Friday, April 16, 2010

Guruvina gulama

ಗುರುವಿನ ಗುಲಾಮನಾಗುವ ತನಕ ದೂರೆಯದಣ್ಣ ಮುಕುತಿ
ಪರಿಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ IIಪII

ಆರು ಶಾಸ್ತ್ರವ ಓದಿದರಿಲ್ಲ ನೂರಾರು ಪುರಾಣವ ಮುಗಿಸಿದರಿಲ್ಲ
ಸಾರಿ ಸಜ್ಜನರ ಸಂಗವ ಮಾಡದೆ ಧೀರ ನೆನುತ ತಿರಿಗಿದರೇನು
(ನ್ಯಾಯ ಕಥೆಗಳ ಕೆಳ್ದರಿಲ್ಲ ಧಿರನಾಗಿ ತಾ ಪೇಳಿದರಿಲ್ಲ) II1II
shreerayarublogspot

ಕೊರಲೋಳು ಮಾಲೆ ಧರಿಸಿದರಿಲ್ಲ ಬೇರೆಳೂಳು ಜಪಮಣಿ ಎಣಿಸದರಿಲ್ಲ
ಮರುಳನಾಗಿ ತಾ ಶರಿರಕೆ ಬೂದಿ ಒರೆಸಿಕೊಂಡು ತಾನು ತಿರುದಿದಲ್ಲಿ II2II

ನಾರಿಯ ಭೂಗ ಅಳಿಸಿದರಿಲ್ಲ ಶರಿರಕೆ ಸುಖ ಬಿಡಿಸಿದರಿಲ್ಲ
ನಾರದ ವರದ ಪುರಂದರವಿಠಲನ ಸೇರಿಕೊಂಡು ತಾ ಪಡೆಯುವ ತನಕ II3II




Karunisoo ranga

ಕರುಣಿಸೂ ರಂಗ ಕರುಣಿಸೋ
ಹಗಲು ಇರಳು ನಿನ್ನ ಸ್ಮರಣೆ ಮರೆಯದ೦ತೆ

ರುಕುಮಾ೦ಗದನ೦ತೆ ವ್ರತವ ನಾನರಿಯೇನೂ
ಶುಕ ಮುನಿಯಂತೆ ಸ್ತುತಿಸಲು ಅರಿಯೆ
ಬಕವೈರಿಯಂತೆ ಧ್ಯಾನವ ಮಾಡಲರಿಯೇ
ದೇವಕಿಯಂತೆ ಮುದ್ದಿಸಳರಿಯೇನೂ II೧II

ಗರುದನ೦ದದಿ ಪೋತ್ತು ತಿರುಗಲು ಅರಿಯೆ
ಕರೆಯಲು ಅರಿಯೆ ಕರಿರಾಜನ೦ತೆ
ವರ ಕಪಿಯ೦ತೆ ದಾಸ್ಯವ ಮಾಡಲರಿಯೇ
ಸಿರಿಯಂತೆ ನೆರೆದು ಮೂಹಿಸಲರಿಯೆನೂ II೨II
shreerayarublogspot
ಬಲಿಯಂತೆ ದಾನವ ಕೂಡಲು ಅರಿಯೇನೂ
ಭಕ್ತಿ ಛಲವನರಿಯೇ ಪ್ರಹ್ಲಾದನ೦ತೆ
ಒಲಿಸಲು ಅರಿಯೆ ಅಜು೯ನನ೦ತೆ ಸಖನಾಗಿ
ಸಲಹೂ ದೇವರ ದೇವ ಪುರಂದರವಿಠಲ II೩II




Elu narayana Elu lakshmiramana ( Udayaraaga)

