Thursday, October 1, 2009

Bangaravidabaare

ಭಂಗಾರವಿಡಬಾರೆ ನಿನಗೊಪ್ಪುವ ಭಂಗಾರವಿಡಬಾರೆ IIಪII
ರಂಗನಾಥನ ದಿವ್ಯ ಮಂಗಳ ನಾಮವೆಂಬ ಭಂಗಾರವಿಡಬಾರೆ IIಅಪII

ಮುತೈದೆತನವೆಂಬ ಮುಖದಲಿ ಕುಂಕುಮದ ಕಸ್ತುರಿಯ ಬೊಟ್ಟನಿಡೆ
ನಿನ್ನ ಫಣೆಗೆ ಕಸ್ತುರಿಯ ಬೊಟ್ಟನಿಡೆ
ಹೆತ್ತವರ ಕುಲಕೆ ಕಂದು ಬಾರದ ಹಾಗೆ ಮುತ್ತಿನ ಮೂಗುತಿಯನಿಡೆ
ಕರ್ತೃಪತಿಯ ಮಾತು ಮೀರಬಾರದು ಎಂಬ ಮುತ್ತಿನೋಲೆ ಕೊಪ್ಪನಿಡೆ
ನಿನ್ನ ಕಿವಿಗೆ ಮುತ್ತಿನೋಲೆ ಕೊಪ್ಪನಿಡೆ
ಹತು ಮಂದಿಯ ಕೈಲಿ ಹೌದೌದೆನಿಸಿಕೊಂಬ ಮಸ್ತಕಮುಕುಟವಿಡೆ II೧II

ಅರೆಗಳಿಗೆ ಪತಿಯ ಅಗಲಬಾರದು ಎಂಬ ಅಚ್ಚ ಮಂಗಲಸೂತ್ರ ಕಟ್ಟೆ
ನಿನ್ನ ಕೊರಳಿಗೆ ಅಚ್ಚ ಮಂಗಲಸೂತ್ರ ಕಟ್ಟೆ
ಪರಪುರುಷರನು ನಿನ್ನ ಪಡೆದ ತಂದೆಯೆಂಬ ಪದಕಸರವಹಾಕೆ
ಕರದೊಬ್ಬರಿಗೆ ಅನ್ನವಿಕ್ಕುವೆನೆಂತೆಂಬ ಹರಡಿ ಕಂಕಣವನಿಡೆ
ನಿನ್ನ ಕೈಗೆ ಹರಡಿ ಕಂಕಣವನಿಡೆ
ನೆರೆಹೊರೆಯವರೆಲ್ಲ ಸರಿಯೆಂಬಂಥ ಬಿರುದಿನೊಡ್ಯಣವಿಡೆ II೨II

ಮಾನ ಹೊರಗೆ ಬಿಚ್ಚೆನೆಂಬ ಕಂಭಾವತಿಯ ನೇಮದ ಮಡಿಯನುಡೆ
ನಿನ್ನ ಮೈಗೆ ನೇಮದ ಮಡಿಯನುಡೆ
ಹೀನ ಗುಣವ ಬಿಟ್ಟು ಹಿತದಲ್ಲಿದ್ದೇನೆಂಬ ಹೆಚ್ಚಿನ ಕುಪ್ಪಸ ತೊಡೆ
ಜ್ಞಾನನಿಧಿಗಳಾದ ಗುರುಗಳ ಪಾದ ಕ್ಕಾನತಳಾಗಿ ಬಾಳೆ
ಗುರುಗಳ ಪಾದ ಕ್ಕಾನತಳಾಗಿ ಬಾಳೆ
ಮೌನಿಗಳೊಡೆಯ ಶ್ರೀಪುರಂದರವಿಠಲನ ಪ್ರೇಮ ಸೆರಗಿಲಿ ಕಟ್ಟೆ II೩II

No comments: