Monday, April 19, 2010

Ni nyakoo Ninna

ನೀ ನ್ಯಾಕೋ ನಿನ್ನ ಹ೦ಗ್ಯಾಕೋ
ನಿನ್ನ ನಾಮದ ಬಲವೂ೦ದಿದ್ದರೆ ಸಾಕೋ IIಪII


ಕರಿ ಮಕರಿಗೆ ಸಿಕ್ಕಿ ಮೋರೆಯಿ ಡುತ್ತಿರುವಾಗ
ಆದಿಮೂಲ ನೆ೦ಬ ನಾಮವೇಕಾಯ್ತೋ II1II


ಪ್ರಹ್ಲಾದನ ಪಿತ ಬಾಧಿಸುತ್ತಿರುವಾಗ
ನರಹರಿಯೆಂಬ ನಾಮವೇ ಕಾಯ್ತೋ II೨II


ಬಾಲೆಯ ಸಭೆಯಲ್ಲಿ ಸೀರೆಯ ಸೆಳೆವಾಗ
ಕೃಷ್ಣ ಕೃಷ್ಣ ಎ೦ಬ ನಾಮವೇ ಕಾಯ್ತೋ II೩II

ಯಮನ ದೂತರುಬಂದು ಅಜಮಿಳನ ನೆ ಳೆವಾಗ
ನಾರಾಯಣನೆ೦ಬ ನಾಮವೇ ಕಾಯ್ತೋ II೪II

ಆ ಮರ ಈ ಮರ ಎ೦ದು ಧ್ಯಾನಿಸುತ್ತಿರುವಾಗ
ರಾಮ ರಾಮವೆಂಬ ನಾಮ ವೆ ಕಾಯ್ತೂ II೫II

ಹಸುಳೆ ಆ ಧ್ರುವರಾಯ ಅಡವಿಗೆ ಪೋಪಾಗ
ವಾಸುದೇವನೆಂಬ ನಾಮವೇ ಕಾಯ್ತೂ II೬ II
shreerayarublogspot

ನಿನ್ನ ನಾಮಕೆ ಸರಿಕಾಣೆನೂ ಜಗದೂಳು
ಘನಮಹಿಮಾ ಸಿರಿಪುರಂದರ ವಿಠಲ II೭ II





Jagajagisuva ee sogasina

ಜಗಜಗಿಸುವ ಈ ಸೊಗಸಿನ ಪೀಠಕೆ
ನಗು ನಗುತ ಬಾರೋ ದೇವ

ಗಗನರಾಯನಿಗೆ ಮಗಳೆ೦ದೆನಿಸಿದ
ಜಗಕೆ ಜನನಿ ಕೈಮುಗಿದು ಪ್ರಾಥಿ೯ಸುವಳು

ಅ೦ಗನೆಯರು ಶ್ರವಣ೦ಗ ಳ ತು೦ಬುವ
ಸ೦ಗೀತದ ಸಾರ೦ಗಳಪಿ೯ಸುವರೋ
ನಾಸಸ್ವಾರದ ಸೋಗಸಾದ ಧ್ವನಿಗಳಲಿ
ನಾದ ಬ್ರಹ್ಮನು ತಾ ಕಾಡು ನೋಡುತಲಿಹ

ಪರಿಮಳ ಪುಷ್ಪದ ಸುರಿಮಳೆ ನೋಟವು
ಸ್ಮರಣೆಗೆ ತರುವುದು ಸಿರಿಯವಿವಾಹವ

ಭೂಸುರರೆಲ್ಲರು ಆಶಿವ೯ಚನವ
ಶ್ರೀಶನಿನ್ನಯ ಸ೦ತೋಷಕೆ ನುಡಿವರು

shreerayarublogspot
ಸುಖ ಸಂತೋಷವು ಮುಖ ಮುಖದಲಿಹುದು
ತವ ಸುಖಾಗಮನದಿ೦ ಲಕುಮೀ ಪ್ರಸನ್ನನೆ

Srimad Raamaaramana GOvinda

ಶ್ರೀಮದ್ ರಮಾರಮಣ ಗೋವಿಂದ
ಗೋವಿಂದ ಗೋವಿಂದ


Srimad raMaaramana Govinda
Govinda Govinda

ಜಾನಕಿ ಜೀವನ ಸ್ಮರಣೆ
ಜಯ ಜಯ ರಾಮ( ರಾ೦)
ಹರೇ ಪು೦ದರೀಕವರದ
ಹರೇ ವಿಠಲ ಹರೇ ವಿಠಲ

Shreerayarublogspot
Jaanaki jivana smarane
jaya jaya raam
Hare Pundarikavarada
Hare Vithala Hare Vithala

ಸರ್ವದಾ ಗೋವಿಂದ ನಾಮ
ಕೀತ೯ನ೦ ಸ೦ಕಿತ೯ನ೦
ಹನುಮ ಭೀಮ ಮದ್ವಾ೦ತಗ೯ತ ಹರೇ
ಪ್ರಸನ್ನ ಭವ ಜಯ ಜಯ


sarvada Govinda naama
kiratanam sankirtanam
hanuma bhima madwantaragata Hare
prasanna bhava Jaya Jaya

Laali hayavadana

ಲಾಲಿ ಹಯವದನ
ಲಾಲಿ ಶ್ರೀಹಯವದನ ಲಾಲಿ ರಂಗವಿಠಲ
ಲಾಲಿ ಗೋಪಿನಾಥ ಲಕ್ಷ್ಮಿಸಮೇತ ........ಲಾಲಿ


ಮುತ್ತು ಮಾಣಿಕ್ಯಬಿಗಿದ ತೊಟ್ಟಿಲೋಳು
ಎತ್ತಿದರು ಎನ್ನಯ್ಯ ಕೈಯೊಳಗೆ ನಿಲ್ಲ
ಭಕ್ತರಿಗೆ ವರಗಳನು ಕೊಡುವ ಹೊತ್ತಿಲ್ಲ
ಪುತ್ರನಾ ಎತ್ತಿಕೋ ನಂದಗೋಪಾಲ ........ಲಾಲಿ


ಮನೆಯೊಳಗೆ ಎವನಿತ ಬಹುರಚ್ಚೆ ವಂತ
ಮನೆವಾರ್ತೆ ಯಾರು ಮಾಡುವರೂ ಶ್ರೀಕಾಂತ
ಗುಣಗುಣಗೊಲಿಪ್ಪ ಬಹು ಗುಣವಂತ
ಗುಣಭದ್ಧನಾಗನಿವ ಶ್ರೀಲಕ್ಷ್ಮಿ ಸಮೇತ .........ಲಾಲಿ

shreerayarublogspot
ಶ್ರೀ ರಾಂಬುನಿಧಿಯೂಳಗೆ ಸಜ್ಜೆಯೋಳಗಿರುವ
ಶ್ರೀ ರಮಣ ಭಕ್ತರ ಇಚ್ಹೆ ನಲಿದು ಬರುವ
ಕಾರುಣ್ಯ ಹಯವದನ ಕಾಯ್ದ ತುರುಕರುವ
ನಾರಿನೀರೆಯರೋಳು ಮೆರವ ಕಡು ಚಲುವ ...........ಲಾಲಿ



Audio link:
http://www.kannadaaudio.com/Songs/Children/JoJoLaali/LaaliHayavadana.ram

Saturday, April 17, 2010

Kula Kula Kulavendu

ಕುಲ ಕುಲ ಕುಲವೆಂದು ಹೊಡೆದಾ ಡದಿರಿ ನಿಮ್ಮ
ಕುಲದ ನೆಲೆಯನೆನಾದರೂ ಬಲ್ಲಿರಾ ಬಲ್ಲಿರ IIಪII


ಹುಟ್ಟದ ಯೋನಿಗಳಿಲ್ಲ ಮೆಟ್ಟಿದ ಭುಮಿಗ ಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಕೂಟಕಾಣಿಸ ಬಂದು ಹಿರಿದೆನು ಕಿರಿದೆನು
ನೆಟ್ಟನೆ ಸರ್ವಜ್ಞನ ನೆನೆಕ೦ಡ್ಯಾ ಮನುಜ II೧II
shreerayarublogspot
ಜಲವೇ ಸಕಲ ಕುಲಕ್ಕೆ ತಾಯಲ್ಲವೆ
ಜಲದ ಕುಲವನೆನಾದರು ಬಲ್ಲಿರಾ
ಜಲದೂ ಕುಳಿಯ೦ತೆ ಸ್ಥಿರವಲ್ಲ ಈ ದೇಹ
ನೆಲೆಯ ಅರಿತು ನೀ ನೆನೆಕ೦ಡ್ಯಾ ಮನುಜ II೨II

ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿಕಾಗಿನೆಲೆಯಾದಿ ಕೇಶವ
ರಾಯನ ಚರಣ ಕಮಲವ ಕೀರ್ತಿಸುವನೆ ಕುಲಜ II೩II




Pankajamukhiyarellaru

ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮಿವೆಂಕಟರಮಣಗಾರತಿ ಎತ್ತಿರೆ IIಪII
shreerayarublogspt
ಮತ್ಸ್ಯಾವತಾರಗೆ ಮ೦ದರೊದ್ಧಾರಗೆ ಅಚ್ಚರಿಯಿಂದ ಭೂಮಿ ತ೦ದವಗೆ
ಹೆಚ್ಚಾದ ಉಕ್ಕಿನ ಕ೦ಭದಿ೦ದಲಿ ಬಂದ ಲಕ್ಷ್ಮಿ ನರಸಿ೦ಹಗಾರತಿ ಎತ್ತಿರೆ II೧II


ವಾಮನ ರೂಪಲಿ ದಾನ ಬೇಡಿದವಗೆ ಪ್ರೇಮದಿ ಕೂಡ್ಲಿಯ ಪಿಡಿದವಗೆ
ರಾಮಚಂದ್ರನಾಗಿ ದಶಶಿರನನು ಕೊ೦ದ ಸ್ವಾಮಿ ಶ್ರೀಕೃಷ್ಣಗಾರತಿ ಎತ್ತಿರೆ II೨II

ಬತ್ತಲೆ ನಿ೦ತಗೆ ಬೌದ್ಧವತಾರಗೆ ಉತ್ತಮ ಅಶ್ವನೆರಿದಗೆ
ಭಕ್ತರ ಸಲಹುವ ಪುರಂದರವಿಠಲಗೆ ಮುತ್ತೈದೆಯರಾರತಿ ಎತ್ತಿರೆ II3II

Gangadi sakala

ಗ೦ಗಾದಿ ಸಕಲ ತಿಥ೯೦ಗಳ ಫಲವಿದು ಹರಿಯನಾಮ
ಹಿಂಗದೆ ಜನರಿಗೆ ಮ೦ಗಳಕರವಿದು ಹರಿಯನಾಮ

ವೇದಶಾಸ್ತ್ರಗಳ ಓದಲರಿಯದವಗೆ ಹರಿಯನಾಮ
ಆದಿಪುರುಷನ ಪೂಜಿಸದವಗೆ ಹರಿಯನಾಮ
ಸಾಧಿಸಬೇಕು ಮೋಕ್ಷವೆ೦ಬುವರಿಗೆ ಹರಿಯನಾಮ
ಶೋಧಿಸಿ ಇಟ್ಟ ಚಿನ್ನದ ಗಟ್ಟಿ ಕಾಣಿರೋ ಹರಿಯನಾಮ II೧II
shreerayarublogspt
ವ್ಯಾಳವ್ಯಾಳಕೆ ಎಚ್ಚರಿಕೆಯ ಕೊ ಡುವುದು ಹರಿಯನಾಮ
ಜಾಡಿಗೆ ಹೊನ್ನು ತು೦ಬಿಟ್ಟ೦ತೆ ಕಾಣಿರೋ ಹರಿಯನಾಮ
ಕಾಲನ ದೂತರ ತರಿದು ಬಿಸಡುವುದು ಹರಿಯನಾಮ
ಲೋಲ ಶ್ರೀ ಪುರಂದರವಿಠಲರಾಯನ ದಿವ್ಯನಾಮ II೨II

Friday, April 16, 2010

Guruvina gulama

ಗುರುವಿನ ಗುಲಾಮನಾಗುವ ತನಕ ದೂರೆಯದಣ್ಣ ಮುಕುತಿ
ಪರಿಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ IIಪII

ಆರು ಶಾಸ್ತ್ರವ ಓದಿದರಿಲ್ಲ ನೂರಾರು ಪುರಾಣವ ಮುಗಿಸಿದರಿಲ್ಲ
ಸಾರಿ ಸಜ್ಜನರ ಸಂಗವ ಮಾಡದೆ ಧೀರ ನೆನುತ ತಿರಿಗಿದರೇನು
(ನ್ಯಾಯ ಕಥೆಗಳ ಕೆಳ್ದರಿಲ್ಲ ಧಿರನಾಗಿ ತಾ ಪೇಳಿದರಿಲ್ಲ) II1II
shreerayarublogspot

ಕೊರಲೋಳು ಮಾಲೆ ಧರಿಸಿದರಿಲ್ಲ ಬೇರೆಳೂಳು ಜಪಮಣಿ ಎಣಿಸದರಿಲ್ಲ
ಮರುಳನಾಗಿ ತಾ ಶರಿರಕೆ ಬೂದಿ ಒರೆಸಿಕೊಂಡು ತಾನು ತಿರುದಿದಲ್ಲಿ II2II

ನಾರಿಯ ಭೂಗ ಅಳಿಸಿದರಿಲ್ಲ ಶರಿರಕೆ ಸುಖ ಬಿಡಿಸಿದರಿಲ್ಲ
ನಾರದ ವರದ ಪುರಂದರವಿಠಲನ ಸೇರಿಕೊಂಡು ತಾ ಪಡೆಯುವ ತನಕ II3II