Tuesday, July 28, 2009

Mangalam jaya mangalam /ಮಂಗಳಂ ಜಯ ಮಂಗಳಂ

ಮಂಗಳಂ ಜಯ ಮಂಗಳಂ ವರ ವೈಕುಂಠದಿ ಬಂದವಗೆ IIಪII

ವರಗಿರಿಯಲಿ ಸಂಚರಿಸುವಗೆ ವರಹ ದೇವನನು
ಸ್ಮರಿಸಿ ಸ್ವಾಮಿ ಪುಷ್ಕರಣಿ ತೀರದಲ್ಲಿರುವವಗೆ II೧ II

ಸರಸದಿ ಬೇಟಿಗೆ ಹೊರಟವಗೆ ಸರಸಿಜಾಕ್ಷಳ ಕಂಡವಗೆ
ಮೂರುಳಾಟದಿ ತಾ ಪರವಶನಾಗುತ ಕೊರವಿ ವೇಷವ ಧರಿಸಿರುವವಗೆII ೨II

ಗಗನರಾಜಪುರಕೊಹೋದವಗೆ ಬಗೆ ಬಗೆ ನುಡಿಗಳ ನುಡಿದವಗೆ
ಆಗವಾಗಿಗೆ ನಿನ್ನ ಮಗಳ ಕೊದುಯೆಂದು ಗಗನ ರಾಜನ ಸತಿಗೆಹೆಲ್ದಾವಗೆ II೩ II

ತನ್ನ ಕಾರ್ಯ ತಾ ಮಾಡಿದವಗೆ ಇನ್ನೊಬ್ಬರ ಹೆಸಹೇ೯ಳಿರುವಗೆ
ಮುನ್ನ ಮಾಡುವೆ ನಿಶ್ಚಯ ವಾಗಿರಲು ತನ್ನ ಬಳಗ ಕರಿಸುವವಗೆ II೪ II

ಎತ್ತಿ ನಿಬ್ಬಣ ಹೊರವಗೆ ನಿತ್ಯ ತ್ರುಪ್ತನಾಗಿರುವವಗೆ
ಉತ್ತರಾಣಿಯ ವಾಗರವನುಂಡು ತೃಪ್ತನಾಗಿ ತಂಗಿರುವವಗೆ II೫ II

ವದಗಿ ಮುಹುತ೯ಕೆ ಬಂದವಗೆ ಸದಯಿನಾಗಿರುವವಗೆ
ಮುದದಿಂದ ಶ್ರೀ ಪದಮಾವತಿಯಳ ಮಾಡುವೆ ಮಾಡಿಕೊಂಡ ವಧುವರಗೆII ೬II

ಕಾಂತೆಯಿಂದ ಸಹಿತಾದವಗೆ ಸಂತೋಷದಿ ಕುಲಿತಿರುವವಗೆ
ಸಂತತ ಶ್ರೀ ಮದನ೦ತಾದ್ರಿಶಗೆ ಶಾಂತಿ ಮೂರುತಿ ಸರ್ವೋತ್ತ್ಮಗೆ II೭II

2 comments:

Unknown said...

Hi,
Can you provide mp3 of this song?

rrpatwari said...

sorry Ashwini i dont have the MP3 format of this song.I got this song from my Grandmother who use to sing this song in aarti.