Thursday, April 22, 2010

Sakala grahabala neene

ಸಕಲ ಗ್ರಹಬಲ ನೀನೆ ಸರರಿಜಾಕ್ಷ ನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೆ

ರವಿಚಂದ್ರ ಬುಧ ನೀನೆ ರಾಹು ಕೇತುವು ನೀನೆ ಕವಿ ಗುರು ಶನಿಯು ಮಂಗಳನು ನೀನೆ

ದಿವ ರಾತ್ರಿಯಲಿ ನೀನೆ ನವ ವಿಧಾನವು ಭವರೋಗ ಹರ ನೀನೆ ಬೇ ಷಜನು ನೀನೆ

ಪಕ್ಷಮಾಸವು ನೀನೆ ಪರ್ವ ಕಾಲವು ನೀನೆ ನಕ್ಷತ್ರ ಯೋಗ ತಿಥಿ ಕರಣ ನೀನೆ

ಅಕ್ಷಯವಾಗಿ ದ್ರೌಪದಿಯ ಮಾನವಕಾಯ್ದ ಪಕ್ಷಿವಾಹನ ನೀನೆ ರಕ್ಷಕನು ನೀನೆ

ಋತುವತ್ಸರವು ನೀನೆ ಪ್ರತ ಯುಗಾಡಿಯು ನೀನೆ ಕ್ರತು ಹೋಮ ಯಜ್ಞ ಸದ್ಗತಿಯು ನೀನೆ

ಜಿತವಾಗಿ ಎನ್ನೊಡೆಯ ಪುರಂದರವಿಠಲ ಶ್ರುತಿಗೆ ಸಿಲುಕದ ಮಹಾ ಮಹಿಮಾ ನೀನೆ

No comments: