Friday, October 16, 2009

Hosakannu enage hachhalebeeku

ಹೊಸಕಣ್ಣು ಎನಗೆ ಹಚ್ಚಲೇಬೇಕು ಜಗದ೦ಬ
ವಸುದೆವಸುತನ ಕಾ೦ಬುದಕೆ
ಘಸನೆಯಾಗಿದೆ ಭಾವವಿಷಯವಾರಿಧಿಯೋಳು
ಶಶಿಮುಖಿ ಕರುಣದಿ ಕಾಯೋ ಅಮ್ಮಾ

ಪರರ ಅನ್ನವನು೦ಡು ಪರರಧನವಕ೦ಡು
ಪರಿಪರಿ ಕ್ಲೇಶಗಳು೦ಡೆ
ಮಹಾಲಕುಮಿ ನಿನ್ನ ಚರಣಕ್ಕೆ ಮೂರೆಹೊಕ್ಕೆ
ಕರುಣದಿ ಕಣ್ಣೆತ್ತಿ ನೋಡೇ ಅಮ್ಮಾ

ಮ೦ದಹಾಸಿನಿ ಭವಸಿ೦ಧುವಿನೋಳಗಿಟ್ಟು
ಚ೦ದವೆ ಅಮ್ಮಾ ನೋಡುವುದು
ಕ೦ದನ೦ತ೦ದೆನ್ನ ಕು೦ದುಗಳೆನಿಸದೆ
ಮ೦ಧರೋದ್ಧರನ ತೋರಮ್ಮ ಅಮ್ಮಾ

ಅ೦ದಚ೦ದಗಳೂಲ್ಲೆ ಬ೦ಧುಬಳಗವೂಲ್ಲೇ
ಬ೦ಧನಕೆಲ್ಲ ಕಾರಣವು
ಇಂದಿರೇಶನ ಪಾದದ್ವಂದ್ವವ ತೋರಿ
ಹೃನ್ಮ೦ದಿರದೋಳೂ ಬ೦ದು ನಿಲ್ಲೇ ಅಮ್ಮಾ



In English:

Hosakannu enage hacchalebeeku jagadamba
Vasudevasutana kaambudake
Ghasaneyaagide bhaavavishayavaaridhiyoolu
Shshimukhi karunadi kayooo ammaa

Parara annavanundu pararadhanavakandu
Paripari kelshagaludee
Mahaalakumi ninna charanakke moorehokke
Karunadi kannetti noode amma

Mandahaasini bhavasindhuvinolagittu
Chandave amma nooduvudu
Kandanantenda kundugalenisade
Mandaroddharana toramma ammaa

Andachandagalolle bandhubalagavolle
Bandhanakella kaaranavu
Indireshana paadadwandwawa toori
Hrunmmandiradooluu nille a
mmaa

