ನಿನ್ನ ಒಲುಮೆಗೆ ನಾನು ಈಡೆನೊ ರಂಗ IIಪII
ಸಣ್ಣವನು ನಾನಯ್ಯ ಪನ್ನಗಾಚಲವಾಸ IIಅಪII
ಅಜಿತನಾಮಕ ನೀನು ಅಲ್ಪಶಕ್ತನು ನಾನು
ಕುಜನದೂಷಕ ನೀನು ಅವರ ಮಿತ್ರನು ನಾನು
ವ್ರಜದ ಸ್ತ್ರೀಯರ ಮನವ ಸೂರೆಗೊಂಡ ಸ್ವಾಮಿ
ಅಜನ ಪೆತ್ತ ನಿನಗೆ ಸರಿ ಯಾರು ಪೇಳಯ್ಯ II೧II
ಅನೇಕ ಅದ್ಬುತ ಚರಿತ್ರ ಪಿಡಿದೆ ಹೇಸಿಗೆ ಮಾರ್ಗ
ಅನೇಕ ಭಕ್ತರ ಪೋಷ ನಾನವರ ದೂಷಕ
ಅನೇಕ ಬಾಹುಗಳು ಮತ್ತನೇಕ ಪಾದಗಳಯ್ಯ
ಅನೇಕ ದಿವ್ಯಾಭರಣ ವಿಶ್ವರೂಪ ನಿನಗೆ II೨II
ಪರಮಪಾವನ ನೀನು ದುಷ್ಟ ತರಳನು ನಾನು
ಕರುಣಾಬ್ದಿಯು ನೀನು ಕಠಿನಚಿತ್ತ ನಾನು
ಶರಣೆಂಬೆ ಗಿರಿರಾಯ ನಿನ್ನ ಪೋಲುವರುಂಟಿ
ಮರಳಿ ಪುಟ್ಟದೆ ಮಾಡು ತಂದೆ ಪುರಂದರವಿಠಲ II೩II
No comments:
Post a Comment