Monday, August 17, 2009

Hanumana Matave Hariya matavu /ಹನುಮನ ಮತವೆ ಹರಿಯ ಮತವು

ಹನುಮನ ಮತವೇ ಹರಿಯ ಮತವೂ
ಹರಿಯ ಮತವೇ ಹನುಮನ ಮತವೂ IIಪII

ಹನುಮನು ಒಲಿದರೆ ಹರಿ ತಾ ಒಲಿವನು
ಹನುಮನು ಮುನಿದರೆ ಹರಿ ಮುನಿವಾ IIಅಪII

ಹನುಮನು ಒಲಿದರೆ ಸುಗ್ರೀವನು
ಗೆದ್ದಾ ಹನುಮನು ಮುನಿದರೆ ವಾಲಿಯು ಬಿದ್ದಾ II೧II

ಹನುಮನು ಒಲಿದರೆ ವಿಭೀಷಣ ತಾ ಗೆದ್ದಾ
ಹನುಮನು ಮುನಿದರೆ ರಾವಣ ಬಿದ್ದಾ II೨II

ಹನುಮನು ಪುರಂದರ ವಿಠಲ ದಾಸ
ಪುರಂದರ ವಿಠಲನು ಹನುಮನೋಳ್ವಾಸಾ
II೩II

No comments: