Tuesday, September 21, 2010

vijayarayara kavacha ( smarisi badukiro)

ಸ್ಮರಿಸಿ ಬದುಕಿರೋ ದಿವ್ಯ ಚರಣ ಕೆರಗಿರೋ
ದುರಿತ ತರಿದು ಪೂರೆವ ವಿಜಯಗುರುಳೆ೦ಬರ IIಪII


ದಾಸರಾಯನಾ ದಯವ ಸೂಸಿ ಪಡೆದನಾ
ದೋಷ ರಹಿತನಾ ಸಂತೋಷ ಭರಿತನಾ II೧II

ಜ್ಞಾನವ೦ತನಾ ಬಲು ನಿಧಾನಿಶಾ೦ತನಾ
ಮಾನ್ಯವ೦ತನಾ ಬಹುವ ದಾನ್ಯದಾ೦ತನಾ II೨II

ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷ ಸುರುಸುವ II೩II

ಮೋದ ಭರಿತನಾ ಪಂಚ ಭೇದವರಿತನಾ
ಸಾಧು ಚರಿತನಾ ಮನವಿಷಾದ ಮರೆತನಾ II೪II

ಇವರ ನಂಬಿದ ಜನಕೆ ಭವವಿದೆ೦ಬುದು
ಹವಣವಾಗದೋ ನಮ್ಮವರ ಮತವಿದು II೫II

ಪಾಪಕೋಟಿಯಾ ರಾಶಿ ಲೇಪವಾಗದೋ
ತಾಪಕಳೆವನೋ ಬಲು ದಯಾಪಯೋನಿಧಿ II೬II

ಕವನ ರೂಪದಿ ಹರಿಯಸ್ತವನ ಮಾಡಿದಾ
ಭುವನ ಬೇಡಿದ ಮಾಧವನ ನೋಡಿದಾ II೭II

ರಂಗನೆ೦ದರೆ ಭವವು ಹಿಂಗಿತೆ೦ದನ
ಮಂಗಳಾ೦ಗನಾ ಅಂತರಂಗವರಿತನ II೮II

ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ
ಸೂಸಿಪಡೆದನಾ ಉಲ್ಲಾಸತನದಲೀ II೯II

ಚಿಂತೆ ಬ್ಯಾಡಿರೋ ನಿಶ್ಚಿ೦ತರಾಗಿರೋ
ಶಾಂತ ಗುರುಗಳಾ ಪಾದವಾ೦ತು ನಂಬಿರೋ II೧೦II

ಖೇದವಾಗದೋ ನಿಮಗೆ ಮೋದ ವಾಹುದೋ
ಆದಿದೇವನಾ ಸುಪ್ರಸಾದ ವಾಹುದೋ II೧೧II

ತಾಪ ತಡೆವನೂ ಬಂದ ಪಾಪ ಕಡಿವನೂ
ಶ್ರೀಪತಿಯ ಪಾದ ಸಮೀಪವಿಡುವನೂ II೧೨II

ಗಂಗೆ ಮಿಂದರೆ ಮಲವು ಹಿ೦ಗಿತಲ್ಲದೆ
ರಂಗ ನೋಲಿಯನೂ ಭಕುತರ ಸಂಗದೊರೆಯದೆ II೧೩II

ವೇದ ಓದಲೂ ಬರಿದೆ ವಾದಮಾಡಲೂ
ಹಾದಿಯಾಗದೂ ಬುಧರಪಾದ ನಂಬದೆ II೧೪II

ಲೆಕ್ಕವಿಲ್ಲದಾ ದೇಶ ತುಕ್ಕಿ ಬಂದರೂ
ದುಃಖವಲ್ಲದೆ ಲೇಶ ಭಕುತಿ ದೂರಕದೂ II೧೫II

ದಾನ ಮಾಡಲೂ ದಿವ್ಯಗಾನ ಪಾಡಲೂ
ಜ್ಞಾನ ದೊರೆಯದೋ ಇವರಾಧಿನವಾಗದೇ II೧೬II

ಇಷ್ಟಿ ( ಯಜ್ಞ ) ಯಾತಕೆ ಕಂಡ ಕಷ್ಟ ವ್ಯಾತಕೆ
ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ II೧೭II

ಪೂಜೆ ಮಾಡಲೋ ಕಂಡ ಗೋಜು ಬಿಳಲು
ಬೀಜ ಮಾತಿನ ಫಲ ಸಹಜದೂರಕದೋ II೧೮II

ಸುರರು ಎಲ್ಲರೊ ಇವರ ಕರವ ಪಿಡಿವರೂ
ತರಳ ರ೦ದದಿ ಹಿಂದೆ ತಿರುಗುತಿಪ್ಪರು II೧೯II

ಗ್ರಹಗಳೆಲ್ಲವೂ ಇವಗೆ೯ ಸಹಾಯ ಮಾಡುತಾ
ಆಹೋ ರಾತ್ರಿಲಿ ಸುಖದ ನಿವಹ ಕೂಡುವವೂ II೨೦II

ವ್ಯಾಧಿಬಾರದೋ ದೇಹ ಬಾಧೆ ತಟ್ಟದೋ
ಆದಿದೇವನಾ ಸುಪ್ರಸಾದ ವಾಹುದೋ II೨೧II

ಪತಿತಪಾಮರಾ ಮಂದಮತಿಯೂ ನಾ ಬಲೂ
ತುತಿಸಲಾಪೇನೆ ಇವರ ಅತಿಶಯ೦ಗಳಾ II೨೨II

ಕರುಣದಿ೦ದಲಿ ಎಮ್ಮ ಪೋರೆವನಲ್ಲದೆ
ದುರಿತ ಕೋಟಿಯಾ ಭಾಗ್ಯ ತರಿವದಯದಲೀ II೨೩II

ಮಂದ ಮತಿಗಳು ಇವರ ಚಂದವರಿಯದೇ
ನಿಂದಿಸುವರು ಭವದ ತಪ್ಪದೋ II೨೪II

ಇಂದಿರಾಪತಿ ಇವರ ಮು೦ದೆ ಕುಣಿವನೂ
ಅಂದವಚನವಾ ನಿಜಕೆ ತಂದು ತೋಪ೯ನು II೨೫II

ಉದಯಕಾಲದಿ ಈ ಪದವ ಪಠಿಸಲೂ
ಮದಡನಾದರೂ ಜ್ಞಾನ ಉದಯವಾಹುದೋ II೨೬II

ಸಟೆ ಯಿದಲ್ಲವೂ ವ್ಯಾಸ ವಿಠಲ ಬಲ್ಲನು
ಪಠಿಸಬಹುದಿದೂ ಕೇಳಿ ಕುಟಿಲ ರಹಿತರು II೨೭II

Audio link:
http://www.kannadaaudio.com/Songs/Devotional/Daasanaagu/VijayaraayaraKavacha.ram


V

16 comments:

Anonymous said...

Om shreeRaghavendraya Namaha

MAY RAYARU SHOWER ALL HIS BLESSINGS TO U AND UR FAMILY.

Vijayarayara kavacha is one of my favorite songs. My parents are here with us in USA now and they visit your Blog everyday and are very Happy to see so many songs lyrics in kannada.They keep checking your blog eveyday to see new updates.
Thanks for the wonderful Blog.

srivatsa deshpande ( california)

Prasad Joshi said...

ಹರೇ ಶ್ರೀನಿವಾಸ,
ಸಕಲ ಹರೀಭಕ್ತರಿಗೂ ಪ್ರಾಣಾಮಗಳು,

ಶ್ರೀವಿಜಯದಾಸರ ಕವಚದಲ್ಲಿ ೧೭ನೇ ನುಡಿ

ಇಷ್ಟು(ಇಷ್ಟೇ/ನಿಷ್ಠೆ)ಯಾತಕೆ ಕಂಡ ಕಷ್ಟವ್ಯಾತಕೆ
ದಿಟ್ಟ ಗುರುಗಳ ಪಾದ ಮುಟ್ಟಿಭಜಿಸಿರೊ || ೧೭ ||

ನಿಮ್ಮ ಈ ಬ್ಲಾಗ್‍ಸ್ಪಾಟ್ ನಲ್ಲಿ ಸರಿಯಾಗಿಯೆ ಮುದ್ರಣೆಗೊಂಡಿದೆ.


[ಕೆಲವು ಕಡೆ "ಇಷ್ಟು/ಇಷ್ಟೇ/ನಿಷ್ಠೆ" ಅಂತ ಮುದ್ರಿಸಲಾಗಿದೆ. ಅವರ ಸಲುವಾಗಿ ಮತ್ತು ಸರಿಯಾಗಿ ಅನುಸಂಧಾನ ಮಾಡಿಕೊಂಡು ಪಾರಾಯಣ ಮಾಡಲಿ ಅಂತಾ ಇಲ್ಲಿ upload ಅಷ್ಟೇ...]

ಕೆಲವು ಕಡೆ "ಇಷ್ಟು/ಇಷ್ಟೇ/ನಿಷ್ಠೆ" ಅಂತ ಮುದ್ರಿಸಲಾಗಿದೆ ಮತ್ತು ಅದೇ ರೀತಿಯಲ್ಲಿಯೆ ಪಾರಾಯಣ ಮಾಡುವ ಪದ್ಧತಿ ಕೂಡಾ ನಡೆದುಬಂದಿದೆ....ಹಲವಾರು ಪ್ರವಚನ ಮತ್ತು ಪುರಾಣದ ಆಧಾರದ ಪ್ರಕಾರ ಮತ್ತು ತಾಳೆಗೆರೆ ನೋಡಿದಾಗ ಅದರಲ್ಲಿ "ಇಷ್ಟು/ಇಷ್ಟೇ/ನಿಷ್ಠೆ" ಬದಲು "ಇಷ್ಟಿ" ಉಲ್ಲೇಖ ಇದೆ.

ನಿಜವಾದ ನುಡಿ ಹೀಗೆ ಇರಬೇಕು ಅನ್ನುವುದು ಬಹಳ ಪ್ರವಚನಕಾರರ ಅಭಿಪ್ರಾಯ ಮತ್ತು ಸರ್ವಸಮ್ಮತವು ಅನಿಸುತ್ತದೆ.

"ಇಷ್ಟಿಯಾತಕೆ ಕಂಡ ಕಷ್ಟವ್ಯಾತಕೆ
ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೊ || ೧೭ ||"

ಇನ್ನೊಂದು ಮಹತ್ವದ ವಿಷಯವನ್ನು ಇಲ್ಲಿ ಗಮನಿಸಿದಾಗ "ಇಷ್ಟಿ" ಶಬ್ದವೇ ಸರಿಯಾದದ್ದು ಅಂತ ಅನಿಸುತ್ತದೆ...ಹಿಂದೊಮ್ಮೆ ಮೊದಲ ಯಾಗ ಋಷಿಮುನಿಗಳು ಕೈಗೊಂಡಾಗ ಮೊದಲು ಯಾರಿಗೆ ಪುರ್ಣಾಹುತಿ ನೀಡಬೇಕು(ಕೊಡಬೇಕು) ಎಂದಾಗ ಶ್ರೇಷ್ಟ ಋಷಿಮುನಿಗಳಾದ ಭೃಗು ಋಷಿಗಳು ಎಲ್ಲ ಲೋಕ ಸಂಚಾರ ಮಾಡಿ ಭೂಲೋಕಕ್ಕೆ ಮರಳಿ ಜಗನ್ನೀಯಾಮಕ ಸರ್ವಶ್ರೇಷ್ಟ ಸರ್ವೋತ್ತಮನಾದ
ಶ್ರೀಮಹಾವಿಷ್ಣುವಿಗೆ ಸಲ್ಲಬೇಕು ಎಂಬುದನ್ನು ಸಿದ್ಧಪಡಿಸಿದ ಶ್ರೇಷ್ಠಋಷಿಮುನಿಗಳು...ಹರಿದಾಸೋತ್ತಮರಲ್ಲಿ ಶ್ರೇಷ್ಠರಾದ ಶ್ರೀವಿಜಯದಾಸರು ಭೃಗು ಋಷಿಗಳ ಅಂಶವಾದ್ದರಿಂದ ಯಜ್ಞ (ಯಾಗ)ಮಾಡುವುದು ಎಷ್ಟು ಕಠಿನದ ಕೆಲಸ ಅಂತ ಅವರಿಗೆ ಚೆನ್ನಾಗಿ ತಿಳಿದಂಥ ವಿಷಯವೇ...ಹೀಗಾಗೆ ಕಲ್ಲೂರು ಶ್ರೀಸುಬ್ಬಣ್ಣಾಚಾರ್ಯರು ಅವರ ಶ್ರೀವಿಜಯದಾಸರ ಕವಚದಲ್ಲಿ ಹೀಗೆ "ಇಷ್ಟಿಯಾತಕೆ" ಎಂಬುವ ಶಬ್ದ ಪ್ರಯೋಗ ಮಾಡಿರಬಹುದೇನೋ ಅಂತ ಹಲವರ ಅನಿಸಿಕೆ...


ಇಷ್ಟು/ಇಷ್ಟೇ/ನಿಷ್ಠೆ ಬದಲು ಇಷ್ಟಿಯಾತಕೆ ಆಗಬೇಕು ..ಯಾಕಂದ್ರೆ "ಇಷ್ಟಿ" ಅಂದರೆ "ಯಜ್ಞ" ಅಲ್ವಾ ಅಗ್ನಿಷ್ಟಿಕಾ(ಅಗ್ನಿಷ್ಟಿಕೆ) ...ಯಜ್ಞ ಮಾಡುವುದು ಭಾಳ ಕಠಿನದ(ಬಹಳ ಕಷ್ಟದ) ಕೆಲಸ ...


ಇಷ್ಟು ಅಥವಾ ಇಷ್ಟೇ ಅಂತ ಅರ್ಥೈಸಿದರೆ "ಇಷ್ಟು ಅಂದರೆ ಎಷ್ಟು ಅನ್ನುವುದಕ್ಕೆ ಸರಿಯಾದ ಪರಿಮಿತಿಇಲ್ಲಾ" ಹೀಗಾಗಿ ಸರಿಯಾಗಿ ಹೊಂದಾಣಿಕೆ ಆಗುವುದಿಲ್ಲ.

ನಿಷ್ಥೆ ಅಂತ ಅರ್ಥೈಸಿದರೆ "ಎಲ್ಲಾ ನಿಷ್ಠೆಗಳನ್ನು ಬಿಟ್ಟು ಬಿಡಿ ಅದು ಕಷ್ಟದ ಕೆಲಸ" ಅನ್ನುವುದು ಸರಿಯಾಗಿ ಹೊಂದಾಣಿಕೆ ಆಗುವುದಿಲ್ಲ.

ಇಷ್ಟಾಪೂರ್ತಂ ಮನ್ಯಮಾನಾ ವರಿಷ್ಟಂ
ನಾನ್ಯಚ್ಛ್ರೇಯೋ ವೇದಯಂತೆ ಪ್ರಮೂಢಾ:
ನಾಕಸ್ಯ ಪೃಷ್ಟೇ ತೇ ಸುಕೃತೇsನುಭೂತ್ವೇಮಂ
ಲೋಕಂ ಹೀನತರಂ ವಾ ವಿಶಂತಿ || ೧೦ ||

- ಮಾ.ಉ.ನಿ.


ಧನ್ಯವಾದಗಳೊಂದಿಗೆ ಪ್ರಸಾದ ಜೋಶಿ

|| ನಾಹಂ ಕರ್ತಾ ಹರಿಃ ಕರ್ತಾ ||
|| ಗುರವಂತರ್ಗತ ಶ್ರೀಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು ||

Unknown said...

In para24 it should be Bhavada BHANDA tappadu check it

venugopal.harnoor@gmail.com said...

ನಿಷ್ಠೇ ಯಾತಕೆ ಕಂಡ ಕಷ್ಟ ವ್ಯಾತಕೆ
ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ

Unknown said...

Thank u very much.very nice.

Anonymous said...

ದುರಿತ ಕೊರಿಯಾ ಬ್ಯಾಗ ತರಿವ ದಯದಲಿ

ಅನಂತ said...

ದುರಿತ ಕೋಟಿಯ ಬ್ಯಾಗ ತರಿವ ದಯದಲಿ

Unknown said...

I am a Madwa and would like to get into a grp where there is exchange on gurugulu on madwa tattwa

Unknown said...

Thank u l got my prayer which l used to sing when l was a teenager

Unknown said...

Very nice.

Unknown said...

Anda vachanava manake Thandu koduvano meaning pl

Svnd said...

Sree vijayadasaru bayi ninda Eva maathu barali adhu satyavaguthadhe. Sree hariyu avarige anugraha maduthare. Vijayadasaru helida vachana sree Narayana Devara anugraha dinda phalisuthadhe.

Unknown said...

Very nice thank you

Anonymous said...

ಬಹಳ ಅರ್ಥಗರ್ಭಿತವಾಗಿದೆ

Anonymous said...

ಈ ಮಹೋನ್ನತ ಗೀತೆ ರಾಗಮಾಲಿಕೆಯಲ್ಲಿದೆ. ದಯಮಾಡಿ ರಾಗಗಳ ತಿಳಿಸಿ.

Anonymous said...

Can be found in YouTube