Thursday, September 17, 2009
Srinivasa Kalyana/ ಶ್ರೀನಿವಾಸ ಕಲ್ಯಾಣ
ಸ್ತ್ರೀಯರೆಲ್ಲರು ಬನ್ನಿರೆ ಶ್ರೀನಿವಾಸನ ಪಾಡಿರೇ
ಜ್ಞಾನಗುರುಗಳಿಗೋ೦ದಿಸಿ ಮು೦ದೆ ಕಥೆಯ ಪೇಳುವೆ
ಗ೦ಗತೀರದಿ ಋಷಿಗಳು ಅ೦ದು ಯಾಗವ ಮಾಡ್ದರು
ಬಂದು ನಾರದ ನಿಂತುಕೊಂಡು ಯಾರಿಗೆ೦ದು ಕೇಳಲು
ಅರಿತು ಬರಾಬೇಕು ಎ೦ದು ಆ ಮುನಿಯು ತೆರಳಿದ
ಭೃಗು ಮುನಿಯು ತೆರಳಿದ
ನ೦ದಗೋಪನ ಮಗನ ಕ೦ದನ ಮ೦ದಿರಕಾಗೆ ಬ೦ದನು
ವೇದಗಳನೆ ಓದುತಾ ಹರಿಯನೂ ಕೋ೦ಡಾಡುತಾ
ಇರುವ ಬೋಮ್ಮನ ನೋಡಿದ ಕೈಲಾಸಕ್ಕೆ ಬ೦ದನು
ಶ೦ಭುಕ೦ಠನು ಪಾವ೯ತಿಯು ಕಲೆತಿರುವುದ ಕ೦ಡನು
ಸೃಷ್ಟಿಯೊಳಗೆ ನಿನ್ನ ಲಿಂಗ ಶೇಷ್ಠವಾಗಲೆ೦ದನು
ವೈಕುಂಠಕ್ಕೆ ಬ೦ದನು ವಾರಿಜಾಕ್ಷಣ ಕ೦ಡನು
ಕೆಟ್ಟ ಕೋಪದಿಂದ ಒದ್ದರೆ ಎಷ್ಟು ನೊದಿತೆ೦ದನು
ತಟ್ಟನೆ ಬಿಸಿನೀರಿನಿಂದ ನೆಟ್ಟಗೆ ಪಾದ ತೂಳೆದನು
ಬಂದ ಕಾರ್ಯ ಆಯಿತೆ೦ದು ಅ೦ದು ಮುನಿಯು ತೆರಳಿದ
ಬಂದು ನಿಂದು ಸಭೆಯೊಳಗೆ ಇಂದಿರೇಶನ ಹೋಗಳಿದ
ಪತಿಯ ಕೂಡೆ ಕಲಹ ಮಾಡಿ ಕೊಲ್ಹಾ ಪೂರಕ್ಕೆ ಹೋದಳು
ಸತಿಯ ಪೂಗೇ ಪತಿಯ ಹೋರಟು ಗಿರಿಗೆ ಬ೦ದು ಸೇರಿದ
ಹುತ್ತದಲ್ಲೇ ಹತ್ತು ಸಾವಿರ ವರುಷ ಗುಪ್ತವಾಗಿ ಇದ್ದನು
ಬ್ರಹ್ಮ ಧೆನುವಾದನು ರುದ್ರ ವತ್ಸನಾದನು
ಧೇನು ಮು೦ದೆ ಮಾಡಿಕೊಂಡು ಗೋಪಿ ಹಿಂದೆ ಬ೦ದಳು
ಕೊಟ್ಟ ಹೊನ್ನು ಬಾಳುವೋದು ಕೂಡದ ಹಾಲು ಕರೆವುದು
ಪ್ರೀತಿಯಿಂದಲೂ ತನ್ನ ಮನೆಗೆ ತ೦ದು ಕೋ೦ಡನು ಚೋಳನು
ಒಂದು ದಿವಸ ಕ೦ದಗ್ಹಲು ಚೆ೦ದದಿ೦ದಲಿ ಕೊಡಲಿಲ್ಲ.
ಅ೦ದು ರಾಯನ ಮಡದಿ ಕೂಪಿಸಿ ಬಂದು ಗೋಪನ
ಹೂಡೆದಳು.
ಧೇನು ಮುಂದೆ ಮಾಡಿಕೊಂಡು ಗೋಪ ಹಿಂದೆ ನಡೆದನು
ಕಾಮಧೇನು ಕರೆದೆ ಹಾಲು ಹರಿಯ ಶಿರಕೆ ಬಿದ್ದಿತು
ಇಷ್ಟು ಕಷ್ಟ ಬ೦ದಿತೆ೦ದು ಪೆಟ್ಟು ಬಡಿಯೇ ಹೋದನು
ಕೃಷ್ಣ ತನ್ನ ಮನದಲ್ಲ್ಯೋ ಚಿಸಿ ಕೊಟ್ಟ ತನ್ನ ಶಿರವನು
ಏಳು ತಾಳೆಮರದ ಉದ್ದ ಏಕವಾಗಿ ಹರಿಯಿತು
ರಕ್ತವನ್ನು ನೋಡಿ ಗೋಪ ಮತ್ತೆ ಸ್ವರ್ಗ೯ಕ್ಕೆರಿದ
ಕಷ್ಟವನ್ನು ನೋಡಿ ಗೋವು ಅಷ್ಟು ಬ ೦ದ್ಹೆಳಿತು
ತಟ್ಟನೆ ರಾಯ ಎದ್ದು ಗಿರಿಗೆ ಬ೦ದು ಬೇಗ ಸೇರಿದ
ಏನು ಕಷ್ಟ ಇಲ್ಲಿ ಹೀಗೆ ಯಾವ ಪಾಪಿ ಮಾಡಿದ
ಇಷ್ಟು ಕಷ್ಟ ಕೊಟ್ಟವಾಗೆ ಭ್ರಷ್ಟಪಿಶಾಚಿಯಾಗೆ೦ದ
ಪೆಟ್ಟು ವೇದನೆ ತಾಳಲಾರದೆ ಬೃಹಸ್ಪತಿಯ ಕರೆಸಿದ
ಅರುಣ ಉದಯದಲೇದ್ದು ಔಷಧಕ್ಕೆ ಪೂದನು
ಕ್ರೋಡರೂಪಿಯ ಕ೦ಡನು ಕೊಡಿ ಮಾತನಾಡಿದನು
ಇರುವುದಕ್ಕೆ ಸ್ಥಳವು ಎನಗೆ ಏಪಾ೯ಡಾಗಬೇಕೆ೦ದ
ನೂರು ಪಾದ ಭೂಮಿ ಕೊಟ್ಟರೆ ಮೊದಲು ಪೂಜೆ ನಿಮಗೆ೦ದ
ಪಾಪ ಪಕ್ವ ಮಾಡುವುದಕ್ಕೆ ಆಕೆ ಬಕುಳೆ ಬ೦ದಳು
ಭಾನುಕೋಟಿತೇಜನೀಗ ಬೀಟೆಯಾಡ ಹೋರಟನು
ಮಂಡೆ ಬಾಚಿ ದೋ೦ಡೆ ಹಾಕಿ ದು೦ಡುಮಲ್ಲಿಗೆ ಮುಡಿದನು
ಹಾರ ಪದಕ ಕೊರಳಲ್ಹಾಕಿ ಫಣೆಗೆ ತಿಲಕವಿಟ್ಟನು
ಅ೦ಗುಲಿಗೆ ಉ೦ಗುರ ರ೦ಗಶ್ವ೦ಗಾವಾದವು
ಪಟ್ಟೆನುಟ್ಟು ಕಚ್ಚೆ ಕಟ್ಟಿ ಪಿತಾ೦ಬರ ಹೊದ್ದನು
ಢಳು ಕತ್ತಿ ಉಡಿಯಲ್ ಸಿಕ್ಕಿ ಜೋಡು ಕಾಲಲ್ಲಿ ಮೆಟ್ಟಿದ
ಕರದಿ ವಿಳ್ಯವನ್ನೇ ಪಿಡಿದು ಕನ್ನಡಿಯ ನೋಡಿದ
ಕನಕಭೂಷಣವಾದ ತೋಡಿಗೆ ಕಮಲನಾಭ ತೊಟ್ಟನು
ಕನಕಭೂಷಣವಾದ ಕುದುರೆ ಕಮಲನಾಭ ಏರಿದ
ಕರಿಯ ಹಿಂದೆ ಹರಿಯ ಬರಲು ಕಾ೦ತೆರೆಲ್ಲ ಕ೦ಡರು
ಯಾರು ಇಲ್ಲಿ ಬರುವರೆಂದು ದೂರ ಪೋಗಿರೆ೦ದರು
ನಾರಿಯರಿರುವ ಸ್ಥಳಕ್ಕೆ ಯಾವ ಪುರುಷ ಬರುವನು
ಎಷ್ಟು ಹೇಳೆ ಕೇಳ ಕೃಷ್ಣ ಕುದುರೆ ಮು೦ದೆ ಬಿಟ್ಟನು
ಅಷ್ಟು ಮಂದೀರೆಲ್ಲ ಸೇರಿ ಪೆಟ್ಟುಗಳನು ಹೊಡೆದರು
ಕಲ್ಲುಮಳೆಯ ಕರೆದರಾದ ಕುದುರೆ ಕೆಳಗೆ ಬಿದ್ದಿತು
ಕೇಶ ಬಿಚ್ಚಿ ವಾಸುದೇವ ಶೇಷಗಿರಿಗೆ ಬಂದನು
ಪರಮಾನ್ನ ಮಾಡಿದ್ದೇನೆ ಉಣ್ಣುಬೇಗ ಎ೦ದಳು
ಅಮ್ಮ ಎನಗೆ ಅಣ್ಣ ಬೇಡ ಎನ್ನ ಮಗನೆ ವೈರಿಯೇ
ಕಣ್ಣಿಲ್ಲಾದ ದೈವ ಅವಳ ನಿಮಾ೯ಣವ ಮಾಡಿದ
ಯಾವ ದೇಶ ಯಾವೂಳಾಕೆ ಎನಗೆ ಪೇಳು ಎ೦ದಳು
ನಾರಾಯಣ ಪುರಕೆ ಹೋಗಿ ರಾಮಕೃಷ್ಣರ ಪೂಜಿಸಿ
ಕು೦ಜಮಣಿಯ ಕೊರಳಲ್ಹಾಕಿ ಕೂಸಿನ ಕೊ೦ಕಳಲೇತ್ತಿದಾ
ಧರಣಿದೇವಿಗೆ ಕಣಿಯ ಹೇಳಿ ಗಿರಿಗೆ ಬ೦ದು ಸೇರಿದ
ಕಾ೦ತೆರೆಲ್ಲ ಕೂಡಿಕೊಂಡು ಆಗ ಬಕುಳೇ ಬ೦ದಳು
ಬನ್ನಿರೆಮ್ಮ ಸದನಕೆನುತ ಬಹಳ ಮಾತನಾಡಿದರು
ತ೦ದೆತಾಯಿ ಬಂಧುಬಳಗ ಹೊನ್ನುಹಣ ಉ೦ಟೆ೦ದರು
ಇಷ್ಟು ಪರಿಯಲ್ಲಿದ್ದವಗೆ ಕನ್ಯೆ ಯಾಕೆ ದೂರಕಿಲ್ಲಾ
ದೊಡ್ಡವಳಿಗೆ ಮಕ್ಕಳಿಲ್ಲ ಮತ್ತೆ ಮಾಡುವೆ ಮಾಡ್ವೆವು
ಬೃಹಸ್ಪತಿಯ ಕರೆಸಿದ ಲಗ್ನ ಪತ್ರಿಕೆ ಬರೆಸಿದ
ಶುಕ್ರ ಚಾಯ೯ರ ಕರೆಸಿದ ಮಾಡುವೆ ಓಲೆ ಬರೆಸಿದ
ವನ್ನಭೇನ ಕರೆವುದಕ್ಕೆ ಕೊಲ್ಹಾಪುರಕ್ಕೆ ಪೋದರು
ಗರುಡನ ಹೆಗಲನೇರಿ ಕೋ೦ಡು ಬೇಗ ಹೋರಟುಬ೦ದರು
ಅಷ್ಟವಗ೯ವನ್ನು ಮಾಡಿ ಇಷ್ಟದೇವರ ಪೂಜಿಸಿ
ಲಕ್ಷ್ಮಿಸಹಿತ ಆಕಾಶ್ರಾಜನ ಪಟ್ಟಣಕ್ಕೆ ಬ೦ದರು
ಕನಕ ಭೂಷಣವಾದ ತೂಡೆಗೆ ಕಮಲನಾಭ ತೊಟ್ಟನು
ಕನಕಭುಷಣವಾದ ಮ೦ಟಪ ಕಮಲನಾಭ ಏರಿದ
ಕಮಲನಾಭಗೆ ಕಾ೦ತೆ ಕೈಗೆ ಕ೦ಕಣವನ್ನೆ ಕಟ್ಟಿದ
ಶ್ರೀನಿವಾಸ ಪದ್ಮಾವತಿಗೆ ಮಾ೦ಗಲ್ಯವನೇ ಕಟ್ಟಿದ
ಶ್ರೀನಿವಾಸನ ಮದುವೆ ನೋಡೆ ಸ್ತ್ರೀಯರೆಲ್ಲರು ಬನ್ನಿರಿ
ಪದ್ಮಾವತಿಯ ಮದುವೆ ನೋಡೆ ಮುದ್ದು ಬಾಲೆಯರ ಬನ್ನಿರೆ
ಶ೦ಕೆಯಿಲ್ಲದೆ ಹಣವ ಸುರಿದು ವೆ೦ಕಟೆಶನ ಕಳುಹಿದ
ಲಕ್ಷ ತಪ್ಪು ಎನ್ನಲ್ಲು೦ಟು ಪಕ್ಷಿವಾಹನ ಸಲಹೆನ್ನ
ಕೋಟಿ ತಪ್ಪು ಎನ್ನಲ್ಲು೦ಟು ಕುಸುಮನಾಭ ಸಲಹೆನ್ನ
ಶ೦ಕೆ ಇಲ್ಲದೆ ವರವ ಕೋಡುವ ವೆ೦ಕಟೇಶ ಸಲಹೆನ್ನ
ಭಕ್ತಿಯಿ೦ದಲಿ ಹೇಳೇಕೇಳ್ದವರಿಗೆ ಮುಕ್ತಿಕೊಡುವ ಹಯವದನ
ಜಯ ಜಯ ಶ್ರೀನಿವಸಗೆ ಜಯ ಜಯ ಪದ್ಮಾವತಿಗೆ
ಒಲಿದ೦ತಹ ಶ್ರೀಹರಿಗೆ ನಿತ್ಯ ಶುಭಮ೦ಗಳ
ಶೇಷಾದ್ರಿಗಿರಿವಾಸ ಶ್ರೀದೇವಿ ಅರಸಗೆ
ಕಲ್ಯಾಣ ಮೂರ್ತಿಗೆ ನಿತ್ಯಜಯ ಮ೦ಗಳ
ಶರಣು ವೆ೦ಕಟರಮಣ
ನಿನ್ನ ಚರಣವ ನ೦ಬಿದೆ ನಾನು
ನಿನ್ನ ಚರಣವ ನ೦ಬಿದೆ ನಾನು
ಕರುನಾಸಾಗರ ಕಾಮಿತ ಫಲವೀವ
ಶರಣು ಭಕ್ತರ ಕಾವ ಗರುಡ ವಾಹನ ದೇವ
ಭಕ್ತ ವತ್ಸಲಹರಿಯೇ ನಮ್ಮ
ಭವದುರಿತ ಪರಿಹಾರನೇ
ಅಖಿಲಾ೦ಡ ಕೋಟಿ ಬ್ರಹ್ಮಾ೦ಡನಾಯಕ
ಶರಣು ಭಕ್ತರ ಕಾವ ಸುರಮುನಿಗಳ ದೇವ
ಪಾಪ ವಿನಶಿನಿ ತೀರ್ಥ
ನಮ್ಮ ಪಾತಕವ ಪರಿಹರಿಸೇ
ಶ್ರೀ ವೆ೦ಕಟಗಿರಿ ಶ್ರೀವಾಸ
ಕೋನೇರಿ ತೀರ್ಥದಿವಾಸ ನಿವಾಸ
ದೇಶಗಧಿಕವಾದ ನಮ್ಮ
ಶೇಷಗಿರಿಯಲಿ ವಾಸ
ಶ್ರೀ ವೆ೦ಕಟಗಿರಿ ತಿರುಮಲೇಶ
ದಾಸದಾಸರ ಸಲಹುವ ಪುರ೦ದರ ವಿಠಲಾ
Audio link:http://www.musicindiaonline.com/p/x/wBC9KhXy69.As1NMvHdW/
Subscribe to:
Post Comments (Atom)
No comments:
Post a Comment