Thursday, June 11, 2009

Sharanu siddhi Vinayaka /ಶರಣು ಸಿದ್ಧಿ ವಿನಾಯಕ

ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾ ಪ್ರದಾಯಕ
ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಕ ವಾಹನ

ನಿಟಿಲ ನೇತ್ರನ ದೇವಿ ಸುತನೆ ನಾಗಭೂಷಣ ಪ್ರಿಯನೆ
ತಟಿಲತಾಂಕಿತ ಕೋಮಲಾಂಗನೆ ಕರ್ಣಕುಂಡಲ ಧಾರನೆII೧II

ಬಟ್ಟ ಮುತ್ತಿನ ಪದಕ ಹಾರನೆ ಬಾಹುಹಸ್ತ ಚತುಷ್ಟನೆ
ಇಟ್ಟ ತೊಡುಗೆಯ ಹೇಮ ಕಂಕಣ ಪಾಶ ಅಂಕುಶ ಧರನೆII೨ II

ಕುಕ್ಷಿ ಮಹಾ ಲಂಬೋದರನೆ ಇಕ್ಷುಚಾಪನ
ಗೆಲಿದನೆ ಪಕ್ಷಿವಾಹನ ಸಿರಿ ಪುರಂದರ ವಿಠಲನ ನಿಜ ದಾಸನೆII೩II



http://www.kannadaaudio.com/Songs/Devotional/SriGaneshaPushpanjali/SharanuSiddivinayaka.ram
In English:

Sharanu Siddhi Vinayaka Sharanu Vidya Pradayaka
Sharanu Parvati tanaya muruti sharanu musika vahana

Nitila Netrana varada putrane nagabhusasa priyane
Tatilatankita komalangane karna kundala dharane 1

Batta muttina hara padaka bahu hasta chatustane
Itta todugeya hemakankana pasha ankusha dharane 2

Kukshi Maha Lambodarane Ikshu chapana gelidane
pakshi vahana siripurandara vittalana nija dasane 3

Wednesday, June 10, 2009

Namma sharade/ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ IIಪII

ಕಮ್ಮಗೋಲನ ವೈರಿ ಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೇ IIಅಪ II

ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ
ಕೋರೆದಾಡೆಯನಾರಮ್ಮಾ
ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ
ಧೀರ ತಾ ಗಣನಾಥನೇ II೧II

ಉಟ್ಟ ಪಚ್ಚೆಯ ಬಿಗಿದುಟ್ಟ ಚೆಲ್ಲಣದ
ದಿಟ್ಟ ತಾ ನಿವನಾರಮ್ಮ
ಪಟ್ಟದ ರಾಣಿ ಪಾರ್ವತಿಯ ಕುಮಾರನು
ಹೊಟ್ಟೆಯ ಗಣನಾಥನೇ II೨ II

ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ
ಭಾಷಿಗನಿವನಾರಮ್ಮ
ಲೇಸಾಗಿ ಜನರ ಸಲಹುವ
ಕಾಗಿನೆಲೆ ಆದಿಕೇಶವ ದಾಸ ಕಣೇ II೩II
Audio link:
http://www.kannadaaudio.com/Songs/Devotional/SriVidyabhushana/DaasaraKritigalu/NammammaSharade.ram

Friday, June 5, 2009

karedare Barabaarade/ಕರೆದರೆ ಬರಬಾರದೆ

ಕರೆ ದರೆ ಬರ ಬಾರದೆ
ಗುರುರಾಯ ಶ್ರೀ ರಾಘವೇಂದ್ರ IIಪII
karedare Bara Baarade

Gururaayaa(guruvara) sriRaghavendra

ವರ ಮಂತ್ರಾಲಯ ಪುರ ಮಂದಿರ ತವ
ಚರಣ ಸೇವಕರು ಕರವ ಮುಗಿದು II1 II

Varamantralaya puramandira tava
charana sevakaru karava mugidu

ಹರಿದಾಸ ರ ಸುಸ್ವರ ಸಂಮ್ಮೇಳದಿ
ಪರವಶದಲಿ ಬಾಯಿ ತೆಗೆದು ಕೂಗಿ II2II
haridaasa suswara sammelanadi

paravashadali baayi tegedu koogi

ಪೂಶರ ಪಿತ ಕಮಲೇಶ ವಿಠಲನ
ದಾಸ ಗ್ರೇಸರ ಈ ಸಮಯದಿ II3II

pooshara pita kamalesha vithalana
daasa gresara ee samayadali

Thursday, June 4, 2009

Piiangoviya cheluva krishna/ಪಿಳ್ಳಂಗೋವಿಯ ಚೆಲುವ ಕೃಷ್ಣನ

ಪಿಳ್ಳಂಗೋವಿಯ ಚೆಲುವ ಕೃಷ್ಣನ
ಎಲ್ಲಿ ನೋಡಿದಿರಿ ರಂಗನ ಎಲ್ಲಿ ನೋಡಿದಿರಿII ಪII
ಎಲ್ಲಿ ನೋಡಿದರಲ್ಲಿ ತನಿಲ್ಲ ದಿಲ್ಲವೆಂದು ಬಲ್ಲ ಜಾಣರು IIಅ.ಪII

ನಂದಗೋಪನ ಮಂದಿರಗಳ ಸಂದುಗೊಂದಿನಲಿ
ಚಂದ ಚಂದದ ಗೋಪ ಬಾಲರ ವೃಂದ ವೃಂದದಲಿ
ಸುಂದರಾಂಗದ ಸುಂದರೀಯರ ಹಿಂದು ಮುಂದಿನಲಿ
ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿII೧ II

ಶ್ರೀ ಗುರುಕ್ತ ಸದಾ ಸುಮಂಗಳ ಯೋಗ ಯೋಗದಲಿ
ಅಗಮಾರ್ಥದೊಳಗೆ ಮಾಡುವ ಯಾಗ ಯಾಗದಲಿ
ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ
ಭಾಗವತರು ಸದಾ ಬಾಗಿ ಪಡುವ ರಾಗ ರಾಗದಲಿII೨II

ಈ ಚರಾಚರದೊಳಗೆ ಜನಂಗಳ ಆಚೆ ಈಚೆಯಲಿ
ಕೆಚರೇಂದ್ರನ ಸುತನ ರಥದ ಚೌಕ ಪೀಠದಲಿ
ನಾಚದೆ ಮಾಧವ ಎಂಬ ಭಕ್ತರ ವಾಚಕಂಗಳಲಿ
ವೀಚುಕೊಂಡದ ಪುರಂದರ ವಿಠಲನ ಲೋಚನಾಗ್ರದಲಿII೩II




Audio link:http://www.kannadaaudio.com/Songs/Devotional/SriVidyabhushana/DaasaraKritigalu/Pillangovia.ram

Anjikinyatakayya /ಅಂಜಿಕಿನ್ಯಾತಕಯ್ಯಾ

ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ
ಭಯವೂ ಇನ್ಯಾತಕಯ್ಯಾ IIಪII


ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ IIಅಪII

ಕನಸಿನ ಮನಸಿನಲಿ ಕಳವಳವಾದರೆ
ಹನುಮನ ನೆನೆದರೆ ಹಾರಿಹೋಗದೇ ಭೀತಿ II೧II

ರೋಮ ರೋಮಕೆ ಕೋಟಿ ಲಿಂಗವುದುರಿಸಿದ
ಭೀಮನ ನೆನೆದರೆ ಬಿಟ್ಟು ಹೋಗದೆ ಪಾಪ II೨ II

ಪುರಂದರ ವಿಠಲನ ಪಾದ ಪೂಜೆಯ ಮಾಳ್ಪ
ಗುರು ಮಧ್ವರಾಯರ ಸ್ಮರಣೆಮಾಡಿದ ಮೇಲೆ II೩II


Audio link:
http://www.kannadaaudio.com/Songs/Devotional/home/Anjikinyathakayya-Dr-M-Balamuralikrishna.php


In English:

Anjikinyatakayya sajjanarige
Bhayavu enyaatakayya
Sanjivarayara Smarane Madida mele

Kanasinali manasinali kalavalavaadare
Hanumana nenedare haarihoogade bhiti

Rooma Rooma Kooti Lingavudurisida
BHimana NEnedare bittu Hogade Paapa

Purandarevitthalana Paada poojeya Malpa
guruMadwarayara smaranemaadidameele

Wednesday, June 3, 2009

ಕೈಲಾಸ ವಾಸ ಗೌರೀಶ ಈಶ

ಕೈಲಾಸ ವಾಸ ಗೌರೀಶ ಈಶ
ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ

ಅಹೋರಾತ್ರಿಯಲ್ಲಿ ನಾನು ಅನುಜರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೋ ಮಹದೇವನೇ
ಅಹಿಭೂಶಣನೆ ಎನ್ನ ಅವಗುಣಗಳೆಣಿಸದಲೇ
ವಿಹಿತಧರ್ಮದಲಿಡು ವಿಷ್ಣು ಭಕುತಿಯನು ಕೊಡು ಶಂಭೋ II1II

ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ
ಧನುಜಗತ ಮದಹಾರಿ ದಂಡ ಪ್ರಣಾಮವ ಮಾಡ್ಪೆ
ಮಣಿಸು ಈ ಶಿರವ ಸಜ್ಜನ ಚರಣ ಕಮಲದಲ್ಲಿ ಶಂಭೋ II2 II

ಭಾಗೀರಥಿಧರನೆ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೊ ಸಂತತ ಸರ್ವದೇವ
ಭಾಗವತಗಳ ಪ್ರಿಯ ವಿಜಯ ವಿಠಲನಂಘ್ರಿ
ಜಾಡು ಮಾಡದೆ ಭಜಿಪ ಭಾಗ್ಯವನು ಕೊಡು ಶಂಭೋ II3 II






In English:
Kailasavaasa gowrisha eesha
Tailadhariyante manasu koodu hariyalli shambhoo

Ahooratriyali naanu anujaraagraniyaagi
Mahiyolage charisideenoo mahadevanee
Ahibhushanane enna avagunagalenisadee
Vihitadharmadalidu Vishnu bhakutiyanu koodu shambhoo

Manasu kaaranavalla paapapunyakkella
Anlaaksha ninna preraneyillade
Dhanujagata madahaari danda pranaamava maadve
Manisu ee shirava sajjana charana kamaladalli shambhoo

Bhagirathidharanee bhayava pariharisayya
Leesaagi nii salahoo santata sarvadeva
Bhaagavata priya vijayavitthalanghri
Jaadu maadade bhajipa bhgyavanu koodo shambhoo

Tuesday, June 2, 2009

ಕೂಸಿನ ಕಂಡಿರಾ ಗುರು ಮುಖ್ಯಪ್ರಾಣ ಕಂಡಿರ

ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರ
ಬಾಲನ ಕಂಡೀರಾ ಬಲವಂತನ ಕಂಡೀರ

ಅಂಜನಿಯುದರದಿ ಪುಟ್ಟಿತು ಕೂಸು
ರಾಮನ ಚರಣಕ್ಕೆರಗಿತು ಕೂಸು
ಸೀತೆಗೆ ಉಂಗುರ ಕೊಟ್ಟಿತು ಕೂಸು
ಲಂಕಾ ಪುರವನೆ ಸುಟ್ಟಿತು ಕೂಸು II1II

ಭಂಡಿ ಅನ್ನವನುಂಡೀತು ಕೂಸು
ಬಕನ ಪ್ರಾಣವಕೊಂದಿತು ಕೂಸು
ವಿಷದಲಡ್ಡುಗೆ ಮೆದ್ದಿತು ಕೂಸು
ಮಡದಿಗೆ ಪುಷ್ಪವ ಕೊಟ್ಟಿತು ಕೂಸು II2II

ಮಾಯಾವಾದಿಗಳ ಗೆದ್ದಿತು ಕೂಸು
ದ್ವೈತಮತವನ್ನುದ್ಧರೀಸಿತು ಕೂಸು
ಮಧ್ವರಾಯನೆಂಬೊಹೆಸರಿನ ಕೂಸು
ಪುರಂದರ ವಿಠಲನ ಪ್ರೇಮದ ಕೂಸು II3II
Audio link:
http://www.kannadaaudio.com/Songs/Devotional/home/Koosina-Kandira-Dr-M-Balamuralikrishna.php

IN English:
Kusina kandira mukhyapranana kandira
Baalana kandira balavantana kandiraa

Anjaniyudaradi puttitu kusu
Raamana charanakeeragitu kusu
Siitege ungurakottitu kusu
Lankapuravane suttitu kusu

Bhandi annavanuditu kusu
Bakana pranavakoditu kusu
Vishadaladduge medditu kusu
Madadige pushpava kottitu kusu

Maayavaadigala gedditu kusu
Dwaitamatavannuddrisitu kusu
Mdwarayanemboohesarina kusu
Purandaravitthalana premade kus

ರಥವನೇರಿದ ರಾಘವೇಂದ್ರ/Rathavenerida Raghavendra

Here is another famous song on Sri Guru Raghavendra composed by Sri Gopaladasaru..
Audio link sung By Vidyabhushana swamiji:http://www.kannadaaudio.com/Songs/Devotional/home/SriRaghavendraDhayanidhe.php
ರಥವನೇರಿದ ರಾಘವೇಂದ್ರ ರಾಯಾ
ಗುಣಸಾಂದ್ರ IIಪII
ಸತತ ಮಾರ್ಗದಿ ಸಂತತ ಸೇವಿಪರಿಗೆ
ಅತಿ ಹಿತ ದಲಿ ಮನೋರಥವ ನಿಡುವೆನೆಂದು IIಅಪII

ಚತುರ ದಿಕ್ಕು ದಿಕ್ಕುಗಳಲ್ಲಿ, ಅರಿಪ ಜನರಲ್ಲಿ
ಮಿತಿ ಯಿಲ್ಲದೆ ಬಂದು ಓಲೈಸುತಲಿ , ವರಗಳ ಬೇಡುತಲಿ
ನುತಿಸುತ ಪರಿಪರಿ ನತರಾಗಿಹರಿಗೆ
ಗತಿ ಪೇಳದೆ ಸರ್ವಥಾ ಬಿಡೆನೆಂದು II1II

ಅತುಲಮಹಿಮಾ ನೀಯಾ ದಿನದಲ್ಲಿ ದಿತಿಜ
ವಂಷದಲಿ ಉತಪತ್ತಿಯಾಗಿ ಉಚಿತದಲಿ ಉತ್ತಮಮತಿಯಲ್ಲಿ
ಅತಿಶಯವಿರುತಿರೆ ಪಿತನಬಾಧೆಗೆ ಮನ್
ಮಥಪಿತನೊಲಿಸಿದೆ ಜಿತಕರಣದಲಿ II2II

ಪ್ರಥಮ ಪ್ರಹ್ಲಾದ ವ್ಯಾಸಮುನಿಯ , ಯತಿ ರಾಘವೇಂದ್ರ
ಪ್ರತಿವಾದಿ ಕದಳಿವನ ಕರಿಯೆ ಕರ ಮುಗಿವೆನು ದೋರೆಯೇ
ಕ್ಷಿತಿಯೊಳು ಗೋಪಾಲ ವಿಠಲನ ಸ್ಮರಿಸುತ
ಪ್ರತಿ ಮಂತ್ರಾಲಯದೊಳು ಅತಿ ಮೆರೆವೆ II3II

In English:
Rathavaneerida Raghavendra raayaa
Gunasandra IIpaII
Satata margadi santata seeviparigee
Ati hitadali manoorathavaniduvenendu IIapaII

Chatura dikku dikkugalali aripajanaralli
Mitiyilladee bandu ollaisutali, varagala beedutali
Nutisuta paripari nataraagiharigee
Gati pelade sarvatha bidenendu II1II

Atulamahimaaniyaa dinadalli ditija
Vanshadali utapattiyaagi uchitadali uttamamatiyalli
Atishayavirutiree pitanabaadhegee mann
Mathapitanoolisedee jitakaranadali II2II

Prathama prahladavyasamuuniya, yati raghavendra
Prativaadi kadalivana kariyee kara muugivenu dooreyee
Kshitiyoolu gopalavitthalana smarisuta
Prati mantraladoolu atimereve II3II