ಏಳು ನಾರಾಯಣ ಏಳು ಲಕ್ಷ್ಮಿರಮಣ
ಏಳು ಶ್ರೀಗಿರಿಗೋಡೆಯ ಶ್ರೀವೆಂಕಟೇಶ
ಏಳಯ್ಯ ಬೆಳಗಾಯಿತು II


ಕಾಸಿದ್ದ ಹಾಲು ಕಾವಡಿಯೂಳು ಹೆಪ್ಪಿ ಟ್ಟು
ಲೇಸಾಗಿ ಕಡೆದು ಹೊಸ ಬೆಣ್ಣೆ ಕೂಡುವೆ
ಶೇಷಶಯನನೆ ಏಳು ಸಮುದ್ರ ಮಂಥನವ ಮಾಡು
ದೇಶ ಕೆ೦ಪಾಯಿತು ಏಳಯ್ಯ ಹರಿಯೇ II೧II

ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳು
ಸುರರು ತ೦ದಿದ್ದಾರೆ ಬಲು ಭಕುತಿಯಿಂದ
ಅರವಿ೦ದನಾಭ ಸಿರಿವಿಧಿಭಾವಾದಿಗಲೋಡೆಯಾ
ಹಿರಿದಾಗಿ ಕೋಳಿ ಕೂಗಿತೆಳಯ್ಯ ಹರಿಯೇ II೨II
shreerayarublogspot
ದಾಸರೆಲ್ಲರು ಬಂದು ಧುಳಿದಶ೯ನಕೋ೦ಡು
ಲೇಸಾಗಿ ತಾಳ ದ೦ಡಿಗೆಯ ಪಿಡಿದು
ಶ್ರೀಶನೆಲೆಯಾದಿ ಕೇಶವ ನಿಮ್ಮ ಪಾದವನು
ಲೇಸಾಗಿ ಸ್ಮರಿಸಿ ಪೂಗಳುವರು ಹರಿಯೇ II೩II



Audio Link:
http://www.kannadaaudio.com/Songs/Devotional/SriVidyabhushana/Old/YeluNarayana.ram

Madhukara vrutii

ಮಧುಕರ ವೃತಿ ಎನ್ನದು ಅದು ಬಲು ಚೆನ್ನದು IIಪII
ಪದುಮನಾಭನ ಪಾದಪದುಮ ಮಧುಪವೆಂಬ IIಅಪII

shreerayarublogspot
ಕಾಲಿಗೆ ಗೆಜ್ಜೆ ಕಟ್ಟಿ ನೀಲವಣ೯ನ ಗುಣ
ಆಲಾಪಿಸುತ್ತ ಬಲು ಓಲಗ ಮಾಡುವಂಥ II೧II
ರಂಗನಾಥನ ಗುಣ ಹಿಂಗದೆ ಪಾಡುತ್ತ
ಶೃ೦ಗಾರ ನೋಡುತ್ತಾಕ೦ಗಾನ೦ದವೆ೦ಬ II೨II
ಇಂದಿರಾಪತಿ ಪುರಂದರವಿಠಲನಲ್ಲಿ
ಚೆಂದದ ಭಕ್ತಿಯಿ೦ದಾನ೦ದವ ಪಡುವಂಥ II೩II

Alli noodalu Raama

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರು ಅಲ್ಲಿ ಶ್ರೀರಾಮ IIಪII


ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೇ ಬೆದರಿ ಓಡಿದವು
ಈ ವೇಳೆ ನರನಾಗಿ ಇರಬಾರದೆ೦ದೆಣಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ II೧II


ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೂಳಿಪರಿ ರುಪವು೦ಟೆ
ಲವದಲ್ಲಿ ಅಸುರ ದುರುಳರೆಲ್ಲರು
ಅವರವರು ಅಸುರ ದುರುಳರೆಲ್ಲರು II೨II


ಹನುಮದಾದಿ ಸಾಧು ಜನರು ಅಪ್ಪಿಕೊಂಡು
ಕುಣಿಕುಣಿದಾಡಿದರು ಹರುಷದಿಂದ
ಕ್ಷಣದಲ್ಲಿ ಪುರಂದರವಿಠಲರಾಯನು
ಕೂನೆಗೂಡೆಯನು ತಾನೋಬ್ಬನಾಗಿ ನಿಂತ II೩II