Thursday, October 1, 2009

Bhagyada lakshmi baramma

ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ ಸೌ
ಭಾಗ್ಯದ ಲಕ್ಷ್ಮೀ ಬಾರಮ್ಮII ಪII

ಗೆಜ್ಜೆಕಾಲ್ಗಳ ಧ್ವನಿಯ ಮಾಡುತ ಹೆಜ್ಜೆಯ ಮೆಲೆ ಹೆಜ್ಜೆಯನಿಕ್ಕುತ
ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆII ೧II

ಕನಕವೃಷ್ಟಿಯ ಕರೆಯುತ ಬರೆ ಮನಕೆ ಮಾನವ ಸಿದ್ಧಿಯ ತೋರೆ
ದಿನಕರ ಕೋಟಿ ತೇಜದಿ ಹೋಳೆಯುವ ಜನಕರಾಯನ ಕುಮಾರಿ ಬೇಗII ೨II

ಅತ್ತಿತ್ತಗಲದೆ ಭಕ್ತರ ಮನೆಯಲಿ ನಿತ್ಯ ಮಹೋತ್ಸವ ನಿತ್ಯ ಸುಮಂಗಳ
ಸತ್ಯವ ತೋರುವ ಸಾಧು ಸಜ್ಜನರ ಚಿತ್ತದಿ ಹೊಳೆವ ಪುತ್ತಳಿ ಬೊಂಬೆ II೩ II

ಸಂಖ್ಯೆ ಯಿಲ್ಲದ ಭಾಗ್ಯವ ಕೊಟ್ಟು ಕಂಕಣ ಕೈಯ ತಿರುವುತ ಬರೆ
ಕುಂಕುಮಾಂಕಿತೆ ಪಂಕಜ ಲೋಚನೆ ವೇಂಕಟರಮಣನ ಬಿಂಕದ ರಾಣಿ II೪II

ಸಕ್ಕರೆ ತುಪ್ಪ ಕಾಲಿವೆ ಹರಿಸಿ ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರವುಳ್ಳ ಅಳಗಿರಿ ರಂಗನ ಚೊಕ್ಕ ಪುರಂದರ ವಿಠಲನ ರಾಣಿ II೫II


Audio link:http://www.youtube.com/watch?v=LqypyI0u390

Audio link:http://www.youtube.com/watch?v=yxzAloARwGk&feature=related

Audio link:http://www.kannadaaudio.com/Songs/Devotional/BhagyadaLakshmiBaaramma-SJanaki/Bhagyada.ram











In English:
Bhgyadalakshmi baaramma nammama nii
sowbhgyadalakshmibaaramma

Gejjekalgala dwaniyamaaduta hejeeya meele hejeeyanikkuta
Sajjana saadhu poojeya velege majiigeyolagina benneyante 1

Kanakavrushtiya kariyuta bare manake maanava siddiya tore
Dinakara kooti tejadi hooleyuva janakaraayana kumari beega 2

Atitagalada bhaktara maneyali nitya mahotsava nitya sumangala
Satyava tooruva saadhu sajjanara chittadi holeyuva puttali gombe 3

Sankheyillada bhgyava kottu kankana kaiya tiruvuta bare
Kunkumaankita pankaja lochana venaktakaramanana binkadaraani 4



Sakkare tuppada kaaluve harisi shukravarada poojeya velege
Akkaravulla alagire rangana chokka purandaravitthalana rani

Bannisi harasidalu

ಬಣ್ಣಿಸಿ ಹರಸಿದಳು ಗೊಪಿ ತಾ IIಪII
ಎಣ್ಣೆಯನೊತ್ತುತ ಯದುಕುಲ ತಿಲಕಗೆ IIಅಪII

ಆಯುಷ್ಯವಂತನಾಗು ಅತಿ ಬಲ್ಲಿದನಾಗು
ಮಾಯದ ಖಳರ ಮರ್ದನನಾಗು
ರಾಯರಪಾಲಿಸು ರಕ್ಕಸರ ಸೋಲಿಸು

ವಾಯುಸುತಗೆ ನೀ ನೊಡೆಯನಾಗೆನುತ ೧

ಧೀರನು ನೀನಾಗು ದಯಂಬುಧಿಯಾಗು
ಆ ರುಗ್ಮಿಣಿಗೆ ನೀನರಸನಾಗು
ಮಾರನ ಪಿತನಾಗು ಮಧುಸೂದನನಾಗು
ದ್ವಾರವತಿಗೆ ನೀ ದೊರೆಯಾಗೆನುತ II೨II

ಆನಂದ ನೀನಾಗು ಅಚ್ಯುತ ನೀನಾಗು
ದನವಾಂತಕನಾಗು ದಯವಾಗು
ಶ್ರೀನಿವಾಸನಾಗು ಶ್ರೀನಿಧಿ ನೀನಾಗು
ಜ್ಞಾನಿ ಪುರಂದರವಿಠಲನಾಗೆನುತ II೩II

Bangaravidabaare

ಭಂಗಾರವಿಡಬಾರೆ ನಿನಗೊಪ್ಪುವ ಭಂಗಾರವಿಡಬಾರೆ IIಪII
ರಂಗನಾಥನ ದಿವ್ಯ ಮಂಗಳ ನಾಮವೆಂಬ ಭಂಗಾರವಿಡಬಾರೆ IIಅಪII

ಮುತೈದೆತನವೆಂಬ ಮುಖದಲಿ ಕುಂಕುಮದ ಕಸ್ತುರಿಯ ಬೊಟ್ಟನಿಡೆ
ನಿನ್ನ ಫಣೆಗೆ ಕಸ್ತುರಿಯ ಬೊಟ್ಟನಿಡೆ
ಹೆತ್ತವರ ಕುಲಕೆ ಕಂದು ಬಾರದ ಹಾಗೆ ಮುತ್ತಿನ ಮೂಗುತಿಯನಿಡೆ
ಕರ್ತೃಪತಿಯ ಮಾತು ಮೀರಬಾರದು ಎಂಬ ಮುತ್ತಿನೋಲೆ ಕೊಪ್ಪನಿಡೆ
ನಿನ್ನ ಕಿವಿಗೆ ಮುತ್ತಿನೋಲೆ ಕೊಪ್ಪನಿಡೆ
ಹತು ಮಂದಿಯ ಕೈಲಿ ಹೌದೌದೆನಿಸಿಕೊಂಬ ಮಸ್ತಕಮುಕುಟವಿಡೆ II೧II

ಅರೆಗಳಿಗೆ ಪತಿಯ ಅಗಲಬಾರದು ಎಂಬ ಅಚ್ಚ ಮಂಗಲಸೂತ್ರ ಕಟ್ಟೆ
ನಿನ್ನ ಕೊರಳಿಗೆ ಅಚ್ಚ ಮಂಗಲಸೂತ್ರ ಕಟ್ಟೆ
ಪರಪುರುಷರನು ನಿನ್ನ ಪಡೆದ ತಂದೆಯೆಂಬ ಪದಕಸರವಹಾಕೆ
ಕರದೊಬ್ಬರಿಗೆ ಅನ್ನವಿಕ್ಕುವೆನೆಂತೆಂಬ ಹರಡಿ ಕಂಕಣವನಿಡೆ
ನಿನ್ನ ಕೈಗೆ ಹರಡಿ ಕಂಕಣವನಿಡೆ
ನೆರೆಹೊರೆಯವರೆಲ್ಲ ಸರಿಯೆಂಬಂಥ ಬಿರುದಿನೊಡ್ಯಣವಿಡೆ II೨II

ಮಾನ ಹೊರಗೆ ಬಿಚ್ಚೆನೆಂಬ ಕಂಭಾವತಿಯ ನೇಮದ ಮಡಿಯನುಡೆ
ನಿನ್ನ ಮೈಗೆ ನೇಮದ ಮಡಿಯನುಡೆ
ಹೀನ ಗುಣವ ಬಿಟ್ಟು ಹಿತದಲ್ಲಿದ್ದೇನೆಂಬ ಹೆಚ್ಚಿನ ಕುಪ್ಪಸ ತೊಡೆ
ಜ್ಞಾನನಿಧಿಗಳಾದ ಗುರುಗಳ ಪಾದ ಕ್ಕಾನತಳಾಗಿ ಬಾಳೆ
ಗುರುಗಳ ಪಾದ ಕ್ಕಾನತಳಾಗಿ ಬಾಳೆ
ಮೌನಿಗಳೊಡೆಯ ಶ್ರೀಪುರಂದರವಿಠಲನ ಪ್ರೇಮ ಸೆರಗಿಲಿ ಕಟ್ಟೆ II೩II

Baagi beduve

ಬಾಗಿ ಬೇಡುವೆ ಪಿಡಿಯೊ ಬೇಗ ಕೈಯ್ಯಾ
ಬಾಗವತ ಜನಪ್ರಿಯ ಭಾಗಣ್ಣ ದಾಸಾರ್ಯ

ದ್ವಿಜಕುಲಾಬ್ದಿಗೆ ಪೂರ್ಣದ್ವಿಜರಾಜನೆಂದೆನಿಪ
ವಿಜಯವಿಟ್ಟಲದಾಸರೋಲುಮೆ ಪಾತ್ರ
ನಿಜಮನದಿ ನಿತ್ಯದಲಿ ಭುಜಗಶಯನನ ಪಾದ
ಭಜಿಪಭಾಗ್ಯದಿ ನಲಿವ ಸುಜನರೊಳಿಡು ಎಂದು

ನೀನೆವೆ ಗತಿ ಎಂದ ದೀನರಿಗೆ ನಾನೆಂಬ
ಹೀನಮತಿ ಕಳೆದು ಪವಮಾನಪಿತನ
ದ್ಯಾನಗೈಯ್ಯುವ ದಿವ್ಯಜ್ಣಾನ ಮಾರ್ಗವ ತೋರಿ
ಸಾನುರಾಗದಿ ಪೊರೆವ ದಾನಿ ದಯವಾರಿಧಿಯೋ

ಮಂದಜನಸಂದೊಹ ಮಂದಾರತರು ವಿಜಿತ
ಕಂದರ್ಪ ಕಾರುಣ್ಯಸಿಂದು ಬಂದೋ
ಕಂದನೆಂದರಿದೆನ್ನ ಕುಂದು ಎಣಿಸದೆ ಹ್ರದಯ
ಮಂದಿರದಿ ಶ್ರೀ ಶ್ಯಾಮಸುಂದರನ ತೋರೆಂದು

Ambiga naa ninna nambide

ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬ ರಮಣ ನಿನ್ನ ನಂಬಿದೇ

ತುಂಬಿದ ಹರಿಗೋಲಂಬಿಗ ಅದ ಕೊಂಬತ್ತು ಛಿದ್ರವು ಅಂಬಿಗಾ
ಸಂಭ್ರಮದಿಂ ನೊಡಂಬಿಗ ಅದರಿಂಬು ನೊಡೀ ನಡೆಸಂಬಿಗಾII ೧II

ಹೊಳೆಯ ಭರವ ನೊಡಂಬಿಗಾ ಅದಕೆ ಸೆಳವು ಘನವೈಯ್ಯ ಅಂಬಿಗಾ
ಸುಳಿಯೊಳು ಮುಳುಗಿದೆ ಅಂಬಿಗ ಎನ್ನ ಸೆಳೆದುಕೊಂಡೊಯ್ಯೊ ನೀನಂಬಿಗ II೨II

ಆರು ತೆರೆಯ ನೋಡಂಬಿಗ ಅದು ಮೀರಿ ಬರುತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ ಅದ ನಿವಾರಿಸಿ ದಾಟಿಸೊ ಅಂಬಿಗ II೩II

ಸತ್ಯವೆಂಬುದೆ ಹುಟ್ಟಂಬಿಗ ಸದಾ ಭಕ್ತಿಯೆಂಬುದೆ ಪಥವಂಬಿಗಾ
ನಿತ್ಯ ಮುರುತಿ ಪುರಂದರ ವಿಟ್ಠಲ ನಮ್ಮಾ ಮುಕ್ತಿಮಂಟಪಕೊಯ್ಯೊ ಅಂಬಿಗ II೪II


Audio Link:
http://www.youtube.com/watch?v=dJ5knr0SMxk&feature=PlayList&p=33D6E70E9BC00B2A&playnext=1&playnext_from=PL&index=17

In ENglisH:
Ambiga Naa Ninna Nambide
JaGadamba Ramana Ninna NAMBIDe
Tumbida harigoombiGa adakombattu chidravu ambigaa
Sambramadim Nodambiga adarimbu noodi Nadesambigaa
HoLEya Bharava NooDAmbiga Adkee seleVU Ghanavaiyya ambiga
suLiyoolu muulugidee ambiga enna seledukoDooyyo ni nambiGa
AAru tereya Nodambiga adu Miiri barutalide ambiga
Yaarindalaagadu ambiga ada nivaarisi daatisoo ambiga
SatyavembuDee huttambiga sadaa bhktiyembudee pathavambigaa
Nityamuuruti purandaravitthala namma MUktimantapakooyoo ambiga

Saturday, September 26, 2009

saraswati stotram

ಸರಸ್ವತಿ ನಮಸ್ಯಾಮಿ ಚೇತನಾ೦ ಹೃದಿ ಸ೦ಸ್ಥಿತಾಮ್
ಕ೦ಠಸ್ಥಾ೦ ಪದ್ಮಯೋನಿ೦ ತ್ವಾ೦ ಹ್ರಿಙಾಕ್ಕುರಾ೦ ಸುಪ್ರಿಯಾ೦ ಸದಾ II೧II

ಮತಿದಾ೦ ವರದಾ೦ ಚೈವ ಸರ್ವಕಾಮಫಲಪ್ರದಾಮ್
ಕೇಶವಸ್ಯ ಪ್ರಿಯಾ೦ ದೇವೀ೦ ವೀಣಾಹತ್ತಾ೦ ವರಪ್ರಸದಾಮ್ II೨ II

ಮಂತ್ರಪ್ರಿಯಾ೦ ಸಾದಾ ಹೃದ್ಯಾ೦ ಕುಮತಿಧ್ವ೦ಸಕಾರಿಣೀಮ್
ಸು ಪ್ರಕಾಶಾ೦ ನಿರಾಲ೦ಬಾಮಜ್ಞಾನತಿಮಿರಾಪಹಾಮ್ II೩ II

ಮೋಕ್ಷಪ್ರಿಯಾ೦ ಶುಭಾ೦ ನಿತ್ಯಾ೦ ಸುಭಗಾ೦ ಶೋಭಾನಪ್ರಿಯಾಮ್
ಪದ್ಮೂಪವಿಷ್ಟಾ೦ ಕು೦ಡಲಿನೀ೦ ಶುಕ್ಲವಸ್ತ್ರಾ೦ ಮನೂಹರಾಮ್ II4II

ಆದಿತ್ಯ ಮ೦ಡಲೆ ಲಿನಾ೦ ಪ್ರಣಮಾಮಿ ಜನ ಪ್ರಿಯಾಮ್
ಜ್ಞಾನಾಕಾರಾ೦ ಜಗದ್ ದ್ವಿಪಾ೦ ಭಕ್ತ ವಿಘ್ನ ವಿನಾಶಿನೀಮ್ II೫ II

ಇತಿ ಸತ್ಯ೦ ಸುತ್ತಾ ದೇವೀ ವಾಗೀಶೇನ ಮಹಾತ್ಮನಾ
ಆತಾತ್ಮನ೦ ದಶ೯ಯಾಮಾಸ ಶರದಿ೦ದುಸಮ ಪ್ರಭಾಮ್II ೬II

ಶ್ರೀ ಸರಸ್ವತ್ಯುವಾಚ

ವರ೦ ವೃಣೀಶ್ವ ಭದ್ರ೦ ತ್ವ೦ ಯಾತ್ತೇ ಮನಸಿ ವತ೯ತೇ

ಬೃಹಸ್ಪತಿರುವಾಚ

ಪ್ರಸನ್ನ ಯದಿ ಮೇ ದೇವೀ ಪರ೦ ಜ್ಞಾನ೦ ಪ್ರಾಯಚ್ಛಮೇ ೭

ಶ್ರೀ ಸರಸ್ವತ್ಯುವಾಚ

ದತ್ತ೦ ತೇ ನಿಮ೯ಲ೦ ಜ್ಞಾನ೦ಕುಮತಿ ಧ್ವ೦ಸಕಾರಕಮ್
ಸ್ತೋತ್ರೆ ಣಾನೇನ ಮಾ೦ ಭಕ್ತ್ಯ ಯೇ ಸ್ತುವ೦ತಿ ಸದಾ ನಾರಾ: II೮II

ಲಭ೦ತೇ ಪರಮ೦ ಜ್ಞಾನ೦ ಮಮ ತುಲ್ಯಪರಾಕ್ರಮಾ:
ಕವಿತ್ವ೦ ಮತ್ಪ್ರಸಾದೇನ ಪ್ರಾಪುಲ್ಲವ೦ತಿ ಮನೋಗತಮ II೯ II

ತ್ರಿಸ೦ಧ್ಯ೦ ಪ್ರಯತೋ ಭೂತ್ವಾ ಯಸ್ತ್ಮಮ೦ ಪಠೆತೇ ನರ:
ತಸ್ಯ ಕ೦ಠೇ ಸದಾ ವಾಸ೦ ಕರಿಶ್ಯಾಮಿನ ಸ೦ಶಯ: II೧೦ II

Friday, September 25, 2009

Sharanembe Vaani

ಶರಣೆ೦ಬೆ ವಾಣಿ ಪೋರೆಯೆ ಕಲ್ಯಾಣಿ
ವಾಗಭಿಮಾನಿ ವರ ಬ್ರಹ್ಮಾಣೀ
ಸು೦ದರವೇಣೀ ಸುಚರಿತ್ರಾಣಿ IIಅಪII

ಜಗದೋಳು ನಿಮ್ಮ ಪೂಗಳುವೇ ನಮ್ಮ
ಹರಿಯ ತೋರಿಸೆ೦ದು ಪ್ರಾಥಿ೯ಪೆನಮ್ಮII ೧II

ಪಾಡುವೆ ಶ್ರುತಿಯ ಬೇಡುವೆ ಮತಿಯ
ಪುರಂದರ ವಿಠಲನ ಸೋದರಸೊಸೆಯ II೨ II

SHARANEMBE VAANI – KALYANI
VAAGABHIMAANI VARA BRAMHAANI
SUNDARAVEENI SUCHARITRAANI

JAGADOOLU NIMMA POOGALUVEE NAMMA
HARIYA TOORISENDU PRATHIPENAMMA

PAADUVEE SHRUTIYA BEEDUVE MATIYA
PURANDARAVITTHALANA SODARASOSEYEE

Thursday, September 24, 2009

Shyamala Dandaka Stotra ( Manikya veena)



ಮಾಣಿಕ್ಯ ವೀಣಾ ಮುಫಲಾಲಯಂತೀಂ
ಮದಾಲಸಾಂ ಮಂಜುಲ ವಾಗ್ವಿಲಾಸಾಂ

ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ
ಮಾತಂಗಕನ್ಯಾಂ ಮನಸಾ ಸ್ಮರಾಮೀ
ಮನಸಾ ಸ್ಮರಾಮಮೀ

ಚತುರ್ಭುಜೇ ಚಂದ್ರಕಳಾವತಂಸೆ
ಕುಚೊನ್ನತೆ ಕುಂಕುಮರಾಗಷೋಣೇ

ಪುಂಡ್ರೆಕ್ಶು ಪಾಶಾಂಕುಶ ಪುಶ್ಪಬಾಣಹಸ್ತೆ
ನಮಸ್ತೆ ಜಗದಕಮಾತಃ

ಮಾತಾ ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
ಕುರ್ಯಾತ್ಕಟಾಕ್ಶಂ ಕಲ್ಯಾಣೀ ಕದಂಬ ವನವಾಸಿನೀ

ಮಾತಾ ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
ಕುರ್ಯಾತ್ಕಟಾಕ್ಶಂ ಕಲ್ಯಾಣೀ ಕದಂಬ ವನವಾಸಿನೀ

ಜಯ ಮಾತಂಗತನಯೆ
ಜಯ ನೀಲೊತ್ಪಲದ್ಯುತೆ
ಜಯ ಸಂಗೀತರಸಿಕೆ
ಜಯ ಲೀಲಾಶುಕಪ್ರಿಯೆ

ಸುಧಾಸಮುದ್ರಾಂತ ಹ್ರುದ್ಯನ್ಮಣೀ ದ್ವೀಪ ಸಂರೂಢ ಬಿಲ್ವಾಟವೀ ಮಧ್ಯ ಕಲ್ಪದ್ರುಮಾಕಲ್ಪ ಕಾದಂಬ
ಕಾಂತಾರವಾಸಪ್ರಿಯೆ ಕ್ರುತಿ ವಾಸಪ್ರಿಯೆ ಸರ್ವ ಲೊಕ ಪ್ರಿಯೆ

ವಲ್ಲಕೀ ವಾದನ ಪ್ರಕ್ರಿಯಾ ಲೊeಲ ತಾಲ ಲಲಲಾ ಬದ್ಧ ತಾಟಂಕ ಭೂಷಾ ವಿಷೇಷನ್ಮಿತೇ ಸಿದ್ಧ ಸಂವಾಣಿತೇ

ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ ವಾಯ್ವಜ್ಞ ಕೊಟೀ ರಮಾಣಿಕ್ಯಸಂಗೃಷ್ಟ

ಬಾಲಾತ ಪೋತ್ಠ ಮಲಾಕ್ಷರ ತಾರುಣ್ಯ ಲಕ್ಷ್ಮೀ ಗೃಹೀಂತಾಗ್ವೀ ಪದ್ಮದ್ವಯೇ ಅದ್ವಯೇ

ರೋಚಿರಃ ವರಹ ರತ್ನ ಪೀಠಸ್ಠಿತೇ ಸುಸ್ಠಿತೇ ಶಂಖ ಪದ್ಮದ್ವಯೋಪಾಶ್ರಿತೇ ಆಶ್ರಿತೇ ದೇವಿ ದುರ್ಗವಟು

ಕ್ಷೇತ್ರಪಾಲೈರ್ಯುತೇ ಮತ್ತ ಮತಾಂಗ ಕನ್ಯಾ ಸಮೂಹಾನ್ಮಿತೇ

ಸರ್ವಯಂತ್ರಾತ್ಮಿಕೆ ಸರ್ವಮಂತ್ರಾತ್ಮಿಕೆ ಸರ್ವತಂತ್ರಾತ್ಮಿಕೆ ಸರ್ವಮುದ್ರಾತ್ಮಿಕೆ

ಸರ್ವಶಕ್ತ್ಯಾತ್ಮಿಕೆ ಸರ್ವವರ್ಣಾತ್ಮಿಕೆ
ಸರ್ವರೂಪೆ ಜಗನ್ಮಾತ್ಕೆ ಹೇ ಜಗನ್ಮಾತ್ಕೆ
ಪಾಹಿ ಮಾಂ ಪಾಹಿ ಮಾಂ ಪಾಹಿ ಮಾಂ ಪಾಹಿ

In English:
Maanikya VeeNaa Muphalaalayamteem
Madaalasaam mamjula vaagvilaasaam
Mahemdra neeladyuti komalaamgeem
Maatamgakanyaam manasaa smaraami

Chaturbhuje camdrakaLaavatamse
kuconnate kumkumaraagasone
Pumdrekshu paasaamkusa pushpabaanahaste
namast jagadekamaatah jagadekamaatah

Maataa... marakatasyaamaa maatamgee madhusaalinee

kuryaatka t aaksham kalyaanee kadamba vanavaasinee

Jaya maatamgatanaye
Jaya neelotpaladyute
Jaya samgeetarasike
Jaya leelaasukapriye



Sudhaasamudraamta rdyanmanidweepa samrudha bilvaatavee madhya
kalpadrumaakalpa kaadamba kaamtaaravaasapriye
krttivaasapriye
saadaraarabdha samgeetasambhaavanaa sambhramaalola neepa sragaabaddha
culee sanaathatrike saanumatputrike
sekhareebhutaseetaamsurekhaa mayukhaavalibaddhasusnigdha neelaalakasreni
srmgaarite lokasambhaavite
kaamaleelaa dhanussannibhabhrulataa pushpa samdeha krccaaru gorocanaa
pamkakeli- lalaamaabhiraame suraame rame

sarvayamtraatmike sarvatamtraatmike
sarvamamtraatmike sarvamudraatmike
sarvasaktyaatmike sarvacakraatmike
sarvavarnaatmike sarvarupe
jaganmaatrke he jaganmaatrke
paahi maam paahi maam, paahi paahi