Friday, October 30, 2009

Aavasiyali neenu enna

ಆವಸಿರ್ಯಲಿ ನೀನು ಎನ್ನ ಮರೆತೆ
ದೇವ ಜಾನಕಿರಮಣ ಪೇಳು ರಘುಹ್ಪತಿಯೆ ಪ

ಸುರರ ಸೆರೆಯನು ಬಿಡಿಸಿ ಬಂದೆನೆಂಬ ಸಿರಿಯೆ
ಶರಧಿ ಸೇತುವೆಯ ಕಟ್ಟಿದೆನೆನ್ನುವ ಸಿರಿಯೆ

ಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ ೧
ಕಡಲೊಳಗೆ ಮನೆ ಮಾಡಿ ಮಲಗಿದೆನೆಂಬ ಸಿರಿಯೆ


ಮೃದ ನಿನ್ನ ಸಖನಾದನೆಂಬ ಸಿರಿಯೆ
ಬಿಡದೆ ದ್ರೌಪದಿ ಮಾನ ಕಾಯ್ದೆನೆಂಬ ಸಿರಿಯೆ
ದೃಢ ವಾಗಿ ಹೇಳೆನಗೆ ದೇವಕಿ ಸುತನೆ ೨

ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆ
ಕಾಮ ನಿನ್ನ ಸುತನಾದ ನೆಂಬ ಸಿರಿಯೆ
ಆ ಮಹಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆ
ಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ ೩

ಮನುಜರೆಲ್ಲ್ರು ನಿನ್ನ ಸುತ್ತಿಸುವರೆಂಬ ಸಿರಿಯೆ
ಹನುಮ ನಿನ್ನ ಬಂಟನಾದನೆಂಬ ಸಿರಿಯೆ
ಬಿನುಗುದೈವಗಳು ನಿನಗೆಣ್ಯಿಲ್ಲವೆಂಬ ಸಿರಿಯೆ
ಅನುಮಾನ ಮಾಡದೆ ಪೇಳೊ ನರಹರಿಯೆ ೪

ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿ
ಪಂಥವೆ ನಿನಗಿದು ಆವ ನಡತೆ
ಕಂತುಪಿತ ಕಾಗಿನೆಲೆಯದಿಕೇಶವ ರಂಗ
ಚಿಂತೆಯನು ಬಿಡಿಸಿ ಸಂತೋಷಪಡಿಸೊ ೫

Aarambhadali namipe

ಆರಂಭದಲಿ ನಮಿಪೆ ಬಾಗಿಶಿರವ
ಹೇರಂಬ ನೀನೊಲಿದು ನೀಡೆನಗೆ ವರವ

ದ್ವಿರದವದನನೆ ದ್ವಿರದವರದನ ಮಹಿಮೆ
ಹರುಷದಲಿ ಕರ ಜಿಹ್ವೆ ಎರಡರಿಂದ
ಬರೆದು ಪಾಡುವುದಕ್ಕೆ ಬರುವ ವಿಘ್ನವ ತರಿದು
ಕರುಣದಿಂದಲಿ ಎನ್ನ ಕರಪಿಡಿದು ಸಲಹೆಂದು

ಕುಂಬಿಣಿಜಿಪತಿರಾಮ -ಜಂಬಾರಿ ಧರ್ಮಜರು
ಅಂಬರಾದಿಪ ರಕುತಾಂಬರನೆ ನಿನ್ನ
ಸಂಬ್ರಮದಿ ಪೂಜಿಸಿದರೆಂಬ ವಾರುತಿ ಕೇಳಿ
ಹಂಬಲವ ಸಲಿಸೆಂದು ನಂಬಿ ನಿನ್ನಡಿಗಳಿಗೆ

ಸೋಮಶಾಪದ ವಿಜಿತಕಾಮ ಕಾಮಿತದಾತ
ವಾಮದೇವನ ತನಯ ನೇಮದಿಂದಾ
ಶ್ರಿಮನೊಹರನಾದ ಶ್ಯಾಮಸುಂದರಸ್ವಾಮಿ
ನಾಮನೆನೆಯುವ ಭಾಗ್ಯ ಪ್ರೆಮದಲಿ ಕೊಡು ಎಂದು

Vadirajamunipa hayamukha

ವಾದಿರಾಜಮುನಿಪ ಹಯಮುಖ
ಪಾದಕಮಲ ಮಧುಪ IIಪII

ನೀ ದಯದಲಿ ತವಪಾದಧ್ಯಾನವನು
ಆದರದಲಿ ಕೊಟ್ಟಾದರಿಸೆನ್ನನು IIಅಪII



ಮೂಷಕಬಿಲದಿಂದ ಉದರ ಪೋಷಕ ಬರಲಂದು
ವಾಸುಕಿ ಭಯದಿ ನಿಮ್ಮಾಸನದೆಡೆ ಬರೆ
ಕ್ಲೇಶ ಕಳೆದು ಸಂತೋಷಗೈಸಿದೆ II೧ II



ಮುಂದೆ ಭೂತನರನ ಪ್ರೇರಿಸಿ ಹಿಂದೆ ಒಬ್ಬ ನರನ
ನಿಂದರಿಸಿ ಆನಂದದಿಂದ ಜನ-
ವೃಂದ ನೋಡುತ್ತಿರೆ ಅಂದಣ ನಡೆಸಿದ್ಯೊ II೨II



ಶಾಸ್ತ್ರ ಪ್ರಸಂಗದಲಿ ನಾರಾಯಣಭೂತರ ಗೆಲಿದಲ್ಲೆ
ಖ್ಯಾತಿಯಿಂದ ಬಹು ಮಾತನಾಡಿ
ಶ್ರೀ
ನಾಥನ ಮಂದಿರ ಪ್ರೀತಿಲಿ ತರಿಸಿದ್ಯೊ II೩ II



ತುರಗವದನ ಪಾದ ಭುಜಗಳಲಿ
ಧರಿಸಿಕೋಂಡು ಮೋದ ಕಡಲೆಮಡ್ಡಿಯನು
ಕರದಿಂದುಣಿಸಿದ ಗುರುವರಶೇಖರ II೪ II


ಆ ಮಹಾ ಗೋಪಾಲವಿಠಲ ತಾಮರಸದಳಗಳ
ಧೀಮಂತರಿಗೆ ಸುಕಾಮಿತವನು ಕೊಡುವ
ಆ ಮಹಾಮಹಿಮ II೫ II



In English:

Vadirajamunipa hayamukha
Paadakamala madhupa

Nii dayadali tavapaadadhyanavanu
Aadaradali Kottadariseennnu

Mookshakabiladinda udara pooshaka baralandu
Vaasuki bhayadi nimmasanadeede bare
Kelsha kaledu santoshagaisidee 1

Munde bhutanarana prerisi hinde vabaanarana
Nindarise aanandadinda janavrunda
Nooduttire andana nadesidyoo 2

Shstraprasangadali naarayanabhutara gelidalee
Khatiyinda baahu maatanaadi srinaathana
Mandira pritili tarisidyoo 3

Turagavadana paada bhujagalali
Dharisikondu mooda kadalemaddiyanu
Karadindunisida guruvarashekhara 4

Aa mahaa goopalavitthala taamarasadalagala
Dhima0tarrige sukaamitavanu kooduva
Aa mahaamahima 5

Wednesday, October 28, 2009

Prayers ( Dinanityada stotragalu)

ಶುಕ್ಲಾಂಬರದರ೦ ವಿಷ್ಣು ಶಶಿವಣ೯೦ ಚತುಭು೯ಜ೦
ಪ್ರನನ್ನವದನ೦ ಧ್ಯಾಯೇತ ಸರ್ವ ವಿಘ್ನೋಪ ಶಾಂತಯೇ

ಸರ್ವ ಮ೦ಗಳ ಮಾ೦ಗಲ್ಯೆ ಶಿವೆ ಸವಾ೯ಥ ಸಾಧಿಕೆ
ಶರಣ್ಯೇ ತ್ರೈ೦ಬಕೇ ದೇವಿ ನಾರಾಯಣಿ ನಮೋಸ್ತುತೇ

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ
ಭಜತಾ೦ ಕಲ್ಪವೃಕ್ಷಾಯ ನಮತಾ೦ ಕಾಮಧೇನವೇ

ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ
ಕರ ಮೂಲೇ ತು ಗೋವಿಂದ: ಪ್ರಭಾತೇ ಕರದಶ೯ನ೦

ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ

ವ್ಯಾಸಾಯ ಭಾವನಾಶಾಯ ಶ್ರೀ ಶಾಯ ಗುಣರಾಶಯೇ
ಹೃ ದ್ದ್ಯಾಯ ಶುದ್ಧ ವಿದ್ಯಾಯ ಮದ್ವಾಯ ಚ ನಮೋ ನಮಃ

ಪ್ರಥಮೋ ಹನುಮಾನ್ನಾಮ: ದ್ವಿತಿಯೋ ಭೀಮ ಏವ ಚ
ಪೂರ್ಣಪ್ರಜ್ಞ ಸ್ತೃತಿಯಸ್ತು ಭಾಗತ್ಕಾಯ೯ ಸಾಧಕ:


ವಕ್ರ ತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನ೦ ಕುರುಮೆ ದೇವ ಸರ್ವ ಕಾರ್ಯೇಷು ಸರ್ವದ

ನಮಃ ಸೂರ್ಯಾಯ ಚಂದ್ರಾಯ ಮಂಗಲಾಯ ಬುಧಾಯ ಚ
ಗುರು ಶುಕ್ರ ಶನಿಭ್ಯಶ್ಚ ರಾಹುವೇ ಕೇತುವೇ ನಮಃ

ಆಕಾಶಾತ್ ಪತಿತ೦ ತೋಯ೦ ಯಥಾ ಗಚ್ಚತಿ ಸಾಗರ೦
ಸರ್ವ ದೇವ ನಮಸ್ಕಾರ: ಕೇಶವಂ ಪ್ರತಿಗಚ್ಚತಿ

ವಂದೇ ವಂದ್ಯಂ ಸದಾನ೦ದ೦ ವಾಸುದೇವಂ ನಿರ೦ಜನ೦
ಇಂದಿರಾಪತಿಮಾದ್ಯಾದಿ ವರದೇಶ ವರಪ್ರದ೦

ಯಾನಿ ಕಾನಿಚ ಪಾಪಾನಿ ಧಮಾ೯೦ತರ ಕೃತಾನಿಚ
ತಾನಿ ತಾನಿ ವಿನಶ್ಯ೦ತಿ ಪ್ರದಕ್ಷಿ ಣ್ಯ೦ ಪದೇ ಪದೇ
ಪಾಪೋಹ೦ ಪಾಪ ಕಮಾ೯ಹ೦ ಪಾಪಾತ್ಮಾ ಪಾಪ ಸಂಭವಃ
ತ್ರಾಹಿ ಮಾ೦ ಕೃಪಯಾ ದೇವ ಶರಣಾಗತ ವತ್ಸಲ

ಅನ್ಯಥಾ ಶರಣ೦ ನಾಸ್ತಿ ತ್ವಮೇವ ಶರಣ೦ ಮಮ
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾದ೯ನ
ಮಾತಾಚ ಕಮಲಾದೇವಿ ಪಿತಾದೇವೋ ಜನಾದ೯ನ
ಬಾ೦ಧವಾ ವಿಷ್ಣು ಭಕ್ತಶ್ಚ ಸ್ವದೆಶೋ ಭುವನ ತ್ರೈಯ೦
ಓಂ ನಮೋ ನಾರಾಯಣಾಯ ನಮಃ ನಮಸ್ಕಾರ೦ ಸಮಪ೯ಯಾಮಿ




Tulasi stotra:

ಪ್ರಸೀದ ತುಳಸಿದೇವಿ ಪ್ರಸೀದ ಹರಿವಲ್ಲಭೇ
ಕ್ಷೀರೋದ ಮಥನೋದ್ಭೊತೇ ತುಳಸಿ ತ್ವಾ೦ ನಮಾಮ್ಯಹಂ

ಯುನ್ಮೂಲೆ ಸರ್ವತಿರ್ಥಾನಿ ಯನ್ಮಧೆ ಸರ್ವದೇವತಾ:
ಯದಗ್ರೇ ಸರ್ವವೇದಾಶ್ಚ ತುಳಸಿ ತ್ವಾ೦ ನಮಾಮ್ಯಹಂ


ನಮಃ ತುಳಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೆ
ನಮೋ ಮೊಕ್ಷಪ್ರದೇ ದೇವೀ ನಮಃ ಸ೦ಪತ ಪ್ರದಾಯಿನಿ

Purandaradasara gadya


ಅನ೦ತ ಕೋಟಿ ಬ್ರ್ಮಹಾ೦ಡ ನಾಯಕ
ರಮಾ ಬ್ರ್ಮಹ ರುದ್ರೆ೦ದ್ರಾದಿ ವ೦ದ್ಯ
ಭಕ್ತ ವತ್ಸಲ ಭವ ರೋಗ ವೈದ್ಯ
ಶರಣಾಗತ ವಜ್ರ ಪ೦ಜರ
ಅಪತ್ಬಾ೦ಧವ ಅನಾಥ ಬ೦ಧೋ
ಅನಿಮಿತ್ತ ಬ೦ಧೋ ಪತಿತ ಪಾವನ
ಮಹಾರೋಗ ನಿವಾರಣ
ಮಹಾದುರಿತ ನಿವಾರಣ
ಮಹಾಭಯ ನಿವಾರಣ
ಮಹಾಬ೦ಧ ವಿಮೋಚನ
ಭಯಕೃತ್ಭಯಾ ವಿನಾಶನ
ಕೃಪಾವಾರಿಧಿ ದೇವ ದೇವೋತ್ತಮ
ದೇವಶಿಖಾಮಣಿ
ಕಪಟ ನಾಟಕ ಸೂತ್ರಧಾರ
ನಿತ್ಯರೂಳು ನಿತ್ಯ
ಸತ್ಯ ಸಂಕಲ್ಪ
ಮುಕ್ತಾ ಮುಕ್ತ ನಿಯಾಮಕ
ಮೊಕ್ಷಧರ
ಸುವೈಕುಂಠ ಪತಿ
ವೈಕುಂಠ ವಿಹಾರಿ
ತ್ರಿಧಾಮ ತ್ರಿಗುಣ ವಜಿ೯ತ
ಜಗದ್ಜನ್ಮಾದಿ ಕಾರಣ
ಜಗತ್ಪತೆ ಜಗದತ್ಯ೦ತಭಿನ್ನ
ಜಗಧೀಶ ಜಗದುದ್ಧಾರ
ಜಗತ್ಸ್ವಾಮಿ
ಜಗದ್ವಿಲಕ್ಷ ಣ
ಜಗನ್ನಾಥ
ವಿಶ್ವ ಕುಟು೦ಬಿ ವಿರಾಟ ಮೂರ್ತಿ
ಹೇ ಮ೦ಗಳಾ೦ಗ ಹೇ ಶುಭ೦ಗ
ಪರಮ ಮ೦ಗಳಮೂರ್ತಿ
ಕೋಮಲಾ೦ಗ
ನೀಲ ಮೇಘ ಶ್ಯಾಮ
ಇಂದು ವದನ ಬಹು ಸು೦ದರ
ಇಂದಿರಾ ವಂದಿತ ಚರಣ
ವೃಕೋದರ ವಂದ್ಯ
ಕೇಶವಾದಿ ರೂಪ
ಅಜಾದಿ ರೂಪ
ವಿಶ್ವಾದಿ ರೂಪ
ಅತ್ಮಾದಿ ರೂಪ
ಅನಿರುದ್ಧಾದಿ ರೂಪ
ಅನ್ನಮಯಾದಿ ರೂಪ
ಅನೇಕ ಮಂತ್ರ ಪ್ರತಿಪಾದ್ಯ
ಸರ್ವ ಸಾರ ಭೋಕ್ತ
ಅಷ್ಟೈಶ್ವಯ೯ ಪ್ರದಾತ
ಓಂಕಾರ ಶಬ್ದವಾಚ್ಯ
ವಿಶಿಷ್ಟ ತಾರತಮ್ಯ ವಾಚ್ಯ
ಅನ೦ತಾನ೦ತ ಶಬ್ದ ವಾಚ್ಯ
ಅನುಮಹದ್ರೂಪ
ಶ೦ಖ ಚಕ್ರ ಪೀತಾಂಬರ ಧಾರಿ
ಕಮಲಾಕ್ಷ ಕಮಲನಾಭ
ವೈಜಯ೦ತಿ ವನಮಾಲಾ ಶೋಭಿತ
ಕೌಸ್ತುಭ ಭೂಷಿತ
ಸುವಣ೯ ವರ್ಣ
ನವರತ್ನ ಕು೦ಡಲಧಾರಿ
ಕಸ್ತೂರಿ ಶ್ರೀ ಗಂಧಲೇಪನ
ಗರುಡಾರುಢ ಶೋಭಿತ
ಕಾಮಧೇನು
ಶ್ರೀ ವತ್ಸಲಾ೦ಛನ
ಕಲ್ಪವೃಕ್ಷ
ಚಿಂತಾಮಣಿ
ಕ್ಷೀರಾಬ್ಧಿ ಶಾಯಿ
ಶೇಷ ಶಾಯಿ
ವಟಪತ್ರ ಶಾಯಿ
ಖಗ ವಾಹನ
ದೇಶ ಕಾಲ ಗುಣಾತಿತ
ಅನ೦ತ ಬ್ರ್ಮಹ ಅನ೦ತ ಶಕ್ತಿ
ಅನ೦ತ ಮೂರ್ತಿ ಅನ೦ತ ಕೀರ್ತಿ
ಪುರಾಣ ಪುರುಷೋತ್ತಮ
ಅಕ್ರೂರ ವರದ ಅ೦ಬರೀಶ ವರದ
ನಾರದ ವರದ ಪ್ರಹ್ಲಾದ ವರದ
ಗಜೇ೦ದ್ರ ವರದ ಮುಚುಕು೦ದ ವರದ
ಧ್ರುವ ವರದ ವಿಭೀಷಣ ವರದ
ಕುಲಾಲ ಭೀಮ ಸ೦ರಕ್ಷಕ
ಪು೦ಡರಿಕ ವರದ ಪರಾಶರ ವರದ
ಪಾರ್ಥ ಸಾರಥಿ ಪಾಪ ವಿದೂರ
ಅರಿಜನ ಪ್ರಚ೦ಡ
ಚಾಣೋರ ಮಲ್ಲ ಮುಷ್ಟಿ ಕಾಸುರ ಮಧ೯ನ
ಕಾಳಿ೦ದಿ ಕುಲವನ ಕ೦ಠಿರವ
ಮದನ ಗೋಪಾಲ ವೇಣು ಗೋಪಾಲ
ವೇಣು ನಾದ ಪ್ರಿಯ
ಶೋ ಢ ಶ ಸಹಸ್ರ ಗೋಪಿಕಾ ಪ್ರೀತಿ ವಿಲಾಸ
ಅಹಲ್ಯಾ ಶಾಪ ವಿನಾಶನ
ದ್ರೌಪದಿ ಅಭಿಮಾನ ರಕ್ಷಕ
ದುಷ್ಟ ಜನ ಮಧ೯ನ
ಶಿಷ್ಟ ಜನ ಪರಿಲಾಲನ
ಮುಕುಂದ ಮುರಾರೆ
ಕ೦ಸಾರೆ ಅಸುರಾರೆ
ದೈತ್ಯ ಕುಲ ಸಂಹಾರ
ಕ್ಷಾತ್ರ ಕುಲಾ೦ತಕ
ಸೋಮ ಕಾಸುರಾ೦ತಕ
ಹಿರಣ್ಯಾ ಕ್ಷ ಹಿರಣ್ಯ ಕಶಿಪು ಸ೦ಹಾರ
ರಾವಣ ಕುಭ ಕರ್ಣ ಮಧ೯ನ
ಶಿಶುಪಾಲ ದ೦ತವಕ್ರ ಶಿರಚ್ಛೆಧನ
ರಘುಕುಲೋದ್ಭವ
ದಶರಥ ಕೌಸಲ್ಯಾ ನ೦ದನ
ಸಿಂಧುರವರದ
ಸೀತಾಪತೇ ಶ್ರೀ ರಾಮಚಂದ್ರ
ಯದುಕುಲೋತ್ಪನ್ನ
ಯದುಕುಲೋದ್ಧರಿ
ಯದುಕುಲ ತಿಲಕ
ಯದುಕುಲ ಶ್ರೇಷ್ಠ
ವಸುದೇವ ದೇವಕಿ ನ೦ದನ
ಯಶೋದಕಂದ
ವೃ೦ದಾವನ ವಾಸಿ
ಗೋಪ ಕುಮಾರ ಗೋಕುಲ ದ್ವಾರಕಾವಾಸಿ
ಗೋವರ್ಧನೋದ್ದಾರಿ
ಕಲಿಯ ಮಧ೯ನ
ಪುತನಾ ಪ್ರಾಣಪಹಾರಿ
prಶಕಟಾಸುರ ಮಧ೯ನ
ಪಾ೦ಡವ ಬ೦ಧೋ
ಪಾ೦ಡವ ಪರಿಪಾಲ
ಪಾ೦ಡವ ಪ್ರಿಯ
ಸುಧಾಮ ಸಖ
ರುಕ್ಮಿಣಿ ವಲ್ಲಭ
ಸತ್ಯಭಾಮಾ ಪ್ರಿಯ
ಗೋಪಿಜನ ಜಾರ ನವನೀತ ಚೋರ
ಗೋಪಾಲ ಕೃಷ್ಣ ಗಂಗಾ ಜನಕ
ಪ್ರಯಾಗ ಮಾಧವ
ಕಾಶಿ ಬಿಂಧು ಮಾಧವ
ಪ೦ಪಾಪತಿ ಗುಲುಗು೦ಜಿ ಮಾಧವ
ರಾಮೇಶ್ವರ ಸೇತು ಮಾಧವ
ಬದರಿ ನಾರಾಯಣ ಶ್ರೀರಂಗನಾಥ
ವಡ್ಡಿ ಜಗನ್ನಾಥ
ಉಡುಪಿ ಶ್ರೀ ಕೃಷ್ಣ
ಮೇಲುಕೋಟೆಯ ಚೆಲುವರಾಯ
ಬೇಲೂರ ಚೆನ್ನಿಗರಾಯ
ಅಹೂಬಿಲ ನರಸಿ೦ಹ
ಪಾಡುರಂಗ ವಿಠಲ
ಶ್ರೀ ಶೈಲ ನಿವಾಸ
ಅರುಣಾಚಲ ನಿಲಯ
ವೃಷಭಾಚಲ ವಿಹಾರಿ
ಅನ೦ತ ಶಯನ
ದಭ೯ ಶಯನ
ಕಪಿಲ ಹಯಗ್ರಿವ ದತ್ತಾತ್ರೇಯ ಶಿ೦ಶುಮಾರ ಧನ್ವ೦ತರಿ
ಮಮಸ್ವಾಮಿ ಸರ್ವ ಸ್ವಾಮಿ
ಜಗದ೦ತಯಾ೯ಮಿ
ಜಗದೀಶ ಪ್ರಾಣೇಶ ದ್ವಿಜ ಫಣಿಪ ಮೃಢೆಶ
ಶ್ರೀರಮಣ ಭೂರಮಣ ದುಗಾ೯ರಮಣ
ಶ್ರೀ ಲಕ್ಷ್ಮಿ ವೆ೦ಕಟರಮಣ

ಭಾರತಿರಮಣ ಮುಖ್ಯ ಪ್ರಾಣಾ೦ತಗ೯ತ ಸೀತಾಪತೇ ಶ್ರೀ ರಾಮಚಂದ್ರ
ಸಾಕ್ಷಾತ್ಮನ್ಮಥ ಮನ್ಮಥ
ಹರಿವಿಠಲ ಪು೦ಡರಿಕ ವರದ ಪಾ೦ಡುರಂಗ ವಿಠಲ
ಪುರ೦ದರ ವಿಠಲ

Audio link:
http://www.kannadaaudio.com/Songs/Devotional/SriVishnuSahasranaama-SriVidyabhushana/PurandaraDasaraGadya.ram

Monday, October 26, 2009

Baaro GuruRaghavendra / ಬಾರೋ ಗುರು ರಾಘವೇಂದ್ರ

ಬಾರೋ ಗುರುರಾಘವೇಂದ್ರ
ಬಾರಯ್ಯ ಬಾ ಬಾ - ಬಾರೋ IIಪII
ಹಿಂದುಮುಂದಿಲ್ಲೆನಗೆ ನೀ ಗತಿ
ಎಂದು ನಂಬಿದೆ ನಿನ್ನ ಪಾದವ
ಬಂಧನವ ಬಿಡಿಸೆನ್ನ ಕರಪಿಡಿ
ನಂದಕಂದಮುಕುಂದ ಬಂಧೋ IIಅII

ಸೇವಕನೆಲವೊ ನಾನು - ಧಾವಿಸಿ ಬಂದೆನು
ಸೇವೆ ನೀಡೆಲೊ ನೀನು
ಸೇವಕನ ಸೇವೆಯನು ಸೇವಿಸಿ
ಸೇವ್ಯ-ಸೇವಕ ಭಾವವೀಯುತ
ಠಾವುಗಾಣಿಸಿ ಪೊರೆಯೊ ಧರೆಯೊಳು
ಪಾವನಾತ್ಮಕ ಕಾವ ಕರುಣಿII ೧II

ಕರೆದರೆ ಬರುವಿಯೆಂದು - ಸಾರುವುದು ಡಂಗುರ
ತ್ವರಿತದಿ ಒದಗೋ ಬಂದು
ಜರಿಯ ಬೇಡವೊ ಬರಿದೆ ನಿನ್ನಯ
ವಿರಹ ತಾಳದೆ ಮನದಿ ಕೊರಗುವೆ
ಹರಿಯ ಸ್ಮರಣೆಯ ನಿರುತದಲಿ ಎನ
ಗ್ ಹರುಷದಲಿ ನೀನಿರುತ ಕೊಡುತಲಿII ೨II

ನರಹರಿಪ್ರಿಯನೆ ಬಾ - ಗುರುಶ್ರೀಶವಿಠ್ಠಲನ
ಕರುಣಾಪಾತ್ರನೆ ಬೇಗ ಬಾ
ಗುರುವರನೆ ಪರಿಪೋಷಿಸೆನ್ನನು
ಮರೆಯದಲೆ ತವಚರಣಕೋಟಿಯಲಿರಿಸಿ
ಚರಣಾಂಬುಜವ ತೋರುತ
ತ್ವರಿತದಲಿ ಓಡೋಡಿ ಬಾ ಬಾ II೩II


Audio Link:
http://www.youtube.com/watch?v=2sXivcU3OSU
Audio Link:
http://www.kannadaaudio.com/Songs/Devotional/VandisuveGuruRaghavendra-MLV/Baro.ram


In English:
Baaro GuruRaghavendra
Barayya Baa Baa Baaro
Hindumundillenage nii gati
Endu nambide ninna paadava
Bandhanava bidisenna karapidi
Nandakandamukunda bandho

Sevakanelevoo naanu –dhavisi bandenu
Seveya nideloo niinu
Sevakana seveyanu sevisi
Sevya-sevaka bhavaviyuuta
Thavugaanisi pooreyoo dhareyoolu
Paavanaatmaka kava karuni 1

Karedare baruviyendu – saaruvudu dagura
Twaritadi vadagoo bandu
Jariya beedavoo baride ninnaya
Viraha taalade manadi koraguve
Hariya smaraneya nirutadi enage
Harushadali niniruta koodutali 2

Naraharipriyanee baa gurusrishavitthalana
Karunaapaatranee beega baa
Guruvarane paripooshisennanu
Mareyadale tavacharanakotiyalirisi
Charanaambujava tooruta
Twaritadali odoodi baa baa 3

Saturday, October 17, 2009

Sri Lakshmi stotra

ಶ್ರೀ ಲಕ್ಷ್ಮಿ ಸ್ತೋತ್ರಂ


ನಮಃ ಶ್ರೀ ಯೈ ಲೋಕಮಾತ್ರ್ಯೈ ಬ್ರಹ್ಮ ಮಾತ್ರ್ಯೈ ನಮೋನಮಃ
ನಮಸ್ತೆ ಪದ್ಮ ನೇತ್ರಾ ಯೈ ಪದ್ಮ ಮುಖ್ಯೈ ನಮೋನಮಃ
ಪ್ರಸನ್ನ ಮುಖ ಪದ್ಮಾಯೈ ಪದ್ಮ ಕಾ೦ತ್ಯೈ ನಮೋ ನಮಃ
ನಮೋ ಬಿಲ್ವವನ ಸ್ಥಾಯೈ ವಿಷ್ಣು ಪತ್ನೈ ನಮೋ ನಮಃ
ಸುರಕ್ತ ಪದ್ಮ ಪತ್ರಾಭ ಕರಪಾದತಲೈ: ಶುಭೈ :
ಸುರಕ್ತಾ೦ಗದ ಕೇಯೂರ ಕಾ೦ಚಿನುಪುರ ಶೋಭಿತೆ
ಯಕ್ಷಕದ೯ಮ ಸ೦ಲಿಪ್ತ ಸವಾ೯೦ಗೇ ಕಟಕೋಜ್ವಲೇ
ಮಾ೦ಗಲ್ಯಭರಣೈ ಶ್ಚಿತ್ರೈಮು೯ಕ್ತಾಹಾರ ವಿಭೂಶಿತೇ
ತಾಟ೦ಕೈರವತ೦ಶೈಶ್ಚ ಶೋಭಮಾನ ಮುಖಾ೦ಭುಜೇ
ಪದ್ಮ ಹಸ್ತೆ ನಮಸ್ತೇಸ್ತು ಪ್ರಸೀದ ಹರಿವಲ್ಲಭೆ
ಋಗ್ಯೆಜುಸ್ಸಾಮ ರೂಪಾಯೈ ವಿದ್ಯಾಯೈ ತೇ ನಮೋನಮಃ
ಪ್ರಸಿದಾಸ್ಮತ್ ಕೃಪಾದೃಷ್ಟಿ ಪಾಕೈರಾ ಲೋಕಯಾಬ್ಧಿ ಜೇ
ದ್ರುಷ್ಟಾವನರಾಸ್ತ್ವ ೦ ಬ್ರ್ಮಹತ್ವ೦ಶಿವತ್ವೆ೦ದ್ರತ್ವಮಾಪುನಯು :
ಇತಿ ಸುತ್ತಾ ತತೋ ದೇವೈ: ವಿಷ್ಣುವಕ್ಷ ಸ್ಥಲಾಲಯ
ವಿಷ್ಣು ನಾ ಸಹಸ೦ದ್ರುಶ್ಯ ರಾಮಪ್ರೀತ್ಯಾ ವದತ್ಸುರಾನ
ಸುರಾರಿನ್ ಸಹಸಾಹತ್ವ ಸ್ವಪದಾಮಿ ಗಮಿಷ್ಯಥಾ
ಯೇ ಸ್ಥಾನಹೀನಾ: ಸ್ವಸ್ಥಾನಾತ್ ಭ್ರ೦ಷಿತಾ ಏನರಾಭುಮಿ:
ತೇ ಮಾಮನೇನ ಸ್ತೋತ್ರೇಣ ಸ್ತುತ್ವಾ ಸ್ಥನಮವಾಪ್ನುಯು:



ಇತಿ ಶ್ರೀ ಲಕ್ಷ್ಮೀ ಸ್ತೋತ್ರ೦ ಸ೦ಪೂಣ೯೦

Friday, October 16, 2009

Hosakannu enage hachhalebeeku

ಹೊಸಕಣ್ಣು ಎನಗೆ ಹಚ್ಚಲೇಬೇಕು ಜಗದ೦ಬ
ವಸುದೆವಸುತನ ಕಾ೦ಬುದಕೆ
ಘಸನೆಯಾಗಿದೆ ಭಾವವಿಷಯವಾರಿಧಿಯೋಳು
ಶಶಿಮುಖಿ ಕರುಣದಿ ಕಾಯೋ ಅಮ್ಮಾ

ಪರರ ಅನ್ನವನು೦ಡು ಪರರಧನವಕ೦ಡು
ಪರಿಪರಿ ಕ್ಲೇಶಗಳು೦ಡೆ
ಮಹಾಲಕುಮಿ ನಿನ್ನ ಚರಣಕ್ಕೆ ಮೂರೆಹೊಕ್ಕೆ
ಕರುಣದಿ ಕಣ್ಣೆತ್ತಿ ನೋಡೇ ಅಮ್ಮಾ

ಮ೦ದಹಾಸಿನಿ ಭವಸಿ೦ಧುವಿನೋಳಗಿಟ್ಟು
ಚ೦ದವೆ ಅಮ್ಮಾ ನೋಡುವುದು
ಕ೦ದನ೦ತ೦ದೆನ್ನ ಕು೦ದುಗಳೆನಿಸದೆ
ಮ೦ಧರೋದ್ಧರನ ತೋರಮ್ಮ ಅಮ್ಮಾ

ಅ೦ದಚ೦ದಗಳೂಲ್ಲೆ ಬ೦ಧುಬಳಗವೂಲ್ಲೇ
ಬ೦ಧನಕೆಲ್ಲ ಕಾರಣವು
ಇಂದಿರೇಶನ ಪಾದದ್ವಂದ್ವವ ತೋರಿ
ಹೃನ್ಮ೦ದಿರದೋಳೂ ಬ೦ದು ನಿಲ್ಲೇ ಅಮ್ಮಾ



In English:

Hosakannu enage hacchalebeeku jagadamba
Vasudevasutana kaambudake
Ghasaneyaagide bhaavavishayavaaridhiyoolu
Shshimukhi karunadi kayooo ammaa

Parara annavanundu pararadhanavakandu
Paripari kelshagaludee
Mahaalakumi ninna charanakke moorehokke
Karunadi kannetti noode amma

Mandahaasini bhavasindhuvinolagittu
Chandave amma nooduvudu
Kandanantenda kundugalenisade
Mandaroddharana toramma ammaa

Andachandagalolle bandhubalagavolle
Bandhanakella kaaranavu
Indireshana paadadwandwawa toori
Hrunmmandiradooluu nille a
mmaa

Hari hariyennalikke

ಹರಿ ಹರಿಯೆನ್ನಲಿಕ್ಕೆ ಹೊತ್ತಿಲ್ಲ

ನರಜನ್ಮ ವ್ಯರ್ಥವಾಗಿ ಹೋಗುತದಲ್ಲ ಪ



ಹರಿಜಾಗರಣೆಯಲ್ಲಿ ಪಾರಣೆ ಚಿಂತೆ

ನಿರತ ಯಾತ್ರೆಯಲ್ಲಿ ಶಾಕದ ಚಿಂತೆ

ಸರುತ ಸತ್ಕಾರ್ಯದಿ ಧನದ ಮೇಲಿನ ಚಿಂತೆ

ಪುರಾಣ ಕೇಳ್ವಾಗ ಗೃಹದ ಚಿಂತೆ ೧



ಕರ್ಮದಿ ಒಂದು ಚಿಂತೆ ಧರ್ಮದಿ ಒಂದು ಚಿಂತೆ

ಪೆರ್ಮನ ಮಾಡಲು ಬಲು ಚಿಂತೆ

ಮರ್ಮ ವೈರದಿ ಚಿಂತೆ ಈರ್ಮನಸ್ಸಾಗೆ ಚಿಂತೆ

ದುರ್ಮದದಿ ನಡೆಯ ಪ್ರಾಣದ ಚಿಂತೆ ೨



ಗಂಗೆ ಮುಳುಗುವಾಗ ಚೆಂಬುಮೇಲಿನ ಚಿಂತೆ

ಸಂಗಡದವರು ಪೋಗುವ ಚಿಂತೆ

ಪನ್ನಗಶಯನ ಶ್ರೀ ಪುರಂದರವಿಠಲನ್ನ

ಹಿಂಗದೆ ಭಜಿಸಲು ಸತತ ನಿಶ್ಚಿಂತೆ ೩

Andhatamasu inyarigo

ಅಂಧಂತಮಸು ಇನ್ನಾರಿಗೆ
ಗೋವಿಂದನ ನಿಂದಿಸುವರಿಗೆ II ಪII

ಸಂದೇಹವಿಲ್ಲವು ಸಾರಿಸಾರಿಗೆ ವಾಯು-
ನಂದನನ ವಂದಿಸದವರಿಗೆ IIಅ ಪII


ಮಾತು ಮಾತಿಗೆ ಹರಿಯ ನಿಂದಿಸಿ-ಸ-
ರ್ವೋತ್ತಮ ಶಿವನೆಂದು ವಾದಿಸಿ
ಧಾತುಗ್ರಂಥಗಳೆಲ್ಲ ತೋರಿಸಿ-ವೇ-
ದಾಂತ ಪ್ರಮಾಣಗಳ ಹಾರಿಸಿ
ಸೋತು ಸಂಕಟಪಟ್ಟು ಘಾತಕ ಒಡಲೊಳಗಿಟ್ಟು
ನೀತಿ ಹೇಳುವ ಕೆಟ್ಟ ಜಾತಿಗಳಿಗಲ್ಲದೆ II೧II

ಮೂಲಕವತಾರಕ್ಕೆ ಭೇದವು-ಮುಖ್ಯ
ಶೀಲಪಂಡಿತರಿಳಗೆ ಅತಿ ವಾದವು
ಲೀಲಾಸಾದೃಶ್ಯವ ತೋರುತ-ಲಿಂಗ-
ಭಂಗವಿಲ್ಲದ ದೇಹ ಹಾರುತ
ಮೂಲಗುರುವು ಕುಂತೀಬಾಲನೆನ್ನದೆ ವೃಥಾ
ಶೀಲಗೆಟ್ಟಂಥ ಖಳರಿಗಲ್ಲದೆ ಮತ್ತೆ II೨II

ವ್ಯಾಸರ ಮಾತುಗಳಾಡುತ-ವಿ-
ಶ್ವಾಸಘಾತಕತನ ಮಾಡುತ
ದೋಷವೆಂದರೆ ನುಡಿ ಕೇಳದೆ-ಸಂ-
ತೋಷವೆಂದರೆ ನೋಡಿ ಬಾಳದೆ
ಶೇಷಶಯನ ಆದಿಕೇಶವರಾಯನ
ದಾಸರೊಡೆಯ ಮಧ್ವ ದ್ವೇಷಿಗಳಿಗಲ್ಲದೆ II೩II

Hariya neneyada

ಹರಿಯ ನೆನೆಯದ ನರಜನ್ಮವೇಕೆ ನರ
ಹರಿಯ ಕೊಂಡಾಡದ ನಾಲಿಗೆಯೇಕೆ ಪ

ವೇದವನೋದದ ವಿಪ್ರ ತಾನೇಕೆ
ಕಾದಲರಿಯದ ಕ್ಷತ್ರಿಯನೇಕೆ
ಕ್ರೋಧವ ಬಿಡದ ಸಂನ್ಯಾಸಿ ತಾನೇಕೆ
ಆದರವಿಲ್ಲದ ಅಮೃತಾನ್ನವೇಕೆ ೧

ಸತ್ಯಶೌಚವಿಲ್ಲದಾಚಾರವೇಕೆ
ನಿತ್ಯ ನೇಮವಿಲ್ಲದ ಜಪತಪವೇಕೆ
ಭಕ್ತಿಲಿ ಮಾಡದ ಹರಿಪೂಜೆಯೇಕೆ
ಉತ್ತಮರಿಲ್ಲದ ಸಭೆಯು ತಾನೇಕೆ ೨


ಮಾತಪಿತರ ಪೊರೆಯದ ಮಕ್ಕಳೇಕೆ
ಮಾತುಕೇಳದ ಸೊಸೆಗೊಡವೆ ತಾನೇಕೆ
ನೀತಿ ನೇರಿಲ್ಲದ ಕೂಟ ತಾನೇಕೆ ಅ
ನಾಥನಾದ ಮೇಲೆ ಕೋಪವದೇಕೆ ೩

ಅಳಿದು ಅಳಿದು ಹೋಗುವ ಮಕ್ಕಳೇಕೆ
ತಿಳಿದು ಬುದ್ಧಿಯ ಹೇಳದ ಗುರುವೇಕೆ
ನಳಿನನಾಭ ಶ್ರೀ ಪುರಂದರವಿಠಲನ
ಚೆಲುವ ಮೂರುತಿಯ ನೋಡದ ಕಂಗಳೇಕೆ ೪

Raama mantrava japiso

ರಾಮ ಮಂತ್ರವ ಜಪಿಸೊ ಹೇ ಮನುಜ IIಪII
ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ ( ಜಪಿಸಿ ಕೆಡಲು ಬೇಡ)
ಸೋಮಶೇಖರ ತನ್ನ ಭಾಮಿನಿಗೊರೆದಿಹ (ಭಾಮೆಗೆ ಪೇಳಿದ)ಮಂತ್ರಅ ಪII


ಕುಲಹೀನನಾದರು ಕೂಗಿಜಪಿಸುವ ಮಂತ್ರ
ಜಲಜ ಪ್ರಾಣಿ ನಿತ್ಯ ಜಪಿಪ ಮಂತ್ರ
ಹಲವು ಪಾಪಂಗಳ ಹದೆಗೆಡಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ (ಮೋಕ್ಷ) ಸೂರೆಗೊಂಬುವ ಮಂತ್ರ II೧II

ಮರುತಾತ್ಮಜ ನಿತ್ಯ ಸ್ಮರಣೆ ಮಾಡುವ ಮಂತ್ರ
ಸರ್ವ ಋಷಿಗಳಲ್ಲಿ ಸೇರಿದ ಮಂತ್ರ
ದುರಿತಕಾನನಕಿದು ದಾವನಲ ಮಂತ್ರ
ಪೊರೆದು ವಿಭೀಷಣಗೆ ಪಟ್ಟಗಟ್ಟಿದ ಮಂತ್ರ II೨II


ಜ್ಞಾನನಿಧಿ ನಮ್ಮ ಆನಂದತಿರ್ಥರು
ಸಾನುರಾಗದಿ ನಿತ್ಯ ಸೇವಿಪ ಮಂತ್ರ
ಭಾನುಕುಲಾಂಬುಧಿ ಸೋಮನೆನಿಪ ನಮ್ಮ
ದೀನರಕ್ಷಕ ಪುರಂದರ ವಿಠಲನ ಮಂತ್ರ II೩II

Raama naamava nene manave

ರಾಮ ನಾಮವ ನೆನೆ ಮನವೆ ಪ
ರಾಮ ಎಂದವನೆ ಧನ್ಯನೆಂದು ಶೃತಿತತಿಗಳು ಪೊಗಳುತಿರೆ ಅ ಪ

ತರುಣತನದಿ ದಿನದಾಟಿತು ಸುಮ್ಮನೆ
ಶರೀರದೊಳು ಸ್ವರವಾಡುತಲೆ
ತರುಣಿ ಸುತರು ಸಂಸಾರವೆಂಬ
ಶರಧಿಯೊಳಗೆ ಮುಳುಗಿರದೆ ಮನವೆ ೧

ಬಗೆ ಬಗೆ ಜನ್ಮದಿ ಜನಿಸಿದೆ ನಾಳೆಗೆ
ಸಿಗುವುದೆ ನಿಜದಿಂ ಈ ಸಮಯ
ಮುಗುಧನಾಗಿ ಮತ್ತೆ ಜನಿಸಿ ಬರುವುದು
ಸೊಗಸು ಕಾಣುವುದೆ ಛೀ ಮನವೆ ೨


ಚಿಂತೆಯನೆಲ್ಲ ಒತ್ತಟ್ಟಿಗೆ ಇಟ್ಟು
ಅಂತರಂಗದಲಿ ಧ್ಯಾನಿಸುತ
ಕಂತುಪಿತ ಕನಕಾದಿಕೇಶವನ
ಎಂತಾದರೂ ನೀ ಬಿಡಬೇಡ ಮನವೆ ೩

Sri Ashtalakshmi stotram / ಶ್ರೀ ಅಷ್ಟಲಕ್ಷ್ಮಿ ಸ್ತೋತ್ರಂ

Sri Ashtalakshmi Stotram:




ಸುಮನಸವ೦ದಿತ ಸು೦ದರಿ ಮಾಧವಿ
ಚಂದ್ರ ಸಹೋದರಿ ಹೇಮಮಯೇ
ಮುನಿಗಣಮ೦ಡಿತ ಮೋಕ್ಷ ಪ್ರದಾಯಿನಿ
ಮೋಜುಳಭಾಷಿಣಿ ವೇದನುತೇ
ಪ೦ಕಜವಾಸಿನಿ ದೇವಸುಪೂಜಿತ
ಸದ್ಗುಣ ವಷಿ೯ಣಿ ಶಾಂತಿಯುತೇ
ಜಯ ಜಯ ಹೇ ಮಧುಸೂಧನ ಕಾಮಿನಿ
ಆದಿ ಲಕ್ಷ್ಮಿ ಸದಾ ಪಾಲಯಮಾಮ್ ೧

ಅಯಿಕಲಿ ಕಲ್ಮಶನಾಶಿನಿ ಕಾಮಿನಿ
ವೈದಿಕ ರೂಪಿಣಿ ವೇದಮಯೇ
ಕ್ಷೀರ ಸಮುದ್ಭವ ಮ೦ಗಳರೂಪಿಣಿ
ಮಂತ್ರ ನಿವಾಸಿನಿ ಮಂತ್ರನುತೇ
ಮಂಗಳದಾಯಿನಿ ಅ೦ಬುಜವಾಸಿನಿ
ದೇವಗಣಾಶ್ರಿತ ಪಾದನುತೇ
ಜಯ ಜಯ ಹೇ ಮಧುಸೂದನ ಕಾಮಿನಿ
ಧಾನ್ಯ ಲಕ್ಷ್ಮಿ ಸದಾ ಪಾಲಯಮಾಮ್ ೨

ಜಯವರ ವಷಿ೯ಣಿ ವೈಷ್ಣವಿ ಭಾಗ೯ವಿ
ಮಂತ್ರ ಸ್ವರೂಪಿಣಿ ಮಂತ್ರಮಯೇ
ಸುರಗಣಪೂಜಿತ ಶೀಘ್ರ ಫಲಪ್ರದ
ಜ್ಞಾನವಿಕಾಸಿನಿ ಶಾಸ್ತ್ರನುತೇ
ಭವಭಯ ಹಾರಿಣಿ ಪಾಪವಿಮೂಚನಿ
ಸದುಜನಾಶ್ರಿತ ಪಾದಯುತೇ
ಜಯ ಜಯ ಹೇ ಮಧುಸೂಧನ ಕಾಮಿನಿ
ಧೈಯ೯ ಲಕ್ಷ್ಮಿ ಸದಾ ಪಾಲಯಮಾಮ್ ೩


ಜಯಜಯ ದುಗ೯ತಿನಾಶಿನಿ ಕಾಮಿನಿ
ಸವ೯ಫಲಪ್ರದ ಶಾಸ್ತ್ರಮಯೇ
ರಥಗಜ ತುರಗಪದಾತಿ ಸಮಾವೃತ
ಪರಿಜನಮ೦ಡಿತ ಲೋಕನುತೇ
ಹರಿಹರ ಬ್ರಹ್ಮ ಸುಪೂಜಿತ ಸೇವಿತ
ತಾಪನಿವಾರಿಣಿ ಪಾದಯುತೇ
ಜಯ ಜಯ ಹೇ ಮಧುಸೂಧನ ಕಾಮಿನಿ
ಗಜಲಕ್ಷ್ಮಿ ರೂಪೇಣ ಸದಾ ಪಾಲಯಮಾಮ್ ೪


ಅಯಿಖಗ ವಾಹಿನಿ ಮೋಹಿನಿ ಚಕ್ರಿಣಿ
ರಾಗವಿವಧಿ೯ನಿ ಜ್ಞಾನಮಯೇ
ಗುಣಗಣವಾರಿಧಿ ಲೋಕಹಿತೈಶಿಣಿ
ಸ್ವರಸಪ್ತ ಭೂಷಿತ ಗಾನನುತೇ
ಸಕಲ ಸುರಾಸುರ ದೇವಮುನಿಶ್ವರ
ಮಾನವವ೦ದಿತ ಪಾದಯುತೇ
ಜಯ ಜಯ ಹೇ ಮಧುಸೂಧನ ಕಾಮಿನಿ
ಸ೦ತಾನಲಕ್ಶ್ಮಿ ತ್ವ೦ ಪಾಲಯಮಾಮ್ ೫


ಜಯ ಕಮಲಾಸನಿ ಸದ್ಗತಿದಾಯಿನಿ
ಜ್ಞಾನವಿಕಾಸಿನಿ ಗಾನಮಾಯೇ
ಅನುದಿನಮಚಿ೯ತ ಕು೦ಕುಮಧೂಸರ
ಭುಶಿತ ವಾಸಿತ ವದ್ಯಾನುತೇ
ಕನಕಧಾರಾಸ್ತುತಿ ವೈಭವ ವ೦ದಿತ
ಶ೦ಕರ ದೇಶಿಕ ಮನ್ಯಾಪದೇ
ಜಯ ಜಯ ಹೇ ಮಧುಸೂಧನ ಕಾಮಿನಿ
ವಿಜಯಲಕ್ಷ್ಮಿ ಸದಾ ಪಾಲಯಮಾಮ್ ೬

ಪ್ರಣತ ಸುರೆಶ್ವರಿ ಭಾರತಿ ಭಾಗ೯ವಿ
ಶೋಕವಿನಾಶಿನಿ ರತ್ನಮಯೇ
ಮಣಿಮಯ ಭೂಷಿತ ಕಣ೯ ವಿಭೂಷಣ
ಶಾಂತಿ ಸಮಾವೃತ ಹಾಸ್ಯಮುಖೇ
ನವನಿಧಿದಾಯಿನಿ ಕಲಿಮಲಹಾರಿಣಿ
ಕಾಮಿತಫಲಪ್ರದ ಹಸ್ತಯುತೇ
ಜಯ ಜಯ ಹೇ ಮಧುಸೂಧನ ಕಾಮಿನಿ
ವಿದ್ಯಾ ಲಕ್ಷ್ಮಿ ಸದಾ ಪಾಲಯಮಾಮ್ ೭


ಧಿಮಿಧಿಮಿ ಧಿ೦ಧಿಮಿ ಧಿ೦ಧಿಮಿ ಧಿ೦ಧಿಮಿ
ದು೦ದುಭಿ ನಾದ ಸ೦ಪೊಣ೯ಮಯೇ
ಘಮಘಮ ಘು೦ಘುಮ ಘು೦ಘುಮ ಘು೦ಘುಮ
ಶ೦ಖನಿನಾದ ಸುವಾದ್ಯನುತೇ
ವೈದಿಕಮಾಗ೯ ಪ್ರದಶ೯ಯುತೇ
ಜಯ ಜಯ ಹೇ ಮಧುಸೂಧನ ಕಾಮಿನಿ
ಧನ ಲಕ್ಷ್ಮಿ ರೂಪೇಣ ಸದಾ ಪಾಲಯಮಾಮ್ ೮

ಇತಿ ಶ್ರೀ ಅಷ್ಟಲಕ್ಷ್ಮಿ ಸ್ತೋತ್ರಂ ಸ೦ಪೋಣ೯ಮ


Audio Link:http://www.youtube.com/watch?v=WxpHoZA56N8




Thursday, October 15, 2009

Parvathi Paalisenna

ಪಾರ್ವತಿ ಪಾಲಿಸೆನ್ನ ಮಾನಿನಿರನ್ನೇ
ಪಾರ್ವತಿ ಭಕುತರ ಸಾರಥಿ ವ೦ದಿಪೆ
ಸುರಪತಿ ಗಜಮುಖ ಮೂರುತಿ ಮಾತೆ IIಅಪII

ಮನಕಭಿಮಾನಿಯೀ ನೆನೆವೆನು ನಿನ್ನನು
ಅನುಗ್ರಹಿಸೆನ್ನನು ಅ೦ಬುಜಪಾಣೀ II೧II

ಮ೦ಗಳೆ ಮೃಢನ೦ತರ೦ಗಳೆ ಹರಿಪದ
ಬೃ೦ಗಳೆ ತು೦ಗಳೆ ಪನ್ನ೦ಗವೇಣಿ II೨II

ಗುಣಪೂಣ೯ ವೇಣುಗೋಪಾಲ ವಿಠಲನ್ನ
ಕಾಣಿಸಿ ಕೋಡುವ೦ಥ ಶುಲಿಯ ರಾಣಿ II೩II



In English:

Parvathi paalisenna maaniniranne
Parvathi bhakutara saarathi vandipe
Surapati gajamukha muuruti maate

Manakabhimaaniyee nenevenu ninnanu
Anugrahisennanu ambujapaani

Mangale mrudhanatarangale haripada
Brungale tungale panngaveeni

Gunapurna venugopaalavitthalanna
Kaanisi koduvantha shuliya rani

Saari bhajisiroo

ಸಾರಿ ಭಜಿಸಿರೂ ತಿಕಾರಾಯರ೦ಘ್ರಿಯಾ
ಘೊರಪಾತಕಾ೦ಭುದಿಯ ಪಾರು ಮಾಳ್ಪರ

ವೋದತೀರ್ಥರ ಮತವ ಸಾಧಿಸುವರ
ಪಾದ ಸೇವ್ಯರ ದುಭೊ೯ದ ಕಳೆವರ II೧II

ಭಾಷ್ಯ ತತ್ವವ ವಿಸ್ತಾರ ಮಾಳ್ಪರ
ದೋಷ ದೂರರ ಆದಿಶೇಷ ವೇಷರ II2II

ಶ್ಯಾಮ ಸು೦ದರ ಹರಿಗೆ ಪ್ರೆಮಪೊಣ೯ರ
ನೇಮ ನಿತ್ಯರ ನಿಷ್ಕಮನಾಪರ II೩II

ಮೊಕ್ಷದಾತರ ಅ ಕ್ಷೋಭ್ಯತಿಥ೯ರ
ಸಾಕ್ಷಿ ಇಪ್ಪರ ಅಪೇಕ್ಷರಹಿತರ II೪II

ವಿಜಯವಿಠಲನ ಅ೦ಘ್ರಿಭಜನೆ ಮಾಳ್ಪರ
ಕುಜನಭ೦ಜರ ದಿಗ್ವಿಜಯ ಮಾಳ್ಪರ II೫II



In English:

SaaRi BhajisiRoO TIkaaraayaraghriyaa
GHoraPaatAkaambhudhiya PaaRu Maalpara

Moodatirthara matava saaDhisuvavara
Paada sevyara Durboodha KarLEvara

BHsshya tatwava Vistaara Maalpara
Doosha doorara AadisheShaveShara

ShyamaSundara hariya PremaPoRnara
Neema Nityara Nishkarmanaapara

Mokshadaatara akshyobhyatirthara
Saakshieppara apeksharahitara

VIjayaviTThalana AnghribhAjaNe MAlpara
KujanaBhnjara Dgwijaya MalpAra

Vandipe ninage Gananaatha

ವ೦ದಿಪೇ ನಿನಗೆ ಗಣನಾಥ
ಮೊದಲೋ೦ದಿಪೆ ನಿನಗೆ ಗಣನಾಥ
ಬಂದ ವಿಘ್ನ ಕಳೆಯೋ ಗಣನಾಥ

ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೇ
ಸ೦ದ ರಣದಲ್ಲಿ ಗಣನಾಥ

ಮಾಧವ ಆಜ್ಞೆಯಿಂದ ಪೂಜಿಸಿದ ಧರ್ಮರಾಯ
ಸಾಧಿಸಿದ ರಾಜ್ಯ ಗಣನಾಥ

ಮಂಗಳ ಮೂರುತಿ ಗುರು ರಂಗವಿಠಲನ ಪಾದ
ಹಿಂಗದೆ ಪಾಲಿಸೂ ಗಣನಾಥ



In English:

Vandipee ninage gananaatha
Modalondipe ninage gananaatha
Banda vighna kaleyoo gananaatha

Hinde raavananu mamadinda ninna poojisadee
Sanda ranadalli gananaatha

Maadhva aajneyinda poojisida dharmaraya
Saadhisida rajya gananaatha
Mangala muuruti gururangavitthalana paada
Hindage paalisoo gananaatha

Lambodara Lakumikara

ಲ೦ಬೋದರ ಲಕುಮಿ ಕರ ಅ೦ಬಾ ಸುತ ಅಮರ ವಿನುತ

ಶ್ರೀ ಗಣನಾಥ ಸಿ೦ಧುರ ವರ್ಣ ಕರುಣಾ ಸಾಗರ ಕರಿ ವಾದನ II೧II

ಸಿದ್ಧ ಚರಣ ಸೇವಿತ ಸಿದ್ಧಿ ವಿನಾಯಕ ತೇ ನಮೋ II೨II

ಸಕಲ ವಿದ್ಯಾ ಆದಿ ಪೂಜಿತ ಸರ್ವೋತ್ತಮ ತೇ ನಮೋ ನಮೋII
೩II


LamBodara Lakumi kara Amba suta amara vinuta
Sri GaNanaatha sindhura Varna karunaasaagara Vaadana


Siddha charana sevita siddhivinaayaka tee namoo
Sakalavidya aadi poojita sarvottama tee namoo nammo

Yellaru maaduvudu hotte gaagi

ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ ಪ
ಸಿರಿ ವಲ್ಲಭನ ಭಜಿಸುವುದು ಮುಕ್ತಿಗಾಗಿ IIಅಪII

ಪಲ್ಲಕ್ಕಿಯ ಹೋರುವುದು ಹೊಟ್ಟೆಗಾಗಿ ದೊಡ್ಡ
ಮಲ್ಲರೋಡನಾಡುವುದು ಹೊಟ್ಟೆಗಾಗಿ
ಸುಳ್ಳಾಗಿ ಪೂಗಳುವುದು ಹೊಟ್ಟೆಗಾಗಿ
ಸಿರಿ ವಲ್ಲಭನ ಧ್ಯಾನವು ಮುಕ್ತಿಗಾಗಿ II೧ II

ದೊರೆತನ ಮಾಡುವುದು ಹೊಟ್ಟೆಗಾಗಿ
ಕರಿ ತುರಗವೇರುವುದು ಹೊಟ್ಟೆಗಾಗಿ
ದುರಿತವ ಮಾಡುವುದು ಹೊಟ್ಟೆಗಾಗಿ
ಸಿರಿ ಹರಿಯ ಭಜಿಸುವುದು ಮುಕ್ತಿಗಾಗಿ II೨II

ಬೆಟ್ಟವ ಹೋರುವುದು ಹೊಟ್ಟೆಗಾಗಿ
ಗಟ್ಯಾಗಿ ಕೂಗುವುದು ಹೊಟ್ಟೆಗಾಗಿ
ದಿಟ್ಟವಾಗಿ ನಮ್ಮ ಶ್ರೀ ಪುರಂದರ
ವಿಠಲನ ಧ್ಯಾನವು ಮುಕ್ತಿಗಾಗಿ II೩ II

Ellaru maaduvudu Hottegaagi
Genu battegaagi
Sisi vallabhana bhajisuvudu muktigaagi

Pallakkiya hooruvudu hottegaagi dodda
Mallarodanaaduvudu hottegaagi
Sullagi poogaluvudu hottegaagi
Sisi vallabhana dhyanavu muktigaagi

Dooretana maaduvudu hottegaagi
Kari turagaveeruvudu hottegaagi
Duritava maaduvudu hottegaagi
Siri hariya bhajisuvudu muuktigaagi

Bettava hooruvudu hottegaagi
Gattyagi kooguvudu hottegaagi
Dittavaagi namma sri purandara
Vitthalana dhyanavu muktigaagi

Wednesday, October 14, 2009

Hyange irabeku samsaradali

ಹ್ಯಾ ೦ಗೆ ಇರಬೇಕು ಸ೦ಸಾರದಲ್ಲಿ
ಹ್ಯಾ೦ಗೆ ಬರೆದಿತ್ತೋ ಪ್ರಾಚಿನದಲ್ಲಿ

ಪಕ್ಷಿ ಅ೦ಗಳದಲ್ಲಿ ಬ೦ದು ಕೋತ೦ತೆ
ಆ ಕ್ಷಣದಲ್ಲಿ ಹಾರಿ ಹೋದ೦ತೆ II೧II

ನಾನಾ ಪರಿಯಲೇ ಸ೦ತೆ ನೆರೆದ೦ತೆ
ನಾನಾ ಪ೦ಥದ ಹಿಡಿದು ಹೋದ೦ತೆ II೨II

ಮಕ್ಕಲಾಡಿ ಮನೆ ಕಟ್ಟಿದ೦ತೆ
ಆಟ ಸಾಕೆ೦ದು ಅಳಸಿ ಪೋದ೦ತೆ II೩II

ವಸತಿಕಾರನು ವಸತಿ ಕ೦ಡ೦ತೆ
ಹೂತ್ತಾರೆ ಎದ್ದು ಹೊರಟು ಹೋದ೦ತೆ II೪II


ಸ೦ಸಾರ ಪಾಶವ ನೀನೆ ಬಿಡಿಸಯ್ಯ
ಕ೦ಸಾರಿ ಪುರ೦ದರವಿಠಲರಾಯ II೫II



In English:
Hyange iraBeku samsaradalli
Hyange bareditto Prachinadalli

Pakshiangaladalli bandu kootante
Aa kshanadalli haari hadante

Naanaa pariyalle santé neredante
Naanaa pathda Hididu hodante

Makkalaadi mane kattidante
Aaata Saakendu alasi poodante

Vasatikaaranu vasatikandante
Hottare eddu horaTu Hotante

Sansaara Paashava neene Bidisayya
Kamsaari purandaravitthalaraaYa

Kande naa Govindana

ಕಂಡೆ ನಾ ಗೋವಿಂದನ
ಪುಂಡರಿಕಾಕ್ಷ ಪಾ೦ಡವ ಪಕ್ಷ ಕೃಷ್ಣನ

ಕೇಶವ ನಾರಾಯಣ ಶ್ರೀ ಕೃಷ್ಣ ನ
ವಾಸುದೇವ ಅಚ್ಯುತಾನ೦ತನ
ಸಾಸಿಸ ನಾಮದ ಶ್ರೀ ಹೃಶಿಕೇಶನ
ಶೇಷಶಯನ ನಮ್ಮ ವಾಸುದೇವ ಸುತನ II೧II

ಮಾಧವ ಮಧುಸೂಧನ ತ್ರಿವಿಕ್ರಮನ
ಯಾದವಕುಲವ೦ದ್ಯನ
ವೇದಾ೦ತ ವೇದ್ಯನ ಇಂದಿರಾರಮಣನ
ಆದಿ ಮೂರುತಿ ಪ್ರಹ್ಲಾದವರದನ II೨ II

ಪುರುಷೋತ್ತಮ ನರಹರಿ ಶ್ರೀ ಕೃಷ್ಣನ
ಶರಣಾಗತ ರಕ್ಷಕನ
ಕರುಣಾಕರ ನಮ್ಮ ಪುರ೦ದರ ವಿಠಲನ
ನೆರೆ ನ೦ಬಿದೆನು ಬೇಲೂರ ಚೆನ್ನಿಗನ II೩II


In English:
KAnde naa govindana
Pundarikashapaandava paksha KRishnana

Keshava naarayana sri KRishnana
Vaasudeva achyuthaanatana
Saasira naamada srihrushikeshana
Shehsshayana namma vaasudeva sutana

Maadhava madhusudhana trivikramana
Yaadavakulavandyana
Vedaanta vedyana indiraramanana
Aadi muruti prahladana

Purushottma narahari sriKrishnana
sharaNaagata rakshakana
KaruNaakara namma purandaravitthalanaNEre nambidenu beloora chennigana

Navagrahapidahara Stotram

ನವಗ್ರಹಪೀಡಾಹರಸ್ತೋತ್ರಂ :

ಗ್ರಹಾಣಾಮಾದಿರಾದಿತ್ಯೋ ಲೋಕರಕ್ಷಣಕಾರಕ:
ವಿಷಮಸ್ಥಾನಸ೦ಭೋತಾ೦ ಪೀಡಾ೦ ಹರತು ಮೇ ರವಿ: ೧


ರೋಹಿಣಿಶ: ಸುಧಾಮೂರ್ತಿ: ಸುಧಾಗಾತ್ರ: ಸುಧಾಶನ:
ವಿಷಮಸ್ಥಾನಸ೦ಭೋತಾ೦ ಪೀಡಾ೦ ಹರತು ಮೇ ವಿಧು: ೨


ಭೂಮಿಪುತ್ರೋ ಮಹಾತೇಜಾ ಜಗತಾ೦ ಭಯಕೃತ್ಸದಾ
ವೃಷ್ಟಿ ಕೃದ್ವೃಷ್ಟಿ ಹತಾ೯ ಚ ಪಿಡಾ೦ ಹರತು ಮೇ ಕುಜ: ೩


ಉತ್ಪಾತರೋಪೋ ಜಗತಾ೦ ಚಂದ್ರಪುತ್ರೋ ಮಹಾದ್ಯುತಿ:
ಸೂರ್ಯಪ್ರಿಯಕರೋ ವಿದ್ವಾನ್ ಪಿಡಾ೦ ಹರತು ಮೇ ಬುದ: ೪


ದೇವಮಂತ್ರಿ ವಿಶಾಲಾಕ್ಷ : ಸದಾ ಲೋಕಹಿತೇ ರತ:
ಅನೇಕ ಶಿಷ್ಯ ಸ೦ಪೋಣ೯: ಪೀಡಾ೦ ಹರತು ಮೀ ಗುರು: ೫


ದೈತ್ಯಮ೦ತ್ರಿ ಗುರುಸ್ತೆಷಾ೦ ಪ್ರಾಣದಶ್ಚಮಹಾ ಮತಿ :
ಪ್ರಭುಸ್ತಾರಾಗ್ರಹಾಣಾ೦ ಚ ಪೀಡಾ೦ ಹರತು ಮೀ ಬೃಗು: ೬

ಸೂರ್ಯಪುತ್ರೋ ದೀಘ೯ದೇಹೂ ವಿಶಾಲಾಕ್ಷ: ಶಿವಪ್ರಿಯ:
ಮ೦ದಚಾರ: ಪ್ರಸನ್ನಾತ್ಮ ಪೀಡಾ೦ ಹರತು ಮೇ ಶನಿ: ೭

ಮಹಾಶಿರೋ ಮಹಾವಕ್ತ್ರೋ ದೀಘ೯ದ೦ಷ್ಟ್ರೂ ಮಹಾಬಲ :
ಅತನುಶ್ಚೋಧ೯ವಕೇಶಶ್ಚ ಪೀಡಾ೦ ಹರತು ಮೇ ಶಿಖಿ :೮

ಅನೇಕರೂಪವಣೈ೯ಶ್ಚ ಶತಶೋ sಥ ಸಹಸ್ರಶ:
ಉತ್ಪಾತ ರೂಪೋ ಜಗತಾ೦ ಪೀಡಾ೦ ಹರತು ಮೇ ತಮ: ೯


ಇತಿ ಬ್ರಹ್ಮಾ೦ಡಪುರಾಣೋಕ್ತ೦ ನವಗ್ರಹಪಿಡಾಹರಸ್ತೋತ್ರಂ ಸ೦ಪೊಣ೯ಮ

Tuesday, October 13, 2009

Prathama vandanaa gowrinandana

ಪ್ರಥಮ ವ೦ದನಾ ಗೌರಿನ೦ದನ
ಹೇ ಶಿವ ನ೦ದನ ಪಾಹಿ ಗಜಾನನ

ಏಕ ದ೦ತ ಬಹು ವ೦ದ್ಯ ವಿನಾಯಕ
ವಿಘ್ನ ಹರಣ ಶುಭ ಮಂಗಳ ಚರಣ
ಪ್ರಣವ ಸ್ವರೂಪ ಪಾಹಿ ಗಜಾನನ

ಗ೦ಗಾಧರ ಸುತ ಹೇ ಗಣನಾಯಕ
ಪಾರ್ವತಿ ಪ್ರಿಯಕರ ಮೂಷಿಕ ವಾಹನ
ದೇವಾದಿ ದೇವ ಪಾಹಿ ಗಜಾನನ

ಲಂಬ ಉರಗದರ ಮೋದಕ ಹಸ್ತ
ಬುದ್ಧಿ ಪ್ರದಾಯಕ ಭವ ಭಯ ಹರಣ
ಸಿದ್ಧಿ ವಿನಾಯಕ ಪಾಹಿ ಗಜಾನನ



IN English:

PRAthama Vandanaa gowrinandana
Hee shiva nandana paahi Gajaanana

Eekadanta bahu vandya vinaayaka
Vighnaharana shubhamangala charana
Pranava swarupa paahi gajaanana

Gangadhara suta hee Gananaayaka
parvThi PRiyakara muushikavaahana
deevaadi deeva paahi gajaanana

Lamba uragadara moodaka hasta
Buddi pradaayaka bhava bhaya harana
Siddi vinaayaka paahi gajaanana

Paahi paahi Gajaanana

ಪಾಹಿ ಪಾಹಿ ಗಜಾನನ
ಪಾರ್ವತೀ ನ೦ದನ ಗಜಾನನ

ಎಕದ೦ತಾ ಗಜಾನನ
ಅನೇಕ ದ೦ತ ವಿದ್ಯಾನನ
ಪಾಹಿ ಪಾಹಿ

ಲ೦ಬೋದರ ಹೇ ಗಜಾನನ
ಲಂಬ ಉರಗದರ ಹೇ ಗಜಾನನ
ಪಾಹಿ ಪಾಹಿ

ಸೂಕ್ಷ್ಮ ನೇತ್ರ ಗಜಾನನ
ಅನ೦ತ ಕರ್ಣ ವಿಚಾರಣ
ಪಾಹಿ ಪಾಹಿ

ಯೋಗ ಮುದ್ರಾ ಗಜಾನನ
ಸಮಾಧಿ ಪಾಲಾ ಗಜಾನನ
ಪಾಹಿ ಪಾಹಿ

ಗಜಾನನ ಗಜಾನನ
ಗಜಾನನ ಗಜಾನನ
ಪಾಹಿ ಪಾಹಿ


In English:
Paahi Paahi Gajaanana
Parvathi nandana Gajaanana

Ekadanta gajaanana
Aneka danta vidyanana
Pahhi paahi

Lambodara hee Gajanana
Lamba uragadra hee Gajanana
Paahi Paahi

Sukshma netra Gajanana
Anata karma vichaarana
Paahi Paahi

Yoga muudra Gajaanana
Samaadhi paalaa gaJaanana
Paahi Paahi

Gajaanana Gajanana
Gajanana Gajanana
Paahi Paahi

GANESH SHARANAM PARAMA PAAVANAM

ಗಣೇಶ ಶರಣ೦ ಪರಮ ಪಾವನ೦
ಸತ್ಯ ಸಾಇನ೦ ಗಜಾನನ೦

ನಿತ್ಯಮ೦ ಸ್ಮರಣ೦ ಪರಮ ಪಾವನ೦
ಸತ್ಯ ಸಾಇನ೦ ಗಜಾನನ೦

ಸದ್ಗುರು ಶರಣ೦ ಪಾಮ ಪಾವನ೦
ಸತ್ಯ ಸಾಇನ೦ ಗಜಾನನ೦

ಭವ ಭಯ ಹರಣ೦ ಪರಮ ಪಾವನ೦
ಸತ್ಯ ಸಾಇನ೦ ಗಜಾನನ೦



GANESHA SHARANAM PARAMA PAAVANAM
SATYA SAAENAM GAJANANAM

NITYAM SMARANAM PARAMA PAAVANAM
SATYA SAAENAM GAJANANAM

SADGURU SHARANAM PAAMA PAAVANAM
SATYA SAAENAM GAJANANAM

BHAVA BHAYA HARANAM PARAMA PAAVANAM
SATYA SAAENAM GAJANANAM

Monday, October 12, 2009

Bhktala binnaha paraaku

ಭಕ್ತಳ ಬಿನ್ನಹ ಪರಾಕು
ಭಾಗ್ಯದ ನಿಧಿಯೇ ಪರಾಕು

ನಿನ್ನ ನ೦ಬಿದೆ ನಿರಜಾಕ್ಷ ಪರಾಕು
ನಿನ್ನ ರನ್ನೆಯ ಒಲುಮೆ ಬೇಕು ಪಾರಕು
ಅನ್ಯರ ಸ೦ಗವನೊಲ್ಲೆ ಪಾರಕು
ಎನ್ನ ಪೀ ಸಲಿಸೋ ಪರಾಕು

ಶೇಷಶಯನ ಶ್ರೀ ನಿವಾಸ ಪರಾಕು
ಸಾಸಿಸನಾಮದ ಒಡೆಯ ಪರಾಕು
ದೋಷ ದುರಿತಾಹಾರ ಸ್ವಾಮಿ ಪರಾಕು
ಭಾಷೆ ಪಾಲಿಪುದೆನ್ನ ವಾಸುದೇವ ಪಾರಕು

ರತಿಪತಿಪಿತ ಯಾದವನೇ ಪಾರಕು
ಅತಿರೂಪ ಎನ್ನ್ಯ್ಯನೆ ಪಾರಕು
ಹಿತ ವಿರಹಿತರ ಕಾಯೋ ಪರಾಕು
ಕತು೯ ಹೆಳವನ ಕಟ್ಟೇರಂಗ ಪರಾಕು



IN English:
BhaktaLA BINnaha paraaku
Bhgyada nidhiyee paraaku

Ninna nambide nirajksha paraaku
Ninna ranneya vlumee beeku paraalu
Anyara sangavolle Paraaku
Enna pii salisoo paraaku

Shehsshyana SRI nivasa Paraaku
Saasiranaamada vDEya paraaku
Doosha duritaahaara swami paraaku
Bhashe paalipudenna vaasudeva paraaku

Ratipatipita yaadavaNEE paraaku
Atirupa ennyane paraaku
Hita virahita kayoo paraaku
Kartu helavana katteranga paraaku

Sunday, October 11, 2009

Vijayagurugalaghri kamala bhajane maadiro

ವಿಜಯಗುರುಗಳಂಘ್ರಿ ಕಮಲ ಭಜನೆ ಮಾಡಿರೊ
ಸುಜನಕ್ರಿತ ಜ್ಞಾನಾಧ್ವರ ಋತ್ವಿಜನ ಪಾಡಿರೊ

ವಿಜ್ಞಾನಪ್ರದ ಜ್ಞಾತವ್ಯ ಸುಜ್ಞಾನಖಣಿ
ಅಜ್ಞಾನೋಗ್ರತಿಮಿರಾರ್ಕನುದ್ವಿಗ್ನ ಮುನಿಮಣಿ
ಯಜ್ಞಮಗ್ನಾಭಿಜ್ಞ ಶ್ರೀಸರ್ವಜ್ಞ ಪ್ರಿಯವಾಣಿ
ವಿಘ್ನಕಳೆದಲ್ಪಜ್ಞರ ಪಾಲಿಪ ಪ್ರಾಜ್ಞಾವರದಾನಿ

ಅಂಭೋರುಹ ಸಂಭವೊದ್ಭವಂಭೋಜ ಭ್ರಂಗ
ಶಂಭು ಸರ್ವೋತ್ತಮಾ ಶಂಕಾರಂಭ ಮಾತಂಗ
ಕಂಬುಗದಾ ಅಂಬುಜಾರಿ ಬಿಂಬ ಚಿನ್ಹಾಂಗ
ಬಿಂಬಕ್ರಯಾಭಾವಜ್ಞಾತ ಗುಂಭಾಂತರಂಗ

ವಿಪ್ರಜಾತಿ ವಿಪ್ರಳಖ್ಯಾತಿ ಕ್ಷಿಪ್ರಫಲದಾತ
ಸುಪ್ರಾಸಾದವಾಣಿ ಅಮಿತ ಪ್ರಮತಿಯತಿ ಹಿತ
ಅಪ್ರತೀಕಾಲಂಬ ಶ್ರೀಶ ಸ್ವಾಪರೋಕ್ಷಿತ
ಅಪ್ರಬುದ್ಧಪಾಲ ಕಾರುಣ್ಯಾಪ್ರಾಕಾಶಿತ

ಕೀರ್ತಿತವ್ಯ ಕಾವ್ಯಾಚಾರ್ಯ ಸ್ಫೂರ್ತಿದಾಯಕ
ತೀರ್ಥಕ್ಷೇತ್ರಾದ್ಯಟನ ಶೀಲ ಸಾರ್ಥಕಾಯಕ
ಕಾರ್ತಸ್ವರೇತ್ಯಾದಿ ಕಾಷ್ಟ ಕ್ರಷ್ಣವರ್ತ್ಮಕ
ಪಾರ್ಥಮಿತ್ರ ಸ್ತೋತ್ರರತಿ ಪುಷ್ಪಸಾಯಕ

ದ್ವಂದಾತೀತ ಬಂಧುರಾತ್ಮ ನಂದ ತುಂದಿಲ
ಸಂದರ್ಶನಾ ದೇವ ಪುನಂತಿ ವಿಗತವಿಹ್ವಲ
ಮಂದಾತ್ಮನಾಗಿರಲೇನಿವರ ನಂಬಲನುಗಾಲ
ಮುಂದೆ ಕುಣಿವ ತಂದೆವೆಂಕಟೇಶವಿಠಲ

Thursday, October 8, 2009

kaapadu sri satyanarayana

ಸತ್ಯಾತ್ಮ ಸತ್ಯ ಕಾಮ ಸತ್ಯ ರೂಪ ಸತ್ಯ ಸಂಕಲ್ಪ
ಸತ್ಯ ದೇವ ಸತ್ಯ ಪೂರ್ಣ ಸತ್ಯಾನಂದ

ಕಾಪಾಡು ಶ್ರೀ ಸತ್ಯನಾರಾಯಣ
ಪನ್ನಗ ಶಯನ ಪಾವನ ಚರಣ
ನಂಬಿಹೆ ನಿನ್ನ ನಾರಾಯಣ ಲಕ್ಷ್ಮಿನಾರಾಯಣ
ನಾರಾಯಣ ಸತ್ಯನಾರಾಯಣ

ಮನವೆಂಬ ಮಂಟಪ ಬೆಳಕಾಗಿದೆ
ಹರಿನಾಮದಾ ಮಂತ್ರವೇ ತುಂಬಿದೆ
ಎಂದೆಂದು ಸ್ತಿರವಾಗಿ ನೀನಿಲ್ಲಿರು
ನನ್ನಲ್ಲಿ ಒಂದಾಗಿ ಉಸಿರಾಗಿರು

ನನಗಾಗಿ ಏನನ್ನು ನಾ ಬೇಡೆನು
ಧನಕನಕ ಬೇಕೆಂದು ನಾ ಕೇಳೆನು
ಈ ಮನೆಯು ನೀನಿಇರುವ ಗುಡಿಯಾಗಲಿ
ಸುಖ ಶಾಂತಿ ನೆಮ್ಮದಿಯ ನೆಲೆಯಾಗಲಿ

ಕಣ್ಣೀರ ಅಭಿಷೇಕ ನಾ ಮಾಡಿದೆ
ಕರುನಾಳು ನೀ ನನ್ನ ಕಾಪಾಡಿದೆ
ಬರಿದಾದ ಮಡಿಲನ್ನು ನೀ ತುಂಬಿದೆ
ನಾ ಕಾಣದಾನಂದ ನೀ ನೀಡಿದೆ

IN English:
satyaatma satya kaama satya rUpa satya saMkalpa
satya dEva satya pUrNa satyaanaMda

kaapaaDu SrI satyanAraayaNa
pannaga shayana paavana caraNa
naMbihe ninnanaaraayaNa lakShminaaraayaNa
naaraayaNa satyanaaraayaNa

manaveMba maMTapa beLakaagide
harinaamadaa maMtravE tuMbide
eMdeMdu stiravaagi nInilliru
nannalli oMdAgi usiraagiru

nanagaagi Enannu naa bEDenu
dhanakanaka bEkeMdu naa kELenu
I maneyu nIniiruva guDiyaagali
sukha SAMti nemmadiya neleyaagali

kaNNIra abhiShEka naa maaDide
karunALu nI nanna kaapaaDide
baridaada maDilannu nI tuMbide
naa kaaNadaanaMda nI nIDide.

Audio link:http://www.youtube.com/watch?v=C7RXT4VJ_jI


Wednesday, October 7, 2009

Sri Satyanarayana Ashottara shatanamavali

ಓಂ ಸತ್ಯದೇವಾಯ ನಮಃ
ಓಂ ಸತ್ಯಾತ್ಮ ನೇ ನಮಃ
ಓಂ ಸತ್ಯ ಭೂತಾಯ ನಮಃ
ಓಂ ಸತ್ಯಪುರುಷಾಯ ನಮಃ
ಓಂ ಸತ್ಯನಾಥಾಯ ನಮಃ
ಓಂ ಸತ್ಯಸಾಕ್ಷಿಣೆ ನಮಃ
ಓಂ ಸತ್ಯಯೋಗಾಯ ನಮಃ
ಓಂ ಸತ್ಯ ಜ್ಞಾನಾಯ ನಮಃ
ಓಂ ಸತ್ಯನ ಜ್ಞಾನ ಪ್ರಿಯಾಯ ನಮಃ
ಓಂ ಸತ್ಯನಿಧಯೇ ನಮಃ ೧೦

ಓಂ ಸತ್ಯ ಸ೦ಭವಾಯ ನಮಃ
ಓಂ ಸತ್ಯ ಪ್ರಭುವೇ ನಮಃ
ಓಂ ಸತ್ಯೇಶ್ವರಾಯ ನಮಃ
ಓಂ ಸತ್ಯ ಕಾಮ೯ಣೇ ನಮಃ
ಓಂ ಸತ್ಯ ಪವಿತ್ರಾಯ ನಮಃ
ಓಂ ಸತ್ಯ ಮ೦ಗಲಾಯ ನಮಃ
ಓಂ ಸತ್ಯಗಭಾ೯ಯ ನಮಃ
ಓಂ ಸತ್ಯ ಪ್ರಜಾಪತೆಯೇ ನಮಃ
ಓಂ ಸತ್ಯವಿಕ್ರಮಾಯ ನಮಃ
ಓಂ ಸತ್ಯ ಸಿದ್ಧಾಯ ನಮಃ ೨೦

ಓಂ ಸತ್ಯಚ್ಯುತಾಯ ನಮಃ
ಓಂ ಸತ್ಯವೀರಾಯ ನಮಃ
ಓಂ ಸತ್ಯಬೋಧಾಯ ನಮಃ
ಓಂ ಸತ್ಯ ಧಮಾ೯ಯ ನಮಃ
ಓಂ ಸತ್ಯಗ್ರಜಾಯ ನಮಃ
ಓಂ ಸತ್ಯಸ೦ತುಷ್ಟಾಯ ನಮಃ
ಓಂ ಸತ್ಯವರಾಹಾಯ ನಮಃ
ಓಂ ಸತ್ಯಪಾರಣಾಯ ನಮಃ
ಓಂ ಸತ್ಯ ಪೋಣಾ೯ಯ ನಮಃ
ಓಂ ಸತ್ಯೌ ಷಧಾಯ ನಮಃ ೩೦

ಓಂ ಸತ್ಯಶಾಶ್ವತಾಯ ನಮಃ
ಓಂ ಸತ್ಯಪವಧ೯ನಾಯ ನಮಃ
ಓಂ ಸತ್ಯವಿಭವೇ ನಮಃ
ಓಂ ಸತ್ಯಜ್ಯೇಷಾಠ ನಮಃ
ಓಂ ಸತ್ಯ ವಿಕ್ರಮಿಣೇ ನಮಃ
ಓಂ ಸತ್ಯ ಧನ್ವಿನೇ ನಮಃ
ಓಂ ಸತ್ಯ ಮೇಧಾಯ ನಮಃ
ಓಂ ಸತ್ಯಾಧಿಶಾಯನಮಃ
ಓಂ ಸತ್ಯಕ್ರತವೇ ನಮಃ ೪೦

ಓಂ ಸತ್ಯಕಾಲಾಯ ನಮಃ
ಓಂ ಸತ್ಯವತ್ಸಲಾಯ ನಮಃ
ಓಂ ಸತ್ಯವಸನೇ ನಮಃ
ಓಂ ಸತ್ಯಮೆಘಾಯ ನಮಃ
ಓಂ ಸತ್ಯರುದ್ರಯ ನಮಃ
ಓಂ ಸತ್ಯ ಬ್ರಹ್ಮಣೇ ನಮಃ
ಓಂ ಸತ್ಯಾಮೃತಾಯ ನಮಃ
ಓಂ ಸತ್ಯವೇದಾ೦ಗಾಯ ನಮಃ
ಓಂ ಸತ್ಯ ಚತುರಾತ್ಮನೇ ನಮಃ
ಓಂ ಸತ್ಯ ಭೋಕೆತ್ತ್ರ ನಮಃ ೫೦

ಓಂ ಸತ್ಯಶುಚಯೇ ನಮಃ
ಓಂ ಸತ್ಯೇ೦ದ್ರಾಯ ನಮಃ
ಓಂ ಸತ್ಯ ಸ೦ಗಾಯ ನಮಃ
ಓಂ ಸತ್ಯ ಸ್ವರ್ಗಾಯ ನಮಃ
ಓಂ ಸತ್ಯನಿಯಮಾಯ ನಮಃ
ಓಂ ಸತ್ಯಮೆಧಾಯ ನಮಃ
ಓಂ ಸತ್ಯವೇದ್ಯಾಯಾ ನಮಃ
ಓಂ ಸತ್ಯಪಿಯೂಶಾಯ ನಮಃ
ಓಂ ಸತ್ಯಮಾಯಾಯ ನಮಃ ೬೦

ಓಂ ಸತ್ಯಮೋಹಾಯ ನಮಃ
ಓಂ ಸತ್ಯ ಸುರಾನ೦ದಾಯ ನಮಃ
ಓಂ ಸತ್ಯತಪಸೇ ನಮಃ
ಓಂ ಸತ್ಯಸಿ೦ಹಾಯ ನಮಃ
ಓಂ ಸತ್ಯ ಮೃಗಾಯ ನಮಃ
ಓಂ ಸತ್ಯಲೋಕಪಾಲಕಾಯ ನಮಃ
ಓಂ ಸತ್ಯ ಸ್ಥಿತಾಯ ನಮಃ
ಓಂ ಸತ್ಯಾದಿಕ್ಪಾಲಕಾಯ ನಮಃ
ಓಂ ಸತ್ಯಧನುಧ೯ರಾಯ ನಮಃ ೭೦

ಓಂ ಸತ್ಯಾ೦ಬುಜಾಯ ನಮಃ
ಓಂ ಸತ್ಯವಕ್ಯಾಯ ನಮಃ
ಓಂ ಸತ್ಯಗುರವೇ ನಮಃ
ಓಂ ಸತ್ಯನ್ಯಾಯಾಯ ನಮಃ
ಓಂ ಸತ್ಯ ಸಾಕ್ಷಿಣೆ ನಮಃ
ಓಂ ಸತ್ಯಸ೦ವೃತಾಯ ನಮಃ
ಓಂ ಸತ್ಯಸ೦ಪ್ರದಾಯ ನಮಃ
ಓಂ ಸತ್ಯವನ್ಹಯೇ ನಮಃ
ಓಂ ಸತ್ಯವಾಯೂವೇ ನಮಃ
ಓಂ ಸತ್ಯಶಿಖರಾಯ ನಮಃ ೮೦

ಓಂ ಸತ್ಯಾನ೦ದಾಯ ನಮಃ
ಓಂ ಸತ್ಯಾಧಿರಾಜಾಯ ನಮಃ
ಓಂ ಸತ್ಯ ಶ್ರೀ ಪಾದಾಯ ನಮಃ
ಓಂ ಸತ್ಯಗುಹ್ಯಾಯಾ ನಮಃ
ಓಂ ಸತ್ಯ ಹೃದಯಾಯ ನಮಃ
ಓಂ ಸತ್ಯಕಮಲಾಯ ನಮಃ
ಓಂ ಸತ್ಯನಾಲಾಯ ನಮಃ
ಓಂ ಸತ್ಯಹಸ್ತಾಯ ನಮಃ
ಓಂ ಸತ್ಯಬಾಹವೇ ನಮಃ ೯೦
ಓಂ ಸತ್ಯಮುಖಾಯ ನಮಃ
ಓಂ ಸತ್ಯ ಜಿವ್ಹಾಯಾ ನಮಃ
ಓಂ ಸತ್ಯದೌ೦ಷ್ಟ್ರಯಾ ನಮಃ
ಓಂ ಸತ್ಯನಾಶಿಕಾಯ ನಮಃ
ಓಂ ಸತ್ಯಶ್ರೋತ್ರಾಯಾ ನಮಃ
ಓಂ ಸತ್ಯಚಕ್ಷಸೇ ನಮಃ
ಓಂ ಸತ್ಯಶಿರಸೇ ನಮಃ
ಓಂ ಸತ್ಯಮುಕುಟಾಯನಮಃ
ಓಂ ಸತ್ಯಾ೦ಬರಾಯ ನಮಃ ೧೦೦

ಓಂ ಸತ್ಯಾಯುಧಾಯ ನಮಃ
ಓಂ ಸತ್ಯಶ್ರೀವಲ್ಲಭಾಯ ನಮಃ
ಓಂ ಸತ್ಯ ಗುಪ್ತಾಯ ನಮಃ
ಓಂ ಸತ್ಯ ಪುಷ್ಕರಾಯ ನಮಃ
ಓಂ ಸತ್ಯಾಧ್ರಿ ದಾಯ ನಮಃ
ಓಂ ಸತ್ಯಭಾಮಾವತಾರಕಾಯ ನಮಃ
ಓಂ ಸತ್ಯಗೃಹರೂಪಿಣೇ ನಮಃ
ಓಂ ಸತ್ಯ ಪ್ರಹರನಾಯುಧಾಯ ನಮಃ ೧೦೮

Tuesday, October 6, 2009

Guruparampare namana

ಬ್ರಹ್ಮಾಂತಾ ಗುರವಃ ಸಾಕ್ಷಾತ್ ಇಷ್ಟಂ ದೈವಮ್ ಶ್ರಿಯಃ ಪತಿಃ
ಆಚಾರ್ಯಾಃ ಶ್ರೀಮದ್ ಆಚಾರ್ಯಾಃ ಸಂತು ಮೇ ಜನ್ಮ ಜನ್ಮನಿ

ಪೂರ್ಣಪ್ರಜ್ಞಕೃತಂ ಭಾಷ್ಯಮದೌ ತದ್ಭಾವಪೂರ್ವಕಮ್
ಯೋ ವ್ಯಾಕರೋನ್ನಮಸ್ತಸ್ಮೈ ಪದ್ಮನಾಭಾಖ್ಯಯೋಗಿನೇ

ಸಸೀತಾ ಮೂಲರಾಮಾರ್ಚ ಕೋಶೇಗ ಜಪತೇಃ ಸ್ಥಿತಾ
ಯೇನಾನೀತಾ ನಮಸ್ತಸ್ಮೈ ಶ್ರೀಮನೃಹರಿ ಭಿಕ್ಷವೇ

ಸಾಧಿತಾಖಿಲ ಸತ್ತತ್ತ್ವಂ ಬಾಧಿತಾಖಿಲ ದುರ್ಮತಮ್
ಬೋಧಿತಾಖಿಲ ಸನ್ಮಾರ್ಗಂ ಮಾಧವಾಖ್ಯಯತಿಂ ಭಿಕ್ಷವೇ

ಯೋ ವಿದ್ಯಾರಣ್ಯ ವಿಪಿನಂತತ್ತ್ವಮಸ್ಯಸಿನಾಽಚ್ಛಿನತ್
ಶ್ರೀಮದ್ ಅಕ್ಷೋಭ್ಯತೀರ್ಥಾಯ ನಮಸ್ತಸ್ಮೈಮಹಾತ್ಮನೇ

ಮಿಥ್ಯಾಸಿದ್ಧಾಂತ ದುರ್ಧ್ವಾಂತ ವಿಧ್ವಂಸನ ವಿಚಕ್ಷಣಃ
ಜಯತೀರ್ಥಾಖ್ಯ ತರಣಿರ್ಭಾಸತಾಂ ನೋ ಹೃದಂಬರೇ

ಚಿತ್ರೈಃ ಪದೈಶ್ಚ ಗಂಭೀರೈಃ ವಾಕ್ಯೈಃ ಮಾನೈರ್ ಅಖಂದಿತೈಃ
ಗುರುಭಾವಮ್ ವ್ಯಂಜಯನ್ತೀ ಭಾತಿ ಶ್ರೀ ಜಯತೀರ್ಥ ವಾಕ್

ಕಂಸಧ್ವಂಸಿಪಧಾಂಭೋಜ ಸಂಸಕ್ತೋಹಂಸಪುಂಗವಃ
ಬ್ರಹ್ಮಣ್ಯ ಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ

ಜ್ಞಾನಭಕ್ತಿವೈರಾಗ್ಯಭಕ್ತ್ಯಾದಿಕಲ್ಯಾಣಗುಣಾಶಾಲಿನಃ
ಲಕ್ಷ್ಮೀನಾರಾಯಣಮುನೀನ್ ವಂದೇ ವಿದ್ಯಾಗುರೂನ್ಮಮ

ಅರ್ಥಿಕಲ್ಪಿತ ಕಲ್ಪೊಯಮ್ ಪ್ರತ್ಯರ್ಥಿ ಗಜ ಕೆಸರೀ
ವ್ಯಾಸತಿಇರ್ಥ ಗುರುರ್ಭುಉಯಾದ್ ಅಸ್ಮದ್ ಇಷ್ಟಾರ್ಥ ಸಿದ್ಧಯೆ

ಯೇನ ವೇದಾಂತ ಭಾಷ್ಯಾಣಿ ವಿವೃತಾನಿ ಮಹಾತ್ಮನಾ
ತಂ ವಂದೇ ವ್ಯಾಸತೀರ್ಥಾಖ್ಯಂ ವೇದಾಂತಾರ್ಥಪ್ರಸಿದ್ಧಯೇ

ತಪೋವಿದ್ಯಾ ವಿರಕ್ತ್ಯಾದಿ ಸದ್ಗುಣೌ ಘಾಕರಾನಹಮ್
ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯಾನ್

ಭಕ್ತಾನಾಂ ಮಾನಸಾಮ್ ಭೋಜ ಭಾನವೆ ಕಾಮಧೇನವೇ
ನಮತಾಂ ಕಲ್ಪತರವೆ ವಿಜಯೀಂದ್ರ ಗುರವೇ ನಮಃ

ಕಾಲೆ ಫಲತಿ ಸುರುದ್ರುಮಃ ಚಿಂತಾಮಣಿರಪಿ ಯಾಚನೆ ದಾತಾ
ವರಾರ್ಥಿ ಸಕಲಮ್ ಅಭೀಷ್ಟಂ ದರ್ಶನ ಮಾತ್ರಾತ್ ಶ್ರೀಪಾದರಾಜೊ ಮುನಿಃ

ತಮ್ವಂದೆ ನೃಸಿಂಹ ತೀರ್ಥ ನಿಲಯಮ್ ಶ್ರೀ ವ್ಯಾಸರಾತ್ ಪುಜಿತಮ್
ಧ್ಯಾಯಂತಮ್ ಮನಸಾ ನೃಸಿಂಹ ಚರಣಮ್ ಶ್ರೀ ಪಾದರಾಜಮ್ ಗುರುಮ್

ಭಾವಬೋಧ ಕೃತಂ ಸೇವೇ ರಘೂತ್ತಮ ಮಹಾಗುರುಮ್
ಯಚ್ಛಿಷ್ಯ ಶಿಷ್ಯ ಶಿಷ್ಯಾದ್ಯಾಃ ಟಿಪ್ಪಣ್ಯಾಚಾರ್ಯ ಸಂಜಿತಾಃ

ಪುಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ
ಭಜತಾಮ್ ಕಲ್ಪವೃಕ್ಷಾಯ ನಮತಾಮ್ ಕಾಮಧೇನವೇ

ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ
ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ

ಆಪಾದ ಮೌಳಿ ಪರ್ಯಂತಂ ಗುರುಣಾಂ ಆಕೃತಿಂ ಸ್ಮರೇತ್
ತೇನ ವಿಘ್ನಾಃ ಪ್ರಣಶ್ಯಂತಿ ಸಿದ್ಧ್ಯಂತಿ ಚ ಮನೋರಥಾಃ

ಪೃಥ್ವೀ ಮಂಡಲ ಮಧ್ಯಸ್ಥಾಃ ಪೂರ್ಣಬೋಧ ಮತಾನುಗಾಃ
ವೈಷ್ಣವ ವಿಷ್ಣುಹೃದಯಸ್ತಾನ್ನಮಸ್ಯೇ ಗುರೂನ್ಮಮ

Neene ballidanoo Hari

ನೀನೆ ಬಲ್ಲಿದನೋ ಹರಿ ನಿನ್ನ ದಾಸರು ಬಲ್ಲಿದರೋ IIಪII
ನಾನಾ ತೆರದಿ ನಿಧಾನಿಸಿ ನೋಡಲು
ನೀನೆ ಭಕ್ತರಾಧೀನನಾದ ಮೇಲೆ IIಅಪII

ಜಲಜ ಭವಾಂಡಕ್ಕೆ ಒಡೆಯ ನೀನೆಸುವೆ
ಬಲು ದೊಡ್ಡವನು ನೀನಹುದೊ
ಆಲಸದೆ ಹಗಲಿರುಳೆನ್ನದೆ ಅನುದಿನ
ಒಲಿದು ಬಲಿಯ ಮನೆಬಾಗಿಲು ಕಾಯ್ದ ಮೇಲೆ II೧II

ಖ್ಯಾತಿಯಿಂದಲಿ ಪುರುಹೂತಸಹಿತ ಸುರ
ವ್ರಾತವು ನಿನ್ನನ್ನು ಓಲೈಸಲು
ಭೂತಳದೊಳು ಸಂಪ್ರೀತಿಗೆ ಸಲುಕಿ ನೀ
ಪರ್ಥನ ರಥಕೆ ಸೂತನಾದ ಮೇಲೆ II೨II

ಪರಮಪುರುಷ ಪರಬೊಮ್ಮ ನೀನೆನುತಲಿ
ನಿರತ ಶ್ರುತಿಯು ಕೊಂಡಾಡುತಿರೆ

ವರ ಪಂಡವರ ಮನೆಯೊಳಿಗ ಮಾಡ್ವರು
ಕರೆಕರೆದಲ್ಲಿಗೆ ಪೋಗಿ ಕಾಯ್ದ ಮೇಲೆ II೩II

ಧುರದಲ್ಲಿ ಪಣೆಗೆ ಹೊಡೆಯಲು ಭೀಷ್ಮನು ಸಂ
ಹರಿಪೆನೆನುತ ಚ್ಕ್ರ ಝಳಿಸುತ
ಭರದಿಂದ ಬರಲಿಲ್ಲ ಹರಿನಾಮ ಬಲವಿರೆ
ಪರಕಿಸಿ ನೋಡಿ ಸುಮ್ಮನೆ ತಿರುಗಿದ ಮೇಲೆII ೪II

ತರಳ ಕರೆಯಲು ನೀ ತ್ವರಿತದಿ ಕಂಬದಿ ನಂದು
ನರಮೃಗರೂಪದಿಂದವನ ಕಾಯ್ದೆ
ವರಗಳೀವ ಪುರಂದರ ವಿಠಲ ನಿನ್ನ
ಸ್ಮರಿಪರ ಮನದಲ್ಲಿ ಸೆರೆಯ ಸಿಕ್ಕಿದ ಮೇಲೆ II೫II

Narayana ninna namada smarane

ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವೆನ್ನ ಬಾಯಿಗೆ ಬರಲಿ ಬಾ ರಂಗ IIಪII

ಆಡುವಾಗ ನಲಿದಾಡುವಾಗಲಿ ನೋಡುತ ನಿಂದು ಮಾತ್ತಡುವಾಗ
ಕೇಡುತನದಿಂದ ಕೂಡಿ ಭವದೊಳು
ಮಾಡಿದ ಪಾಪವು ಓಡಿ ಹೋಗುವಹಾಗೆ II೧II

ಉರಿ ಬಂದಾಗಲಿ ಛಳಿಬಂದಾಗಲಿ ಗಡಗಡ ನಡಗುತ್ತಿರುವಾಗಲಿ
ಹರಿನಾರಾಯಾಣ ದುರಿತ ನಿವಾರಣ
ಇರುಳು ಹಗಲು ನಿನ್ನ ಸ್ಮರಣೆ ಮಾಡುವಂತೆ II೨ II

ಕಷ್ಟವಾಗಿರಲಿ ಉತ್ಕೃಷ್ಟವಾಗಿರಲಿ ಇಷ್ಟಾರ್ಥಗಳೆಲ್ಲ ಕೂಡಿರಲಿ
ಕೃಷ್ಣ ಕೃಷ್ಣಯೆಂಬಭೀಷ್ಟದ ನಾಮದ
ಅಷ್ಟಾಕ್ಷರಿ ಮಂತ್ರ ಜಪಿಸುವ ಹಾಗೆ II೩ II

ಕನಸಿನೊಳಾಗಲಿ ಮನಸಿನೊಳಾಗಲಿ ಮನಸು ಕೆಟ್ಟಿರಲಿ ಮುನಿದಿರಲಿ
ಜನಕಜಾಪತಿ ನಿನ್ನ ನಾಮದ ಸ್ಮರಣೆಯು
ಮನಸಿನೊಳಗೆ ಒಮ್ಮೆ ನೆನೆಸುವ ಹಾಗೆII ೪II

ಸಂತತ ನಿನ್ನಯ ಸಾಸಿರನಾಮವೆನ್ನ ಅಂತರಂಗದೊಳಿರುತಿರಲಿ
ಸಂತತ ವರದ ಪುರಂದರ ವಿಠಲ ಎ
ನ್ನಂತಕಾಲದೊಳೊಮ್ಮೆ ನೆನೆಸುವಹಾಗೆ II೫ II

In English:
NaraYana NInna Naamada SmaraNEya
saaraMrutavenna Baayigee Barali Baa Ranga

aduVaaga NalidaaDuvaagali nooDuta nindu MaattDuvaaga
Kedutanadinda KOOdi BhavaDoolu
Maadida Paapavu oodi Hooguvahaage

Uri Bandaagali chalibandaagali gadagada naduguttruvaagali
Harinarayana Durita Nivaarana
Eerulu hagalu ninna smarane maaduvante

Kashtavaagirali utkrushtavaagirali ishtarthagalella kooDirali
Krishna Krishnayembabhishtada naamada
Ashtakshari mantra japisuva haage

kaNsinooLAaGaLi ManasiNolagaaGaLI Manasu kettirali muunidirali
JAnakajaapati ninna naamada smaraneyuu
Manasinoolage omme nenesuva haage

Santata NiNnya saaSiRanaamavenna antarangadoolirutirali
sanTaTa varada purnDara viTThala e
nntakaaladooLOOMMee nenesuvahaagee

Naainageenu Beduvudilla

ನಾ ನಿನಗೇನು ಬೇಡುವುದಿಲ್ಲ - ಎನ್ನ
ಹೃದಯಕಮಲದೊಳು ನೆಲೆಸಿರು ಹರಿಯೆ

ಶಿರ ನಿನ್ನ ಚರಣಕ್ಕೆರಗಲಿ ಚಕ್ಷು
ಎರಕದಿಂದಲಿ ನಿನ್ನ ನೋಡಲಿ ಹರಿಯೆ
ಕರಣ ಗೀತಂಗಳ ಕೇಳಲಿ ನಾಸಿಕ
ನಿರ್ಮಾಲ್ಯಾನುದಿನ ಘ್ರಾಣಿಸಲಿ ಹರಿಯೆ

ನಾಲಿಗೆ ನಿನ್ನ ಕೊಂಡಾಡಲಿ ಎನ್ನ
ತೋಳು ಕರಂಗಳ ಮುಗಿಯಲಿ ಹರಿಯೆ
ಕಾಲು ತೀರ್ಥಯಾತ್ರೆಗೆ ಪೋಗಲಿ ಮನ
ಬಲ್ಪಿನಿಂದಲಿ ನಿನ್ನ ಸ್ಮರಿಸಲಿ ಹರಿಯೆ

ಚಿತ್ತ ನಿನ್ನೊಳು ಮುಳುಗಾಡಲಿ ನಿನ್ನ
ಭಕ್ತ ಜನರ ಸಂಗ ದೊರಕಲಿ ಹರಿಯೆ
ವೃತ್ತಿ ತತ್ವಯೋಗಾಭ್ಯಾಸಕ್ಕಾಗಲಿ ರಂಗ-
ವಿಠಲ ನಿನ್ನ ದಯವಾಗಲಿ ಹರಿಯೆ

In English:

NAA Ninagenu Beduvudilla – enna
Hrudayakamaladoolu neLesiru hariyee

Shira Ninna charanakkeragaLi chakshu
Erakadindali ninna Noodali Hariyee
Karana giitangala KeeLali Naasika
Nimarlyanudina Ghanisali hariyee

Naalige Ninna Kondadali Enna
ToolU kArangaLa muugilali Hariyee
KaaLu tirthayatrege Poogali Mana
Valvinindalininna Smarasali hariyee

CHitta NinnoLu MuuLUgaadali NInna
Bhkta janara sangha doorakali hariyee
Vrutti ttwayoogabhyasakkagali Ranga
vitthalA ninna Dayavaagali Hariyee

Madwanthargata vedavyasa

ಮಧ್ವಾಂತರ್ಗತ ವೇದವ್ಯಾಸ ಕಾಯೊ
ಶುದ್ಧ ಮೂರುತಿಯೆ ಸರ್ವೇಶ IIಪII

ಶುದ್ಧಮನದಲಿ ನಿನ್ನ ಭಜಿಸುವ ಭಕ್ತರಿಗೆ
ಬುದ್ಧ್ಯಾದಿಗಳ ಕೊಟ್ಟು ಸಲಹೊ ದೇವರ ದೇವ IIಅಪII

ದ್ವಾಪರದಲಿ ಒಬ್ಬ ಮುನಿಪ ತನ್ನ
ಕೋಪದಿಂದಲಿ ಕೊಡಲು ಶಾಪ
ಸ್ಥಾಪಿಸಲು ಜ್ಞಾನ ಲೋಪ
ಅಪಾರ ತತ್ತ್ವಸ್ವರೂಪ
ಶ್ರೀಪತಿಯೇ ಪೊರೆಯೆಂದು ಮೊರೆಯಿಡೆ
ಪಾಪವಿರಹಿತಳಾದ ಯಮುನೆಯ
ದ್ವೀಪದಲಿ ಅಂಬಿಗರ ಹೆಣ್ಣಿನ
ರೂಪಗೊಲಿದವನಲ್ಲಿ ಜನಿಸಿದಿ II೧ II



ವೇದವಾದಿಗಳೆಲ್ಲ ಕೆಡಲು ತತ್ತ್ವ-
ವಾದಿ ಜನರು ಬಾಯಿ ಬಿಡಲು
ಮೇದಿನಿ ಸುರರು ಕಂಗೆಡಲು ನಾನಾ
ವೇದವಿಭಾಗ ರಚಿಸಲು
ಮೋದದಿಂದ ತದರ್ಥಬೋಧಕ
ವಾದಶಾಸ್ತ್ರ ಪುರಾಣ ರಚಿಸಿ ವಿ-
ವಾದಗಳ ನಿರ್ವಾದ ಮಾಡಿದ
ಸಾಧುವಂದಿತ ಬಾದರಾಯಣ II2 II



ಸುಮತಿಗಳಿಗೆ ಬೋಧಿಸಿದೆ ಮಿಕ್ಕ
ಕುಮತಿಗಳನು ಭೇದಿಸಿದೆ
ಕ್ರಿಮಿಯಿಂದ ರಾಜ್ಯವಾಳಿಸಿದ ಜಗ-
ತ್ಸ್ವಾಮಿ ನೀನೆಂದು ತೋರಿಸಿದೆ
ವಿಮಲರೂಪನೆ ಕಮಲನಾಭನೆ
ರಮೆಯ ಅರಸನೆ ರಮ್ಯಚರಿತನೆ
ಮಮತೆಯಲಿ ಕೊಡು ಕಾಮಿತಾರ್ಥವ
ನಮಿಸುವೆನು ಹಯವದನಮೂರುತಿII ೩II


IN ENGlish:
Mawantargata vedavyasa Kaayo
Shuddha Muruti sarvesha

Shuddhamanadi Ninna Bhajisuva Bhaktarige
Buddyadigala kottu salahoo devara deeva

Dwaparadali obba muuNIpa taNNa
Koopadindali koodalu Shaapa
Sthapisalu Jnana loopa
Apaara ttwaswarupa
Sripatiyee pooreyendu mooreyide
Paapavirahitalaada yamuneya
Dwipadali ambigara hennina rupagolidavanalli janisidi

Veedavaadigalella keedalu tatwa
Vaadi janaru baayi biDalu
Meedini suraru kagedalu naanaa
Vedavibhaaga rachisalu
Moodadinda tadathabhodaka
Vaadashastra purana rachisi vi
Vaadagala nirvaada maadida
Saadhuvandita baadaraayana

Sumatigalige bodhisidee mikka
Kumatigalanu beDhiside
KRimiyinda RajyavaaLisida jaga
Tswami ninendu tooRIsidee
Vimalaroopanee kamalanaabhanee
Rameya arasane ramyacharitanee
Mamateyali koodu kaamitaarthava
naMiSUvenu Hyavadanamuruti

Thursday, October 1, 2009

Bhagyada lakshmi baramma

ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ ಸೌ
ಭಾಗ್ಯದ ಲಕ್ಷ್ಮೀ ಬಾರಮ್ಮII ಪII

ಗೆಜ್ಜೆಕಾಲ್ಗಳ ಧ್ವನಿಯ ಮಾಡುತ ಹೆಜ್ಜೆಯ ಮೆಲೆ ಹೆಜ್ಜೆಯನಿಕ್ಕುತ
ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆII ೧II

ಕನಕವೃಷ್ಟಿಯ ಕರೆಯುತ ಬರೆ ಮನಕೆ ಮಾನವ ಸಿದ್ಧಿಯ ತೋರೆ
ದಿನಕರ ಕೋಟಿ ತೇಜದಿ ಹೋಳೆಯುವ ಜನಕರಾಯನ ಕುಮಾರಿ ಬೇಗII ೨II

ಅತ್ತಿತ್ತಗಲದೆ ಭಕ್ತರ ಮನೆಯಲಿ ನಿತ್ಯ ಮಹೋತ್ಸವ ನಿತ್ಯ ಸುಮಂಗಳ
ಸತ್ಯವ ತೋರುವ ಸಾಧು ಸಜ್ಜನರ ಚಿತ್ತದಿ ಹೊಳೆವ ಪುತ್ತಳಿ ಬೊಂಬೆ II೩ II

ಸಂಖ್ಯೆ ಯಿಲ್ಲದ ಭಾಗ್ಯವ ಕೊಟ್ಟು ಕಂಕಣ ಕೈಯ ತಿರುವುತ ಬರೆ
ಕುಂಕುಮಾಂಕಿತೆ ಪಂಕಜ ಲೋಚನೆ ವೇಂಕಟರಮಣನ ಬಿಂಕದ ರಾಣಿ II೪II

ಸಕ್ಕರೆ ತುಪ್ಪ ಕಾಲಿವೆ ಹರಿಸಿ ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರವುಳ್ಳ ಅಳಗಿರಿ ರಂಗನ ಚೊಕ್ಕ ಪುರಂದರ ವಿಠಲನ ರಾಣಿ II೫II


Audio link:http://www.youtube.com/watch?v=LqypyI0u390

Audio link:http://www.youtube.com/watch?v=yxzAloARwGk&feature=related

Audio link:http://www.kannadaaudio.com/Songs/Devotional/BhagyadaLakshmiBaaramma-SJanaki/Bhagyada.ram











In English:
Bhgyadalakshmi baaramma nammama nii
sowbhgyadalakshmibaaramma

Gejjekalgala dwaniyamaaduta hejeeya meele hejeeyanikkuta
Sajjana saadhu poojeya velege majiigeyolagina benneyante 1

Kanakavrushtiya kariyuta bare manake maanava siddiya tore
Dinakara kooti tejadi hooleyuva janakaraayana kumari beega 2

Atitagalada bhaktara maneyali nitya mahotsava nitya sumangala
Satyava tooruva saadhu sajjanara chittadi holeyuva puttali gombe 3

Sankheyillada bhgyava kottu kankana kaiya tiruvuta bare
Kunkumaankita pankaja lochana venaktakaramanana binkadaraani 4



Sakkare tuppada kaaluve harisi shukravarada poojeya velege
Akkaravulla alagire rangana chokka purandaravitthalana rani

Bannisi harasidalu

ಬಣ್ಣಿಸಿ ಹರಸಿದಳು ಗೊಪಿ ತಾ IIಪII
ಎಣ್ಣೆಯನೊತ್ತುತ ಯದುಕುಲ ತಿಲಕಗೆ IIಅಪII

ಆಯುಷ್ಯವಂತನಾಗು ಅತಿ ಬಲ್ಲಿದನಾಗು
ಮಾಯದ ಖಳರ ಮರ್ದನನಾಗು
ರಾಯರಪಾಲಿಸು ರಕ್ಕಸರ ಸೋಲಿಸು

ವಾಯುಸುತಗೆ ನೀ ನೊಡೆಯನಾಗೆನುತ ೧

ಧೀರನು ನೀನಾಗು ದಯಂಬುಧಿಯಾಗು
ಆ ರುಗ್ಮಿಣಿಗೆ ನೀನರಸನಾಗು
ಮಾರನ ಪಿತನಾಗು ಮಧುಸೂದನನಾಗು
ದ್ವಾರವತಿಗೆ ನೀ ದೊರೆಯಾಗೆನುತ II೨II

ಆನಂದ ನೀನಾಗು ಅಚ್ಯುತ ನೀನಾಗು
ದನವಾಂತಕನಾಗು ದಯವಾಗು
ಶ್ರೀನಿವಾಸನಾಗು ಶ್ರೀನಿಧಿ ನೀನಾಗು
ಜ್ಞಾನಿ ಪುರಂದರವಿಠಲನಾಗೆನುತ II೩II

Bangaravidabaare

ಭಂಗಾರವಿಡಬಾರೆ ನಿನಗೊಪ್ಪುವ ಭಂಗಾರವಿಡಬಾರೆ IIಪII
ರಂಗನಾಥನ ದಿವ್ಯ ಮಂಗಳ ನಾಮವೆಂಬ ಭಂಗಾರವಿಡಬಾರೆ IIಅಪII

ಮುತೈದೆತನವೆಂಬ ಮುಖದಲಿ ಕುಂಕುಮದ ಕಸ್ತುರಿಯ ಬೊಟ್ಟನಿಡೆ
ನಿನ್ನ ಫಣೆಗೆ ಕಸ್ತುರಿಯ ಬೊಟ್ಟನಿಡೆ
ಹೆತ್ತವರ ಕುಲಕೆ ಕಂದು ಬಾರದ ಹಾಗೆ ಮುತ್ತಿನ ಮೂಗುತಿಯನಿಡೆ
ಕರ್ತೃಪತಿಯ ಮಾತು ಮೀರಬಾರದು ಎಂಬ ಮುತ್ತಿನೋಲೆ ಕೊಪ್ಪನಿಡೆ
ನಿನ್ನ ಕಿವಿಗೆ ಮುತ್ತಿನೋಲೆ ಕೊಪ್ಪನಿಡೆ
ಹತು ಮಂದಿಯ ಕೈಲಿ ಹೌದೌದೆನಿಸಿಕೊಂಬ ಮಸ್ತಕಮುಕುಟವಿಡೆ II೧II

ಅರೆಗಳಿಗೆ ಪತಿಯ ಅಗಲಬಾರದು ಎಂಬ ಅಚ್ಚ ಮಂಗಲಸೂತ್ರ ಕಟ್ಟೆ
ನಿನ್ನ ಕೊರಳಿಗೆ ಅಚ್ಚ ಮಂಗಲಸೂತ್ರ ಕಟ್ಟೆ
ಪರಪುರುಷರನು ನಿನ್ನ ಪಡೆದ ತಂದೆಯೆಂಬ ಪದಕಸರವಹಾಕೆ
ಕರದೊಬ್ಬರಿಗೆ ಅನ್ನವಿಕ್ಕುವೆನೆಂತೆಂಬ ಹರಡಿ ಕಂಕಣವನಿಡೆ
ನಿನ್ನ ಕೈಗೆ ಹರಡಿ ಕಂಕಣವನಿಡೆ
ನೆರೆಹೊರೆಯವರೆಲ್ಲ ಸರಿಯೆಂಬಂಥ ಬಿರುದಿನೊಡ್ಯಣವಿಡೆ II೨II

ಮಾನ ಹೊರಗೆ ಬಿಚ್ಚೆನೆಂಬ ಕಂಭಾವತಿಯ ನೇಮದ ಮಡಿಯನುಡೆ
ನಿನ್ನ ಮೈಗೆ ನೇಮದ ಮಡಿಯನುಡೆ
ಹೀನ ಗುಣವ ಬಿಟ್ಟು ಹಿತದಲ್ಲಿದ್ದೇನೆಂಬ ಹೆಚ್ಚಿನ ಕುಪ್ಪಸ ತೊಡೆ
ಜ್ಞಾನನಿಧಿಗಳಾದ ಗುರುಗಳ ಪಾದ ಕ್ಕಾನತಳಾಗಿ ಬಾಳೆ
ಗುರುಗಳ ಪಾದ ಕ್ಕಾನತಳಾಗಿ ಬಾಳೆ
ಮೌನಿಗಳೊಡೆಯ ಶ್ರೀಪುರಂದರವಿಠಲನ ಪ್ರೇಮ ಸೆರಗಿಲಿ ಕಟ್ಟೆ II೩II

Baagi beduve

ಬಾಗಿ ಬೇಡುವೆ ಪಿಡಿಯೊ ಬೇಗ ಕೈಯ್ಯಾ
ಬಾಗವತ ಜನಪ್ರಿಯ ಭಾಗಣ್ಣ ದಾಸಾರ್ಯ

ದ್ವಿಜಕುಲಾಬ್ದಿಗೆ ಪೂರ್ಣದ್ವಿಜರಾಜನೆಂದೆನಿಪ
ವಿಜಯವಿಟ್ಟಲದಾಸರೋಲುಮೆ ಪಾತ್ರ
ನಿಜಮನದಿ ನಿತ್ಯದಲಿ ಭುಜಗಶಯನನ ಪಾದ
ಭಜಿಪಭಾಗ್ಯದಿ ನಲಿವ ಸುಜನರೊಳಿಡು ಎಂದು

ನೀನೆವೆ ಗತಿ ಎಂದ ದೀನರಿಗೆ ನಾನೆಂಬ
ಹೀನಮತಿ ಕಳೆದು ಪವಮಾನಪಿತನ
ದ್ಯಾನಗೈಯ್ಯುವ ದಿವ್ಯಜ್ಣಾನ ಮಾರ್ಗವ ತೋರಿ
ಸಾನುರಾಗದಿ ಪೊರೆವ ದಾನಿ ದಯವಾರಿಧಿಯೋ

ಮಂದಜನಸಂದೊಹ ಮಂದಾರತರು ವಿಜಿತ
ಕಂದರ್ಪ ಕಾರುಣ್ಯಸಿಂದು ಬಂದೋ
ಕಂದನೆಂದರಿದೆನ್ನ ಕುಂದು ಎಣಿಸದೆ ಹ್ರದಯ
ಮಂದಿರದಿ ಶ್ರೀ ಶ್ಯಾಮಸುಂದರನ ತೋರೆಂದು

Ambiga naa ninna nambide

ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬ ರಮಣ ನಿನ್ನ ನಂಬಿದೇ

ತುಂಬಿದ ಹರಿಗೋಲಂಬಿಗ ಅದ ಕೊಂಬತ್ತು ಛಿದ್ರವು ಅಂಬಿಗಾ
ಸಂಭ್ರಮದಿಂ ನೊಡಂಬಿಗ ಅದರಿಂಬು ನೊಡೀ ನಡೆಸಂಬಿಗಾII ೧II

ಹೊಳೆಯ ಭರವ ನೊಡಂಬಿಗಾ ಅದಕೆ ಸೆಳವು ಘನವೈಯ್ಯ ಅಂಬಿಗಾ
ಸುಳಿಯೊಳು ಮುಳುಗಿದೆ ಅಂಬಿಗ ಎನ್ನ ಸೆಳೆದುಕೊಂಡೊಯ್ಯೊ ನೀನಂಬಿಗ II೨II

ಆರು ತೆರೆಯ ನೋಡಂಬಿಗ ಅದು ಮೀರಿ ಬರುತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ ಅದ ನಿವಾರಿಸಿ ದಾಟಿಸೊ ಅಂಬಿಗ II೩II

ಸತ್ಯವೆಂಬುದೆ ಹುಟ್ಟಂಬಿಗ ಸದಾ ಭಕ್ತಿಯೆಂಬುದೆ ಪಥವಂಬಿಗಾ
ನಿತ್ಯ ಮುರುತಿ ಪುರಂದರ ವಿಟ್ಠಲ ನಮ್ಮಾ ಮುಕ್ತಿಮಂಟಪಕೊಯ್ಯೊ ಅಂಬಿಗ II೪II


Audio Link:
http://www.youtube.com/watch?v=dJ5knr0SMxk&feature=PlayList&p=33D6E70E9BC00B2A&playnext=1&playnext_from=PL&index=17

In ENglisH:
Ambiga Naa Ninna Nambide
JaGadamba Ramana Ninna NAMBIDe
Tumbida harigoombiGa adakombattu chidravu ambigaa
Sambramadim Nodambiga adarimbu noodi Nadesambigaa
HoLEya Bharava NooDAmbiga Adkee seleVU Ghanavaiyya ambiga
suLiyoolu muulugidee ambiga enna seledukoDooyyo ni nambiGa
AAru tereya Nodambiga adu Miiri barutalide ambiga
Yaarindalaagadu ambiga ada nivaarisi daatisoo ambiga
SatyavembuDee huttambiga sadaa bhktiyembudee pathavambigaa
Nityamuuruti purandaravitthala namma MUktimantapakooyoo ambiga