kallu sakkare Kolliroo
ಕಲ್ಲು ಸಕ್ಕರೆ ಕೊಳ್ಳಿರೂ ನೀವೆಲ್ಲರೂ
ಕಲ್ಲು ಸಕ್ಕರೆ ಕೊಳ್ಳಿರೂ
ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು
ಪುಲ್ಲ ಲೋಚನ ಶ್ರೀಕೃಷ್ಣನಾಮವೆಂಬ
ಎತ್ತು ಹೇರುಗಳಿಂದ ಹೊತ್ತು ಮಾರುವದಲ್ಲ
ಒತ್ಯೋತ್ತಿ ಗೋಣಿ ಯೋಳ್ತುತು೦ಬುವದಲ್ಲ
ಎತ್ತ ಹೋದರು ಬಾಡಿಗೆ ಸು೦ಕವಿದಕೀಲ್ಲ
ಉತ್ತಮ ಸರಕಿದು ಅತಿ ಲಾಭ ಬರುವಂಥ II೧II
ನಷ್ಟ ಬಿಳುವದಲ್ಲ ನಾತ ಹುಟ್ಟುವದಲ್ಲ
ಎಷ್ಟು ಒಯ್ದರು ಬೆಲೆ ರೋಕ್ಕವಿದಕೀಲ್ಲ
ಕಟ್ಟಿರುವೆಯು ತಿಂದು ಕಡಿಮೆಯಾಗುವದಲ್ಲ
ಪಟ್ಟಣದೊಳಗೆ ಪ್ರಸಿದ್ಧ ವಾಗಿರುವಂಥ II೨II ಸಂತೆ ಸಂತೆಗೆ ಹೋಗಿ ಶ್ರಮಪಡಿಸುವದಲ್ಲ
ಸಂತೆಯೊಳಗೆ ಇಟ್ಟು ಮಾರುವದಲ್ಲ
ಸಂತತ ಸಂತರ ನಾಲಿಗೆ ಸವಿ ಗೋ೦ಮಬ
ಕಾಂತ ಪುರಂದರ ವಿಠಲನ ನಾಮವೆಂಬ II3II
No comments:
Post a Comment