Friday, December 31, 2010

Shambho swayambho sambhava


ವಾಮದೇವ ವಿರಿಂಚಿ ತನಯ ಉ
ಮಾಮನೋಹರ ಉಗ್ರ ಧೂರ್ಜಟಿ
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ
ಕಾಮಹರ ಕೈಲಾಸ ಮಂದಿರ
ಸೋಮಸೂರ್ಯಾನಳವಿಲೋಚನ
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ I




( from Harikathamruthasaara )


ಶ೦ಭೋ ಸ್ವಯ೦ಭುಸ೦ಭವ ನಂಬಿದೆ ಕಾಯೋ
ಜ೦ಭಾರಿನುತ ಅಭ IIಪII




ಅ೦ಬರಪುರಹರ ಸಾ೦ಬ ತ್ರಿಯ೦ಬಕ
ಶ೦ಬರಾರಿರಿಪು ಗ೦ಭೀರ ಕರುಣೇ IIಅಪII





ಭಸಿತಭೂಷಿತ ಶರೀರ ಭಕ್ತರಾಧಾರ
ವಿಷಕಂಠ ದುರಿತಹರ
ಪಶುಪತಿ ಫಣಿಪಹಾರ ಪಾವನ್ನಕರ
ತ್ರಿಶೂಲಡಮರುಗಧರ
ನೋಸಲನಯನ ವಿಕಸಿತ ಅ೦ಬುಜಮುಖ
ಶಶಿಧರ ಮೂಕ ರಕ್ಕಸಮದಮದ೯ನ
ಘಸಣೆಗೋಳಿಸುವ ತಾಮಸವ ಕಳೆದು ಮಾ-
ನಸದಲಿ ರಂಗನ ಬಿಸಜಪಾದವ ತೋರೋII ೧II

ರಜತಪವ೯ತನಿವಾಸ ನಿಮ೯ಲಭಾಸ
ಗಜದೈತ್ಯ ನಾಶ ಗಿರೀಶ
ಸುಜನರ ಮನೂವಿಲಾಸ ವ್ಯೋಮಕೇಶ
ತ್ರಿಜಗದಲ್ಲಣ ಗೌರೀಶ
ಅಜಸುತನಧ್ವರ ಭಜನೆಯ ಗೈಸಿದ
ಅಜಗರಮಂದಿರ ಗಜಮುಖ ಜನಕನೆ
ಗಜಗಮನನ ತನುಜನನ್ನು ಕಾಯ್ದವನೆ
ವಜ್ರಮುನಿ ವಂದಿತ ಭಾಜಿಸುವೆ ನಿನ್ನ II೨II

ಮಧುರಾಪುರಿ ನಿಲಯ ಮೃತ್ಯು೦ಜಯ
ಸದಮಲ ಸುಮನಸಗೆಯ
ಸದಾ ನಮಿಪರ ಹೃದಯಸ್ತ ಚಕ್ಕನಾಥ
ಸದೆ ಪಾಪ ಕೊಡು ಅಭಯ
ಸದಾಶಿವ ಜಾನ್ಹವಿಧರ ಕೃತಮಾಲಾ
ನದಿತೀರದಿ ವಾಸವಾಗಿಪ ಸೌಂದರ್ಯ
ಮಧುರಿಪು ವಿಜಯವಿಠಲ ಪದಾಬ್ಜಕೆ
ಮಧುಪನೆನಿಪ ಪಂಚವದನ ಕೈಲಾಸ II೩II




Audio/video link:

http://www.youtube.com/watch?v=EH_lZNjg26M

Parama mangala

(image source : google search)
ಪರಮ ಮಂಗಳ ಮೂರುತಿ ದಿವ್ಯಕಿರುತಿ
ಧರೆಯೋಳಗಿದೆ ವಾರುತಿ IIಪ II


ಕರುಣಾಪಯೋನಿಧಿಯೆ ಕರವಪಿಡಿದು ಎನ್ನ
ಕರುಣಶುದ್ಧನ ಮಾಡೊ ಕರೆವೆ ಮಸ್ತಕ ಬಾಗಿ II೧ II

shreerayarublogspot.com

ರಾಘವೇಂದ್ರರಪಾದ ಲಾಘವಮತಿಯಲ್ಲಿ
ಶ್ಲಾಘನ ಮಾಡಿದ ಮಾಗಧಾರಿಯಪ್ರೀಯ II೨ II


ನಿರುತ ಮಂತ್ರಾಲಯ ಪುರವಾಸ ಅಘನಾಶ
ಸಿರಿ ವಿಜಯವಿಠಲನ್ನಚರಣ ಭಜಿಪಗುಗುವೆ II೩II

Ninna Olumeinda nikhila janaru

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು I
ಮನ್ನಿಸುವರೊ ಮಹಾರಾಯ IIಪII

ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ I

ನಿನ್ನದೇ ಸಕಲ ಸಂಪತ್ತು II ಅಪ II
shreerayarublogspot.com
ಜೀರ್ಣಮಲಿನ ವಸ್ತ್ರ ಕಾಣದ ಮನುಜಗೆ Iಊರ್ಣ ವಿಚಿತ್ರ

ವಸನಾ II ವರ್ಣವರ್ಣದಿಂದ ಬಾಹೋದೇನೊ ಸಂ -Iಪೂರ್ಣ
ಗುಣಾರ್ಣವ ದೇವಾ II1II

ಸಂಜೀತನಕ ಇದ್ದು ಸಣ್ಣ ಸವಟು ತುಂಬ I ಗಂಜಿ ಕಾಣದೆ I
ಬಳಲಿ -ದೆನೊ II ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ
ಭುಂಜಿಸುವದು ಮತ್ತೇನೋ II2II

ಒಬ್ಬ ಹೆಂಗಸಿಗೆ ಅನ್ನ ಹಾಕುವದಕ್ಕೆ I ತಬ್ಬಿಬ್ಬುಗೊಂಡೆ ನಾ ಹಿಂದೆ I
ನಿಬ್ಬರದಲಿ ಸರ್ವರ ಕೂಡಿನ್ನು Iಹಬ್ಬವನುಂಡೆನೊ ಹರಿಯೇ II3II

ಮನೆಮನೆ ತಿರುಗಿದೆ ಕಾಸುಪುಟ್ಟದೆ I ಸುಮ್ಮನೆ ಚಾಲವರಿದು
ಬಾಹೆನೊ II ಹಣ ಹೊನ್ನು ದ್ರವ್ಯ ಒಮ್ಮಿಂದೊಮ್ಮೆ ಈಗ Iಎನಗೆ ಪ್ರಾಪುತಿ
ನೋಡೋ ಜೀಯಾ II4II

ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ Iಮೆದ್ದೆನೆಂದರೆ
ಈಯದಾದೆ II ಈ ಧರೆಯೊಳು ಸತ್ಪಾತ್ರರಿಗುಣಿಸುವ I ಪದ್ಧತಿ ನೋಡೊ
ಧರ್ಮಾತ್ಮಾ II5II

ನೀಚೋಚ್ಛ ತಿಳಿಯದೆ ಸರ್ವರ ಚರಣಕ್ಕೆ I ಚಾಚಿದೆ ನೊಸಲು
ಹಸ್ತಗಳ II ಯೋಚಿಸಿ ನೋಡಲು ಸೋಜಿಗವಾಗಿದೆ I ವಾಚಕೆ ನಿಲುಕದೊ
ಹರಿಯೇ II6II

ವೈದಿಕ ಪದವಿಯ ಕೊಡುವನಿಗೆ ಲೌಕಿಕ Iನೈದಿಸುವುದು
ಮಹಾಖ್ಯಾತಿ II ಮೈದುನಗೊಲಿದ ಶ್ರೀ ವಿಜಯವಿಠಲ ನಿನ್ನ I ಪಾದ
ಸಾಕ್ಷಿ ಅನುಭವವೊ
II7II


Audio link:
http://www.kannadaaudio.com/Songs/Devotional/home/NinnaOlumeinda-RaichurSheshgiridas.php