಂದೆ ಕಾಯೋ ನಮ್ಮ ಕರಿಮುಖ IIಪII

ಎಲ್ಲಾರು ಒ೦ದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ
ಗರಿಕೆ ತಂದರೆ
ನೀನು ಕೊಡುವೆ ವರವನ್ನು ಗತಿ
ನೀನೆ ಗಣಪನೆ ಕೈ ಹಿಡಿಯೋ ಮುನ್ನ II೧ II


ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓಡುವುದು ಭೀತಿ
ನೀಡಯ್ಯ ಬಾಳೆಲ್ಲ ಬೆಳಗುವ ಶಕುತಿ
ತೋರಯ್ಯ ನಮ್ಮಲ್ಲಿ ನಿನ್ನಯ ಪ್ರೀತಿ II೨II

ಬೆನಕ ಬೆನಕ ಎಕದಂತ
ಪಚ್ಚೆಗಲ್ಲು ಪಾಣಿಮೆಟ್ಟ್ಲು ಒಪ್ಪುವ ವಿಘನೇಶ್ವರ
ನಿನಗೆ ಇಪ್ಪತೊಂದು ನಮಸ್ಕಾರಗಳು II೩II

Audio
Link:
http://www.kannadaaudio.com/Songs/Devotional/GaneshaChaturthiDevotional/Sharanu.ram