Thursday, April 15, 2010

Apamrityu parihariso

ಅಪಮೃತ್ಯು ಪರಿಹರಿಸೂ ಅನಿಲದೇವ
ಕೃಪಣವತ್ಸಲನೆ ಕಾವರ ಕಾಣೆ ಜಗದೊಳಗೆ

ನಿನಗಿನ್ನು ಸಮರಾದ ಅನಿಮಿತ್ತ ಬಾ೦ಧವರು
ಎನಗಿಲ್ಲ ಆವಾವ ಜನುಮದಲ್ಲಿ
ಅನುದಿನವು ಎಮ್ಮನು ಉದಾಸಿನ ಮಾಡುವುದು
ಅನುಚಿತವು ಜಗದಿ ಸಜ್ಜನ ಶಿಖಾಮಣಿಯೆ II೧II

ಕರಣಾಭಿಮಾನಿಗಳ ಕಿ೦ಕರರು ಮೂಲೋ೯ಕದರಸು
ಹರಿಯು ನಿನ್ನೋಳಗಿಪ್ಪ ಸರ್ವಕಾಲ
ಪರಿಸರನೆ ಈ ಭಾಗ್ಯ ದೂರೆತನಕೆ ಸರಿಯು೦ತೆ
ಗುರುವಯ೯ ನೀ ದಯಾಕರನೆ೦ದು ಪ್ರಾಥಿ೯ಸುವೆ II೨II

ಭವ ರೋಗ ಮೂಚಕನೆ ಪವಮಾನರಾಯ ನಿ
ನ್ನವರವನು ನಾನು ಮಾಧವಪ್ರಿಯನೆ
ಬಾಧೆಯ ಬಿಡಿಸೂ ಅವನಿಯೂಳು ಸುಜನರಿಗೆ
ದಿವಿಜಗನ ಮಧ್ಯದಲಿ ಪ್ರವರ ನಿನಹುದೂ II3II
®shreerayarublogspot©
ಜ್ಞಾನಾಯುರೂಪಕನು ನಿನಹುದೋ ವಾಣಿ
ಪ೦ಚಾನನಾದ್ಯಮರಿಗೆ ಪ್ರಾಣದೇವ
ದಿನವತ್ಸಲನೆ೦ದು ನಾ ನಿನ್ನ ಮೂರೆಹೊಕ್ಕೆ
ದಾನವಾರಣ್ಯ ಕ್ರುಶಾನು ಸವ೯ದಾ ಎನ್ನ II೪II

ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು
ಸಾಧಾರಣವಲ್ಲ ಸಾಧು ಪ್ರಿಯನೇ
ವೇದವಾದೂದಿತ ಜಗನ್ನಾಥ ವಿಠಲನ
ಪಾದಭಾಜನೆಯಿತ್ತು ಮೂಡ ಕೋಡು ಸತತII ೫II

No comments: