ವಿಜಯಗುರುಗಳಂಘ್ರಿ ಕಮಲ ಭಜನೆ ಮಾಡಿರೊ
ಸುಜನಕ್ರಿತ ಜ್ಞಾನಾಧ್ವರ ಋತ್ವಿಜನ ಪಾಡಿರೊ
ವಿಜ್ಞಾನಪ್ರದ ಜ್ಞಾತವ್ಯ ಸುಜ್ಞಾನಖಣಿ
ಅಜ್ಞಾನೋಗ್ರತಿಮಿರಾರ್ಕನುದ್ವಿಗ್ನ ಮುನಿಮಣಿ
ಯಜ್ಞಮಗ್ನಾಭಿಜ್ಞ ಶ್ರೀಸರ್ವಜ್ಞ ಪ್ರಿಯವಾಣಿ
ವಿಘ್ನಕಳೆದಲ್ಪಜ್ಞರ ಪಾಲಿಪ ಪ್ರಾಜ್ಞಾವರದಾನಿ
ಅಂಭೋರುಹ ಸಂಭವೊದ್ಭವಂಭೋಜ ಭ್ರಂಗ
ಶಂಭು ಸರ್ವೋತ್ತಮಾ ಶಂಕಾರಂಭ ಮಾತಂಗ
ಕಂಬುಗದಾ ಅಂಬುಜಾರಿ ಬಿಂಬ ಚಿನ್ಹಾಂಗ
ಬಿಂಬಕ್ರಯಾಭಾವಜ್ಞಾತ ಗುಂಭಾಂತರಂಗ
ವಿಪ್ರಜಾತಿ ವಿಪ್ರಳಖ್ಯಾತಿ ಕ್ಷಿಪ್ರಫಲದಾತ
ಸುಪ್ರಾಸಾದವಾಣಿ ಅಮಿತ ಪ್ರಮತಿಯತಿ ಹಿತ
ಅಪ್ರತೀಕಾಲಂಬ ಶ್ರೀಶ ಸ್ವಾಪರೋಕ್ಷಿತ
ಅಪ್ರಬುದ್ಧಪಾಲ ಕಾರುಣ್ಯಾಪ್ರಾಕಾಶಿತ
ಕೀರ್ತಿತವ್ಯ ಕಾವ್ಯಾಚಾರ್ಯ ಸ್ಫೂರ್ತಿದಾಯಕ
ತೀರ್ಥಕ್ಷೇತ್ರಾದ್ಯಟನ ಶೀಲ ಸಾರ್ಥಕಾಯಕ
ಕಾರ್ತಸ್ವರೇತ್ಯಾದಿ ಕಾಷ್ಟ ಕ್ರಷ್ಣವರ್ತ್ಮಕ
ಪಾರ್ಥಮಿತ್ರ ಸ್ತೋತ್ರರತಿ ಪುಷ್ಪಸಾಯಕ
ದ್ವಂದಾತೀತ ಬಂಧುರಾತ್ಮ ನಂದ ತುಂದಿಲ
ಸಂದರ್ಶನಾ ದೇವ ಪುನಂತಿ ವಿಗತವಿಹ್ವಲ
ಮಂದಾತ್ಮನಾಗಿರಲೇನಿವರ ನಂಬಲನುಗಾಲ
ಮುಂದೆ ಕುಣಿವ ತಂದೆವೆಂಕಟೇಶವಿಠಲ
No comments:
Post a Comment