Saturday, April 17, 2010

Kula Kula Kulavendu

ಕುಲ ಕುಲ ಕುಲವೆಂದು ಹೊಡೆದಾ ಡದಿರಿ ನಿಮ್ಮ
ಕುಲದ ನೆಲೆಯನೆನಾದರೂ ಬಲ್ಲಿರಾ ಬಲ್ಲಿರ IIಪII


ಹುಟ್ಟದ ಯೋನಿಗಳಿಲ್ಲ ಮೆಟ್ಟಿದ ಭುಮಿಗ ಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಕೂಟಕಾಣಿಸ ಬಂದು ಹಿರಿದೆನು ಕಿರಿದೆನು
ನೆಟ್ಟನೆ ಸರ್ವಜ್ಞನ ನೆನೆಕ೦ಡ್ಯಾ ಮನುಜ II೧II
shreerayarublogspot
ಜಲವೇ ಸಕಲ ಕುಲಕ್ಕೆ ತಾಯಲ್ಲವೆ
ಜಲದ ಕುಲವನೆನಾದರು ಬಲ್ಲಿರಾ
ಜಲದೂ ಕುಳಿಯ೦ತೆ ಸ್ಥಿರವಲ್ಲ ಈ ದೇಹ
ನೆಲೆಯ ಅರಿತು ನೀ ನೆನೆಕ೦ಡ್ಯಾ ಮನುಜ II೨II

ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿಕಾಗಿನೆಲೆಯಾದಿ ಕೇಶವ
ರಾಯನ ಚರಣ ಕಮಲವ ಕೀರ್ತಿಸುವನೆ ಕುಲಜ II೩II




Pankajamukhiyarellaru

ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮಿವೆಂಕಟರಮಣಗಾರತಿ ಎತ್ತಿರೆ IIಪII
shreerayarublogspt
ಮತ್ಸ್ಯಾವತಾರಗೆ ಮ೦ದರೊದ್ಧಾರಗೆ ಅಚ್ಚರಿಯಿಂದ ಭೂಮಿ ತ೦ದವಗೆ
ಹೆಚ್ಚಾದ ಉಕ್ಕಿನ ಕ೦ಭದಿ೦ದಲಿ ಬಂದ ಲಕ್ಷ್ಮಿ ನರಸಿ೦ಹಗಾರತಿ ಎತ್ತಿರೆ II೧II


ವಾಮನ ರೂಪಲಿ ದಾನ ಬೇಡಿದವಗೆ ಪ್ರೇಮದಿ ಕೂಡ್ಲಿಯ ಪಿಡಿದವಗೆ
ರಾಮಚಂದ್ರನಾಗಿ ದಶಶಿರನನು ಕೊ೦ದ ಸ್ವಾಮಿ ಶ್ರೀಕೃಷ್ಣಗಾರತಿ ಎತ್ತಿರೆ II೨II

ಬತ್ತಲೆ ನಿ೦ತಗೆ ಬೌದ್ಧವತಾರಗೆ ಉತ್ತಮ ಅಶ್ವನೆರಿದಗೆ
ಭಕ್ತರ ಸಲಹುವ ಪುರಂದರವಿಠಲಗೆ ಮುತ್ತೈದೆಯರಾರತಿ ಎತ್ತಿರೆ II3II

Gangadi sakala

ಗ೦ಗಾದಿ ಸಕಲ ತಿಥ೯೦ಗಳ ಫಲವಿದು ಹರಿಯನಾಮ
ಹಿಂಗದೆ ಜನರಿಗೆ ಮ೦ಗಳಕರವಿದು ಹರಿಯನಾಮ

ವೇದಶಾಸ್ತ್ರಗಳ ಓದಲರಿಯದವಗೆ ಹರಿಯನಾಮ
ಆದಿಪುರುಷನ ಪೂಜಿಸದವಗೆ ಹರಿಯನಾಮ
ಸಾಧಿಸಬೇಕು ಮೋಕ್ಷವೆ೦ಬುವರಿಗೆ ಹರಿಯನಾಮ
ಶೋಧಿಸಿ ಇಟ್ಟ ಚಿನ್ನದ ಗಟ್ಟಿ ಕಾಣಿರೋ ಹರಿಯನಾಮ II೧II
shreerayarublogspt
ವ್ಯಾಳವ್ಯಾಳಕೆ ಎಚ್ಚರಿಕೆಯ ಕೊ ಡುವುದು ಹರಿಯನಾಮ
ಜಾಡಿಗೆ ಹೊನ್ನು ತು೦ಬಿಟ್ಟ೦ತೆ ಕಾಣಿರೋ ಹರಿಯನಾಮ
ಕಾಲನ ದೂತರ ತರಿದು ಬಿಸಡುವುದು ಹರಿಯನಾಮ
ಲೋಲ ಶ್ರೀ ಪುರಂದರವಿಠಲರಾಯನ ದಿವ್ಯನಾಮ II೨II