ರಮಾಸಮುದ್ರನ ಕುಮಾರಿ ನಿನ್ನ ಸರಿ
ಸಮಾನಯಾ೯ರಮ್ಮ ಪ
ಉಮೇಶ ಮೊದಲಾದ ಅಮರನಿಕರವು
ಭ್ರಮಿಸಿ ನಿನ್ನ ಪಾದಕಮಲ ಪೂಜಿಪರಮ್ಮ IIಅಪII
ಅಪಾರ ಮಹಿಮನ ವ್ಯಾಪಾರ೦ಗಳ
ತಿಳಿದು ಕಾಪಾಡುವೆ ಜಗವ
ಕೋಪಾರಹಿತಲಾಗಿ ಶ್ರೀಪತಿಯೂಳು ಎಮ್ಮ
ತಾಪತ್ರಯವ ಪೇಳಿ ಪೂಶಿಸಬೇಕಮ್ಮ II೧ II
ಕರುಣಾ ವಾರಿಧಿಯೆಂದು ಶರಣಾಜನರು
ನಿನ್ನ ಸ್ಮರಣೆಯ ಮಾಡುವರೆ
ಹರಿಣಾಕ್ಷಿ ಕೆಳೆಲೇ ಹರುಷದಿಂದಲಿ ಹರಿ
ಚರಣಾವ ತೋರಿ ಅಘ ಹರಣಾವ ಮಾಡಿಸಮ್ಮ II೨II
ವಾಸಾವನುತ ಸಿರಿ ಶೇಷವಿಠಲನೋಳು
ವಾಸಾವ ಮಾದುವಳೇ
ಘಾಸಿಗೂಲಿಸದೆಲೆ ಈ ಸಮಯದಲಿ
ವಾಸುದೀವಗೆ ಪೇಳಿ ಪೂಶಿಸಬೇಕಮ್ಮ II೩II
No comments:
Post a Comment