Monday, April 19, 2010

Ni nyakoo Ninna

ನೀ ನ್ಯಾಕೋ ನಿನ್ನ ಹ೦ಗ್ಯಾಕೋ
ನಿನ್ನ ನಾಮದ ಬಲವೂ೦ದಿದ್ದರೆ ಸಾಕೋ IIಪII


ಕರಿ ಮಕರಿಗೆ ಸಿಕ್ಕಿ ಮೋರೆಯಿ ಡುತ್ತಿರುವಾಗ
ಆದಿಮೂಲ ನೆ೦ಬ ನಾಮವೇಕಾಯ್ತೋ II1II


ಪ್ರಹ್ಲಾದನ ಪಿತ ಬಾಧಿಸುತ್ತಿರುವಾಗ
ನರಹರಿಯೆಂಬ ನಾಮವೇ ಕಾಯ್ತೋ II೨II


ಬಾಲೆಯ ಸಭೆಯಲ್ಲಿ ಸೀರೆಯ ಸೆಳೆವಾಗ
ಕೃಷ್ಣ ಕೃಷ್ಣ ಎ೦ಬ ನಾಮವೇ ಕಾಯ್ತೋ II೩II

ಯಮನ ದೂತರುಬಂದು ಅಜಮಿಳನ ನೆ ಳೆವಾಗ
ನಾರಾಯಣನೆ೦ಬ ನಾಮವೇ ಕಾಯ್ತೋ II೪II

ಆ ಮರ ಈ ಮರ ಎ೦ದು ಧ್ಯಾನಿಸುತ್ತಿರುವಾಗ
ರಾಮ ರಾಮವೆಂಬ ನಾಮ ವೆ ಕಾಯ್ತೂ II೫II

ಹಸುಳೆ ಆ ಧ್ರುವರಾಯ ಅಡವಿಗೆ ಪೋಪಾಗ
ವಾಸುದೇವನೆಂಬ ನಾಮವೇ ಕಾಯ್ತೂ II೬ II
shreerayarublogspot

ನಿನ್ನ ನಾಮಕೆ ಸರಿಕಾಣೆನೂ ಜಗದೂಳು
ಘನಮಹಿಮಾ ಸಿರಿಪುರಂದರ ವಿಠಲ II೭ II





No comments: