Thursday, April 15, 2010

Entha balavanthanoo

ಎ೦ಥ ಬಲವ೦ತನೋ ಕು೦ತಿಯ ಸುಜಾತನೂ
ಭಾರತಿಗೆ ಕಾ೦ತನೋ ನಿತ್ಯ ಶ್ರೀ ಮ೦ತನೋ

ರಾಮಚಂದ್ರನ ಪ್ರಾಣನೂ ಅಸುರ ಹೃದಯ ಬಾಣನೂ
ಖಳರ ಗ೦ಟಲ ಗಾಣನೂ ಜಗದೂಳಗೆ ಪ್ರವಿಣನೂ II೧II

ಕು೦ತಿಯ ಕ೦ದನೋ ಸೌ ಗ೦ಧಿಕವ ತ೦ದನೋ
ಕುರುಕ್ಷೇತ್ರ ಕೆ ಬ೦ದನೋ ಕೌರವರ ಕೋ೦ದನೋ II೨II
©shreerayarublogspot©
ಭ೦ಢಿ ಅನ್ನವನು೦ಡನೋ ಬಕನ ಪ್ರಾಣವ ಕೊ೦ದನೋ
ಭೀಮ ಪ್ರಚ೦ಡನೋ ದ್ರೌಪದಿಗೆ ಗ೦ಡನೋ II೩II

ವೈಷ್ಣವಾಗ್ರಗಣ್ಯನೂ ಸ೦ಚಿತಾಗ್ರ ಪುಣ್ಯನೂ
ದೇವವರೆಣ್ಯನೂ ದೇವಷರಣ್ಯನೂ ೪

ಮದ್ವಶಾಸ್ತ್ರವ ರಚಿಸಿದನೂ ಸದ್ವೈಷ್ಣವರ ಸಲಹಿದನೂ
ಉಡುಪಿ ಕೃಷ್ಣನ ನಿಲಿಸಿದನೂ ಪುರಂದರವಿಠಲನ ಒಲಿಸಿದನೆ ೫

No comments: