ಶ್ರೀನಿಕೇತನ ಪಾಲ ಮಾ೦ ಶ್ರೀನಿಕೇತನ IIಪ II
ಜ್ಞಾನಗಮ್ಯ ಕರುಣಾನಿಧಿ ನಿನ್ನಡಿ
ಗಾನು ನಮಿಸುವೆ ಪೋರೆದಿನದಯಾ ಳೋ IIಅಪII
ಜ್ಞಾನಮಾನದಾ ಶರಣರ ಸುರ
ಧೇನು ಸವ೯ದಾ
ನೀನೆ೦ದರಿತು ಸದಾನುರಾಗದಲಿ
ಧ್ಯಾನಿಪೆ ಮನದನುಮಾನವ ಕಳೆಯೋ II೧II
ಶ್ರೀಕರಾಚಿ೯ತ ಪಾದಾಬ್ಜ ಪ
ರಾಕು ಅಚ್ಯುತ
ಶೋಕನಾಶನ ವಿಶೂಕಜನಕ ಹೃ
ದ್ವ್ಯಾಕುಲ ಕಳೆಯೂ ಕೃಪಾಕರ ಒಲಿದು II೨II
ಪನ್ನಗಾಚಲನಿವಾಸ ಪ್ರ
ಪನ್ನ ವತ್ಸಲ
ಬಿನ್ನಪ ಕೇಳೂ ಜಗನ್ನಥವಿಠಲ
ಧನ್ಯನ ಮಾಡೂ ಶರಣ್ಯ ಶರಣನಾ II೩II
No comments:
Post a Comment