Thursday, March 11, 2010

Kanasu Kandena Manadali

ಕನಸುಕಂಡೆನ ಮನದಲಿ ಕಳವಳಗೊ೦ಡೆನೆ
ಏನು ಹೇಳಲಿ ತಂಗಿ ತಿಮ್ಮಯ್ಯನಪಾದವನು ಕಂಡೆ

ಪೋನ್ನದ ಕಡಗನಿಟ್ಟು ತಿಮ್ಮಯ್ಯತಾ
ಪೋಲ್ವ ನಾಮವಇಟ್ಟು ಅ೦ದುಗೆಘಲುಗೆನ್ನುತ
ಎನ ಮುಂದೆ ಬಂದು ನಿಂತಿದ್ದನಲ್ಲೇ II೧II

ಮಕರಕು೦ಡಲವನಿಟ್ಟು ತಿಮ್ಮಯ್ಯ ತಾ
ಕಸ್ತೂರಿತಿಲಕವನಿಟ್ಟು ಗೆಜ್ಜೆ ಘಲುಗೆನುತ
ಸ್ವಾಮಿ ತಾ ಬಂದು ನಿಂತಿದ್ದನಲ್ಲೇ II೨II

ಮುತ್ತಿನ ಪಲ್ಲಕ್ಕಿ ಯತಿಗಳು
ಹೊತ್ತು ನಿಂತಿದ್ದರಲ್ಲೇ ಛತ್ರಚಾಮರದಿಂದ
ರಂಗಯ್ಯನ ಸೇವೆಯ ಮಾಡುವರೇ II೩ II


ತಾಮರ ಕಮಲದಲಿ ಕೃಷ್ಣಯ್ಯ ತಾ
ಬಂದು ನಿಂತಿದನಲ್ಲೇ ವಾಯು ಬೋಮ್ಮದಿಗಳು
ರಂಗಯ್ಯನ ಸೇವೆಯ ಮಾಡುವರೇ II೪II

ನವರತ್ನ ಕೆತ್ತಿಸಿದ ಸ್ವಾಮಿ ಎನ್ನ
ಹೃದಯಮ೦ಟಪದಲ್ಲಿ ಸವಾ೯ಭರಣ ದಿಂದ
ಪುರಂದರವಿಠಲನ ಕೂಡಿದೇನೆ II೫II

No comments: