ರಾಮ ಎಂಬೋ ಎರಡು ಅಕ್ಷರದ ಮಹಿಮೆಯನು
ಪಾಮರರು ತಾವೇನು ಬಲ್ಲರಯ್ಯ ಪ
'ರಾ ' ಎಂಬ ಮಾತ್ರದೊಳು ರಕ್ತ ಮಾಂಸ ದೊಲಿದ್ದ
ಆಯಸ್ಥಿ ಗತವಾದ ಅತಿ ಪಾಪವನ್ನು
ಮಾಯವನು ಮಾಡಿ ಮಹಾರಾಯ ಮುಕ್ತಿಯನು ಕೊಡುವ
ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ೧
ಮತ್ತೆ "ಮ "ಎಂದೆನಲು ಹೊರಬಿದ್ದ ಪಾಪಗಳು
ಬತ್ತಿ ಒಳ ಪೂಗದಂತೆ ಕಾವಟವಾಗಿ
ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ
ಭಕ್ತವರ ಹನುಮಂತನೊಬ್ಬ ತಾ ಬಲ್ಲ ೨
ಧರೆಯೋಳಿ ನಾಮಕ್ಕೆ ಸರಿ ಮಿಗಿಲು ಇಲ್ಲೇ೦ದು
ಪರಮವೇದಗಳೆಲ್ಲ ಪೂಗುಳುತಿಹಳು
ಸಿರಿಯರಸ ಪುರಂದರ ವಿಠಲನ ನಾಮವನು
ಸಿರಿ ಕಾಶಿಯಳಗಿಪ್ಪ ಶಿವನು ತಾ ಬಲ್ಲ ೩
No comments:
Post a Comment