Friday, August 7, 2009

karamugive Gururaya / ಕರಮುಗಿವೆ ಗುರುರಾಯ

ಕರಮುಗಿವೆ ಗುರು ರಾಯ ನೀ
ಹರಸಬೇಕು ವರವಂದ ಬೇಡುವೆನು ನಿಡಲೇ ಬೇಕು

ನಿನ್ನ ಪಾವನ ನಾಮ ಉಸಿರಾಗ ಬೇಕು
ನಿನ್ನ ಸೇವೆಗೆ ಬಾಳು ಮುಡಿಪಾಗಬೇಕು
ನೀ ನಡೆವ ಹಾದಿಯಲಿ ಮಣ್ಣಾಗ ಬೇಕು
ನಿನ್ನ ನೆನಪಲೆ ಮನವು ಹಣ್ಣಾಗ ಬೇಕು

ತುಂಗೆಯ ನೀರಾಗಿ ನಾ ಹರಿಯ ಬೇಕು
ಪಾದದ ಧುಳಾಗಿ ನಾ ನಲಿಯ ಬೇಕು
ಹೇಗಾದರೂ ನಿನ್ನ ನಾ ಸೇರಬೇಕು
ನಿನ್ನಲ್ಲಿ ನನ್ನನು ನಾ ಕಾಣಬೇಕು


Audio Link:
http://www.kannadaaudio.com/Songs/Devotional/Brudavanadali/Karamugive.ram

7 comments:

ಹರೀ said...

ಕನ್ನಡ ಹೆಡಿಂಗ್ ನಲ್ಲಿ ಬರೆದು ಹಾಕಿ.
ಗೀತಕಾರ ಸಂಗೀತಕಾರ ಹೆಸರನ್ನು ಹಾಕಿ.
ಧನ್ಯವಾದಗಳು

ಮಂಜುನಾಥ ಗಣಪತಿ ಹೆಗಡೆ said...

ಹೌದು. ಈ ಹಾಡು ಬರೆದ ಕವಿ ಯ ಹೆಸರು ತಪ್ಪದೆ
ಹಾಕಬೇಕು

Shruti said...

can anyone please tell the meaning of this song

Anonymous said...

Album : Brundaavanadalli
Singer : Dr. Rajkumar
Music : Rajan - Nagendra
Lyricist : Chi. Udayashankar

Anonymous said...

Olle haadu

Anonymous said...

Haadina karo ke haki

Anonymous said...

Pl tell us in which raga this is composed. Also karaoke track for the song please upload.
Thanks