Hari hariyennalikke

ಹರಿ ಹರಿಯೆನ್ನಲಿಕ್ಕೆ ಹೊತ್ತಿಲ್ಲ

ನರಜನ್ಮ ವ್ಯರ್ಥವಾಗಿ ಹೋಗುತದಲ್ಲ ಪ



ಹರಿಜಾಗರಣೆಯಲ್ಲಿ ಪಾರಣೆ ಚಿಂತೆ

ನಿರತ ಯಾತ್ರೆಯಲ್ಲಿ ಶಾಕದ ಚಿಂತೆ

ಸರುತ ಸತ್ಕಾರ್ಯದಿ ಧನದ ಮೇಲಿನ ಚಿಂತೆ

ಪುರಾಣ ಕೇಳ್ವಾಗ ಗೃಹದ ಚಿಂತೆ ೧



ಕರ್ಮದಿ ಒಂದು ಚಿಂತೆ ಧರ್ಮದಿ ಒಂದು ಚಿಂತೆ

ಪೆರ್ಮನ ಮಾಡಲು ಬಲು ಚಿಂತೆ

ಮರ್ಮ ವೈರದಿ ಚಿಂತೆ ಈರ್ಮನಸ್ಸಾಗೆ ಚಿಂತೆ

ದುರ್ಮದದಿ ನಡೆಯ ಪ್ರಾಣದ ಚಿಂತೆ ೨



ಗಂಗೆ ಮುಳುಗುವಾಗ ಚೆಂಬುಮೇಲಿನ ಚಿಂತೆ

ಸಂಗಡದವರು ಪೋಗುವ ಚಿಂತೆ

ಪನ್ನಗಶಯನ ಶ್ರೀ ಪುರಂದರವಿಠಲನ್ನ

ಹಿಂಗದೆ ಭಜಿಸಲು ಸತತ ನಿಶ್ಚಿಂತೆ ೩

Andhatamasu inyarigo

ಅಂಧಂತಮಸು ಇನ್ನಾರಿಗೆ
ಗೋವಿಂದನ ನಿಂದಿಸುವರಿಗೆ II ಪII

ಸಂದೇಹವಿಲ್ಲವು ಸಾರಿಸಾರಿಗೆ ವಾಯು-
ನಂದನನ ವಂದಿಸದವರಿಗೆ IIಅ ಪII


ಮಾತು ಮಾತಿಗೆ ಹರಿಯ ನಿಂದಿಸಿ-ಸ-
ರ್ವೋತ್ತಮ ಶಿವನೆಂದು ವಾದಿಸಿ
ಧಾತುಗ್ರಂಥಗಳೆಲ್ಲ ತೋರಿಸಿ-ವೇ-
ದಾಂತ ಪ್ರಮಾಣಗಳ ಹಾರಿಸಿ
ಸೋತು ಸಂಕಟಪಟ್ಟು ಘಾತಕ ಒಡಲೊಳಗಿಟ್ಟು
ನೀತಿ ಹೇಳುವ ಕೆಟ್ಟ ಜಾತಿಗಳಿಗಲ್ಲದೆ II೧II

ಮೂಲಕವತಾರಕ್ಕೆ ಭೇದವು-ಮುಖ್ಯ
ಶೀಲಪಂಡಿತರಿಳಗೆ ಅತಿ ವಾದವು
ಲೀಲಾಸಾದೃಶ್ಯವ ತೋರುತ-ಲಿಂಗ-
ಭಂಗವಿಲ್ಲದ ದೇಹ ಹಾರುತ
ಮೂಲಗುರುವು ಕುಂತೀಬಾಲನೆನ್ನದೆ ವೃಥಾ
ಶೀಲಗೆಟ್ಟಂಥ ಖಳರಿಗಲ್ಲದೆ ಮತ್ತೆ II೨II

ವ್ಯಾಸರ ಮಾತುಗಳಾಡುತ-ವಿ-
ಶ್ವಾಸಘಾತಕತನ ಮಾಡುತ
ದೋಷವೆಂದರೆ ನುಡಿ ಕೇಳದೆ-ಸಂ-
ತೋಷವೆಂದರೆ ನೋಡಿ ಬಾಳದೆ
ಶೇಷಶಯನ ಆದಿಕೇಶವರಾಯನ
ದಾಸರೊಡೆಯ ಮಧ್ವ ದ್ವೇಷಿಗಳಿಗಲ್ಲದೆ II೩II

Hariya neneyada

ಹರಿಯ ನೆನೆಯದ ನರಜನ್ಮವೇಕೆ ನರ
ಹರಿಯ ಕೊಂಡಾಡದ ನಾಲಿಗೆಯೇಕೆ ಪ

ವೇದವನೋದದ ವಿಪ್ರ ತಾನೇಕೆ
ಕಾದಲರಿಯದ ಕ್ಷತ್ರಿಯನೇಕೆ
ಕ್ರೋಧವ ಬಿಡದ ಸಂನ್ಯಾಸಿ ತಾನೇಕೆ
ಆದರವಿಲ್ಲದ ಅಮೃತಾನ್ನವೇಕೆ ೧

ಸತ್ಯಶೌಚವಿಲ್ಲದಾಚಾರವೇಕೆ
ನಿತ್ಯ ನೇಮವಿಲ್ಲದ ಜಪತಪವೇಕೆ
ಭಕ್ತಿಲಿ ಮಾಡದ ಹರಿಪೂಜೆಯೇಕೆ
ಉತ್ತಮರಿಲ್ಲದ ಸಭೆಯು ತಾನೇಕೆ ೨


ಮಾತಪಿತರ ಪೊರೆಯದ ಮಕ್ಕಳೇಕೆ
ಮಾತುಕೇಳದ ಸೊಸೆಗೊಡವೆ ತಾನೇಕೆ
ನೀತಿ ನೇರಿಲ್ಲದ ಕೂಟ ತಾನೇಕೆ ಅ
ನಾಥನಾದ ಮೇಲೆ ಕೋಪವದೇಕೆ ೩

ಅಳಿದು ಅಳಿದು ಹೋಗುವ ಮಕ್ಕಳೇಕೆ
ತಿಳಿದು ಬುದ್ಧಿಯ ಹೇಳದ ಗುರುವೇಕೆ
ನಳಿನನಾಭ ಶ್ರೀ ಪುರಂದರವಿಠಲನ
ಚೆಲುವ ಮೂರುತಿಯ ನೋಡದ ಕಂಗಳೇಕೆ ೪

Raama mantrava japiso

ರಾಮ ಮಂತ್ರವ ಜಪಿಸೊ ಹೇ ಮನುಜ IIಪII
ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ ( ಜಪಿಸಿ ಕೆಡಲು ಬೇಡ)
ಸೋಮಶೇಖರ ತನ್ನ ಭಾಮಿನಿಗೊರೆದಿಹ (ಭಾಮೆಗೆ ಪೇಳಿದ)ಮಂತ್ರಅ ಪII


ಕುಲಹೀನನಾದರು ಕೂಗಿಜಪಿಸುವ ಮಂತ್ರ
ಜಲಜ ಪ್ರಾಣಿ ನಿತ್ಯ ಜಪಿಪ ಮಂತ್ರ
ಹಲವು ಪಾಪಂಗಳ ಹದೆಗೆಡಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ (ಮೋಕ್ಷ) ಸೂರೆಗೊಂಬುವ ಮಂತ್ರ II೧II

ಮರುತಾತ್ಮಜ ನಿತ್ಯ ಸ್ಮರಣೆ ಮಾಡುವ ಮಂತ್ರ
ಸರ್ವ ಋಷಿಗಳಲ್ಲಿ ಸೇರಿದ ಮಂತ್ರ
ದುರಿತಕಾನನಕಿದು ದಾವನಲ ಮಂತ್ರ
ಪೊರೆದು ವಿಭೀಷಣಗೆ ಪಟ್ಟಗಟ್ಟಿದ ಮಂತ್ರ II೨II


ಜ್ಞಾನನಿಧಿ ನಮ್ಮ ಆನಂದತಿರ್ಥರು
ಸಾನುರಾಗದಿ ನಿತ್ಯ ಸೇವಿಪ ಮಂತ್ರ
ಭಾನುಕುಲಾಂಬುಧಿ ಸೋಮನೆನಿಪ ನಮ್ಮ
ದೀನರಕ್ಷಕ ಪುರಂದರ ವಿಠಲನ ಮಂತ್ರ II೩II

Raama naamava nene manave

ರಾಮ ನಾಮವ ನೆನೆ ಮನವೆ ಪ
ರಾಮ ಎಂದವನೆ ಧನ್ಯನೆಂದು ಶೃತಿತತಿಗಳು ಪೊಗಳುತಿರೆ ಅ ಪ

ತರುಣತನದಿ ದಿನದಾಟಿತು ಸುಮ್ಮನೆ
ಶರೀರದೊಳು ಸ್ವರವಾಡುತಲೆ
ತರುಣಿ ಸುತರು ಸಂಸಾರವೆಂಬ
ಶರಧಿಯೊಳಗೆ ಮುಳುಗಿರದೆ ಮನವೆ ೧

ಬಗೆ ಬಗೆ ಜನ್ಮದಿ ಜನಿಸಿದೆ ನಾಳೆಗೆ
ಸಿಗುವುದೆ ನಿಜದಿಂ ಈ ಸಮಯ
ಮುಗುಧನಾಗಿ ಮತ್ತೆ ಜನಿಸಿ ಬರುವುದು
ಸೊಗಸು ಕಾಣುವುದೆ ಛೀ ಮನವೆ ೨


ಚಿಂತೆಯನೆಲ್ಲ ಒತ್ತಟ್ಟಿಗೆ ಇಟ್ಟು
ಅಂತರಂಗದಲಿ ಧ್ಯಾನಿಸುತ
ಕಂತುಪಿತ ಕನಕಾದಿಕೇಶವನ
ಎಂತಾದರೂ ನೀ ಬಿಡಬೇಡ ಮನವೆ ೩

Sri Ashtalakshmi stotram / ಶ್ರೀ ಅಷ್ಟಲಕ್ಷ್ಮಿ ಸ್ತೋತ್ರಂ

Sri Ashtalakshmi Stotram:




ಸುಮನಸವ೦ದಿತ ಸು೦ದರಿ ಮಾಧವಿ
ಚಂದ್ರ ಸಹೋದರಿ ಹೇಮಮಯೇ
ಮುನಿಗಣಮ೦ಡಿತ ಮೋಕ್ಷ ಪ್ರದಾಯಿನಿ
ಮೋಜುಳಭಾಷಿಣಿ ವೇದನುತೇ
ಪ೦ಕಜವಾಸಿನಿ ದೇವಸುಪೂಜಿತ
ಸದ್ಗುಣ ವಷಿ೯ಣಿ ಶಾಂತಿಯುತೇ
ಜಯ ಜಯ ಹೇ ಮಧುಸೂಧನ ಕಾಮಿನಿ
ಆದಿ ಲಕ್ಷ್ಮಿ ಸದಾ ಪಾಲಯಮಾಮ್ ೧

ಅಯಿಕಲಿ ಕಲ್ಮಶನಾಶಿನಿ ಕಾಮಿನಿ
ವೈದಿಕ ರೂಪಿಣಿ ವೇದಮಯೇ
ಕ್ಷೀರ ಸಮುದ್ಭವ ಮ೦ಗಳರೂಪಿಣಿ
ಮಂತ್ರ ನಿವಾಸಿನಿ ಮಂತ್ರನುತೇ
ಮಂಗಳದಾಯಿನಿ ಅ೦ಬುಜವಾಸಿನಿ
ದೇವಗಣಾಶ್ರಿತ ಪಾದನುತೇ
ಜಯ ಜಯ ಹೇ ಮಧುಸೂದನ ಕಾಮಿನಿ
ಧಾನ್ಯ ಲಕ್ಷ್ಮಿ ಸದಾ ಪಾಲಯಮಾಮ್ ೨

ಜಯವರ ವಷಿ೯ಣಿ ವೈಷ್ಣವಿ ಭಾಗ೯ವಿ
ಮಂತ್ರ ಸ್ವರೂಪಿಣಿ ಮಂತ್ರಮಯೇ
ಸುರಗಣಪೂಜಿತ ಶೀಘ್ರ ಫಲಪ್ರದ
ಜ್ಞಾನವಿಕಾಸಿನಿ ಶಾಸ್ತ್ರನುತೇ
ಭವಭಯ ಹಾರಿಣಿ ಪಾಪವಿಮೂಚನಿ
ಸದುಜನಾಶ್ರಿತ ಪಾದಯುತೇ
ಜಯ ಜಯ ಹೇ ಮಧುಸೂಧನ ಕಾಮಿನಿ
ಧೈಯ೯ ಲಕ್ಷ್ಮಿ ಸದಾ ಪಾಲಯಮಾಮ್ ೩


ಜಯಜಯ ದುಗ೯ತಿನಾಶಿನಿ ಕಾಮಿನಿ
ಸವ೯ಫಲಪ್ರದ ಶಾಸ್ತ್ರಮಯೇ
ರಥಗಜ ತುರಗಪದಾತಿ ಸಮಾವೃತ
ಪರಿಜನಮ೦ಡಿತ ಲೋಕನುತೇ
ಹರಿಹರ ಬ್ರಹ್ಮ ಸುಪೂಜಿತ ಸೇವಿತ
ತಾಪನಿವಾರಿಣಿ ಪಾದಯುತೇ
ಜಯ ಜಯ ಹೇ ಮಧುಸೂಧನ ಕಾಮಿನಿ
ಗಜಲಕ್ಷ್ಮಿ ರೂಪೇಣ ಸದಾ ಪಾಲಯಮಾಮ್ ೪


ಅಯಿಖಗ ವಾಹಿನಿ ಮೋಹಿನಿ ಚಕ್ರಿಣಿ
ರಾಗವಿವಧಿ೯ನಿ ಜ್ಞಾನಮಯೇ
ಗುಣಗಣವಾರಿಧಿ ಲೋಕಹಿತೈಶಿಣಿ
ಸ್ವರಸಪ್ತ ಭೂಷಿತ ಗಾನನುತೇ
ಸಕಲ ಸುರಾಸುರ ದೇವಮುನಿಶ್ವರ
ಮಾನವವ೦ದಿತ ಪಾದಯುತೇ
ಜಯ ಜಯ ಹೇ ಮಧುಸೂಧನ ಕಾಮಿನಿ
ಸ೦ತಾನಲಕ್ಶ್ಮಿ ತ್ವ೦ ಪಾಲಯಮಾಮ್ ೫


ಜಯ ಕಮಲಾಸನಿ ಸದ್ಗತಿದಾಯಿನಿ
ಜ್ಞಾನವಿಕಾಸಿನಿ ಗಾನಮಾಯೇ
ಅನುದಿನಮಚಿ೯ತ ಕು೦ಕುಮಧೂಸರ
ಭುಶಿತ ವಾಸಿತ ವದ್ಯಾನುತೇ
ಕನಕಧಾರಾಸ್ತುತಿ ವೈಭವ ವ೦ದಿತ
ಶ೦ಕರ ದೇಶಿಕ ಮನ್ಯಾಪದೇ
ಜಯ ಜಯ ಹೇ ಮಧುಸೂಧನ ಕಾಮಿನಿ
ವಿಜಯಲಕ್ಷ್ಮಿ ಸದಾ ಪಾಲಯಮಾಮ್ ೬

ಪ್ರಣತ ಸುರೆಶ್ವರಿ ಭಾರತಿ ಭಾಗ೯ವಿ
ಶೋಕವಿನಾಶಿನಿ ರತ್ನಮಯೇ
ಮಣಿಮಯ ಭೂಷಿತ ಕಣ೯ ವಿಭೂಷಣ
ಶಾಂತಿ ಸಮಾವೃತ ಹಾಸ್ಯಮುಖೇ
ನವನಿಧಿದಾಯಿನಿ ಕಲಿಮಲಹಾರಿಣಿ
ಕಾಮಿತಫಲಪ್ರದ ಹಸ್ತಯುತೇ
ಜಯ ಜಯ ಹೇ ಮಧುಸೂಧನ ಕಾಮಿನಿ
ವಿದ್ಯಾ ಲಕ್ಷ್ಮಿ ಸದಾ ಪಾಲಯಮಾಮ್ ೭


ಧಿಮಿಧಿಮಿ ಧಿ೦ಧಿಮಿ ಧಿ೦ಧಿಮಿ ಧಿ೦ಧಿಮಿ
ದು೦ದುಭಿ ನಾದ ಸ೦ಪೊಣ೯ಮಯೇ
ಘಮಘಮ ಘು೦ಘುಮ ಘು೦ಘುಮ ಘು೦ಘುಮ
ಶ೦ಖನಿನಾದ ಸುವಾದ್ಯನುತೇ
ವೈದಿಕಮಾಗ೯ ಪ್ರದಶ೯ಯುತೇ
ಜಯ ಜಯ ಹೇ ಮಧುಸೂಧನ ಕಾಮಿನಿ
ಧನ ಲಕ್ಷ್ಮಿ ರೂಪೇಣ ಸದಾ ಪಾಲಯಮಾಮ್ ೮

ಇತಿ ಶ್ರೀ ಅಷ್ಟಲಕ್ಷ್ಮಿ ಸ್ತೋತ್ರಂ ಸ೦ಪೋಣ೯ಮ


Audio Link:http://www.youtube.com/watch?v=WxpHoZA56N8